Get Updates
Get notified of breaking news, exclusive insights, and must-see stories!

ಸುಧಾರಣೆ ಹಾದಿಯಲ್ಲಿ ಸಂಬಂಧ! ಆಸ್ಟ್ರೇಲಿಯಾ ಜೊತೆ ಫ್ರಾನ್ಸ್ ಮತ್ತೆ ದೋಸ್ತಿ?

ಅಮೆರಿಕ ಹಾಗೂ ಆಸ್ಟ್ರೇಲಿಯಾ ವಿರುದ್ಧ ರೊಚ್ಚಿಗೆದ್ದು ರಾಯಭಾರಿಯನ್ನ ದಿಢೀರ್ ವಾಪಸ್ ಕರೆಸಿಕೊಂಡಿದ್ದ ಫ್ರಾನ್ಸ್ ಈಗ ಮನಸ್ಸು ಬದಲಾಯಿಸಿದಂತೆ ಕಾಣುತ್ತಿದೆ. ಆಸ್ಟ್ರೇಲಿಯಾಗೆ ಮರಳಿ ರಾಯಭಾರಿಯನ್ನ ಕಳಿಸುವ ಬಗ್ಗೆ ಫ್ರಾನ್ಸ್ ಒಲವು ತೋರಿದೆ. ಇದಕ್ಕೆ ಬೇಕಾದ ಸಿದ್ಧತೆಯನ್ನೂ ಫ್ರಾನ್ಸ್ ಸರ್ಕಾರ ಆರಂಭಿಸಿದೆ. ಅಂದಹಾಗೆ 'ಆಕಸ್' (Aukus) ಒಕ್ಕೂಟವನ್ನ ಅಮೆರಿಕ ರಚಿಸಿಕೊಂಡ ಬಳಿಕ ಆಸ್ಟ್ರೇಲಿಯಾ ವಿರುದ್ಧ ಫ್ರಾನ್ಸ್ ರೊಚ್ಚಿಗೆದ್ದು ತನ್ನ ರಾಯಭಾರಿಗೆ ವಾಪಸ್ ಬರುವಂತೆ ತಿಳಿಸಿತ್ತು. ಈ ಘಟನೆ ಬಳಿಕ ಎರಡೂ ದೇಶಗಳ ಸ್ನೇಹ ಹಾಳಾಗುವ ಹಂತ ತಲುಪಿತ್ತು.

ಆದರೆ ಈಗ ಪರಿಸ್ಥಿತಿ ಸುಧಾರಿಸುತ್ತಿರುವಂತೆ ಕಾಣುತ್ತಿದೆ. ಹೀಗಾಗಿ ಆಸ್ಟ್ರೇಲಿಯಾಗೆ ಹಾರಲು ಫ್ರಾನ್ಸ್ ರಾಯಭಾರಿ ಸಿದ್ಧತೆ ನಡೆಸಿದ್ದಾರೆ. ಚೀನಾ ವಿರುದ್ಧ ಏಕಾಂಗಿಯಾಗಿ ನಿಲ್ಲೋಕೆ ಸಾಧ್ಯವಾಗದೆ ಅಮೆರಿಕ 'ಆಕಸ್' ಒಕ್ಕೂಟ ರಚಿಸಿಕೊಂಡಿದೆ. ಆಸ್ಟ್ರೇಲಿಯಾ ಹಾಗೂ ಬ್ರಿಟನ್ ಜೊತೆ ಅಮೆರಿಕ ಒಕ್ಕೂಟ ರಚಿಸಿದೆ. ಆದರೆ ಇದರಿಂದ ಫ್ರಾನ್ಸ್ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದಿದ್ದ ಸಬ್‌ಮರೀನ್ ಖರೀದಿ ಒಪ್ಪಂದ ನಿಂತು ಹೋಗಿತ್ತು. ಹೀಗಾಗಿ ಫ್ರಾನ್ಸ್‌ಗೆ ಸಾವಿರಾರು ಕೋಟಿ ನಷ್ಟವಾಗಿ, ಆಸಿಸ್ ವಿರುದ್ಧ ಫ್ರೆಂಚರು ರೊಚ್ಚಿಗೆದ್ದಿದ್ದರು.

ಫ್ರಾನ್ಸ್ ಕೋಪಕ್ಕೆ ಕಾರಣವೇನು..?

