ಸಮೀಕ್ಷೆ; ಗೋವಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 17 ರಿಂದ 21 ಸೀಟು

ಪಣಜಿ, ಜನವರಿ 31; ಗೋವಾ ರಾಜ್ಯದ ವಿಧಾನಸಭೆ ಚುನಾವಣೆಗೆ ಕೇವಲ ಎರಡು ವಾರಗಳು ಉಳಿದಿವೆ. ಈಗ ನಡೆದಿರುವ ಚುನಾವಣಾ ಸಮೀಕ್ಷೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ. ಫೆಬ್ರವರಿ 14ರಂದು 40 ಸದಸ್ಯ ಬಲದ ಗೋವಾ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ.

ಭಾನುವಾರ India TV-Ground Zero ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟವಾಗಲಿದೆ. ಜಿಎಫ್‌ಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿರುವ ಕಾಂಗ್ರೆಸ್‌ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಸಮೀಕ್ಷೆ ಹೇಳಿದೆ.

ರಾಜ್ಯದ 40 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷ 37 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜಿಎಫ್‌ಪಿಗೆ 3 ಸ್ಥಾನಗಳನ್ನು ಬಿಟ್ಟುಕೊಟ್ಟಿದೆ. 2017ರ ಚುನಾವಣೆ ಬಳಿಕ ಮನೋಹರ್ ಪರಿಕ್ಕರ್‌ಗಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಜಿಎಫ್‌ಪಿ ಬೆಂಬಲ ನೀಡಿತ್ತು. ಆದರೆ 2022ರಲ್ಲಿ ಚುನಾವಣೆ ಘೋಷಣೆಗೂ ಮುನ್ನವೇ ಕಾಂಗ್ರೆಸ್ ಜೊತೆ ಪಕ್ಷ ಕೈ ಜೋಡಿಸಿದೆ.

ಇನ್ನು ಮೊದಲ ಬಾರಿಗೆ ಗೋವಾ ಚುನಾವಣಾ ಕಣಕ್ಕಿಳಿದಿರುವ ಟಿಎಂಸಿ ಪಕ್ಷ ಎಂಜಿಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಎಎಪಿ ಪಕ್ಷ ಸಹ ರಾಜ್ಯದ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆಯಲು ಸೋಮವಾರ ಕಡೆಯ ದಿನವಾಗಿದೆ.

ಯಾರಿಗೆ ಎಷ್ಟು ಸೀಟು ಸಿಗಲಿದೆ?

ಯಾರಿಗೆ ಎಷ್ಟು ಸೀಟು ಸಿಗಲಿದೆ?

ಗೋವಾದ 40 ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷಕ್ಕೆ 17 ರಿಂದ 21 ಸ್ಥಾನ. ಬಿಜೆಪಿಗೆ 14 ರಿಂದ 18 ಸ್ಥಾನ, ಟಿಎಂಸಿ & ಎಂಜಿಪಿ ಮೈತ್ರಿಕೂಟಕ್ಕೆ 2-4 ಸ್ಥಾನ, ಎಎಪಿಗೆ 02-2 ಸ್ಥಾನ ಸಿಗಲಿದೆ, ಇತರರು 1 ಸ್ಥಾನದಲ್ಲಿ ಗೆಲುವು ಸಾಧಿಸಿದಲಿದ್ದಾರೆ ಎಂದು ಸಮೀಕ್ಷೆ ಅಂದಾಜಿಸಿದೆ. ಗೋವಾ ವಿಧಾನಸಭೆಯಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 21.

2017ರ ಚುನಾವಣೆಯಲ್ಲಿ ಕಾಂಗ್ರೆಸ್ 17, ಬಿಜೆಪಿ 13 ಸ್ಥಾನದಲ್ಲಿ ಗೆಲುವು ಸಾಧಿಸಿದ್ದವು. ಆದರೆ ಬಿಜೆಪಿ ಇತರ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿತ್ತು.

