• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಾಸನ: ಸಂಜೀವಿನಿ ಆಂಜನೇಯಸ್ವಾಮಿ ಕ್ಷೇತ್ರದಲ್ಲಿ ಸಗಣಿಯಿಂದ ಹೊಡೆಸಿಕೊಳ್ಳುವ ವಿಶಿಷ್ಟ ಆಚರಣೆ

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ನವೆಂಬರ್ 9: ಸಂಜೀವಿನಿ ಆಂಜನೇಯಸ್ವಾಮಿ ನೆಲೆಸಿರುವ ಪುಣ್ಯಕ್ಷೇತ್ರದಲ್ಲಿ ರಾಜ್ಯದಲ್ಲಿ ಎಲ್ಲೂ ನಡೆಯದ ಆಚರಣೆಯೊಂದು ನಡೆಯುತ್ತದೆ. ಮೂರು ದಶಕಗಳಿಂದಲೂ ಆಚರಣೆ ಮಾಡಿಕೊಂಡು ಬಂದಿರುವ ಪದ್ಧತಿ, ಸಂಪ್ರದಾಯ ಇಂದಿಗೂ ಕೂಡಾ ಮುಂದುವರೆದಿದೆ.

ಸಂಜೀವಿನಿ ಆಂಜನೇಯಸ್ವಾಮಿ ನೆಲೆಸಿರುವ ಪುಣ್ಯಕ್ಷೇತ್ರವು ಹಾಸನ ಜಿಲ್ಲೆಯ ಗಡಿ ಭಾಗದಲ್ಲಿರುವ ಗ್ರಾಮ. ಜೈನಕಾಶಿ ಶ್ರವಣಬೆಳಗೊಳದಿಂದ ಕೇವಲ 5 ಕಿಲೋಮೀಟರ್ ದೂರಲ್ಲಿರುವ ಈ ಗ್ರಾಮದ ದೇವಾಲಯಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ಕುಟುಂಬದ ನಾನಾ ಸಂಕಷ್ಟಗಳಿಂದ ಪಾರಾಗಲು ಸುತ್ತಮುತ್ತಲಿನ ಹಳ್ಳಿಗರಷ್ಟೆಯ್ಲಲದೇ, ಹೊರ ಜಿಲ್ಲೆಯಿಂದಲೂ ಇಲ್ಲಿಗೆ ಬಂದು ತಮ್ಮ ಹರಕೆಯನ್ನು ಹೊರುವ ವಾಡಿಕೆಯಿದೆ.

ಮಕ್ಕಳಾಗದಿದ್ದವರು, ಹರಕೆಯೊತ್ತವರು ವರ್ಷದೊಳಗೆ ಒಳಿತನ್ನು ಕಂಡಂತಹ ಕುಟುಂಬದವರು ಇಲ್ಲಿಗೆ ಬಂದು ಹರಕೆ ತೀರಿಸುತ್ತಾರೆ. ಹರಕೆ ತೀರಿಸುವುದು ಮಾತ್ರ ಕೆಲವರಿಗೆ ವಿಭಿನ್ನವಾಗಿ ಕಾಣಿಸಿದರು, ವಿಚಿತ್ರವೆನಿಸಿದರು. ಈ ಗ್ರಾಮದಲ್ಲಿ ನಡೆದುಕೊಂಡ ಬಂದ ಪದ್ಧತಿ ಮಾತ್ರ ಹಿಂದಿನ ಕಾಲದ್ದಾಗಿದೆ. ಹರಕೆ ಹೊತ್ತ ಭಕ್ತರು ಸಂಜೀವಿನಿ ಆಂಜನೇಯ ದರ್ಶನ ಮಾಡಿದ ಬಳಿಕ ಹೊತ್ತ ಹರಕೆಯನ್ನು ತೀರಿಸಲು ಮುಂದಾಗುತ್ತಾರೆ.

ಈ ದೇವರ ಹರಕೆ ಹೇಗಿರುತ್ತ ಎಂದರೆ, ಹರಕೆಯೊತ್ತವರನ್ನು, ಹರಕೆ ತೀರಿಸುವವರನ್ನು ಏಣಿಯ ಮೇಲೆ ಕೂರಿಸುತ್ತಾರೆ. ಬಳಿಕ ಅವರಿಗೆ ಗೋಣಿಚೀಲದ ಬಟ್ಟೆಯನ್ನು ತೊಡಿಸಿ ಏಣಿಯ ಮೇಲೆ ಕುಳಿತ ಭಕ್ತನನ್ನು ಹೊತ್ತು ಊರಿನ ತುಂಬಾ ಮೆರವಣಿಗೆ ಮಾಡುತ್ತಾರೆ. ಮೆರವಣಿಗೆ ವೇಳೆ ಊರ ಮಂದಿ ಆತನಿಗೆ ತಮ್ಮ ಮನೆಯ ಮುಂದೆ ಬಂದಾಗ ಸಗಣಿ, ಬೂದಿ, ಗಂಜಲ, ನೀರಿನಿಂದ ಆತನಿಗೆ ಎರಚುತ್ತಾರೆ. ಹೀಗೆ ಊರ ಮಂದಿಯಿಂದ ಹೊಡೆಸಿಕೊಂಡರೆ ಕುಟುಂಬದ ಸಂಕಷ್ಟಗಳೆಲ್ಲಾ ಪರಿಹಾರವಾಗುತ್ತದೆ ಎಂಬ ನಂಬಿಕೆ ಭಕ್ತರದ್ದು.

ಸಂತಾನ ವಂಚಿತ ಕುಟುಂಬಗಳು ಇಲ್ಲಿಗೆ ಬಂದು ಹರಕೆ ಹೊತ್ತರೆ ಸಾಕಂತೆ. ಮುಂದಿನ ವರ್ಷ ತೊಟ್ಟಿಲಲ್ಲಿ ಮಗು ಅಳುವ ಶಬ್ದ ಕೇಳುವಂತೆ ಮಾಡುವ ಶಕ್ತಿ ಈ ಸಂಜೀವಿನಿ ಆಂಜನೇಯನಿಗಿದೆಯಂತೆ. ಹಾಗಾಗಿ ದೀಪಾವಳಿ ಹಬ್ಬದ ದಿನದಿಂದ ಮೂರು ದಿನಗಳು ಕೂಡಾ ಗ್ರಾಮದಲ್ಲಿ ಯಾವುದೇ ರೀತಿಯ ಮಾಂಸಾಹಾರ ಸೇವನೆ ಮಾಡದೇ ಶ್ರದ್ಧಾಭಕ್ತಿಯಿಂದ ಮೂರು ದಿನ ಜಾತ್ರೆ ಆಚರಿಸುತ್ತಾರೆ.

ಓಕಳಿಯ ಹಿಂದಿನ ದಿನ ಶ್ರೀರಾಮಚಂದ್ರನು ವನವಾಸ ಮಾಡಿದ ಸ್ಥಳವಾದ ಪಚ್ಚೆಕಲ್ಲು ರಂಗಸ್ವಾಮಿಯ ಬೆಟ್ಟಕ್ಕೆ ಉತ್ಸವ ಮೂರ್ತಿಯಾದ ಆಂಜನೇಯನನ್ನು ಕೊಂಡೊಯ್ದು ಪೂಜೆ ಸಲ್ಲಿಸಲಾಗುತ್ತದೆ. ಬರಗಾಲ, ಅತಿವೃಷ್ಠಿ ಸಂಭವಿಸಿದಾಗ ಊರಿನವರೆಲ್ಲಾ ಸೇರಿ ಪೊರ ಎಂಬ ಹಬ್ಬವನ್ನು ಮಾಡಿ ಸುತ್ತಮುತ್ತಲ ಗ್ರಾಮಗಳಿಗೆ ಅನ್ನಸಂತರ್ಪಣೆ ಮಾಡುತ್ತಾರೆ.

Hassan: A Special Ritual Celebration in Sanjeevini Anjaneyaswamy Temple

ಹಾಸನಾಂಬೆಯ ಬಾಗಿಲು ಮುಚ್ಚುವ ಹಿಂದಿನ ದಿನದಿಂದ ಈ ಗ್ರಾಮದಲ್ಲಿ ಪ್ರಾರಂಭವಾಗುವ ದೀಪಾವಳಿಯ ಹಬ್ಬವನ್ನು ಬಹಳ ಸಡಗರದಿಂದ ಆಚರಣೆ ಮಾಡುತ್ತಾರೆ. ಮೊದಲನೆ ದಿನ ಬಲೀಂದ್ರ ಪೂಜೆ, ಎರಡನೇ ದಿನ ದನಗಳ ಜಾತ್ರೆ, ಮೂರನೇ ದಿನ ಓಕುಳಿ ಸಡಗರದೊಂದಿಗೆ ಭಕ್ತರು ಹರಕೆಯನ್ನು ತೀರಿಸುವ ಪದ್ಧತಿಯೂ ಕೂಡಾ ಇಲ್ಲಿ ನಡೆಯುತ್ತದೆ. ಓಕುಳಿಯಾಟಕ್ಕೂ ಮುನ್ನ ಗ್ರಾಮದ ಕೆಲ ಯುವಕರ ತಂಡ ದರ್ಶನಕ್ಕೆ ಬಂದಿರುವ ಭಕ್ತರ ಮನಸ್ಸನ್ನು ಸಂತೋಷಪಡಿಸಲು ಮನರಂಜನಾ ಕೂಟವನ್ನು ಏರ್ಪಡಿಸುತ್ತಾರೆ. ನಂತರ ಹರಕೆಯೊತ್ತ ಭಕ್ತನನ್ನು ಮರೆವಣಿಗೆ ಮಾಡುತ್ತಾರೆ.

ಇಷ್ಟೆಲ್ಲ ಮೆರವಣಿಗೆ ವೇಳೆ ಆತನಿಗೆ ಸಗಣಿ, ಬೂದಿ, ಗಂಜಲ, ನೀರು, ಮುಂತಾದವುಗಳನ್ನು ಅವನ ಮುಖ ಮತ್ತು ಮೈಮೇಲೆ ಎರಚುತ್ತಾರೆ ಒಂದು ಕಡೆ ಆತನ ಹರಕೆ ಕೂಡಾ ತೀರಬೇಕು. ಮತ್ತೊಂದು ಕಡೆ ಗ್ರಾಮಕ್ಕೆ ಯಾವುದೇ ಭೂತ- ಪ್ರೇತಗಳು ಪ್ರವೇಶವಾಗಿದ್ದರೆ ಅವೆಲ್ಲವೂ ದೂರವಾಗಿ ಗ್ರಾಮಕ್ಕೆ ನೆಮ್ಮದಿಯ ಬದುಕು ನೀಡುವಂತೆ ಮತ್ತು ಆತನ ಕುಟುಂಬದ ಸಂಕಷ್ಟಗಳು ಬೇಗ ನಿವಾರಣೆಯಾಗಲಿ ಎಂಬ ನಂಬಿಕೆಯಿಂದ ಈ ರೀತಿಯ ವಿಚಿತ್ರ ಸಂಪ್ರದಾಯವನ್ನು ಆಚರಣೆ ಮಾಡುತ್ತಾ ಬಂದಿದ್ದಾರೆ.

ಇತ್ತಿಚಿನ ದಿನದಲ್ಲಿ ಹೆಚ್ಚು ಪ್ರಚಾರ ಪಡೆದಿದ್ದರಿಂದ ಏಣಿಯ ಮೇಲೆ ಕೂರಲು ಕೂಡಾ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಏಣಿಯ ಮೇಲೆ ಕೂರುವುದಕ್ಕೆ ದೇವಾಲಯದ ಟ್ರಸ್ಟಿಗಳು ಪ್ರತಿ ಭಕ್ತರಿಗೆ ಪ್ರವೇಶ ಶುಲ್ಕವನ್ನು ನಿಗದಿ ಮಾಡಿದ್ದಾರೆ.

ಇದಾದ ಬಳಿಕ ಬಳಿಕ ಸಂಜೀವಿನಿ ಆಂಜನೇಯನ ಉತ್ಸವ ಜರುಗುತ್ತದೆ. ಉತ್ಸವಕ್ಕೂ ಮುನ್ನ ಗ್ರಾಮದಲ್ಲಿನ ಕಸ ಕಟ್ಟಿ, ಅನುಪಯುಕ್ತ ತ್ಯಾಜ್ಯವನ್ನು ತಂದು ಊರ ದೇವಾಲಯದ ಮುಂದೆ ರಾಶಿ ಹಾಕಿ ಅದನ್ನು ದಹನ ಮಾಡ್ತಾರೆ. ಕಾರಣ, ಗ್ರಾಮಕ್ಕೆ ಒದಗಿಬರುವ ಸಾಂಕ್ರಮಿಕ ರೋಗಗಳು, ರೋಗ- ರುಜಿನಗಳು ಬೆಂಕಿಯಲ್ಲಿ ಸುಟ್ಟು ಭಸ್ಮವಾಗಲಿ ಎಂಬ ಪ್ರತೀತಿ ಇವರದ್ದು.

ಪುರುಷ-ಸ್ತ್ರೀ ಎಂಬ ಭೇದವಿಲ್ಲದೇ ಎಲ್ಲರೂ ಸಮಾನರಾಗಿ ಇಲ್ಲಿ ಓಕಳಿಯಾಡುತ್ತಾರೆ. ಮತ್ತೊಂದು ಕಾರಣ ಎಂದರೆ ಮೈಮೇಲಿನ ಚರ್ಮದ ಯಾವುದೇ ಸಮಸ್ಯೆಯಿದ್ದರೂ ಓಕಳಿಯ ನೀರು ಮೈಮೇಲೆ ಬಿದ್ದರೆ ಬೇಗ ಗುಣಮುಖರಾಗುತ್ತಾರೆ ಎಂಬ ನಂಬಿಕೆ. ಕೆಲವರಿಗೆ ಚರ್ಮರೋಗದ ಸಮಸ್ಯೆ ಕೂಡಾ ದೂರವಾಗಿದೆಯಂತೆ. ಹಾಗಾಗಿ ಇದೊಂದು ಶಕ್ತಿಯುತ ದೇವರು ಎಂಬ ನಂಬಿಕೆ ಭಕ್ತರಲ್ಲಿದೆ.

ಸಂಕಷ್ಟಕ್ಕೆ ಸಿಲುಕಿರುವ ಕುಟುಂಬ, ಸಂತಾನ ಭಾಗ್ಯಹೀನರು, ಈ ಗ್ರಾಮಕ್ಕೆ ಬಂದು ಏಣಿಯ ಮೇಲೆ ಕುಳಿತು ಸಗಣಿ, ಗಂಜಲ, ಮತ್ತು ಬೂದಿಯಿಂದ ಹೊಡೆಸಿಕೊಂಡರೆ ಹಿಂದಿನ ಪಾಪ- ಕರ್ಮಗಳು ಕಳೆದುಹೋಗಿ ಹೊತ್ತ ಹರಕೆಗಳು ಕೈಗೂಡುತ್ತವಂತೆ. ಮಕ್ಕಳಿಲ್ಲದವರು ಕೂಡಾ ಇಲ್ಲಿಗೆ ಬಂದು ಒಳಿತು ಕಂಡಿರುವ ಉದಾಹರಣೆಗಳು ಸಾಕಷ್ಟಿವೆ. ಹಾಗಾಗಿ ಕೇವಲ ಸುತ್ತಮುತ್ತಲ ಹಳ್ಳಿಗಳಿಂದಷ್ಟೆಯಲ್ಲದೇ ರಾಜ್ಯದ ನಾನಾ ಭಾಗಗಳಿಂದ ಬಂದು ಏಣಿಯ ಮೇಲೆ ಕುಳಿತು ತಮ್ಮ ತಮ್ಮ ಹರಕೆ ತೀರಿಸುವುದು ಇಲ್ಲಿನ ವಿಶೇಷ.

ರಾಜ್ಯದಲ್ಲೂ ಆಚರಿಸದ ಈ ಆಚರಣೆಯನ್ನು ಈ ಗ್ರಾಮದಲ್ಲಿ ಆಚರಿಸುವುದು ವಿಶೇಷ ಅಂತಾನೆ ಹೇಳಬಹುದು. ಊರಿಗೆ ಯಾವುದೇ ಬರಗಾಲ, ಕ್ಷಾಮ, ಅಂಗಮಾರಿ, ಸಾಂಕ್ರಾಮಿಕ ಮತ್ತು ಮಾರಕ ರೋಗಗಳಂತಹ ಖಾಯಿಲೆಗಳು ಮನುಷ್ಯರಿಗಾಗಲೀ, ಜನ ಜಾನುವಾರುಗಳಿಗಾಗಲೀ, ಅಥವಾ ರೈತ ಬೆಳೆಯುವ ಬೆಳೆಗಾಗಲಿ ಬಾರದಿರಲೆಂದು ಹಾಗೂ ಸರಿಯಾದ ಸಮಯಕ್ಕೆ ಮಳೆಯಾಗಿ ಫಸಲು ಬರಲೆಂದು ಸಹ ಗ್ರಾಮದವರು ಹರಕೆಯೊತ್ತು ಏಣಿ ಮೇಲೆ ಕುಳಿತು ಬೂದಿ, ಗಂಜಲ ಮತ್ತು ಸಗಣಿಯಿಂದ ಹೊಡೆಸಿಕೊಳ್ಳುತ್ತಾರೆ. ಇದು ವಿಚಿತ್ರವೆನಿಸಿದರೂ ಕೂಡಾ ಇದು ಹನುಮನ ಹರಕೆ ಹಾಗಾಗಿ ನಾವು ಶಿಸ್ತು ಪಾಲಿಸುತ್ತೇವೆ ಎಂಬುದು ಭಕ್ತರ ಮಾತಾಗಿದೆ.

   ಇಂಡೋ-ಪಾಕ್ ಪಂದ್ಯವನ್ನು ಎಷ್ಟು ಮಂದಿ ನೋಡಿದ್ದಾರೆ?ಕ್ರಿಕೆಟ್ ಇತಿಹಾಸದ ಹೊಸ ದಾಖಲೆ | Oneindia Kannada
   English summary
   A special ritual celebration is held in the Sanjeevini Anjaneyaswamy temple on the border of Hassan district.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X