ವಾಕಿಂಗ್ ಹೋಗುವ ಮುನ್ನ ಈ ಕೆಲಸಗಳನ್ನು ಮಾಡಿದರೆ ಬೆಸ್ಟ್
ವಾಕಿಂಗ್ ಯಾವುದೇ ವಯೋಮಿತಿಯ ಜನ ಮಾಡಬಹುದಾದ ಸುಲಭ ವ್ಯಾಯಾಮ. ಇದಕ್ಕೆ ಹೆಚ್ಚಿನ ಶಕ್ತಿ ಸಹ ಪೋಲಾಗುವುದಿಲ್ಲ. ನಿಮ್ಮ ದೆಹಕ್ಕೆ ಅನುಗುಣವಾಗಿ ನೀವು ವಾಕಿಂಗ್ ಮಾಡಬಹುದು. ದಿನ ನಿತ್ಯವೂ ವಾಕಿಂಗ್ ಮಾಡುವುದರಿಂದ ನಿಮ್ಮ ಆರೋಗ್ಯವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದು ಎಂದು ವೈದ್ಯರು ಹೇಳುತ್ತಾರೆ. ಅದರಂತೆ ಬೆಳಗ್ಗೆ ಅಥವಾ ಸಾಯಾಂಕಲ ಯಾವುದಾದರು ಒಂದು ವೇಳೆ ವಾಕಿಂಗ್ ಮಾಡಿದರೆ ಬೆಸ್ಟ್.
ಇಗಿನ ಬ್ಯೂಸಿ ಶೆಡ್ಯೂಲ್‌ಗಳ ಮಧ್ಯ ಜನ ಜೀವನ ಶೈಲಿಯನ್ನೇ ಹಾಳು ಮಾಡಿಕೊಂಡಿರುತ್ತಾರೆ. ಇದರಿಂದಾಗಿ ಹಲವು ಸಮಸ್ಯೆಗಳು ಚಿಕ್ಕ ವಯಸ್ಸಿನಲ್ಲೇ ಆರಂಭವಾಗುತ್ತವೆ. ಕೆಲವರು ಮುಂದಾಗುವ ಗಂಭೀರ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ವ್ಯಾಯಾಮ ಅಥವಾ ವಾಕಿಂಗ್ ಮಾಡುತ್ತಾರೆ. ಬೆಳಗ್ಗೆ ವಾಕಿಂಗ್ ಮಾಡುವ ಮೊದಲು ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂಬ ಬಗ್ಗೆ ಜನರಲ್ಲಿ ಹಲವು ಗೊಂದಲುಗಳು ಇರುತ್ತವೆ.

ವಾಕಿಂಗ್ ಮೊದಲು ಹೀಗೆ ಮಾಡಿದರೆ ಒಳ್ಳೆಯದು
ಬೆಳಗಿನ ನಡಿಗೆಗೆ ಹೋಗುವ ಮೊದಲು ನೀವು ಮಲವಿಸರ್ಜನೆ ಮಾಡಬೇಕು. ಏಕೆಂದರೆ ನಿಮ್ಮ ಹೊಟ್ಟೆಯಲ್ಲಿ ಮಲವು ಸಂಗ್ರಹವಾಗಿದ್ದರೆ, ಅದು ಮಲಬದ್ಧತೆಗೆ ಕಾರಣವಾಗಬಹುದು. ನೀವು ಮಲವಿಸರ್ಜನೆ ಮಾಡದೆ ಬೆಳಗಿನ ನಡಿಗೆಗೆ ಹೋದರೆ, ದೇಹದ ಉಷ್ಣತೆ ಮತ್ತು ಬೆಳಗಿನ ನಡಿಗೆಯ ತೀವ್ರತೆಯು ನಿಮ್ಮ ಮಲವನ್ನು ಒಣಗಿಸುತ್ತದೆ. ಹೀಗಾಗಿ ವಾಕಿಂಗ್ ಹೋಗುವ ಮುನ್ನ ಮಲವಿಸರ್ಜನೆ ಮಾಡುವುದು ತುಂಬಾ ಮುಖ್ಯ.
