ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾನಂತರ ವೀರ್ಯೋತ್ಪತ್ತಿ ಕುಂಠಿತ; ಪುರುಷರಲ್ಲಿ ಲೈಂಗಿಕ ಸಮಸ್ಯೆಗೆ ಸೋಂಕು ಹೇಗೆ ಕಾರಣ?

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ನವದೆಹಲಿ, ಆಗಸ್ಟ್ 16: ಕೊರೊನಾ ಸೋಂಕಿನಿಂದ ಗುಣಮುಖರಾದ ನಂತರವೂ ಕೆಲವರಲ್ಲಿ ಇತರೆ ಆರೋಗ್ಯ ತೊಂದರೆಗಳು ಗೋಚರಿಸುತ್ತಿವೆ. ಒಮ್ಮೆ ಸೋಂಕು ತಗುಲಿದರೆ, ಸೋಂಕಿನಿಂದ ಮುಕ್ತವಾದ ಮೇಲೂ ಹಲವು ತಿಂಗಳುಗಳವರೆಗೆ ಅದರ ಪ್ರಭಾವ ದೇಹದಲ್ಲಿ ಮುಂದುವರೆಯುತ್ತದೆ ಎಂಬುದಾಗಿ ತಜ್ಞರು ಹೇಳಿದ್ದಾರೆ.

ಸುಸ್ತು, ತಲೆ ಸುತ್ತು, ನೆನಪಿನ ಶಕ್ತಿ ಕುಂದುವಿಕೆ, ಕೂದಲು ಉದುರುವಿಕೆ, ಅತೀವ ಆಯಾಸ ಕೊರೊನಾ ಸೋಂಕಿನಿಂದ ಗುಣಮುಖರಾದ ನಂತರ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆಗಳಾಗಿವೆ. ಇದರ ಹೊರತಾಗಿ ಕೆಲವರಲ್ಲಿ ಹಾರ್ಮೋನುಗಳಲ್ಲಿ ಕೂಡ ವ್ಯತ್ಯಾಸ ಕಂಡುಬರುತ್ತಿದೆ. ಅದರಲ್ಲೂ ಪುರುಷರಲ್ಲಿ ಲೈಂಗಿಕ ಹಾರ್ಮೋನಿನಲ್ಲಿ ಅಸಮತೋಲನ ಕಂಡುಬರುತ್ತಿದೆ ಎನ್ನಲಾಗಿದೆ. "ಜರ್ನಲ್ ಆಫ್ ಎಂಡೋಕ್ರೈನ್‌ ಸೊಸೈಟಿ"ಯಲ್ಲಿ ಈ ಬಗ್ಗೆ ಅಧ್ಯಯನವೊಂದನ್ನು ಪ್ರಕಟಿಸಲಾಗಿದೆ. ಅಧ್ಯಯನ ಏನು ಹೇಳುತ್ತಿದೆ? ಕೊರೊನಾ ಸೋಂಕು ಪುರುಷರ ಲೈಂಗಿಕ ಹಾರ್ಮೋನಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಇದರಿಂದ ಯಾವ ಸಮಸ್ಯೆಗಳು ಎದುರಾಗುತ್ತವೆ? ಮುಂದಿದೆ ವಿವರ...

ಕೊರೊನಾ ಲಸಿಕೆ ಪಡೆದ ನಂತರ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಎಷ್ಟು ಸುರಕ್ಷಿತ?ಕೊರೊನಾ ಲಸಿಕೆ ಪಡೆದ ನಂತರ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಎಷ್ಟು ಸುರಕ್ಷಿತ?

