Ghost drive tractor: ಇದ್ದಕ್ಕಿದ್ದಂತೆ ಮುಂದಕ್ಕೆ ಸಾಗಿ ವಾಹನಗಳನ್ನು ಪುಡಿಪುಡಿ ಮಾಡಿದ ಚಾಲಕನಿಲ್ಲದ ಟ್ರ್ಯಾಕ್ಟರ್!
ಚಪ್ಪಲ್ ಶಾಪ್ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಚಾಲನೆಗೊಂಡ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ವೈರಲ್ ವೀಡಿಯೋ: ಯುಪಿಯ ಬಿಜ್ನೋರ್‌ನಲ್ಲಿ 'ಹಾಂಟೆಡ್' ಟ್ರ್ಯಾಕ್ಟರ್ ತನ್ನದೇ ಆದ ಮೇಲೆ ಪ್ರಾರಂಭವಾಯಿತು, ಅಂಗಡಿಯ ಗಾಜಿನ ಕಿಟಕಿಯನ್ನು ಒಡೆದಿದೆ.
ನವದೆಹಲಿ: ಕಾಲಕಾಲಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇತ್ತೀಚೆಗೆ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ತನ್ನಿಂದ ತಾನೆಯೇ ಟ್ರ್ಯಾಕ್ಟರ್ ಮುಂದಕ್ಕೆ ಸಾಗಿದೆ. ಮೂರು ನಾಲ್ಕು ಜನ ಟ್ರ್ಯಾಕ್ಟರ್ ತಡೆದರೂ ಅದನ್ನು ನಿಲ್ಲಿಸಲಾಗಿಲ್ಲ. ನಂಬಲಾರ್ಹ ಮಾತಾದರೂ ಇದು ನಿಜವೇ.

ಸಾಮಾನ್ಯವಾಗಿ ಇಳಿಜಾರಿನ ಪ್ರದೇಶ ಅಥವಾ ಗಾಳಿಯಿಂದಾಗಿ ನಿಲ್ಲಿಸಿದ ವಾಹನ ಮುಂದಕ್ಕೆ ಚಲಿಸಬಹುದು. ಆದರೆ ಇಲ್ಲಿ ಆಗಿದ್ದೇ ಬೇರೆ. ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಶೋರೂಂ ಮುಂದೆ ನಿಂತಿದ್ದ ಟ್ರ್ಯಾಕ್ಟರ್ ತಾನಾಗಿಯೇ ಚಲಿಸಲು ಆರಂಭಿಸಿದ ವಿಚಿತ್ರ ಘಟನೆ ನಡೆದಿದೆ. ಟ್ರ್ಯಾಕ್ಟರ್ ಶೂ ಶಾಪ್‌ಗೆ ನುಗ್ಗಿ, ಅಂಗಡಿಯಲ್ಲಿನ ಗಾಜು ಮತ್ತು ಇತರ ವಸ್ತುಗಳನ್ನು ಪುಡಿಪುಡಿ ಮಾಡಿದೆ. ಚಾಲಕನಿಲ್ಲದೇ ಎತ್ತರ ಪ್ರದೇಶಕ್ಕೆ ಒಂದು ವಾಹನ ನುಗ್ಗುವುದು ಎಂದರೆ ಅಷ್ಟು ಸುಲಭವಲ್ಲ. ಈ ಘಟನೆ ನಿಜಕ್ಕೂ ಸ್ಥಳೀಯರಲ್ಲಿ ಭೀತಿಯನ್ನು ಹುಟ್ಟಿಸಿದೆ.
ಈ ವಿಡಿಯೊವನ್ನು ನೋಡಿ:
#टैक्टर_पर_भूत...!#Bijnor में जूते के शो- रूम के सामने खड़ा ट्रैक्टर अचानक से अपने आप स्टार्ट होकर शीशा तोड़ते हुए शो- रूम में घुस गया,जबकि ट्रैक्टर पर कोई बैठा नहीं था. पूरी घटना #CCTV फुटेज में कैद...#Ghost pic.twitter.com/GOch3jruQf
— Tushar Rai (@tusharcrai) March 1, 2023
ಟ್ರಾಕ್ಟರ್ ಹೇಗೆ ಪ್ರಾರಂಭವಾಯಿತು ಎಂಬುದು ಸ್ಪಷ್ಟವಾಗಿಲ್ಲ. ಶೂ ಶಾಪ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸಂಪೂರ್ಣ ಘಟನೆ ಸೆರೆಯಾಗಿದ್ದು, ದೂರು ಸ್ವೀಕರಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಹಿಂದಿನ ದಿನ ಸಮಾಧಾನ್ ದಿವಸ್ ಆಯೋಜಿಸಿದ್ದ ಬಿಜ್ನೋರ್ ಕೊತ್ವಾಲಿ ಸಿಟಿ ಪೊಲೀಸ್ ಠಾಣೆ ಎದುರು ಈ ಘಟನೆ ನಡೆದಿದೆ. ಈ ವೇಳೆ ಕೆಲವರು ಕಾರು ಹಾಗೂ ಟ್ರ್ಯಾಕ್ಟರ್ ಮೂಲಕ ಠಾಣೆಗೆ ಆಗಮಿಸಿದರು. ಕಿಶನ್ ಕುಮಾರ್ ಎಂಬಾತ ತನ್ನ ಟ್ರ್ಯಾಕ್ಟರ್ ಅನ್ನು ಚಪ್ಪಲಿ ಅಂಗಡಿಯ ಮುಂದೆ ನಿಲ್ಲಿಸಿದ್ದಾನೆ. ಮತ್ತೊಂದು ಆಶ್ಚರ್ಯಕರ ವಿಚಾರವೆಂದರೆ ಟ್ರ್ಯಾಕ್ಟರ್ ಇದ್ದಕ್ಕಿದ್ದಂತೆ ಸ್ಟಾರ್ಟ್ ಆಗಿ ಶೂ ಶೋರೂಮ್ ಪ್ರವೇಶಿಸುವ ಮೊದಲು ಒಂದು ಗಂಟೆ ಕಾಲ ಸ್ಟಾರ್ಟ್ ಆಗಿರಲಿಲ್ಲ.
ಚಾಲಕ ಅದನ್ನು ಶೂ-ಚಪ್ಪಲ್ ಅಂಗಡಿಯ ಮುಂದೆ ನಿಲ್ಲಿಸಿ ಹೋಗಿದ್ದಾನೆ. ಒಂದು ಗಂಟೆಯ ಬಳಿಕ ಅದು ತಾನಾಗಿಯೇ ಸ್ಟಾರ್ಟ್ ಆಗಿದ್ದು ಮುಂದಕ್ಕೆ ಚಲಿಸಿದೆ. ಅಲ್ಲಿದ್ದ ವಾಹನ ಹಾಗೂ ಶೂ ರೂಂ ಗಾಜನ್ನು ಒಡೆದು ಹಾಕಿದೆ. ತಕ್ಷಣ ಚಪ್ಪಲಿ ಅಂಗಡಿಯವರು ಟ್ರ್ಯಕ್ಟರ್ ಅನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗಿಲ್ಲ. ಟ್ರ್ಯಾಕ್ಟರ್ ಮುಂದಕ್ಕೆ ಸಾಗುತ್ತಲೇ ಇತ್ತು. ಒಬ್ಬರು ಬ್ರೇಕ್ ಒತ್ತಿ ಹಿಡಿದರೂ ವಾಹನ್ ಬಲವಾಗಿ ಮುನ್ನುಗ್ಗುತ್ತಲೇ ಇತ್ತು. ಬಳಿಕ ಮೂರು ನಾಲ್ಕು ಜನ ಅದನ್ನು ತಡೆದು ನಿಲ್ಲಿಸಿದ್ದಾರೆ. ಈ ವಿಚಿತ್ರ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾಮೆಂಟ್ ಬಾಕ್ಸ್‌ನಲ್ಲಿ ಹಲವರು ಇದು ದೆವ್ವದ ಕೆಲಸ ಎಂದಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಟ್ರ್ಯಾಕ್ಟರ್ ಚಾಲನೆಗೊಳ್ಳಲು ಕಾರಣ ಇನ್ನೂ ತಿಳಿದುಬಂದಿಲ್ಲ.












Click it and Unblock the Notifications