ಬೆಳಗಿನ ನಡಿಗೆಗೆ ಹೋಗುವ ಮೊದಲು ಪ್ರತಿದಿನ ಉಗುರುಬೆಚ್ಚನೆಯ ನೀರನ್ನು ಕುಡಿದರೆ ಒಳ್ಳೆಯದು. ಅದರಲ್ಲೂ ಇಂದಿನ ವಾತಾವರಣದಲ್ಲಿ ಉಗುರುಬೆಚ್ಚನೆಯ ನೀರು ನಿಮ್ಮ ಆರೋಗ್ಯಕ್ಕೆ ಬಹಳ ಮುಖ್ಯ.
ಉಗುರು ಬೆಚ್ಚನೆಯ ನೀರು ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಅಲ್ಲದೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ನಡೆಯುವ ಮೊದಲು ಉಗುರುಬೆಚ್ಚಗಿನ ನೀರನ್ನು ಕುಡಿಯುವುದರಿಂದ ನಿಮ್ಮ ದೇಹವು ತೇವಾಂಶದಿಂದ ಕೂಡಿರುತ್ತದೆ ಮತ್ತು ನೀವು ಶಕ್ತಿಯುತವಾಗಿರುತ್ತೀರಿ.

ನೀವು ಬೆಳಿಗ್ಗೆ ವಾಕ್ ಮಾಡಲು ಅಥವಾ ವ್ಯಾಯಾಮ ಅಥವಾ ಯೋಗ ಮಾಡಲು ಬಯಸಿದರೆ, ಮೊದಲು ಕರುಳಿನ ಚಲನೆಯನ್ನು ಮಾಡಿ. ವಾಕಿಂಗ್, ವ್ಯಾಯಾಮ ಮತ್ತು ಯೋಗ ಮಾಡುವ ಮೊದಲು ಕರುಳಿನ ಚಲನೆಯನ್ನು ಹೊಂದುವುದು ನಿಮಗೆ ಹಗುರವಾದ ಮತ್ತು ಚೈತನ್ಯವನ್ನು ನೀಡುತ್ತದೆ.
ಬೆಳಗಿನ ನಡಿಗೆಗೆ ಹೋಗುವ ಮೊದಲು ನೀವು ನೀರನ್ನು ಕುಡಿಯಬೇಕು. ಏಕೆಂದರೆ ಇದು ದೇಹವನ್ನು ಡೀಹಾಇಡ್ರೈಶನ ಮಾಡುವುದಿಲ್ಲ ಮತ್ತು ಸ್ನಾಯುಗಳು ಬಲವಾಗಿರುತ್ತವೆ. ಇದಲ್ಲದೆ, ನೀರು ನಿಮ್ಮ ದೇಹವನ್ನು ಶಕ್ತಿಯನ್ನು ತುಂಬುತ್ತದೆ ಮತ್ತು ವಾಕಿಂಗ್ ಅನ್ನು ಸುಲಭಗೊಳಿಸುತ್ತದೆ.