ಮತಗಳಿಕೆ ಬಿಜೆಪಿಗೆ ಅಧಿಕ

ಮತಗಳಿಕೆ ಬಿಜೆಪಿಗೆ ಅಧಿಕ

ಗೋವಾ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು ಆದರೆ ಮತಗಳಿಕೆಯಲ್ಲಿ ಬಿಜೆಪಿಯೇ ಮುಂದಿದೆ. ಚುನಾವಣೆಯಲ್ಲಿ ಬಿಜೆಪಿ ಶೇ 35, ಕಾಂಗ್ರೆಸ್ ಶೇ 31, ಟಿಎಂಸಿ-ಎಂಜಿಪಿ ಶೇ 12 ಮತ್ತು ಎಎಪಿ ಶೇ 10ರಷ್ಟು ಮತಗಳನ್ನು ಪಡೆಯಲಿದ್ದಾರೆ. ಇತರರು ಶೇ 12ರಷ್ಟು ಮತ ಪಡೆಯಲಿದ್ದಾರೆ ಎಂದು ಸಮೀಕ್ಷೆ ಅಂದಾಜಿಸಿದೆ.

ದಕ್ಷಿಣ ಗೋವಾದಲ್ಲಿ ಹೆಚ್ಚು ಮತ

ದಕ್ಷಿಣ ಗೋವಾದಲ್ಲಿ ಹೆಚ್ಚು ಮತ

ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಕಾಂಗ್ರೆಸ್-ಜಿಎಫ್‌ಪಿ ಪಕ್ಷಕ್ಕೆ ದಕ್ಷಿಣ ಗೋವಾದಲ್ಲಿ ಶೇ 41ರಷ್ಟು ಮತಗಳು ಸಿಗಲಿವೆ. ಬಿಜೆಪಿಗೆ ಶೇ 32 ಮತ್ತು ಟಿಎಂಸಿ-ಎಂಜಿಪಿಗೆ ಶೇ 12ರಷ್ಟು ಮತಗಳು ಸಿಗಲಿವೆ. ಎಎಪಿ ಶೇ 7 ಹಾಗೂ ಇತರರು ಶೇ 8ರಷ್ಟು ಮತಗಳನ್ನು ಪಡೆಯಲಿವೆ ಎಂದು ಅಂದಾಜಿಸಲಾಗಿದೆ.

ದಕ್ಷಿಣ ಗೋವಾದಲ್ಲಿಯೇ ಕಾಂಗ್ರೆಸ್-ಜಿಎಫ್‌ಪಿಗೆ 10-12 ಸೀಟು, ಬಿಜೆಪಿಗೆ 6-8 ಸೀಟು, ಟಿಎಂಸಿ-ಎಂಜಿಪಿಗೆ 1-2 ಸೀಟು ಮತ್ತು ಎಎಪಿಗೆ 0-2 ಸೀಟು ಲಭ್ಯವಾಗಲಿದೆ ಎಂದು ಸಮೀಕ್ಷೆ ಹೇಳಿದೆ.

ಶನಿವಾರ ಪ್ರಕಟವಾದ ಸಮೀಕ್ಷೆ

ಶನಿವಾರ ಪ್ರಕಟವಾದ ಸಮೀಕ್ಷೆ

ಶನಿವಾರ ಪ್ರಕಟವಾದ Times Now-VETO ಗೋವಾ ವಿಧಾನಸಭೆ ಚುನಾವಣೆ ಕುರಿತ ಚುನಾವಣಾ ಪೂರ್ವ ಸಮೀಕ್ಷೆ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಮತ್ತು ರಾಜ್ಯದಲ್ಲಿ ಅಧಿಕಾರ ಪಡೆಯಲಿದೆ ಎಂದು ಹೇಳಿತ್ತು. ಬಿಜೆಪಿ 20-23, ಕಾಂಗ್ರೆಸ್ 4-6 ಸೀಟು, ಎಎಪಿ ಪಕ್ಷ 6-10 ಸೀಟು ಗೆಲ್ಲಲಿದೆ. ಪಕ್ಷೇತರ ಅಭ್ಯರ್ಥಿಗಳು 5-6 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ ಎಂದು ಸಮೀಕ್ಷೆ ಹೇಳಿತ್ತು.

ಗೋವಾ ವಿಧಾನಸಭೆ ಚುನಾವಣೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ ಭಾನುವಾರ ಪ್ರಚಾರ ನಡೆಸಿದರು. ಫೆಬ್ರವರಿ 2ರಂದು ರಾಹುಲ್ ಗಾಂಧಿ ಭೇಟಿ ನೀಡಲಿದ್ದು, ಪಕ್ಷದ ಪ್ರಣಾಳಿಕೆ ಸಹ ಬಿಡುಗಡೆ ಮಾಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+