ಹಾರರ್ ಸಿನೆಮಾ 'ಕಾಂಜುರಿಂಗ್'ನ ದೆವ್ವದ ಮನೆ 1.2 ಮಿಲಿಯನ್ ಡಾಲರ್‌ಗೆ ಮಾರಾಟ
ಬರ್ರಿಲ್ವಿಲ್ಲೆ, ಸೆಪ್ಟೆಂಬರ್, 28: ಹಾರರ್ ಸಿನೆಮಾ ಕಾಂಜುರಿಂಗ್ ಯಾರಿಗೆ ಗೊತ್ತಿಲ್ಲ ಹೇಳಿ?. ಭಯವಾದರೂ ಕತ್ತಲ್ಲಲ್ಲಿ ಕೂತು ನೋಡಿ ಆ ಬಳಿಕ ಅದೇ ಗುಂಗಲ್ಲಿ ಕಂಡಿದ್ದೆಲ್ಲವೂ ದೆವ್ವ ಎಂದು ಕೊಂಡವರು ಅದೇಷ್ಟೋ ಮಂದಿ ಇದ್ದಾರೆ. ಅದೇಷ್ಟೋ ಜನರಿಗೆ ಮನರಂಜನೆ ನೀಡಿದ ಈ ಸಿನಿಮಾಗೆ ಪ್ರೇರಣೆ ನೀಡಿದ ದೆವ್ವದ ಮನೆ 1.2 ಮಿಲಿಯನ್ ಡಾಲರ್‌ಗೆ ಮಾರಾಟವಾಗಿದೆ ಎಂದು ವರದಿಯಾಗಿದೆ.
2013 ರ ಭಯಾನಕ ಚಿತ್ರ ದಿ ಕಂಜ್ಯೂರಿಂಗ್‌ಗೆ ಪ್ರೇರಿಪಿಸಿದ್ದ ಕುಖ್ಯಾತ ರೋಡ್ ಐಲ್ಯಾಂಡ್ ಫಾರ್ಮ್ ಹೌಸ್ ಅನ್ನು ಸಿನೆಮಾ ಆಗುವ ಮಟ್ಟಕ್ಕೆ ವದಂತಿಗಳನ್ನು ಹೊಂದಿದ್ದರೂ ಕೂಡಾ ಬರೋಬ್ಬರಿ 1.2 ಮಿಲಿಯನ್ ಡಾಲರ್‌ಗೆ ಮಾರಾಟ ಮಾಡಲಾಗಿದೆ. ಈ ದೆವ್ವದ ಮನೆಯೆಂದೇ ಹೇಳಲಾಗುವ ಈ ಕುಖ್ಯಾತ ರೋಡ್ ಐಲ್ಯಾಂಡ್ ಫಾರ್ಮ್ ಹೌಸ್ ಅನ್ನು 1826 ರಲ್ಲಿ ನಿರ್ಮಿಸಲಾಗಿದೆ.
ಈ ಮನೆಯು ಎಂಟು ಎಕರೆಗಳಲ್ಲಿ ಇದೆ. ಕೇವಲ 3,000 ಚದರ ಅಡಿಗಳಲ್ಲಿ ಒಂದು ಭಯಂಕರವಾದ ಫಾರ್ಮ್ ಹೌಸ್ ಗಡಿಯಾರಗಳು ಮತ್ತು ಮೂರು ಮಲಗುವ ಕೋಣೆಗಳು ಕೂಡಾ ಈ ರೋಡ್ ಐಲ್ಯಾಂಡ್ ಫಾರ್ಮ್ ಹೌಸ್‌ನಲ್ಲಿ ಇದೆ. 2 ಸ್ನಾನಗೃಹವೂ ಇದೆ. ಒಟ್ಟಾರೆಯಾಗಿ ಒಟ್ಟಾರೆಯಾಗಿ 14 ಕೊಠಡಿಗಳು ಇದೆ ಎಂದು ಹೇಳಲಾಗಿದೆ. ಬುರ್ರಿಲ್‌ವಿಲ್ಲೆಯಲ್ಲಿರುವ ಈ ಮನೆಯನ್ನು ರಿಯಾಲ್ಟರ್ ಮೋಟ್ ಮತ್ತು ಚೇಸ್ ಸೋಥೆಬಿಯ ಅಂತಾರಾಷ್ಟ್ರೀಯ ರಿಯಾಲ್ಟಿ ತನ್ನ ಪಟ್ಟಿಯಲ್ಲಿರುವ "ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಅತ್ಯಂತ ಪ್ರಸಿದ್ಧ ಹಾಂಟೆಡ್ ಹೌಸ್" ಎಂದು ಕರೆದಿದೆ.

