ಹರ್ಯಾಣ: ರಿಪಬ್ಲಿಕ್ ಟಿವಿ-ಜನ್ ಕಿ ಬಾತ್ ಸಮೀಕ್ಷೆಯಲ್ಲಿ ಗೆದ್ದವರು ಯಾರು?

ಚಂಡೀಗಢ, ಅಕ್ಟೋಬರ್ 21 : ಹರ್ಯಾಣ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಅಕ್ಟೋಬರ್ 21ರಂದು ಶಾಂತಿಯುತವಾಗಿ ಮುಕ್ತಾಯಗೊಂಡಿದೆ. 90 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದ ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ. ಅಕ್ಟೋಬರ್ 24ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಹೊರಬರಲಿದೆ.

ಸೋಮವಾರದಂದು 90 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಿತು. ಶೇ 61.92ರಷ್ಟು ಮತದಾನ ನಡೆದಿದೆ. ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡಿವೆ. Republic TV - Jan ki Baat ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಹೀಗಿದೆ.

ಹರ್ಯಾಣದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಪುನಃ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದಾರೆಯೇ? ಎಂದು ಕಾದು ನೋಡಬೇಕಿದೆ. ಚುನಾವಣಾ ಫಲಿತಾಂಶ ಅಕ್ಟೋಬರ್ 24ರಂದು ಪ್ರಕಟವಾಗಲಿದೆ.

ಟೈಮ್ಸ್ ನೌ ಸಮೀಕ್ಷೆಯಂತೆ ಹರ್ಯಾಣದಲ್ಲಿ ಬಿಜೆಪಿ 71, ಕಾಂಗ್ರೆಸ್ 11 ಮತ್ತು ಇತರ ಪಕ್ಷಗಳು 8 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಫಲಿತಾಂಶ ಬಂದಿದೆ. ಆದರೆ, ರಿಪಬ್ಲಿಕ್ ಟಿವಿಯಲ್ಲಿ ಬಿಜೆಪಿಗೆ ಇನ್ನು ಕಡಿಮೆ ಸ್ಥಾನಗಳು ಲಭಿಸಿವೆ.

Haryana Assembly Elections 2019: Republic TV - Jan ki Baat Exit Poll Results

ರಿಪಬ್ಲಿಕ್ ಟಿವಿ-ಜನ್ ಕಿ ಬಾತ್ ಸಮೀಕ್ಷೆಯಂತೆ
ಹರ್ಯಾಣ 90 ಸ್ಥಾನಗಳು
ಬಿಜೆಪಿ ಪ್ಲಸ್ 57
ಕಾಂಗ್ರೆಸ್ 17
ಇತರೆ 16
****
ಪಕ್ಷವಾರು ಸ್ಥಾನಗಳು
ಬಿಜೆಪಿ: 52-63
ಕಾಂಗ್ರೆಸ್:15-19
INLD: 0-1
ಜೆಜೆಪಿ:5-9
ಇತರೆ:7-9

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+