ಒಂದೇ ಮಂಟಪದಲ್ಲಿ ನಾಲ್ವರನ್ನು ಮದುವೆಯಾದ ವರ: 'ನೀನೇ ಪುಣ್ಯವಂತ' ಎಂದ ನೆಟ್ಟಿಗರು- ವಿಡಿಯೋ ವೈರಲ್
ಇವತ್ತು ಒಂದು ಮದುವೆ ಆಗೋದೇ ಕಷ್ಟ ಇದೆ. ಒಂದು ಸಂಸಾರವನ್ನೇ ಚೆನ್ನಾಗಿ ನಡೆಸಿಕೊಂಡು ಹೋಗುವುದಕ್ಕೇ ತಲೆ ಕೆಟ್ಟು ಹುಚ್ಚರಾಗುವುದೊಂದು ಬಾಕಿ ಅನ್ನೋ ಪುರುಷರು ನಮ್ಮ ನಡುವೆ ಇದ್ದಾರೆ. ಇಂಥವರ ನಡುವೆ ಕೆಲ ಘಟನೆಗಳು ಆಚ್ಚರಿ ಮೂಡಿಸುತ್ತವೆ. ಇಲ್ಲೊಬ್ಬ ವರ ಒಂದಲ್ಲಾ ಎರಡಲ್ಲಾ ಒರೋಬ್ಬರಿ ನಾಲ್ಕು ವಧುಗಳೊಂದಿಗೆ ಒಂದೇ ಮಂಟಪದಲ್ಲಿ ಮದುವೆಯಾಗಿದ್ದಾನೆ.
ಹೌದು.... ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೋಡುಗರನ್ನ ಬೆಚ್ಚಿ ಬೀಳಿಸಿದೆ. ಇದಕ್ಕೆ ಹಲವಾರು ಜನ ಹಲವಾರು ರೀತಿ ಕಾಮೆಂಟ್ ಮಾಡಿದ್ದಾರೆ. ಜೀವನದಲ್ಲಿ ಒಂದು ಗಂಡಿಗೆ ಒಂದು ಹೆಣ್ಣು ಆ ದೇವರು ಸೃಷ್ಟಿ ಮಾಡಿರುತ್ತಾನೆ ಎಂದು ನಮ್ಮ ಹಿರಿಯರು ಹೇಳುವುದನ್ನು ನಾವು ಕೇಳಿದ್ದೇವೆ.

ಆದರೆ ಈಗ ಕಾಲ ಬದಲಾಗಿದೆ. ಒಬ್ಬ ಪುರುಷನಿಗೆ ಮೂರು ನಾಲ್ಕು ಪತ್ನಿಯರು, ಒಬ್ಬ ಮಹಿಳೆಗೆ ಪತಿ ಜೊತೆಗೆ ಬಾಯ್ ಫ್ರೆಂಡ್ ಇರುವುದು ಸಾಮಾನ್ಯವಾಗಿ ಸುದ್ದಿಗಳಾಗಿಬಿಟ್ಟಿವೆ. ಆದರೆ ಇವೆಲ್ಲವೂ ತೆರೆಮರೆಯಲ್ಲಿ ನಡೆಯುತ್ತವೆ. ಅಂದರೆ ಪತಿಯ ಅನೈತಿಕ ಸಂಬಂಧದ ಬಗ್ಗೆ ಪತ್ನಿಗೆ ತಿಳಿದಿರುವುದಿಲ್ಲ. ಪತ್ನಿಯ ಬಾಯ್ ಫ್ರೆಂಡ್ ಬಗ್ಗೆ ಪತಿಗೆ ತಿಳಿದಿರುವುದಿಲ್ಲ. ತಿಳಿದ ದಿನ ಅದು ಎಲ್ಲೆಡೆ ದೊಡ್ಡ ಸುದ್ದಿಯಾಗಿ ಹರಿದಾಡುತ್ತದೆ.
ಇದರಿಂದ ಸಂಸಾರಗಳು ಒಡೆದು ಸುಖ ಜೀವನದಲ್ಲಿ ಮನಸ್ತಾಪಗಳು ಬರಲು ಆರಂಭವಾಗುತ್ತವೆ. ಇಂಥಹ ನಡೆಯನ್ನು ಯಾವುದೇ ಪತಿಯಾಗಲಿ ಪತ್ನಿಯಾಗಲಿ ಸಹಿಸುವುದಿಲ್ಲ. ತನ್ನ ಪತ್ನಿ ತನ್ನಿಂದ ದೂರ ಹೋಗುತ್ತಾನೆ ಅಥವಾ ಮತ್ತೊಬ್ಬ ಹೆಣ್ಣಿನ ಸಂಗದಲ್ಲಿದ್ದಾನೆ ಎನ್ನುವ ವಿಚಾರವೇ ಆಕೆ ಜೀವನದಲ್ಲಿ ಅತೀ ದೊಡ್ಡ ಕಹಿ ಘಟನೆ.
ಹೀಗಿರುವಾಗ ಒಂದೇ ಮಂಟಪದಲ್ಲಿ ತಮ್ಮ ಪತಿ ಮತ್ತೊಬ್ಬ ಹೆಣ್ಣಿಗೆ ತಾಳಿ ಕಟ್ಟುತ್ತಾನೆ ಅನ್ನೋದನ್ನು ಈ ಹೆಣ್ಣು ಮಕ್ಕಳು ಹೇಗೆ ಸಹಿಸಿಕೊಂಡಿದ್ದಾರೋ.... ಇದನ್ನು ಅವರ ಕುಟುಂಬ ಅಥವಾ ಸಮಾಜವಾದರೂ ಹೇಗೆ ಕಣ್ಣಾರೆ ನೋಡಿಕೊಂಡು ಇದಿಯೋ ಆ ದೇವರೇ ಬಲ್ಲ... ಪ್ರೀತಿ ಕುರುಡು ಆದರೆ ಇಷ್ಟೊಂದು ಕುರುಡಾ ಅನ್ನೋ ಪ್ರಶ್ನೆ ಈ ವಿಡಿಯೋ ನೋಡುವುದರಿಂದ ಮೂಡದೇ ಇರದು.