ಫ್ರಾನ್ಸ್ ಕೋಪಕ್ಕೆ ಕಾರಣವೇನು..?

ಅಮೆರಿಕ, ರಷ್ಯಾ ಹಾಗೂ ಚೀನಾ ರೀತಿಯಲ್ಲೇ ರಕ್ಷಣಾ ವಸ್ತುಗಳನ್ನು ಜಗತ್ತಿಗೆ ಪೂರೈಕೆ ಮಾಡುವಲ್ಲಿ ಫ್ರಾನ್ಸ್‌ ಕೂಡ ಮುಂದಿದೆ. ರಕ್ಷಣಾ ವಸ್ತುಗಳ ಮಾರಾಟದಿಂದ ಫ್ರಾನ್ಸ್ ಅತಿಹೆಚ್ಚು ಆದಾಯ ಗಳಿಸುತ್ತದೆ. 2016ರಲ್ಲಿ ಇದೇ ರೀತಿ ಆಸ್ಟ್ರೇಲಿಯಾ ಜೊತೆಗೆ ಫ್ರಾನ್ಸ್‌ 12 ಡೀಸೆಲ್ ಮತ್ತು ವಿದ್ಯುತ್ ಚಾಲಿತ ಜಲಾಂತರ್ಗಾಮಿಗಳನ್ನ ನಿರ್ಮಿಸಲು ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದ ಒಂದೆರಡಲ್ಲ ಬರೋಬ್ಬರಿ 50 ಬಿಲಿಯನ್ ಡಾಲರ್ ಮೊತ್ತದ್ದು. ಅಂದ್ರೆ ಸುಮಾರು 3.5 ಲಕ್ಷ ಕೋಟಿ ರೂಪಾಯಿ ಮೊತ್ತದ್ದು. ಆದ್ರೆ ಯುಎಸ್ ಜೊತೆಗೆ ಆಸಿಸ್ ತ್ರಿಪಕ್ಷೀಯ ಒಕ್ಕೂಟ ರಚನೆ ಮಾಡಿಕೊಳ್ಳುತ್ತಿದ್ದಂತೆ 50 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದ ಹರಿದು ಹಾಕಿದೆ. ಇದೇ ಕಾರಣಕ್ಕೆ ಫ್ರಾನ್ಸ್ ರೊಚ್ಚಿಗೆದ್ದಿತ್ತು.

ಆಸಿಸ್‌ಗೆ ಭಾರಿ ನೆರವು..!

ಆಸಿಸ್‌ಗೆ ಭಾರಿ ನೆರವು..!

ಅಂದಹಾಗೆ ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ಚೀನಾ ಪ್ರಭಾವ ತಗ್ಗಿಸಲು ಆಸ್ಟ್ರೇಲಿಯಾ, ಬ್ರಿಟನ್‌ನೊಂದಿಗೆ ಅಮೆರಿಕ ಹೊಸ ತ್ರಿಪಕ್ಷೀಯ ಮೈತ್ರಿಕೂಟವನ್ನ ರಚಿಸಿದೆ. ಮೈತ್ರಿ ಒಪ್ಪಂದದ ಹಿನ್ನೆಲೆಯಲ್ಲಿ ಯುಎಸ್ ಹಾಗೂ ಬ್ರಿಟನ್‌ 8 ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ ಅಥವಾ ಸಬ್‌ಮರೀನ್ ಅಭಿವೃದ್ಧಿಗೆ ಆಸ್ಟ್ರೇಲಿಯಾಗೆ ನೆರವು ನೀಡಲಿವೆ. ಈ ಕಾರಣಕ್ಕೆ ಆಸ್ಟ್ರೇಲಿಯಾ ಫ್ರಾನ್ಸ್ ಜೊತೆ ಮಾಡಿಕೊಂಡ ಒಪ್ಪಂದ ಕೈಬಿಟ್ಟು, ಅಮೆರಿಕದ ಜೊತೆ ಸ್ನೇಹ ಬೆಸೆಯಲು ಮುಂದಾಗಿದೆ. ಇದು ಫ್ರಾನ್ಸ್‌ಗೆ ನಷ್ಟದ ಜೊತೆ ಜಾಗತಿಕ ಮಟ್ಟದಲ್ಲಿ ಮುಖಂಭಂಗ ಕೂಡ ಉಂಟುಮಾಡಿದೆ.

ಅಮೆರಿಕ ಕೈತಪ್ಪುತ್ತಾ ಯುರೋಪ್..?

ಅಮೆರಿಕ ಕೈತಪ್ಪುತ್ತಾ ಯುರೋಪ್..?

ಯಾರನ್ನ ಎಲ್ಲಿ, ಹೇಗೆ, ಯಾವರೀತಿ ಬಳಸಿ ಬಿಸಾಡಬೇಕು ಅನ್ನೋದು ಅಮೆರಿಕ ನಾಯಕರಿಗೆ ಚೆನ್ನಾಗಿ ಗೊತ್ತು ಬಿಡಿ. ಆದರೆ ಇಷ್ಟುದಿನ ಅಮೆರಿಕ ಆಡಿದ್ದೇ ಆಟ ಎನ್ನುವಂತಾಗಿತ್ತು, ಈಗ ಕಾಲ ಬದಲಾಗಿದೆ. ಅಮೆರಿಕ ತಪ್ಪು ಮಾಡಿದರೂ ಒಪ್ಪಿಕೊಂಡು ಕೂರಲು ಜಗತ್ತು ಸಿದ್ಧವಿಲ್ಲ. ಹೀಗಾಗಿಯೇ ಫ್ರಾನ್ಸ್ ಕೆಂಡವಾಗಿದ್ದು, ಆಸ್ಟ್ರೇಲಿಯಾ ಮತ್ತು ಅಮೆರಿಕದಿಂದ ತನ್ನ ರಾಯಭಾರಿಗಳನ್ನ ವಾಪಸ್ ಕರೆಸಿಕೊಂಡಿದೆ. ಇದು ಯುರೋಪ್‌ನಲ್ಲಿ ಅಮೆರಿಕ ಹಿಡಿತ ತಪ್ಪುವ ಮುನ್ಸೂಚನೆ ನೀಡುತ್ತಿದೆ. ಏಕೆಂದರೆ ಬ್ರೆಕ್ಸಿಟ್ ಹೆಸರಲ್ಲಿ ಬ್ರಿಟನ್ ಯುರೋಪ್ ಒಕ್ಕೂಟವನ್ನೇ ತೊರೆದು ಹೊರ ಬಂದ ನಂತರ ಸಹಜವಾಗಿ ಬ್ರಿಟನ್ ವಿರುದ್ಧ ಅಸಮಾಧಾನ ಇದೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿ ಇರುವಾಗಲೇ ಬ್ರಿಟನ್ ಜೊತೆಗೂಡಿ ಅಮೆರಿಕ ಒಕ್ಕೂಟ ರಚಿಸಿದ್ದು, ಫ್ರಾನ್ಸ್‌ನ ಲಾಭಕ್ಕೂ ಕತ್ತರಿ ಹಾಕಿದೆ. ತನ್ನ ತಟ್ಟೆಗೆ ಕೈಹಾಕಿದ ಅಮೆರಿಕ ವಿರುದ್ಧ ಫ್ರಾನ್ಸ್ ಕೆಂಡವಾಗಿದೆ.

ನ್ಯೂಕ್ಲಿಯರ್ ಆಸೆ ತೂರಿಸಿದ್ರು..!

ನ್ಯೂಕ್ಲಿಯರ್ ಆಸೆ ತೂರಿಸಿದ್ರು..!

