Gulab Jamun Dosa: ನೀವು ಗುಲಾಬ್ ಜಾಮೂನ್ ದೋಸೆ ತಿಂದೀರಾ?: ಇಲ್ಲಿದೆ ನೋಡಿ ವಿಡಿಯೋ
ಸೋಷಿಯಲ್ ಮೀಡಿಯಾ ಕಾಲದಲ್ಲಿ ಹೊಸದಾಗಿ, ವಿಶೇಷವಾದದ್ದು, ಅಪರಿಚಿತವಾದಂತ ವಿಷಯಗಳನ್ನು ತಿಳಿಸುವ ವಿಡಿಯೋ ಹಾಕಿದರೆ ಕ್ಷಣಮಾತ್ರದಲ್ಲಿ ವೈರಲ್ ಆಗುತ್ತವೆ. ತಿಂಡಿ-ತಿನಿಸು, ಬಗೆಬಗೆಯ ಖಾದ್ಯಗಳ ವಿಡಿಯೋಗಳನ್ನು ಆಹಾರಪ್ರಿಯರು ಹೆಚ್ಚು ವೈರಲ್ ಮಾಡುತ್ತಾರೆ. ಅದೇ ರೀತಿ ಇಲ್ಲೊಬ್ಬ ರಸ್ತೆ ಬದಿ ವ್ಯಾಪಾರಿ ಮಾಡಿರುವ 'ಗುಲಾಬ್ ಜಾಮೂನ್ ದೋಸಾ' (Gulabjamun Dosa) ಸಖತ್ ವೈರಲ್ ಆಗಿದೆ.
ಬೀದಿ ಬದಿ ವ್ಯಾಪಾರಿಯ ಈ ಗುಲಾಬ್ ಜಾಮೂನ್ ದೋಸೆ ಸಾಮಾನ್ಯವಾಗಿ ಮನೆಯಲ್ಲಿ ಮಾಡದ ಅಸಾಂಪ್ರದಾಯಿಕ ಪದ್ಧತಿ ಅನುಸರಿಸಿ ಮಾಡಲಾಗಿದೆ. ನೋಡಿದರೆ ಬಾಯಲ್ಲಿ ನೀರು ಬರಬಹದು. ಆದರೆ ಈ ಕಾಂಬಿನೇಷನ್ ಹೇಗಪ್ಪ ಟೇಸ್ಟ್ ಮಾಡೋದು ಅಂತಲೂ ನಿಮಗೆ ಅನ್ನಿಸಬಹುದು.

ದೋಸೆ ಹೆಂಚಿನ ಮೇಲೆ ಜಾಮೂನ್ ಕಂಡು ವಿಡಿಯೋ ಬ್ಲಾಗರ್ ಹೋಟೆಲ್ ವ್ಯಾಪಾರಿಗೆ ಏನಿದು? ಈ ರೀತಿ ಮಾಡಬಹುದಾ ಎಂದೆಲ್ಲ ಪ್ರಶ್ನಿಸುವುದನ್ನು ನೀವು ವಿಡಿಯೋದಲ್ಲಿ ನೋಡಬಹುದಾಗಿದೆ.
ನೀವು ನೋಡಿರದ ವಿಡಿಯೋ ಇದು
ನಾವು ಕೆಲವೊಮ್ಮೆ ಹೊಸ ಬಗೆಯ, ರುಚಿಯ ಆಹಾರ ಸವಿಯುವುದನ್ನು ಇಷ್ಟು ಪಡುತ್ತೇವೆ. ಕೆಲವೊಮ್ಮೆ ಅವುಗಳೇ ಅನಾರೋಗ್ಯಕ್ಕೆ ಕಾರಣಗುತ್ತದೆ. ಆನ್‌ಲೈನ್ ನಲ್ಲಿ ನೀವು ಪಾಲಾಕ್ ಪನೀರ್ ಸಮೋಸಾಗಳು, ಎಗ್ ಪಾನಿ ಪುರಿ, ಮ್ಯಾಗಿ ಪರಾಠ ಮತ್ತು ಚಾಕೊಲೇಟ್ ಮಂಚೂರಿಯನ್, ಬಿರಿಯಾನಿ, ವಿಶೇಷ ಖಾದ್ಯಗಳ ತಯಾರಿಸುವಿಕೆ ನೋಡಿರುತ್ತೀರಿ.
ಆದರೆ ಚಂಡೀಗಢದಲ್ಲಿ ಮಾತ್ರವೇ ನಿಮಗೆ ಈ ಗುಲಾಬ್ ಜಾಮೂನು ದೋಸಾ ಸವಿಯಲು ಸಾಧ್ಯವಾಗುತ್ತದೆ. ಇಲ್ಲಿ ಬೀದಿ ವ್ಯಾಪಾರಿ ಜಾಮೂನು-ದೋಸೆಯೊಂದಿಗೆ ಬೆರೆಸಿ ಕೊಡುವ ಮೂಲಕ ಗ್ರಾಹಕರಿಗೆ ಅಚ್ಚರಿ ಮೂಡಿಸಿದ್ದಾರೆ. ಇದೊಂದು ಹೊಸ ರೀತಿಯ ಡಿಶ್ ಎನ್ನುವ ವ್ಯಾಪಾರಿ ಮತ್ತು ಅವರ ಈ ಡಿಶ್ ಭಾರೀ ವೈರಲ್ ಆಗಿದೆ.