सारथी मेरे रथ को खाई के तरफ ले चलो...🤐 pic.twitter.com/n9bYlCOtMS
— मुसाफिर 🚶vk (@musafir_vj) December 7, 2023
ವೈರಲ್ ವಿಡಿಯೋದಲ್ಲಿ ಏನಿದೆ?
ವೀಡಿಯೋದಲ್ಲಿ ಸಂಪೂರ್ಣ ಬಿಳಿ ಉಡುಪಿನಲ್ಲಿ ಅಲಂಕೃತಗೊಂಡ ವರನು ತನ್ನ ನಾಲ್ಕು ವಧುಗಳೊಂದಿಗೆ ಸಂತೋಷದಿಂದ ಸಪ್ತಪದಿ ತುಳಿಯುತ್ತಾನೆ. ವಧುಗಳು ಗೌರವದಿಂದ ತಮ್ಮ ಗಂಡನ ಪಾದಗಳನ್ನು ಸ್ಪರ್ಶಿಸಿ ಆಶೀರ್ವಾದವನ್ನು ಪಡೆಯುತ್ತಾರೆ. ಇಡೀ ಸಮಾರಂಭವು ನೇಹಾ ಕಕ್ಕರ್ ಅವರ ಜನಪ್ರಿಯ ಮದುವೆಯ ಹಾಡು ತುಮ್ ಜೀತ್ ಗಯೇ ಔರ್ ಹಮ್ ಹಾರೆ ಹಿನ್ನೆಲೆ ಹಾಡಿನೊಂದಿಗೆ ಪ್ಲೇ ಆಗುತ್ತದೆ. ನೆಟ್ಟಿಗರು ಇದಕ್ಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ ಏನು?
'ನಾಲ್ಕು ಜನ ಮದುವೆ ಆಗಿದಿರಾ ಹುಷಾರ್.. ಆರೋಗ್ಯ ಹಾಳ್ ಆಗುತ್ತೆ' ಎಂದು ಕಾಮೆಂಟ್ ಮಾಡಿದ್ದಾರೆ.
'ಇದು ನಕಲಿ, ಕೇವಲ ರೀಲ್‌ಗಳು ಮತ್ತು ಬೇರೇನೂ ಇಲ್ಲ' ಎಂದು ಬರೆದಿದ್ದಾರೆ.
'ನಮಗೆ ಒಂದೂ ಆಗಿಲ್ಲ. ನಿಮಗೆ ಹೇಗೆ ನಾಲ್ಕು ಸಿಕ್ಕಿತು' ಎಂದು ಮತ್ತೊಬ್ಬರು ಹಾಸ್ಯಾಸ್ಪದವಾಗಿ ಪ್ರತಿಕ್ರಿಯಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗೆ ನೂರಾರು ಲೈಕ್‌ಗಳು ಮತ್ತು ಸಾವಿರಾರು ವೀಕ್ಷಣೆಗಳು ಬಂದಿವೆ.
ಈ ಘಟನೆಯು ಕಳೆದ ವರ್ಷ ಜಾರ್ಖಂಡ್‌ನ ಸಂದೀಪ್ ಎಂಬ ವ್ಯಕ್ತಿ ಒಂದೇ ಮದುವೆ ಸಮಾರಂಭದಲ್ಲಿ ಇಬ್ಬರು ಮಹಿಳೆಯರೊಂದಿಗೆ ಗಂಟುಮೂಟೆ ಕಟ್ಟಿದ ಪ್ರಕರಣವನ್ನು ನೆನಪಿಸುತ್ತದೆ. ಸಂದೀಪ್ ಅವರು ಇಬ್ಬರು ಮಹಿಳೆಯರನ್ನು ಪ್ರೀತಿಸುತ್ತಿದ್ದು, ತನ್ನ ಮೊದಲ ಸಂಗಾತಿ ಕುಸುಮ್ ಅವರೊಂದಿಗೆ ವಾಸಿಸುತ್ತಿದ್ದಾರೆ ಮತ್ತು ಅವರೊಂದಿಗೆ ಮಗುವನ್ನು ಹೊಂದಿದ್ದರು. ಸ್ವಾತಿ ಕುಮಾರಿ ಎಂಬ ಇನ್ನೊಬ್ಬ ಮಹಿಳೆಯೊಂದಿಗಿನ ಅವನ ಸಂಬಂಧವು ಬಹಿರಂಗವಾದ ನಂತರ, ಅವನು ಎರಡೂ ಮಹಿಳೆಯರನ್ನು ಮದುವೆಯಾಗಬೇಕೆಂದು ನಿರ್ಧರಿಸಿದ ಪಂಚಾಯತ್ (ಗ್ರಾಮ ಸಭೆ) ಅನ್ನು ಕರೆಯಲಾಯಿತು. ಆಗ ಅವರು ಸಭೆಯ ತೀರ್ಮಾನದಂತೆ ಇಬ್ಬರೊಂದಿಗೆ ಸಂಸಾರ ಮಾಡುತ್ತಿದ್ದಾರೆ.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್












Click it and Unblock the Notifications