SmartPhones: ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಐದು ಸ್ಮಾರ್ಟ್‌ಫೋನ್ಸ್
2024ರಲ್ಲಿ ಅತಿ ಹೆಚ್ಚು ಸ್ಟಾರ್ಟ್ ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಇದರಂತೆ ಈ ವರ್ಷದ ನಾಲ್ಕನೇ ತಿಂಗಳಿನಲ್ಲೂ ಹಲವಾರು ಮೊಬೈಲ್‌ಗಳು ಗ್ರಾಹಕರನ್ನು ಸೆಳೆಯುತ್ತಿವೆ. ಮಾರುಕಟ್ಟೆಗೆ ಹಲವು ಸ್ಮಾರ್ಟ್ ಫೋನ್‌ಗಳನ್ನು ಬಿಡುಗಡೆ ಮಾಡಲು ಹಲವು ಪ್ರತಿಷ್ಠಿತ ಕಂಪನಿಗಳು ತಮ್ಮ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ.
ಪ್ರತಿ ತಿಂಗಳಿನಿಂತೆ ಈ ತಿಂಗಳೂ ಸಹ ಹೊಸ ಹೊಸ ಟೆಕ್ನಾಲಜಿಯೊಂದಿಗೆ ಹಲವು ಸ್ಮಾರ್ಟ್ ಫೋನ್‌ಗಳು ಗ್ರಾಹಕರನ್ನು ಸೆಳೆಯಲು ಪ್ಲ್ಯಾನ್ ಮಾಡಿಕೊಂಡಿವೆ. ಅದರಲ್ಲಿ ಹಲವು ಫೋನ್‌ಗಳು ಮಧ್ಯಮ ವರ್ಗದ ಗ್ರಾಹಕನನ್ನೆ ಟಾರ್ಗೆಟ್ ಮಾಡಿವೆ. ಹಾಗಿದ್ದರೆ ಈ ತಿಂಗಳು ಮಾರುಕಟ್ಟೆಗೆ ಲಗ್ಗೆ ಇಡುವ ಸ್ಮಾರ್ಟ್ ಫೋನ್‌ಗಳ ಪಟ್ಟಿ ಇಲ್ಲಿದೆ.

ಒನ್ ಪ್ಲಸ್ ನೋರ್ಡ್ ಸಿಇ 4
ಒನ್ ಪ್ಲಸ್ ಕಂಪನಿಯು ತನ್ನ ಮತ್ತೊಂದು ಸ್ಮಾರ್ಟ್ ಫೋನ್‌ನ್ನು ಇದೇ ತಿಂಗಳ ಮೊದಲ ದಿನದಂದು ರಿಲೀಸ್ ಮಾಡಲಿದೆ. ಒನ್ ಪ್ಲಸ್ ನೋರ್ಡ್ ಸಿಇ 4 ಭಾರತದಲ್ಲಿ ಸಂಜೆ 6.30ಕ್ಕೆ ಲಾಂಚ್ ಆಗಬಹುದು. ಈ ಸ್ಮಾರ್ಟ್ ಫೋನ್ ತಮ್ಮದೇ ಕಂಪನಿಯ ಏಸ್ 3ವಿ ಗೆ ಹೋಲುತ್ತದೆ. ಇದರ ಬೆಲೆ 24,999 ರೂ. ಎಂದು ತಿಳಿದು ಬಂದಿದೆ. ಈ ಸ್ಮಾರ್ಟ್ ಫೋನ್ ನಥಿಂಗ್ 2ಎಗೆ ಪೈಪೋಟಿ ನೀಡುವಂತಿದೆ.
ಈ ಸ್ಮಾರ್ಟ್‌ಫೋನ್ 6.7-ಇಂಚಿನ 120Hz ಅಮ್ಲೋಡ್ ಡಿಸ್ಪ್ಲೇ ಹೊಂದಿರಲಿದೆ. ಅಲ್ಲದೆ , ಕಾಲ್‌ಕಾಮ್ ಸ್ನಾಪ್ ಡ್ರಾಗನ್ 7 ಜನರೇಶನ್ 3 ಚಿಪ್ ಹೊಂದಿರಲಿದೆ. ಇದರ ಕ್ಯಾಮೆರಾ 50 ಮೆಗಾ ಫಿಕ್ಸಲ್ ಹೊಂದಿದ್ದು, ಸೋನಿ LYT ಕ್ಯಾಮೆರಾ ಬಳಸಲಾಗಿದೆ. 5,500mAh ಬ್ಯಾಟರಿ ಇದರಲ್ಲಿ ಇರಲಿದ್ದು, ಮತ್ತು 100W ವೈರ್ಡ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.

ಮಾರುಕಟ್ಟೆಗೆ ಸ್ಯಾಮ್‌ಸಂಗ್ ಲಗ್ಗೆ
ಈ ತಿಂಗಳು ಸ್ಯಾಮ್‌ಸಂಗ್ ಎರಡು ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 15 ಹಾಗೂ ಗ್ಯಾಲಕ್ಸಿ ಎಂ 55 ಭಾರತದಲ್ಲಿ ಏಪ್ರಿಲ್‌ನಲ್ಲಿ ಬಿಡುಗಡೆ ಆಗಲಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 15 ವಿಶೇಷತೆಗಳು
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 15 6.5 ಇಂಚಿನ ಫುಲ್ ಎಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿರಲಿದ್ದು, 90Hz ಡಿಸ್‌ಪ್ಲೇ ಸ್ಪೀಡ್ ಹೊಂದಿರಲಿದೆ. ಡೈಮೆನ್ಸಿಟಿ 6100 ಪ್ಲಸ್ ಚಿಪ್‌ಸೆಟ್, ಪ್ರೈಮರಿ ಕ್ಯಾಮೆರಾ 50MP ಸೇರಿದಂತೆ ಟ್ರಿಪಲ್ ಕ್ಯಾಮೆರಾ ಸೆಟಪ್ ಇರಲಿದೆ. 13MP ಸೆಲ್ಫಿ ಕ್ಯಾಮೆರಾ ಹೊಂದಿದ್ದು, 6,000mAh ಸ್ಪೀಡ್ ಚಾರ್ಜ್ ಹೊಂದಿರಲಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 55 ವಿಶೇಷತೆಗಳು
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 55 ಕಾಲ್‌ಕಾಮ್ ಸ್ನಾಪ್ ಡ್ರಾಗನ್ 7 ಜನರೇಷನ್ 1 SoC ಯೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಸ್ಯಾಮ್‌ಸಂಗ್‌ನ ಮೊದಲ ಸ್ಮಾರ್ಟ್‌ಫೋನ್ ಆಗಲಿದೆ. ಈ ಸ್ಮಾರ್ಟ್‌ಫೋನ್ 6.7 ಇಂಚಿನ ಫುಲ್‌ಎಚ್‌ಡಿ ಡಿಸ್‌ಪ್ಲೇ ಪ್ಲಸ್ ಹೊಂದಿದ್ದು, 120Hz ಡಿಸ್‌ಪ್ಲೇ ವೇಗವನ್ನು ಹೊಂದಿರಲಿದೆ. 50MP ಪ್ರೈಮರಿ ಕ್ಯಾಮೇರಾ ಸೇರಿದಂತೆ, 8MP, 2MP ಮೂರು ಕ್ಯಾಮೆರಾಗಳು ಇರಲಿವೆ, 50MP ಸೆಲ್ಫಿ ಕ್ಯಾಮೆರಾ ಇರಲಿದ್ದು, 5,000mAh ಬ್ಯಾಟರಿ ಹೊಂದಿರಲಿದೆ.

ಮೊಟೊರೊಲಾ ಎಡ್ಜ್ 50
ಬಹುನಿರೀಕ್ಷಿತ ಮೊಟೊರೊಲಾ ಎಡ್ಜ್ 50 ಬುಧವಾರ (ಏ.3)ರಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಸರಣಿಯ ಫೋನ್‌ಗಳು ಮೂರು ವಿವಿಧದಲ್ಲಿ ಸಿಗಲಿವೆ. ಎಡ್ಜ್ 50 ಫ್ಯೂಷನ್, ಎಡ್ಜ್ 50 ಪ್ರೊ ಮತ್ತು ಎಡ್ಜ್ 50 ಅಲ್ಟ್ರಾ. ಎಡ್ಜ್ 50 ಫ್ಯೂಷನ್ ಈ ಸ್ಮಾರ್ಟ್ ಫೋನ್‌ನಲ್ಲಿ ಫುಲ್ಎಚ್‌ಡಿ ಪ್ಲಸ್ ಡಿಸಪ್ಲೇ ಇರಲಿದೆ. ಆದರೆ ಎಡ್ಜ್ 50 ಪ್ರೊ ಮತ್ತು ಎಡ್ಜ್ 50 ಅಲ್ಟ್ರಾ 1.5ಕೆ ಡಿಸ್ಪ್ಲೇಗಳನ್ನು ಹೊಂದಿರಲಿದೆ. ಈ ಸ್ಮಾರ್ಟ್ ಫೋನ್‌ಗಳು ಓಎಲ್‌ಇಡಿ ಪ್ಯಾನೆಲ್‌ಗಳು ಮತ್ತು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಹೊಂದಿರುತ್ತದೆ.
ಇದರಲ್ಲಿ ಸ್ನಾಪ್‌ಡ್ರಾಗನ್ 6 ಜನರೇಷನ್ 1, ಸ್ನಾಪ್‌ಡ್ರಾಗನ್ 7 Gen 3 ಮತ್ತು Snapdragon 8ಎಸ್ Gen ಚಿಪ್‌ಸೆಟ್‌ಗನ್ನು ಹೊಂದಿರುತ್ತವೆ. ಈ ಚಿಪ್‌ಸೆಟ್‌ಗಳು ಬೇರೆ ಬೇರೆ ಸ್ಮಾರ್ಟ್‌ಪೋನ್‌ಗಳೊಂದಿಗೆ ಬರಲಿವೆ.
ರಿಯಲ್‌ಮಿ 12ಎಕ್ಸ್ 5ಜಿ
ರಿಯಲ್‌ಮಿ 12ಎಕ್ಸ್ 5ಜಿ ಭಾರತದಲ್ಲಿ ಏಪ್ರಿಲ್ 2 ರಂದು ಬಿಡುಗಡೆಯಾಗಲಿದೆ. ಈ ಮೊಬೈಲ್ ಈಗಾಗಲೇ ಚೀನಾದಲ್ಲಿ ಮಾರಟವಾಗುತ್ತಿದ್ದರಿಂದ ಇದರ ಮಾಹಿತಿ ಲಭ್ಯವಾಗುತ್ತಿದೆ. ಭಾರತದಲ್ಲಿ ಇದರ ಬೆಲೆ ₹12,000 ಕ್ಕಿಂತ ಕಡಿಮೆ ಇರುತ್ತದೆ. ಈ ಸ್ಮಾರ್ಟ್ ಫೋನ್‌ನಲ್ಲಿ 6.72 ಇಂಚಿನ ಫುಲ್ಎಚ್‌ಡಿ ಪ್ಲಸ್ ಡಿಸಪ್ಲೇ ಇರಲಿದ್ದು, 120 Hz ಹೊಂದಿದೆ. ಈ ಮೊಬೈಲ್‌ನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 6100 ಪ್ಲಸ್ ಚಿಪ್‌ಸೆಟ್ ಇರಲಿದೆ. ಬ್ಯಾಟರಿ 5000 mAh ಹೊಂದಿರಲಿದ್ದು, ಪ್ರೈಮರಿ ಕ್ಯಾಮೆರಾ 50 ಮೆಗಾ ಪಿಕ್ಸಲ್ ಹೊಂದಿದೆ.












Click it and Unblock the Notifications