ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಫ್ರಿಜ್‌ಗೆ ಕರೆಂಟೇ ಬೇಕಿಲ್ಲ; ಎಸ್ಸೆಸ್ಸೆಲ್ಸಿ ಫೇಲ್ಡ್ ವ್ಯಕ್ತಿಯ ಆವಿಷ್ಕಾರ

|
Google Oneindia Kannada News

ಅಹಮದಾಬಾದ್ ಮೇ 27: ಬಾಲ್ಯದಲ್ಲಿ ಚಹಾ ಮಾರುವವರೂ ಇಂದು ಸಮಾಜದಲ್ಲಿ ದೊಡ್ಡ ಸ್ಥನದಲ್ಲಿರುವುದು ನಾವೆಲ್ಲಾ ನೋಡಿದ್ದೇವೆ. ಇಂಥಹ ಅನೇಕ ಪ್ರಸಿದ್ಧ ವ್ಯಕ್ತಿಗಳು ನಮ್ಮಲ್ಲಿದ್ದಾರೆ. ಇವರೊಂದಿಗೆ ಗುಜರಾತ್‌ನಲ್ಲಿ ನೆಲೆಸಿರುವ ಮನ್‌ಸುಖ್‌ಭಾಯ್ ಬಗ್ಗೆ ಕೊಂಚ ತಿಳಿದುಕೊಳ್ಳೋಣ. ಬಡತನದಿಂದ ಮೇಲೆದ್ದು ಬಂದ ಈ ವ್ಯಕ್ತಿ ಇಂದು ಕೋಟಿಗಟ್ಟಲೆ ವ್ಯಾಪಾರ ಮಾಡುತ್ತಿದ್ದು, ಇವರು ತಯಾರಿಸುತ್ತಿರುವ ಉತ್ಪನ್ನಗಳು ಪ್ರಪಂಚದಾದ್ಯಂತ ಚರ್ಚೆಯಾಗುತ್ತಿವೆ. ಕುತೂಹಲಕಾರಿಯಾಗಿ, ಮನ್‌ಸುಖ್‌ಭಾಯ್ 10 ನೇ ತರಗತಿಯನ್ನು ಸಹ ಪಾಸ್ ಮಾಡಿಲ್ಲ. 10 ನೇ ತರಗತಿಯಲ್ಲಿ ಅನುತ್ತೀರ್ಣರಾದ ನಂತರ ಅವರು ಹೆಚ್ಚಿನ ಅಧ್ಯಯನವನ್ನು ಮುಂದುವರಿಸಲಿಲ್ಲ. ಹೀಗಿರುವಾಗ ಇವರು ಪರಿಸರ ಸ್ನೇಹಿ ಫ್ರಿಜ್ ಅನ್ನು ತಯಾರಿಸಿದ್ದಾರೆ. ಇದನ್ನು ನೋಡಿದ ಜನ ಆಶ್ಚರ್ಯ ಪಡುತ್ತಿದ್ದಾರೆ.

ಭಾರತದಲ್ಲಿ ಸೈಕಲ್, ಬೈಕ್ ಬಳಸುವವರು ಎಷ್ಟು? ಕಾರು ಮಾಲೀಕರು ಎಷ್ಟು? ಹೀಗೊಂದು ಸಮೀಕ್ಷೆಭಾರತದಲ್ಲಿ ಸೈಕಲ್, ಬೈಕ್ ಬಳಸುವವರು ಎಷ್ಟು? ಕಾರು ಮಾಲೀಕರು ಎಷ್ಟು? ಹೀಗೊಂದು ಸಮೀಕ್ಷೆ

ವಿದ್ಯುತ್ ಅಗತ್ಯವಿಲ್ಲ

ವಿದ್ಯುತ್ ಅಗತ್ಯವಿಲ್ಲ

ಮನ್‌ಸುಖ್‌ಭಾಯ್ ಅವರು ಬೇಸಿಗೆಯಲ್ಲಿ ಆಹಾರ ಪದಾರ್ಥಗಳನ್ನು ಹಾಳಾಗದಂತೆ ಉಳಿಸಲು ಇಂತಹ ರೆಫ್ರಿಜರೇಟರ್ ಅನ್ನು ಕಂಡುಹಿಡಿದಿದ್ದಾರೆ. ಇದಕ್ಕೆ ವಿದ್ಯುತ್ ಅಗತ್ಯವಿಲ್ಲ. ಅವರು ತಯಾರಿಸಿದ ಮಣ್ಣಿನ ಫ್ರಿಜ್ ಸಂಪೂರ್ಣವಾಗಿ ಪರಿಸರ ಸ್ನೇಹಿಯಾಗಿದೆ. ಅದರಲ್ಲಿ ಹಾಲು, ನೀರು, ತರಕಾರಿಗಳು, ಹಣ್ಣುಗಳು ಇತ್ಯಾದಿಗಳು ಹಲವು ದಿನಗಳವರೆಗೆ ತಾಜಾವಾಗಿಡಬಹುದು. ಇದರ ಬೆಲೆಯೂ ತುಂಬಾ ಕಡಿಮೆಯಿರುವುದರಿಂದ ಇವರ ಫ್ರಿಡ್ಜ್ ಅನ್ನು ಬಡವರ ಫ್ರಿಜ್ ಎಂದು ಕರೆಯಲಾಗುತ್ತಿದೆ. ಇದು ತುಂಬಾ ಚೆನ್ನಾಗಿದ್ದು ಜನರು ಇದರನ್ನು ತಯಾರಿಸಿದ ಮನ್‌ಸುಖ್‌ಭಾಯ್ ಅವರ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಕಷ್ಟಕ್ಕೆ ತಕ್ಕ ಪ್ರತಿಫಲವಿಲ್ಲದ ಜೀವನ

ಕಷ್ಟಕ್ಕೆ ತಕ್ಕ ಪ್ರತಿಫಲವಿಲ್ಲದ ಜೀವನ

ಮನ್‌ಸುಖ್‌ಭಾಯ್ ರಾಘವಜಿಭಾಯಿ ಪ್ರಜಾಪತಿ ರಾಜ್ಕೋಟ್ ಮೂಲದವರು. ಮನ್ಸುಖ್ ಅವರ ನಿಕಟವರ್ತಿಗಳ ಪ್ರಕಾರ, ಮನ್ಸುಖ್ ಇಂದು ವಿವಿಧ ರೀತಿಯ ಮಡಿಕೆಗಳನ್ನು ತಯಾರಿಸಿದ್ದಾರೆ. ಇದರೊಂದಿಗೆ ಪರಿಸರ ಸ್ನೇಹಿ ಪ್ರಿಡ್ಜ್ ಕೂಡ ತಯಾರಿಸುವ ಮೂಲಕ ಹೆಸರಾಗಿದ್ದಾರೆ. ಈಗ ಅವರ ಉತ್ಪನ್ನಗಳು ಕೋಟಿಗಟ್ಟಲೆ ಬೆಲೆಬಾಳುತ್ತವೆ. ಮನ್ಸುಖ್ ಅವರ ಬಾಲ್ಯವನ್ನು ಬಡತನದಲ್ಲಿ ಚಹಾ ಮಾರಾಟ ಮಾಡುವ ಮೂಲಕ ಕಳೆದಿದ್ದಾರೆ. ಜೊತೆಗೆ ಅವರು ಕುಂಬಾರ ಸಮುದಾಯದಿಂದ ಬಂದವರಾಗಿದ್ದಾರೆ. ಆದ್ದರಿಂದ ಅವರ ಮನೆಯವರು ಪಾತ್ರೆಗಳನ್ನು ಮಾಡುತ್ತಿದ್ದರು. ಅಮ್ಮ ಬೆಳಗ್ಗೆ 4 ಗಂಟೆಗೆ ಎದ್ದು ಮಣ್ಣು ತರಲು ಹೋಗುತ್ತಿದ್ದರು. ಇತರ ಸಂಬಂಧಿಕರು ಮಡಿಕೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು. ಕಷ್ಟಪಟ್ಟು ದುಡಿದರೂ ಅದಕ್ಕೆ ತಕ್ಕಂತೆ ಆದಾಯ ಸಿಗಲಿಲ್ಲ.

ಸಾಲ ಪಡೆದು ವ್ಯಾಪಾರ ಆರಂಭ

ಸಾಲ ಪಡೆದು ವ್ಯಾಪಾರ ಆರಂಭ

ಮಗ ಓದುವ ಮತ್ತು ಬರೆಯುವ ಮೂಲಕ ಸಮಾಜದ ಸಂಕೋಲೆಗಳನ್ನು ಮುರಿದು ದೊಡ್ಡ ಹೆಸರು ಮಾಡಬೇಕೆಂದು ಮನ್ಸುಖ್ ಅವರ ಹೆತ್ತವರು ಬಯಸಿದ್ದರು. ಆದರೆ ಆ ಕಾಲದ ಸಂಕೀರ್ಣ ಸನ್ನಿವೇಶಗಳಿಂದಾಗಿ ಮನ್ಸುಖ್‌ಗೆ ಅಧ್ಯಯನ ಮಾಡಲು ಮನಸ್ಸಾಗಲಿಲ್ಲ. 10ನೇ ತರಗತಿಯಲ್ಲಿ ಅನುತ್ತೀರ್ಣನಾದ ಆತ ಆ ನಂತರ ಮುಂದೆ ಓದಲೇ ಇಲ್ಲ. ಚಿಕ್ಕವರಿದ್ದಾಗ ಕಬೇಲು ಅಂದರೆ ಹೆಂಚು ತಯಾರಿಸುವ ಕಾರ್ಖಾನೆಯಲ್ಲಿ ಕೆಲಸ ಮಾಡಲು ಆರಂಭಿಸಿದರು. ಅಲ್ಲಿ 300 ರೂಪಾಯಿ ಸಿಗುತ್ತಿತ್ತು. ಅದರ ನಂತರ ಅವರು ತಮ್ಮದೇ ಆದ ಏನಾದರೂ ಕೆಲಸ ಮಾಡಲು ನಿರ್ಧರಿಸಿದರು. ಇದಕ್ಕಾಗಿ ಸೇಠ್ ಒಬ್ಬರಿಗೆ 50 ಸಾವಿರ ಸಾಲ ಕೇಳಿದ್ದರು. ಇದಕ್ಕೆ ಮನೆಯವರು ನಿರಾಕರಿಸಿದ್ದರು. ಆ ಬಳಿಕ ಮನ್ಸುಖ್ 30 ಸಾವಿರ ರೂಪಾಯಿ ಸಾಲ ಪಡೆದು ವ್ಯಾಪಾರ ಆರಂಭಿಸಿದರು. ಮೊಟ್ಟಮೊದಲು ಜೇಡಿಮಣ್ಣಿನ ತವಕವನ್ನು ತಯಾರಿಸುವ ಯಂತ್ರವನ್ನು ತಯಾರಿಸಿದರು. ಇದರಿಂದ ಮಾಲಿನ್ಯವೂ ಉಂಟಾಗಿಲ್ಲ. 2 ವರ್ಷಗಳ ಕಠಿಣ ಪರಿಶ್ರಮದ ನಂತರ 1990 ರಲ್ಲಿ ಅವರು ಮತ್ತೊಂದು ಯಶಸ್ಸನ್ನು ಪಡೆದರು.