ಜಗತ್ತಲ್ಲಿ ನ್ಯೂಕ್ಲಿಯರ್ ಸಬ್‌ಮರೀನ್ ಅಥವಾ ಜಲಾಂತರ್ಗಾಮಿ ಇರುವುದು ಕೆಲ ರಾಷ್ಟ್ರಗಳ ಬಳಿ ಮಾತ್ರ. ಅದರಲ್ಲೂ ಅಮೆರಿಕದ ಬಳಿ ಇರುವ ನ್ಯೂಕ್ಲಿಯರ್ ಸಬ್‌ಮರೀನ್ಸ್ ಜಗತ್ತಿನಲ್ಲೇ ಶಕ್ತಿಶಾಲಿ. ಹೀಗಾಗಿ ಇವನ್ನ ಅಮೆರಿಕ ಬೇರೆ ಯಾರಿಗೂ ಸೇಲ್ ಮಾಡಿಲ್ಲ. ಕೇವಲ ಬ್ರಿಟನ್ ಜೊತೆಗೆ ನ್ಯೂಕ್ಲಿಯರ್ ಸಬ್‌ಮರೀನ್‌ಗಳನ್ನ ಹಾಗೂ ಅದರ ತಂತ್ರಜ್ಞಾನ ಹಂಚಿಕೊಂಡಿದೆ. ಈಗ ಇದೇ ನ್ಯೂಕ್ಲಿಯರ್ ಸಬ್‌ಮರೀನ್ ಆಸೆ ತೋರಿಸುತ್ತಾ ಆಸ್ಟ್ರೇಲಿಯಾ ಜೊತೆ ಸ್ನೇಹ ಬೆಸೆದಿದೆ ಅಮೆರಿಕ. ಚೀನಾ ವಿರುದ್ಧ ಹಲ್ಲು ಮಸೆಯಲು ಹೋಗಿ ಫ್ರಾನ್ಸ್ ಸ್ನೇಹ ಕಳೆದುಕೊಳ್ಳುತ್ತಿದ್ದಾನೆ ವಿಶ್ವದ 'ದಡ್ಡಣ್ಣ' ಅಲ್ಲಲ್ಲ 'ದೊಡ್ಡಣ್ಣ'.

ಸ್ವಾತಂತ್ರ್ಯ ಕೊಡಿಸಿದ್ದೇ ಫ್ರಾನ್ಸ್..!

ಸ್ವಾತಂತ್ರ್ಯ ಕೊಡಿಸಿದ್ದೇ ಫ್ರಾನ್ಸ್..!

ಸುಮಾರು ಎರಡೂವರೆ ಶತಮಾನಗಳ ಹಿಂದೆ ಅಮೆರಿಕ ಬ್ರಿಟಿಷ್ ಸಾಮ್ರಾಜ್ಯದ ಅಡಿಯಾಳಾಗಿ ನರಳುತ್ತಿತ್ತು. ಇಂಗ್ಲಿಷ್ ದೊರೆಗಳ ಟಾರ್ಚರ್‌ಗೆ ಅಮೆರಿಕನ್ನರು ನಲುಗಿದ್ದರು. ಆಗಲೇ ಶುರುವಾಗಿದ್ದೇ ನೋಡಿ ಅಮೆರಿಕನ್ನರ ಸ್ವಾತಂತ್ರ್ಯ ಚಳುವಳಿ. ಹೀಗೆ ಅಮೆರಿಕನ್ನರು ಶುರು ಮಾಡಿದ್ದ ಹೋರಾಟಕ್ಕೆ ಬೆಂಬಲ ನೀಡಿದ್ದು ಇದೇ ಫ್ರಾನ್ಸ್. ಪಕ್ಕದ ಕೆನಡಾ ಫ್ರಾನ್ಸ್ ವಶದಲ್ಲಿತ್ತು. ಆಗ ಅಮೆರಿಕದ ಸ್ವಾತಂತ್ರ್ಯ ಚಳವಳಿ ಕೂಡ ನಡೆಯುತ್ತಿತ್ತು. ಸಹಜವಾಗಿ ಬ್ರಿಟಿಷರ ಪರಮ ವೈರಿ ಫ್ರಾನ್ಸ್ ಅಲರ್ಟ್ ಆಗಿತ್ತು. ಅಮೆರಿಕನ್ನರಿಗೆ ಬೆನ್ನಲುಬಾಗಿ ನಿಂತಿತ್ತು. ಕಡೆಗೂ ಬ್ರಿಟಿಷ್ ಸೇನೆಗೆ ಮಣ್ಣುಮುಕ್ಕಿಸಲು ಅಮೆರಿಕನ್ನರಿಗೆ ಇದೇ ಫ್ರಾನ್ಸ್ ನೆರವಾಗಿತ್ತು. ಹೀಗಾಗಿ ಸುಮಾರು 250 ವರ್ಷಗಳ ಹಿಂದೆ ಅಮೆರಿಕ ಸ್ವತಂತ್ರಗೊಂಡಿತ್ತು. ಆದರೆ ತಮಗೆ ಅಂದು ಸಹಾಯ ಮಾಡಿದವರಿಗೇ ಇವತ್ತು ಅಮೆರಿಕದ ನಾಯಕರು ಗುನ್ನಾ ಇಡುತ್ತಿದ್ದಾರೆ. ಇದು ಫ್ರೆಂಚರ ಪಿತ್ತ ನೆತ್ತಿಗೇರುವಂತೆ ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+