ಹೀಗೆ ಮಾಡಬಾರದು
ಕೆಲವು ಜನ ವಾಕಿಂಗ್ ಮೊದಲು ಆಹಾರವನ್ನು ಸೇವಿಸುತ್ತಾರೆ. ಇದರಿಂದ ಹೊಟ್ಟೆ ತುಂಬುತ್ತದೆ. ಬೆಳಗ್ಗೆ ವಾಕಿಂಗ್‌ಗೂ ಮುನ್ನ ಹೆಚ್ಚು ಆಹಾರ ಸೇವನೆ ಒಳ್ಳೆಯದಲ್ಲ. ಇದರಿಂದ ವಾಕಿಂಗ್ ಮಾಡುವಾಗ ಸುಸ್ತಾದಂತೆ ಅನಿಸುತ್ತದೆ. ನಡಿಗೆಗೂ ಮುನ್ನ ಮೆಣಸಿನಕಾಯಿಯ ಮಸಾಲೆಗಳನ್ನು ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ಒಂದು ವೇಳೆ ವಾಕಿಂಗ್ ಮಾಡುವ ಮುನ್ನ ತಿನ್ನಲೇ ಬೇಕು ಎಂದಾದಲ್ಲಿ ವೈದ್ಯರನ್ನು ಸಂಪರ್ಕಿಸಿ ಅವರು ಹೇಳುವಂತೆ ಮಾಡಿ.
ಇನ್ನು ಕೆಲವು ಜನರು ವಾಕಿಂಗ್ ಹೋಗುವಾಗ ಸಾಕಷ್ಟು ನೀರನ್ನು ಕುಡಿಯುತ್ತಾರೆ. ಇದರಿಂದ ವಾಕಿಂಗ್ ಮಾಡುವ ವೇಳೆ ಮೂತ್ರ ವಿಸರ್ಜನೆಯ ಸಮಸ್ಯೆಯನ್ನು ಎದುರಿಸಬಹುದು.
ವಾತಾವರಣಕ್ಕೆ ಅನುಗುಣವಾಗಿ ಬೆಚ್ಚಗಿನ ಬಟ್ಟೆಗಳನ್ನು ಹಾಕಿಕೊಂಡು ನಡಿಗೆಯನ್ನು ಆರಂಭಿಸಿ. ವಾಕಿಂಗ್ ಹೋಗುವ ಮುನ್ನ ನಿಮಗೆ ಬೇಕಾದ ವಸ್ತುಗಳನ್ನೆಲ್ಲಾ ಒಂದು ಬದಿ ಇಟ್ಟುಕೊಂಡು ಬಿಡಿ. ನಂತರ ನಿಮಗೆ ಕಂಫರ್ಟ್ ಆಗುವ ಪಾದರಕ್ಷೆಗಳನ್ನು ಬಳಸಿ. ಇದರಿಂದ ನಡಿಗೆಗೆ ತುಂಬ ಸಹಾಯ. ಅಲ್ಲದೆ ನೀವು ಸಹ ರಿಲ್ಯಾಕ್ಸ್ ಫೀಲ್ ಮಾಡುತ್ತಿರಿ. ನಿಮಗೆ ಬೇಕಾದಲ್ಲಿ ಕೊಂಚ ನೀರನ್ನು ಸಹ ನೀವು ವಾಕಿಂಗ್ ಮಾಡುವಾಗ ಒಯ್ಯಬಹುದು.
ವಾಕಿಂಗ್ ಹೋಗುವ ಮುನ್ನ ಸಾಧ್ಯವಾದರೆ ವ್ಯಾಯಾಮವನ್ನು ಮಾಡಿದರೆ ಒಳ್ಳೆಯದು. ಇದರಿಂದ ದೇಹ ಹಗುರವಾಗುತ್ತದೆ. ವಾಕಿಂಗ್ ಮುನ್ನ ನೀರನ್ನು ಕುಡಿದಿದ್ದರೆ ಕನಿಷ್ಠ 15 ನಿಮಿಷಗಳ ನಂತರ ವ್ಯಾಯಾಮ ಮಾಡಿ. ನೀವು ಸಾಮಾನ್ಯ ನೀರನ್ನು ಕೆಲವು ಸಿಪ್ಸ್ ಮಾತ್ರ ತೆಗೆದುಕೊಳ್ಳಬೇಕು. ಹೆಚ್ಚು ನೀರು ಕುಡಿದ ನಂತರ ಹೊಟ್ಟೆ ನೋವಿಗೆ ಕಾರಣವಾಗಬಹುದು.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications