Get Updates
Get notified of breaking news, exclusive insights, and must-see stories!

Happy Mother's Day: “ಮಾತೃ ದೇವೋ ಭವ” ಆಕೆ ನಿಜವಾದ ದೇವತೆ....

Happy Mother's Day: ಮಾನವ ಜೀವನದಲ್ಲಿ ತಾಯಿಯನ್ನು ದೈವ ಸ್ವರೂಪಕ್ಕೆ ಹೋಲಿಸುತ್ತೇವೆ. 'ತಾಯಿ' ಎಂದರೆ ಕೇವಲ ಒಂದು ಪದವಲ್ಲ, ಅದು ನಮ್ಮ ಬದುಕಿನ ಎಲ್ಲ ಹಂತಗಳ ಪ್ರೇರಣೆಯ ಪ್ರಕಾಶ.

ತಾಯಿಯ ಸ್ಥಾನ - ದೇವರಿಗಿಂತ ಮೇಲು!!

ಭಾರತೀಯ ಸಂಸ್ಕೃತಿಯಲ್ಲಿ ತಾಯಿ ಮತ್ತು ದೇವರಿಗೆ. ಹೆಚ್ಚು ಮಹತ್ವವನ್ನು ನೀಡಲಾಗಿದೆ. "ಮಾತೃ ದೇವೋ ಭವ" ಎಂಬ ಶ್ಲೋಕ ಇದಕ್ಕೆ ಉದಾಹರಣೆ. ತಾಯಿ ನಮ್ಮ ಮೊದಲ ಗುರು, ಮೊದಲ ಸ್ನೇಹಿತೆ, ಮೊದಲ ಪಾಠಶಾಲೆ. ಆಕೆ ನಮಗೆ ಬದುಕನ್ನು ನೀಡುವವಳಷ್ಟೇ ಅಲ್ಲ, ಬದುಕುವ ಕಲೆಯನ್ನೂ ಬೋಧಿಸುವವಳು. ತಾಯಿಯ ಒಡಲಿನಲ್ಲಿ ನಾವು ಬೆಳೆದುಬಂದರೂ, ಅವಳ ಹೃದಯದಲ್ಲಿ ನಾವು ಶಾಶ್ವತವಾಗಿ ನೆಲೆಸುತ್ತೇವೆ.

Happy Mother s Day Mother is God She is a True Goddess

ತಾಯಿಯ ಪ್ರೀತಿ - ನಿರ್ವಿಕಾರ ಮತ್ತು ನಿಷ್ಕಳಂಕ

ತಾಯಿ ಯಾವುದೇ ನಿರೀಕ್ಷೆಯಿಲ್ಲದ ಪ್ರೀತಿಸುವಳು. ಅವಳು ತನ್ನ ಮಕ್ಕಳಿಗೆ ಏನು ಬೇಕಾದರೂ ಕೊಡುತ್ತಾಳೆ - ತನ್ನ ನಿದ್ದೆ, ಭೋಜನ, ವಿಶ್ರಾಂತಿ ಎಲ್ಲವನ್ನೂ ತ್ಯಾಗ ಮಾಡಿ, ಮಕ್ಕಳ ಮುಖದಲ್ಲಿ ಸಂತೋಷ ತರಿಸುವುದೆಂದರೆ ಅವಳಿಗೆ ಪರಮಾನಂದ.

ತಾಯಿಯ ತ್ಯಾಗ - ಮೌನದಲ್ಲಿ ಮಾತುಗಳರ್ಥ

ತಾಯಿ ಮಾಡಿದ ತ್ಯಾಗಗಳು ಬಹುಮಟ್ಟಿಗೆ ಅಪ್ರಕಟಿತವಾಗಿರುತ್ತವೆ. ಅಡುಗೆ ಮನೆಯಲ್ಲಿ ಅವಳು ಹಂಚಿಕೊಂಡ ಕೊನೆಗೆ ಬಾಕಿ ಉಳಿದ ತಿನಿಸು, ಮಕ್ಕಳಿಗೆ ಅವಶ್ಯಕವಾದ ಬಟ್ಟೆಗಳಿಗೆ ತಾನು ಕೈಕಟ್ಟಿ ಕಾಯುವ ಸಮಯ, ನಿದ್ದೆ ಕಳೆದುಕೊಂಡು ರಾತ್ರಿ ಪೂರ್ತಿ ಮಕ್ಕಳ ಬಗೆಗೆ ಚಿಂತಿಸುವ ಆಕೆಯ ಈ ಎಲ್ಲಾ ತ್ಯಾಗಗಳು ಹೆಚ್ಚಾಗಿ ಅಗೋಚರವಾಗಿರುತ್ತವೆ.ಆದರೆ ಈ ತ್ಯಾಗಗಳೇ ಅವಳ ಪ್ರೀತಿಯ ಅಂದದ ಪ್ರತೀಕ.

ತಾಯಿಯ ಶಿಕ್ಷಣ - ಜೀವನದ ಪಾಠಗಳ

ಶಾಲೆ ನಮಗೆ ಪುಸ್ತಕದ ಪಾಠವನ್ನು ಕಲಿಸುತ್ತದೆ, ಆದರೆ ತಾಯಿ ಜೀವನ ಪಾಠಗಳನ್ನು ಕಲಿಸುತ್ತಾಳೆ. ಅವಳ ಮಾತುಗಳು ಜೀವನದಲ್ಲಿ ಸಾಗಬೇಕಾದ ದಿಕ್ಕುಗಳನ್ನು ಸೂಚಿಸುತ್ತವೆ. ಅವಳು ತೋರಿಸಿದ ಶ್ರದ್ಧೆ, ಸಹನೆ, ಕಠಿಣ ಪರಿಶ್ರಮ, ಮತ್ತು ಪ್ರಾಮಾಣಿಕತೆ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ.

ಸಕಲ ಕಲಾ ವಲ್ಲಭೆ

ಆಕೆ ಕೇವಲ ವ್ಯಕ್ತಿ ಮಾತ್ರವಲ್ಲ, ಹಲವಾರು ರೂಪಗಳನ್ನು ಹೊಂದುವವಳು. ಕೆಲಸದ ಸ್ಥಳದಲ್ಲಿ ದುಡಿಯುವ ತಾಯಿ, ಮನೆ ನಡಿಸಿಕೊಳ್ಳುವ ಅಮ್ಮ ,ಪಾಲನೆ ಪೋಷಣೆ ಮಾಡುತ್ತಿರುವ ಮಾತೆ, ಧನಾತ್ಮಕ ಶಕ್ತಿಯ ಮಾತೃ - ವಿಭಿನ್ನ ಪಾತ್ರಗಳನ್ನು ನಿಭಾಯಿಸಬಲ್ಲ ನಿಜವಾದ ನಾಯಕಿ. ಪ್ರತಿ ತಾಯಿ ತನ್ನದೇ ಆದ ರೀತಿಯಲ್ಲಿ ಮಕ್ಕಳಿಗೆ ಪ್ರೇರಣೆಯಾಗುತ್ತಾಳೆ.

ತಾಯಿಯ ನೆನೆಪು - ಜೀವನಮಿಡಿತ

ತಾಯಿ ನಮ್ಮ ಪಕ್ಕದಲ್ಲಿಲ್ಲದಿದ್ದರೂ, ಅವಳ ನೆನೆಪುಗಳು ನಮ್ಮ ಜೀವನವನ್ನು ಬೆಳಗಿಸುತ್ತವೆ. ಬಾಲ್ಯದ ನೆನಪುಗಳು, ತಾಯಿಯ ಜೊತೆ ಕಳೆದ ಸಿಹಿಯಾದ ಕ್ಷಣಗಳು, ಅವಳು ಹೇಳಿದ ಕಥೆಗಳು, ಅವಳು ತೋರಿಸಿದ ಮಮತೆ - ಇವೆಲ್ಲವೂ ನಮ್ಮ ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತವೆ. ತಾಯಿಯ ನೆನಪು ನಮ್ಮ ಕಣ್ಣಂಚಿನಲ್ಲಿ ನೀರು ತುಂಬಿಕೊಳ್ಳುವಂತೆ ಮಾಡುತ್ತದೆ.

ತಾಯಿಗೆ ಗೌರವ ಸಲ್ಲಿಸುವ ಪ್ರಾಮುಖ್ಯತೆ

ನಾವು ನಮ್ಮ ಬದುಕಿನಲ್ಲಿ ತಾಯಿಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಿದ್ದೇವೆ ಎಂಬುದನ್ನು ನಾವು ತಿರುಗಿ ನೋಡಿಕೊಳ್ಳಬೇಕು. ತಾಯಿಯ ಹಕ್ಕುಗಳನ್ನು, ಅವಳ ಕನಸುಗಳನ್ನು, ಅವಳ ತ್ಯಾಗಗಳನ್ನು ಅರಿಯುವುದು ನಮ್ಮ ಕರ್ತವ್ಯ. ಪ್ರತಿದಿನವನ್ನೂ ತಾಯಿಗಾಗಿ "ಮದರ್ಸ್ ಡೇ" ಆಗಿ ಆಚರಿಸಬೇಕು. ಅವಳಿಗೆ ಸಮಯ ನೀಡಿ, ಮಾತನಾಡಿಸಿ ಅವಳ ಇಷ್ಟ ಕಷ್ಟಗಳಿಗೆ ಕಿವಿಯಾದರೆ ಆಕೆಗೆ ಪುರುಸ್ಕಾರ ನೀಡಿದಷ್ಟೇ ಸಂತಸ ಪಡುತ್ತಾಳೆ.

ಮಗು ಮತ್ತು ತಾಯಿಯ ಅಳಪಿಸದ ಸಂಬಂಧ

ಮಗು ತಾಯಿಗೆ ಹೇಗೆ ಬೆಸೆದುಕೊಂಡಿರುತ್ತದೆಂಬುದನ್ನು ಹೇಳಲು ಶಬ್ದಗಳೇ ಸಾಲದು. ಆ ಮಮತೆ, ಆ ಬೆರಗು - ಎಲ್ಲವೂ ಅದ್ಭುತ. ತಾಯಿಯ ಕಣ್ಣು ಮಗುವಿನ ನಡಿಗೆಯನ್ನು ಹತ್ತಿರದಿಂದ ನೋಡುತ್ತದೆ. ಅವಳು ಮೊಟ್ಟಮೊದಲ ಬಾರಿಗೆ "ಅಮ್ಮ" ಎಂದು ಕರೆಯುವ ಕ್ಷಣ ಮಗುವಿಗೆ ಮೊದಲ ಹೆಜ್ಜೆ ಇಡುವ ಸಮಯ, ಮೊದಲ ಬಾರಿಗೆ ಶಾಲೆಗೆ ಹೋಗುವ ದಿನ ಇವೆಲ್ಲವೂ ಆಕೆಯ ಹೃದಯದ ಹಬ್ಬ.

ತಾಯಿ ಎಂಬ ಶಬ್ದ ಕೇವಲ ಎರಡು ಅಕ್ಷರಗಳು ಮಾತ್ರ. ಆದರೆ ಅದರ ಅರ್ಥವು ಅಪಾರ. ಆ ಶಬ್ದದಲ್ಲಿ ಜೀವವಿದೆ, ಪ್ರೀತಿಯೇ ಇದೆ, ಸತ್ವವಿದೆ.ನಾವು ಎಷ್ಟು ಎತ್ತರಕ್ಕೆ ಏರಿದರೂ, ಎಷ್ಟು ಪ್ರಪಂಚವನ್ನು ಕಂಡರೂ, ತಾಯಿಯ ಪಾದಗಳಗೆ ಸದಾ ಚಿರಋಣಿಯಾಗಿರಬೇಕು."ಅವಳಿಲ್ಲದ ಬದುಕು - ತಾರ್ಕಿಕವಾದ ದಿಕ್ಕಿಲ್ಲದ ನೌಕೆ" ಎಂಬಂತೆ, ತಾಯಿ ನಮ್ಮ ಬದುಕಿನ ನಕ್ಷೆ. ಆಕೆಗೆ ಗೌರವ ನೀಡೋಣ, ಪ್ರೀತಿ ನೀಡೋಣ, ಧನ್ಯತೆ ಸೂಚಿಸೋಣ."

- ಚೈತನ್ಯ ಲಕ್ಷ್ಮೀ, ಎಸ್‌ಡಿಎಂ ಉಜಿರೆ (ಪತ್ರಿಕೋದ್ಯಮ ವಿಭಾಗ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+