ವೀರ್ಯೋತ್ಪತ್ತಿ ಮೇಲೆ ಕೊರೊನಾ ಸೋಂಕಿನ ಪರಿಣಾಮ

ವೀರ್ಯೋತ್ಪತ್ತಿ ಮೇಲೆ ಕೊರೊನಾ ಸೋಂಕಿನ ಪರಿಣಾಮ

ಕೊರೊನಾದಿಂದ ಗುಣಮುಖರಾದ ನಂತರ ಕೆಲವರಲ್ಲಿ ಹಾರ್ಮೋನು ವ್ಯತ್ಯಾಸ ಕಂಡುಬರುತ್ತಿದೆ. ದೆಹಲಿಯ ಸಂಜಯ್ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ದಿನಕ್ಕೆ ಇಂಥ ಹತ್ತು ಪ್ರಕರಣಗಳಾದರೂ ಕಂಡುಬರುತ್ತಿವೆ ಎಂದು ವೈದ್ಯಕೀಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಕೊರೊನಾ ಸೋಂಕು ಎಂಡೋಕ್ರೈನ್ ಗ್ರಂಥಿ ಮೇಲೆ ಪರಿಣಾಮ ಬೀರುತ್ತದೆ. ಈ ಮೂಲಕ ಪುರುಷರಲ್ಲಿ ಲೈಂಗಿಕ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ. ಸೋಂಕು ವೀರ್ಯೋತ್ಪತ್ತಿಗೆ ಅಡಚಣೆ ಉಂಟು ಮಾಡುತ್ತದೆ ಎಂದು ತಿಳಿಸಲಾಗಿದೆ. ಪುರುಷರ ಜೀವಕೋಶ ಪರೀಕ್ಷೆ ಮೂಲಕ ಈ ಅಂಶವನ್ನು ಕಂಡುಕೊಳ್ಳಲಾಗಿದೆ.

ಸೋಂಕಿನಿಂದ ವೀರ್ಯದ ಗುಣಮಟ್ಟ ತಗ್ಗುವುದು

ಸೋಂಕಿನಿಂದ ವೀರ್ಯದ ಗುಣಮಟ್ಟ ತಗ್ಗುವುದು

ಕೊರೊನಾ ಸೋಂಕಿಗೆ ಒಳಗಾಗಿದ್ದ ಸುಮಾರು 15% ಮಂದಿಯಲ್ಲಿ ಈ ರೀತಿ ಹಾರ್ಮೋನಿನ ತೊಂದರೆ ಕಾಣಿಸಿಕೊಳ್ಳುವ ಸಂಭವವಿದೆ ಎಂದು ಸಂಜಯ್ ಗಾಂಧಿ ಆಸ್ಪತ್ರೆ ಪ್ರೊ. ಜ್ಞಾನ್ ಚಾಂದ್ ಹೇಳಿದ್ದಾರೆ. ಕೊರೊನಾ ಸೋಂಕು ಪುರುಷರ ಲೈಂಗಿಕ ಹಾರ್ಮೋನಿನ ಮೇಲೆ ಅತಿ ಹೆಚ್ಚು ಪರಿಣಾಮ ಬೀರಲಿದ್ದು, ಇದರಿಂದ ವೀರ್ಯದ ಗುಣಮಟ್ಟ ಹಾಗೂ ಟೆಸ್ಟೊಸ್ಟೆರೋನ್ ಮಟ್ಟ ತಗ್ಗುವುದಾಗಿ ತಿಳಿದುಬಂದಿದೆ. ಸೋಂಕಿನಿಂದಾಗಿ ವೀರ್ಯೋತ್ಪತ್ತಿಯಲ್ಲಿ ಗಣನೀಯ ಇಳಿಕೆ ಕಂಡುಬಂದಿರುವುದಾಗಿ ಮಿಯಾಮಿ ಮಿಲ್ಲರ್ ಯೂನಿವರ್ಸಿಟಿ ಸಂಶೋಧಕರು ತಿಳಿಸಿದ್ದಾರೆ. ಈ ರೀತಿ ಸಮಸ್ಯೆ ಕಾಣಿಸಿಕೊಂಡವರಿಗೆ ಆರು ತಿಂಗಳ ಕಾಲ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

Long Covid: ಏನಿದು ಸೋಂಕಿನ ಮತ್ತೊಂದು ವರಸೆ? ಕಳವಳ ವ್ಯಕ್ತಪಡಿಸಿದ WHOLong Covid: ಏನಿದು ಸೋಂಕಿನ ಮತ್ತೊಂದು ವರಸೆ? ಕಳವಳ ವ್ಯಕ್ತಪಡಿಸಿದ WHO

ಸೋಂಕಿನಿಂದ ಹಾರ್ಮೋನು ಅಸಮತೋಲನ ಪುರುಷರಲ್ಲೇ ಹೆಚ್ಚು

ಸೋಂಕಿನಿಂದ ಹಾರ್ಮೋನು ಅಸಮತೋಲನ ಪುರುಷರಲ್ಲೇ ಹೆಚ್ಚು

"ಯುರೋಪಿಯನ್ ಸೊಸೈಟಿ ಆಫ್ ಎಂಡೋಕ್ರಿನಾಲಜಿ"ಯಲ್ಲಿ ಕೂಡ ಈ ಸಂಬಂಧ ಅಧ್ಯಯನವೊಂದನ್ನು ಪ್ರಕಟಿಸಲಾಗಿದೆ. ಕೊರೊನಾದಿಂದ ಗುಣಮುಖರಾದ ನಂತರ ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರಲ್ಲಿಯೇ ಈ ಸಮಸ್ಯೆ ಕಂಡುಬರುತ್ತಿರುವುದಾಗಿ ಉಲ್ಲೇಖಿಸಿದೆ. ಆಂಡ್ರೋಜನ್ ಅಥವಾ ಪುರುಷ ಲೈಂಗಿಕ ಹಾರ್ಮೋನುಗಳ ಗ್ರಾಹಕಗಳು ಸೋಂಕಿನಿಂದ ಪ್ರಭಾವಿತವಾಗಲಿವೆ ಎಂದು ಇದರಲ್ಲಿ ತಿಳಿಸಲಾಗಿದೆ. ಲೈಂಗಿಕ ಹಾರ್ಮೋನಿಗೂ ಕೊರೊನಾ ನಂತರದ ಸಮಸ್ಯೆಗೂ ಇರುವ ನಂಟಿನ ಕುರಿತು ಇನ್ನಷ್ಟು ಅಧ್ಯಯನಗಳನ್ನು ನಡೆಸುವ ಅವಶ್ಯಕತೆಯಿದೆ ಎಂದು ಉಲ್ಲೇಖಿಸಲಾಗಿದೆ.

ಹಾರ್ಮೋನು ಅಸಮತೋಲನವನ್ನು ಕಂಡುಕೊಳ್ಳುವುದು ಹೇಗೆ?

ಹಾರ್ಮೋನು ಅಸಮತೋಲನವನ್ನು ಕಂಡುಕೊಳ್ಳುವುದು ಹೇಗೆ?

ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯದಲ್ಲಿ ಹಾರ್ಮೋನುಗಳದ್ದು ಪ್ರಮುಖ ಪಾತ್ರ. ಹಾರ್ಮೋನುಗಳ ಅಸಮತೋಲನ ಹಲವು ರೀತಿಯಲ್ಲಿ ವ್ಯಕ್ತಗೊಳ್ಳುತ್ತದೆ. ಮಹಿಳೆ ಹಾಗೂ ಪುರುಷರಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣಗಳೆಂದರೆ,
* ಸ್ನಾಯುಗಳ ದುರ್ಬಲತೆ
* ತೂಕ ಹೆಚ್ಚಳ
* ಸುಸ್ತು
* ಅನಿರೀಕ್ಷಿತ ತೂಕ ಇಳಿಕೆ
* ಭುಜದ ಬಳಿ ಕೊಬ್ಬಿನ ಶೇಖರಣೆ
* ಗಟ್ಟಿಯಾದ ಸ್ನಾಯುಗಳ
* ಕೀಲುಗಳಲ್ಲಿ ಊತ ಅಥವಾ ಅತಿಯಾದ ನೋವು
* ದೃಷ್ಟಿ ತೊಂದರೆ
* ಬೆವರುವಿಕೆ
* ಹೃದಯ ಬಡಿತದಲ್ಲಿ ಏರುಪೇರು
* ಆತಂಕ
* ಶೀತ, ಉಷ್ಣ
* ಲೈಂಗಿಕ ನಿರಾಸಕ್ತಿ
* ಒತ್ತಡ
* ಮಲಬದ್ಧತೆ
* ನಿರಂತರ ಮೂತ್ರವಿಸರ್ಜನೆ
* ಸಂತಾನೋತ್ಪತ್ತಿ ಸಮಸ್ಯೆ
* ಹಸಿವು ಹೆಚ್ಚಾಗುವಿಕೆ
* ಮುಖ ಊದಿಕೊಳ್ಳುವುದು

English summary
People who have recovered from Covid-19 has reported hormonal imbalances. Experts concerns specially on male fertility,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X