Billionaire Auto Driver: ಚೆನ್ನೈ ಕ್ಯಾಬ್ ಡ್ರೈವರ್ ಬ್ಯಾಂಕ್ ಖಾತೆಗೆ 9,000 ಕೋಟಿ ರೂ. ಜಮಾ, ಆಗಿದ್ದೇನು?
ಚೆನ್ನೈ, ಸೆಪ್ಟೆಂಬರ್ 22: ಚೆನ್ನೈನ ಕ್ಯಾಬ್ ಟ್ರೈವರ್ ಬ್ಯಾಂಕ್ ಬ್ಯಾಂಕ್ ಖಾತೆಗೆ ಇದ್ದಕಿದ್ದಂತೆ ಬರೋಬ್ಬರಿ 9,000 ಸಾವಿರ ಕೋಟಿ ಕ್ರೆಡಿಟ್ ಆಗಿದ್ದು, ಹಣ ಜಮೆಯಾಗಿರುವ ಬಗ್ಗೆ ಸಂದೇಶ ಕಂಡು ಆತ ಹೌಹಾರಿ ಹೋಗಿದ್ದನು. ಬಳಿಕ ಆಗಿದ್ದೇನು ಮುಂದೆ ನೋಡೋಣ.
ಚೆನ್ನೈ ಕ್ಯಾಬ್ ಚಾಲಕನೊಬ್ಬನ ಬ್ಯಾಂಕ್ ಖಾತೆಗೆ ಬರೋಬ್ಬರಿ 9,000 ಕೋಟಿ ರೂಪಾಯಿ ಜಮಾ ಆಗಿದ್ದು, ಕೊನೆಗೆ ಆತ ಸೇರಿದಂತೆ ಬ್ಯಾಂಕ್ ಸಿಬ್ಬಂದಿ ಹೌಹಾರಿದ ಘಟನೆ ನಡೆದಿದೆ. ಮೊದಲು ನಂಬದ ಆತ ಮೊಬೈಲ್ ಮೆಸೇಜ್ ಗಮನಿಸಿ ಕ್ಷಣಾರ್ಧದಲ್ಲಿ ಕೋಟ್ಯಾಧಿಪತಿಯಾಗಿದ್ದನು.

ತಾಂತ್ರಿಕ ದೋಷದಿಂದ ವಹಿವಾಟು ನಡೆದಿದೆ ಎಂದು ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್ ನಂತರ ಸ್ಪಷ್ಟಪಡಿಸಿದೆ. ಪಳನಿಯ ನೇಯ್ಕರಪಟ್ಟಿ ಗ್ರಾಮದ ರಾಜ್‌ಕುಮಾರ್ ಚೆನ್ನೈನ ಕೋಡಂಬಾಕ್ಕಂನಲ್ಲಿರುವ ಸ್ನೇಹಿತರ ಮನೆಯಲ್ಲಿ ಉಳಿದುಕೊಂಡು ಬಾಡಿಗೆ ಕಾರು ಓಡಿಸುತ್ತಿದ್ದರು.
ಕಳೆದ ವಾರ ಸೆಪ್ಟೆಂಬರ್ 9 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಕಾರಿನಲ್ಲಿ ಮಲಗಿದ್ದಾಗ ರಾಜ್‌ಕುಮಾರ್ ಅವರಿಗೆ ಸಂದೇಶ ಬಂದಿತ್ತು. ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್‌ನಿಂದ ರಾಜ್‌ಕುಮಾರ್ ಅವರ ಬ್ಯಾಂಕ್ ಖಾತೆಗೆ 9,000 ಕೋಟಿ ರೂಪಾಯಿ ಠೇವಣಿ ಮಾಡಲಾಗಿದೆ ಎಂದು ಎಸ್‌ಎಂಎಸ್ ಬಂದಿತ್ತು.
ಆರಂಭದಲ್ಲಿ ರಾಜ್‌ಕುಮಾರ್ ಅವರಿಗೆ ಇಷ್ಟು ಹಣ ಹೇಗೆ ಬಂದಿತು ಎಂದು ಗೊಂದಲಕ್ಕೊಳಗಾಗಿದ್ದರು. ಆರಂಭದಲ್ಲಿ 9ರ ಪಕ್ಕದಲ್ಲಿದ್ದ ಅಷ್ಟು ಸೊನ್ನೆಗಳಿರುವುದರಿಂದ ಮೊತ್ತವನ್ನು ಲೆಕ್ಕಾಚಾರ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ಆ ಬಳಿಕ ಬ್ಯಾಂಕ್ ಖಾತೆಯಲ್ಲಿ 105 ರೂಪಾಯಿ ಇದ್ದಾಗ ಯಾರೋ ಚೇಷ್ಟೆ ಮಾಡುತ್ತಿದ್ದಾರೆ ಎಂದುಕೊಂಡಿದ್ದರು.
ಇದನ್ನು ಪರಿಶೀಲಿಸಲು ಆತ ತನ್ನ ಬ್ಯಾಂಕ್ ಖಾತೆಯಿಂದ ತನ್ನ ಸ್ನೇಹಿತರಿಗೆ 21 ಸಾವಿರ ರೂ. ಮೊತ್ತ ಯಶಸ್ವಿಯಾಗಿ ರವಾನೆಯಾದ ನಂತರ ಅವರ ಬ್ಯಾಂಕ್ ಖಾತೆಗೆ 9 ಸಾವಿರ ಕೋಟಿ ರೂಪಾಯಿ ಬಂದಿದೆ ಎಂದು ತಿಳಿದು ಆತ ಸಂತಸದಿಂದ ಹಿಗ್ಗಿ ಹೋದನು.
ಆದರೆ ಕೆಲವೇ ನಿಮಿಷಗಳಲ್ಲಿ ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್‌ನ ಪ್ರಧಾನ ಕಚೇರಿ ಇರುವ ತೂತುಕುಡಿಯಿಂದ ರಾಜ್‌ಕುಮಾರ್‌ಗೆ ದೂರವಾಣಿ ಕರೆ ಮಾಡಿ, ತಪ್ಪಾಗಿ 9,000 ಕೋಟಿ ರೂಪಾಯಿ ತನ್ನ ಖಾತೆಗೆ ಜಮೆಯಾಗಿದೆ ಎಂದು ತಿಳಿಸಿದರು. ಹಂಚಿದ ಹಣವನ್ನು ಖರ್ಚು ಮಾಡದಂತೆ ಬ್ಯಾಂಕ್ ಆಡಳಿತ ಮಂಡಳಿ ಕೇಳಿದೆ. ತರುವಾಯ, ಬಾಕಿ ಮೊತ್ತವನ್ನು ಬ್ಯಾಂಕ್ ತನ್ನ ಖಾತೆಯಿಂದ ಡೆಬಿಟ್ ಮಾಡಿದೆ.












Click it and Unblock the Notifications