3,000 ರೂ.ಗೆ ಪರಿಸರ ಸ್ನೇಹಿ ಪ್ರಿಡ್ಜ್ ಲಭ್ಯ

3,000 ರೂ.ಗೆ ಪರಿಸರ ಸ್ನೇಹಿ ಪ್ರಿಡ್ಜ್ ಲಭ್ಯ

ತವಾ ಮೇಕಿಂಗ್ ಮೆಷಿನ್ ತಯಾರಿಸುವ ಕಾರ್ಖಾನೆಯನ್ನು ಸ್ಥಾಪಿಸಿದ ನಂತರ, ಮನ್ಸುಖ್ ಮಣ್ಣಿನ ನೀರಿನ ಶುದ್ಧೀಕರಣವನ್ನು ಸಹ ತಯಾರಿಸಿದರು. ಆದಾಗ್ಯೂ, 2001 ರ ಗುಜರಾತ್ ಭೂಕಂಪವು ಅವರಿಗೆ ಹೆಚ್ಚಿನ ಹಾನಿಯನ್ನುಂಟುಮಾಡಿತು. ಇದರ ಹೊರತಾಗಿಯೂ, ಅವರು ತಮ್ಮ ವ್ಯವಹಾರದಲ್ಲಿ ತೊಡಗಿಸಿಕೊಂಡರು. ಕೆಲವು ವರ್ಷಗಳ ನಂತರ, ಅವರು ವಿದ್ಯುತ್ ಇಲ್ಲದೆ ಕಾರ್ಯನಿರ್ವಹಿಸುವ ರೆಫ್ರಿಜರೇಟರ್ ಅನ್ನು ತಯಾರಿಸುವ ಯೋಚಿಸಿದರು. ಅಂದುಕೊಂಡಂತೆ ಈಗ ಅವರು ಪ್ರಿಡ್ಜ್ ತಯಾರಿಸಿದ್ದು ಅವರು ಮಣ್ಣಿನಿಂದ ತಯಾರಿಸಿದ ತಂಪಾಗುವ ಫ್ರಿಡ್ಜ್‌ಗೆ ದೇಶ ಮತ್ತು ವಿದೇಶಗಳಲ್ಲಿ ಬೇಡಿಕೆಯಿದೆ. ಅತ್ಯಂತ ಚಿಕ್ಕ ಗಾತ್ರದ ಫ್ರಿಡ್ಜ್ 3,000 ರೂ.ಗೆ ಲಭ್ಯವಿದೆ.

ಗುಜರಾತ್‌ನ ಗೌರವ್ ಪ್ರಶಸ್ತಿ ಲಭಿಸಿದೆ

ಗುಜರಾತ್‌ನ ಗೌರವ್ ಪ್ರಶಸ್ತಿ ಲಭಿಸಿದೆ

ಮನ್ಸುಖ್ ಇಲ್ಲಿಯವರೆಗೆ 250 ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾಡಿದ್ದಾರೆ ಮತ್ತು ಅವರ ವ್ಯಾಪಾರವು ಮಹತ್ತರವಾಗಿ ಬೆಳೆದಿದೆ. ಅವರ ವಿಶಿಷ್ಟ ಆವಿಷ್ಕಾರಕ್ಕಾಗಿ ಅವರಿಗೆ ವಿಶ್ವದಾದ್ಯಂತ ಹಲವಾರು ಪ್ರಶಸ್ತಿಗಳನ್ನು ನೀಡಲಾಗಿದೆ. ಫ್ರಾನ್ಸ್ ಮತ್ತು ಯುರೋಪಿನ ಇತರ ದೇಶಗಳ ಜನರು ಸಹ ಅವರನ್ನು ಗೌರವಿಸಿದ್ದಾರೆ. ಮನ್ಸುಖ್ ಅವರು ಭಾರತದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಪ್ರತಿಭಾ ಪಾಟೀಲ್ ಮತ್ತು ಪ್ರಣಬ್ ಮುಖರ್ಜಿ ಅವರಿಂದ ಅನೇಕ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರಿಗೆ ಗುಜರಾತ್‌ನ ಗೌರವ್ ಪ್ರಶಸ್ತಿ ಕೂಡ ಲಭಿಸಿದೆ.

(ಒನ್ಇಂಡಿಯಾ ಸುದ್ದಿ)

English summary
Gujarat potter Mansukhbhai has won several awards for making the eco-friendly fridge make for poor people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X