ಜಾಮೂನ್ ದೋಸಾ ಮಾಡಿದ್ದೇಗೆ?
ಚಂಡೀಗಢದಲ್ಲಿ ದೋಸೆ ಮಾರುವ ಬೀದಿ ಬದಿ ಮಳಿಗೆಗೆ ವಿಡಿಯೋ ಬ್ಲಾಗರ್ ತೆರಳಿ ಈ ದೋಸಾ ಸವಿದಿದ್ದಾರೆ. ಅವರು ಮಾಡಿರುವ ವಿಡಿಯೋದಲ್ಲಿ, ''ದೋಸೆ ಮೇಲೆ ಅಲೂಗೆಡ್ಡೆ ಇನ್ನಿತರ ಪದಾರ್ಥಗಳ ಬದಲಾಗಿ ವ್ಯಾಪಾರಿಯು ಜಾಮೂನು ಸೇರಿಸಿದ್ದಾರೆ. ಕಾದ ಹೆಂಚಿನ ಮೇಲೆ ದೋಸೆ ಹಿಟ್ಟನ್ನು ಹರಡುತ್ತಾರೆ.
ನಂತರ ಮುಂದಿದ್ದ ಮೂರು ಜಾಮೂನ್ ಉಂಡೆಗಳನ್ನು ಸಿದ್ಧವಾಗುತ್ತಿರುವ ದೋಸೆ ಮೇಲೆ ಹಾಕಿ ಚಮಚದಿಂದ ಸಣ್ಣಗೆ ಪೀಸ್ ಮಾಡಿ ದೋಸೆಯ ಮೇಲೆಲ್ಲ ಹರಡುತ್ತಾನೆ. ದೋಸೆ ಬೆಂದು ಸಿದ್ಧವಾದ ಮೇಲೆ ಅದಕ್ಕೆ ತೆಂಗಿನ ಕಾಯಿ ಪುಡಿ, ಕ್ರೀಮ್ ಜೊತೆಗೆ ಜಾಮೂನಿನ ಸಿಹಿ ಪಾಕ ಸಹ ಹಾಕಿ ಬ್ಲಾಗರ್‌ಗಳಿಗೆ ಸವಿಯಲು ಕೊಡುತ್ತಾನೆ.
ದೋಸೆ ಸಿದ್ಧವಾಗುವವರೆಗೂ ಅಪರೂಪದ ಮತ್ತು ಅಸಾಂಪ್ರದಾಯಿಕ ಪದ್ಧತಿಯಿಂದ ಮಾಡಿದ ಈ ದೋಸೆ ತಿನ್ನಬಹದೆ ಎಂದು ಬ್ಲಾಗಲ್ ತಮಾಷೆಯಾಗಿ ಕೇಳುತ್ತಾರೆ. ಇದಕ್ಕೆ ವ್ಯಾಪಾರಿ ಗ್ರಾಹಕರ ಬೇಡಿಕೆಗೆ ಇಷ್ಟವಾದ ಪದಾರ್ಥ ಪೂರೈಸುತ್ತಿದ್ದೇನೆ ಎಂದು ನಗುತ್ತಲೇ ಪ್ರತಿಕ್ರಿಯಿಸಿದ್ದನ್ನು ನೀವು ವಿಡಿಯೋದಲ್ಲಿ ನೋಡಬಹುದಾಗಿದೆ. ತಿಂದ ನಂತರ ವಾವ್ ಟೇಸ್ಟಿ ಎಂದು ಬ್ಲಾಗರ್ ಹೇಳಿದ್ದಾರೆ.
ಕಾಮೆಂಟ್ ಮಾಡಿದ ಸ್ವಿಗ್ಗಿ ಇನ್‌ಸ್ಟಾಮಾರ್ಟ್
ಈ ಗುಲಾಬ್ ಜಾಮೂನ್ ದೋಸೆ ಮಾಡುವ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿದೆ. ಆಹಾರ ಪ್ರಿಯರು ನಾನಾ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ವಿಡಿಯೋಗೆ Swiggy Instamart ಅವರು ಕಾಮೆಂಟ್ ಮಾಡಿದ್ದಾರೆ, "ಆಜ್ ಯೇ ಹೋ ರಹಾ ಹೈ, ಕಲ್ ಸಮೋಸೆ ಮೇ ರಸ್ಮಲೈ ದಾಲ್ ದೋಗೆ' ಎಂದು ಬರೆದಿದ್ದಾರೆ.
ಸಿಹಿ ಇಷ್ಟಪಡುವವರು ಈ ಡಿಶ್ ಅನ್ನು ಒಪ್ಪಿಕೊಳ್ಳುತಾರೆ. ಇದು ರುಚಿಯಾಗಿರಬಹುದು ಎಂದು ಒಬ್ಬರು ಅಭಿಪ್ರಾಯಪಟ್ಟಿದ್ದಾರೆ. ಸಾಧ್ಯವಾದಷ್ಟು ಆರೋಗ್ಯಕರ ಆಹಾ-ಭಕ್ಷ್ಯಗಳನ್ನು ಸವಿಯಬೇಕು. ಇದನ್ನು ನಮ್ಮ ಪೂರ್ವಜರು ಹೇಳಿಕೊಟ್ಟಿದ್ದಾರೆ. ಇಂತಹ ಪದಾರ್ಥಗಳಿಂದ ಅನಾರೋಗ್ಯ ತಂದುಕೊಳ್ಳಬೇಡಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.












Click it and Unblock the Notifications