ಇರಾಕ್ ಕಲಾ ಪ್ರತಿಭೆ ನಾಜಿಹಾ ಸಲೀಂಗೆ ಗೂಗಲ್ ಡೂಡಲ್ ಗೌರವ
ಇರಾಕಿನ ಸಮಕಾಲೀನ ಕಲಾ ಪ್ರತಿಭೆ ನಾಜಿಹಾ ಸಲೀಂ ಅವರನ್ನು ಗೂಗಲ್ ತನ್ನ ಡೂಡಲ್ ಮೂಲಕ ಗೌರವಿಸಿದೆ. ಕಳೆದ 2020ರ ಏಪ್ರಿಲ್ 23ರಂದು "ಇರಾಕ್‌ನ ಸಮಕಾಲೀನ ಕಲಾ ದೃಶ್ಯದಲ್ಲಿ ಅತ್ಯಂತ ಪ್ರಭಾವಶಾಲಿ ಕಲಾವಿದರಲ್ಲಿ ಒಬ್ಬರು" ಎಂದು ವರ್ಣಿಸಲಾದ ವರ್ಣಚಿತ್ರಕಾರ-ಪ್ರೊಫೆಸರ್, ಬಾರ್ಜೀಲ್ ಆರ್ಟ್ ಫೌಂಡೇಶನ್‌ನಿಂದ ಮಹಿಳಾ ಕಲಾವಿದರ ಸಂಗ್ರಹಣೆಯಲ್ಲಿ ಗಮನ ಸೆಳೆದಿದೆ ಎಂದು ಗೂಗಲ್ ಹೇಳಿದೆ.
"ಅವರ ಕೆಲಸವು ಗ್ರಾಮೀಣ ಇರಾಕಿನ ಮಹಿಳೆಯರು ಮತ್ತು ರೈತ ಜೀವನವನ್ನು ದಪ್ಪ ಬ್ರಷ್ ಸ್ಟ್ರೋಕ್‌ಗಳು ಮತ್ತು ಎದ್ದುಕಾಣುವ ಬಣ್ಣಗಳ ಮೂಲಕ ಚಿತ್ರಿಸುತ್ತದೆ," ಎಂದು ಅದು ಹೇಳಿದೆ. "ಇಂದಿನ ಡೂಡಲ್ ಕಲಾಕೃತಿಯು ಸಲೀಂ ಅವರ ಚಿತ್ರಕಲೆ ಶೈಲಿಗೆ ಒಂದು ದ್ಯೋತಕವಾಗಿದೆ. ಅಲ್ಲದೇ ಕಲಾ ಪ್ರಪಂಚಕ್ಕೆ ಅವರ ದೀರ್ಘಕಾಲದ ಕೊಡುಗೆಗಳಿಗೆ ಸಲ್ಲಿಸಿದ ಗೌರವವಾಗಿದೆ."
ಸಲೀಮ್ 1927ರಲ್ಲಿ ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ಇರಾಕಿನ ಕಲಾವಿದರ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಕೂಡಾ ವರ್ಣಚಿತ್ರಕಾರರಾಗಿದ್ದರು. ತಾಯಿ ಕಸೂತಿ ಕಲಾವಿದರಾಗಿದ್ದರು. ಸಲೀಂ ಅವರಿಗೆ ಮೂವರು ಸಹೋದರರಿದ್ದು, ಅವರೆಲ್ಲ ಕಲೆಯಲ್ಲೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಸಹೋದರರಲ್ಲಿ ಒಬ್ಬರಾದ ಜವಾದ್ ಸಲೀಂ, ಇರಾಕ್‌ನ ಅತ್ಯಂತ ಪ್ರಭಾವಶಾಲಿ ಶಿಲ್ಪಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ.

ಬಾಗ್ದಾದ್ ಫೈನ್ ಆರ್ಟ್ಸ್ ಇನ್‌ಸ್ಟಿಟ್ಯೂಟ್‌ನಿಂದ ಪದವಿ:
ಬಾಗ್ದಾದ್ ಫೈನ್ ಆರ್ಟ್ಸ್ ಇನ್‌ಸ್ಟಿಟ್ಯೂಟ್‌ನಿಂದ ನಜಿಹಾ ಸಲೀಂ ಪದವಿ ಪಡೆದರು. ತದನಂತರ ವಿದ್ಯಾರ್ಥಿ ವೇತನದ ಮೇಲೆ ಪ್ಯಾರಿಸ್‌ನ ಎಕೋಲ್ ನ್ಯಾಶನಲ್ ಸುಪೀರಿಯರ್ ಡೆಸ್ ಬ್ಯೂಕ್ಸ್-ಆರ್ಟ್ಸ್‌ನಲ್ಲಿ ಅಧ್ಯಯನ ನಡೆಸಿದರು. ಪ್ಯಾರಿಸ್‌ನಲ್ಲಿದ್ದಾಗ ಅವರು ಫ್ರೆಸ್ಕೊ ಮತ್ತು ಮ್ಯೂರಲ್ ಪೇಂಟಿಂಗ್‌ನಲ್ಲಿ ಪರಿಣತಿ ಪಡೆದುಕೊಂಡರು.
ವಿದೇಶದಲ್ಲಿ ಹಲವಾರು ವರ್ಷಗಳನ್ನು ಕಳೆದ ನಂತರ ಅವರು ಬಾಗ್ದಾದ್‌ಗೆ ಹಿಂದಿರುಗಿದರು. ಅವರು ನಿವೃತ್ತಿಯಾಗುವವರೆಗೂ ಫೈನ್ ಆರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತುದಾರರಾಗಿ ಕಲೆಯನ್ನು ಕಲಿಸುವುದಕ್ಕಾಗಿ ಶ್ರಮಿಸಿದರು. ವಿದೇಶದಲ್ಲಿ ಅಧ್ಯಯನ ಮಾಡುವ ಕಲಾವಿದರ ಸಮುದಾಯವಾದ ಅಲ್-ರುವ್ವಾದ್‌ನ ಸ್ಥಾಪಕ ಸದಸ್ಯರಲ್ಲಿ ಸಲೀಂ ಕೂಡ ಒಬ್ಬರಾಗಿದ್ದರು. ಇರಾಕಿನ ಸೌಂದರ್ಯಶಾಸ್ತ್ರದಲ್ಲಿ ಕಲಾ ತಂತ್ರಗಳನ್ನು ಇವರು ಸಂಯೋಜಿಸಿದರು.
ಇರಾಕ್‌ನ ಆಧುನಿಕ ಕಲಾ ಚಳುವಳಿಯ ಆರಂಭಿಕ ಬೆಳವಣಿಗೆಯ ಮೇಲೆ ಕೇಂದ್ರೀಕರಿಸುವ "ಇರಾಕ್: ಕಾಂಟೆಂಪರರಿ ಆರ್ಟ್" ಅನ್ನು ಬರೆದಿದ್ದಾರೆ. ಅವರ ಕಲಾಕೃತಿಯು ಶಾರ್ಜಾ ಆರ್ಟ್ ಮ್ಯೂಸಿಯಂ ಮತ್ತು ಮಾಡರ್ನ್ ಆರ್ಟ್ ಇರಾಕಿ ಆರ್ಕೈವ್‌ನಲ್ಲಿ ಇರಿಸಲಾಗಿದೆ.












Click it and Unblock the Notifications