ಈ ಮನೆ ಮಾಟಗಾತಿಯ ದೆವ್ವವಿದೆ ಎಂದಿದ್ದ ತನಿಖಾಧಿಕಾರಿಗಳು
ಇನ್ನು ಕಂಜ್ಯೂರಿಂಗ್‌ಗೆ ಪ್ರೇರಣೆಯಾದ, ದೆವ್ವದ ಮನೆ ಎಂದು ಕರೆಯಲಾಗುವ ಈ ರೋಡ್ ಐಲ್ಯಾಂಡ್ ಫಾರ್ಮ್ ಹೌಸ್ ಬಗ್ಗೆ ಎಡ್ ಮತ್ತು ಲೊರೈನ್ ವಾರೆನ್ ತನಿಖೆಯನ್ನು ನಡೆಸಿದ್ದರು. 1971 ರಲ್ಲಿ ತನಿಖೆ ನಡೆಸಿದ್ದ ಈ ತನಿಖಾಧಿಕಾರಿಗಳಾದ ಎಡ್ ಮತ್ತು ಲೊರೈನ್ ವಾರೆನ್, "ಆ ಸಮಯದಲ್ಲಿ ಪೆರಾನ್ ಕುಟುಂಬವು ಈ ಮನೆಯ ಒಡೆತನವನ್ನು ಹೊಂದಿತ್ತು. 19 ನೇ ಶತಮಾನದಲ್ಲಿ ಮರಣಹೊಂದಿದ ಮತ್ತು ಭೂಮಿಗೆ ಶಾಪವನ್ನು ಹಾಕಿದ್ದ ಬತ್ಶೆಬಾ ಶೆರ್ಮನ್ ಎಂಬ ಮಾಟಗಾತಿಯು ಆ ಮನೆಯವರಿಗೆ ಕಾಟ ನೀಡುತ್ತಿದ್ದನು," ಎಂದು ಹೇಳಿದ್ದರು.

ಈ ಮನೆಯಲ್ಲಿ ದಿ ಕಂಜ್ಯೂರಿಂಗ್ ಸಿನಿಮಾ ಚಿತ್ರೀಕರಣ ನಡೆದಿಲ್ಲ
ವೆರಾ ಫಾರ್ಮಿಂಗ್ ಮತ್ತು ಪ್ಯಾಟ್ರಿಕ್ ವಿಲ್ಸನ್ ನಟಿಸಿದ ದಿ ಕಂಜ್ಯೂರಿಂಗ್ ಹಾರರ್ ಸಿನಿಮಾವನ್ನು ಮನೆಯಲ್ಲಿ ಚಿತ್ರೀಕರಣ ಮಾಡಿಲ್ಲ. ಆದರೆ ಬದಲಾಗಿ ಅಲ್ಲಿ ವಾಸ ಮಾಡುತ್ತಿದ್ದ ಪೆರಾನ್ ಕುಟುಂಬದ ಅನುಭವಗಳನ್ನು ಆಧರಿಸಿ ಸಿನೆಮಾ ಮಾಡಲಾಗಿದೆ. 2013 ರಲ್ಲಿ ಚಲನಚಿತ್ರ ಆರಂಭವಾದಾಗಿನಿಂದ, ಮನೆ ಮುಖ್ಯವಾಹಿನಿಗೆ ಬಂದಿದೆ. ಹಾಗೆಯೇ ಜನಪ್ರಿಯತೆಯನ್ನು ಗಳಿಸಿದೆ.

ಇನ್‌ಸ್ಟಾ ಗ್ರಾಂ ಪೋಸ್ಟ್‌ನಲ್ಲಿ ಮಾಹಿತಿ
ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಈ ಮನೆಯ ಬಗ್ಗೆ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ. ಹಾಗೆಯೇ ದೀರ್ಘ ಶೀರ್ಷಿಕೆಯನ್ನು ನೀಡಲಾಗಿದೆ. "ಅಸಾಧಾರಣವಾದ ಸಾಂಸ್ಕೃತಿಕ ಇತಿಹಾಸವನ್ನು ಹೊಂದಲು ಪ್ರತಿ ಬಾರಿ ಅವಕಾಶವು ಅದಾಗಿಯೇ ನಮ್ಮನ್ನು ಹುಡುಕಿ ಬರುತ್ತದೆ. ಆರ್‌ಐನ ಹ್ಯಾರಿಸ್‌ವಿಲ್ಲೆಯಲ್ಲಿರುವ ಈ ಮನೆಯಲ್ಲಿಯೇ 'ದಿ ಕಂಜ್ಯೂರಿಂಗ್' ನ ನಿಜವಾದ ಕಥೆ ಪ್ರಾರಂಭವಾಗಿದೆ. ವಿಮರ್ಶಾತ್ಮಕವಾಗಿ ಅಧಿಕ ಮೆಚ್ಚುಗೆಗೆ ಪಾತ್ರವಾದ ಈಗಲೂ ಹೆಸರುವಾಸಿಯಾದ ಈ ಸಿನೆಮಾವು ಹದಿನಾಲ್ಕು ಕೋಣೆಗಳ ಈ ಮನೆಯಲ್ಲಿ ನಡೆದ ಘಟನೆಯನ್ನು ಆಧರಿಸಿದೆ. 1800 ರ ದಶಕದಲ್ಲಿ ಮನೆಯಲ್ಲಿ ವಾಸಿಸುತ್ತಿದ್ದ ಬತ್ಶೆಬಾ ಶೆರ್ಮಾನ್ ಈ ಮನೆಯಲ್ಲಿ ದೆವ್ವವಾಗಿ ಕಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಇದು ಅತ್ಯಂತ ಪ್ರಸಿದ್ಧವಾದ ಹಾಂಟೆಡ್ ಮನೆಗಳಲ್ಲಿ ಒಂದಾಗಿದೆ," ಎಂದು ತಿಳಿಸಿದೆ.

ಡಜನ್‌ಗಟ್ಟಲೆ ಪುಸ್ತಕ, ಸಿನೆಮಾಕ್ಕೆ ಈ ಮನೆ ಸ್ಪೂರ್ತಿ
"ಈ ಮನೆಯಲ್ಲಿ ನಡೆದಿದೆ ಎಂದು ಹೇಳಲಾದ ಕಥೆಯು ಡಜನ್‌ಗಟ್ಟಲೆ ಪುಸ್ತಕ, ಸಿನೆಮಾಕ್ಕೆ ಸ್ಪೂರ್ತಿಯಾಗಿದೆ. ಅನೇಕ ಮಂದಿ ಸಂಶೋಧಕರು ಈ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅತ್ಯಂತ ಪ್ರಸಿದ್ಧ ಎಡ್ ಮತ್ತು ಲೊರೈನ್ ವಾರೆನ್ ತನಿಖಾಧಿಕಾರಿಗಳೂ ಭೇಟಿ ನೀಡಿದ್ದಾರೆ. ಇಬ್ಬರು ನ್ಯೂ ಇಂಗ್ಲೆಂಡ್‌ನಲ್ಲಿ ಅತ್ಯಂತ ಹಳೆಯ ಗೋಸ್ಟ್ ಹಂಟಿಂಗ್ ತಂಡವನ್ನು ಸ್ಥಾಪಿಸಿದವರು ಆಗಿದ್ದಾರೆ. ಇನ್ನು ಈ ಮನೆಯಲ್ಲಿ ಇದೆ ಎಂದು ಹೇಳಲಾದ ಪ್ರೇತ ಕಾಟವನ್ನು ನಿವಾರಿಸಲು ಇಬ್ಬರನ್ನು 1970 ರಲ್ಲಿ ನೇಮಕ ಮಾಡಲಾಗಿತ್ತು. ಇನ್ನು ಈ ದಿ ಕಂಜ್ಯೂರಿಂಗ್ ಚಲನಚಿತ್ರಗಳಲ್ಲಿ ಚಿತ್ರಿಸಲಾದ ಘಟನೆಗಳು, ಇತ್ತೀಚೆಗೆ ಬಿಡುಗಡೆಯಾದ ಮೂರನೇಯ ಭಾಗ ಸೇರಿದಂತೆ ಎಲ್ಲವೂ ಈ ಮನೆಯಲ್ಲಿ ನಡೆದಿದೆ ಎಂದು ವಾರೆನ್ಸ್ ಹೇಳಿಕೊಂಡಿದ್ದಾರೆ. ಪ್ರಸ್ತುತ ಈ ಮನೆಯನ್ನು ನೋಡಿಕೊಳ್ಳುತ್ತಿರುವವರು ಈಗಲೂ ಅನೇಕ ಘಟನೆಗಳು ನಡೆಯುತ್ತಿದೆ ಎಂದು ಹೇಳುತ್ತಾರೆ. ಈ ನಡುವೆ ರಾತ್ರಿ ಹೊತ್ತಲ್ಲಿ ಈ ಮನೆಗೆ ಭೇಟಿ ನೀಡಲು ಬರಲು ಮೊದಲೇ ಬುಕ್ ಮಾಡಿಕೊಳ್ಳುವುದು ಆರಂಭವಾಗಿ ಭರ್ಜರಿ ವ್ಯಾಪಾರವಂತೂ ನಡೆಯುತ್ತಿದೆ," ಎಂದು ಕೂಡಾ ಹೇಳಲಾಗಿದೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications