ಕಿಟಕಿ ಸೀಟಿಗಾಗಿ ಕಾದಾಟ- ವಿಮಾನದಲ್ಲಿ ಮಹಿಳೆಯರಿಬ್ಬರ ಡಿಶುಂ ಡಿಶುಂ- ಸಹ ಪ್ರಯಾಣಿಕರು ಕಕ್ಕಾಬಿಕ್ಕಿ!

ಸಾಮಾನ್ಯವಾಗಿ ಮಹಿಳಾ ಪ್ರಯಾಣಿಕರು ಬಸ್‌, ರೈಲು, ಮೆಟ್ರೋ ರೈಲಿನ ಸೀಟಿಗಾಗಿ ಜಗಳವಾಡುತ್ತಿದ್ದ ವಿಡಿಯೋಗಳನ್ನು ನಾವು ನೋಡಿದ್ದೇವೆ. ಆದರೆ ಇತ್ತೀಚೆಗೆ ಕಂಡುಬಂದ ವಿಡಿಯೋದಲ್ಲಿ ವಿಮಾನದ ಕಿಟಕಿ ಸೀಟಿಗಾಗಿ ಮಹಿಳಾ ಪ್ರಯಾನೀಕರು ಹೊಡೆದಾಡಿಕೊಂಡಿದ್ದಾರೆ.

ಬಸ್, ರೈಲು, ಮೆಟ್ರೋ ಸೀಟಿಗಾಗಿ ಬಡಿದಾಡಿಕೊಳ್ಳುತ್ತಿದ್ದ ಮಹಿಳಾಮಣಿಗಳು ಸದ್ಯ ವಿಮಾನದಲ್ಲಿ ಪರಸ್ಪರ ಕುಸ್ತಿಗೆ ಬಿದ್ದ ಘಟನೆ ನಡೆದಿದೆ. ಕಿಟಕಿ ಸೀಟಿಗಾಗಿ ವಿಮಾನದಲ್ಲಿ ಮಹಿಳೆಯರಿಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಬ್ರೆಜಿಲ್‌ನ ಜಿಒಎಲ್ ಏರ್‌ಲೈನ್ಸ್ ವಿಮಾನದಲ್ಲಿ ಮಹಿಳೆಯರಿಬ್ಬರು ಕಿಟಕಿ ಸೀಟಿಗಾಗಿ ಭಾರಿ ಜಗಳ ಮಾಡಿಕೊಂಡಿದ್ದಾರೆ. ಈ ಗಲಾಟೆಯಿಂದಾಗಿ ವಿಮಾನ ಎರಡು ಗಂಟೆ ತಡವಾಗಿ ಹಾರಾಟ ಮಾಡಿದೆ. ಸಹಪ್ರಯಾಣಿಕರು ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

ಬ್ರೆಜಿಲಿಯನ್ ಸುದ್ದಿವಾಹಿನಿ ಅವೆಂಚುರಾಸ್ ನಾ ಹಿಸ್ಟೋರಿಯಾ ಪ್ರಕಾರ, ವಿಮಾನ ಟೇಕ್ ಆಫ್ ಆಗುವ ನಿಮಿಷಗಳ ಮೊದಲು ಎರಡು ಕುಟುಂಬಗಳ ನಡುವೆ ಜಗಳ ಪ್ರಾರಂಭವಾಯಿತು. ಮಹಿಳೆಯೊಬ್ಬರು ತನ್ನ ಅಂಗವಿಕಲ ಮಗುವಿನೊಂದಿಗೆ ಆಸನಗಳನ್ನು ಬದಲಾಯಿಸಲು ಇನ್ನೊಬ್ಬ ಪ್ರಯಾಣಿಕರಿಗೆ ವಿನಂತಿಸಿದರು. ಆದರೆ ಪ್ರಯಾಣಿಕರು ಅವರ ಮನವಿಯನ್ನು ಸ್ವೀಕರಿಸಲಿಲ್ಲ. ಇದು ಪ್ರಯಾಣಿಕರ ಕುಟುಂಬದ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಕೋಪಗೊಂಡ ಮಹಿಳೆ ಮತ್ತೋರ್ವ ಸಹ ಮಹಿಳಾ ಪ್ರಯಾಣಿಕಳ ಮೇಲೆ ದಾಳಿಗೆ ಮುಂದಾಗಿದ್ದಾಳೆ ಎಂದು ಸುದ್ದಿವಾಹಿನಿ ವರದಿ ಮಾಡಿದೆ. ಕಾದಾಟ ಕೆಲವೇ ನಿಮಿಷಗಳಲ್ಲಿ ಹಿಂಸಾತ್ಮಕವಾಗಿದೆ. ಈ ವೇಳೆ ವಿಮಾನದಲ್ಲಿನ ಕ್ಯಾಪ್ಟನ್ ಮತ್ತು ಸಿಬ್ಬಂದಿಗಳು ಮಧ್ಯಪ್ರವೇಶಿಸಿ ಹೊಡೆದಾಡುತ್ತಿದ್ದ ಮಹೀಲೆಯರನ್ನು ಬಿಡಿಸಲು ಪ್ರಯತ್ನಿಸಿದ್ದಾರೆ. ಜಗಳದಿಂದಾಗಿ ಎರಡು ಗಂಟೆ ತಡವಾಗಿ ಹಾರಿದೆ.

Fighting for window seat: Two women fight on Flight- Video viral!

ಮಹಿಳೆಯರು ಕೂಗಾಡುತ್ತಾ, ಕಪಾಳಮೋಕ್ಷ ಮಾಡಿಕೊಳ್ಳುತ್ತಾ, ಪರಸ್ಪರ ನಿಂದಿಸಿಕೊಂಡಿದ್ದಾರೆ. ಇಬ್ಬರು ಪರಸ್ಪರ ಕಪಾಳಮೋಕ್ಷ ಮಾಡಿಕೊಳ್ಳುವ ಮುನ್ನವೇ ವಿಮಾನದ ಬಾಗಿಲು ಮುಚ್ಚಲಾಗಿತ್ತು ಎಂದು ಕ್ಯಾಬಿನ್ ಸಿಬ್ಬಂದಿಯೊಬ್ಬರು ಡೈಲಿ ಮೇಲ್‌ನಿಂದ ಉಲ್ಲೇಖಿಸಿದ್ದಾರೆ.

ಘಟನೆಯನ್ನು ದೃಢಪಡಿಸಿದ ವಿಮಾನಯಾನ ಸಂಸ್ಥೆಯು ಹೋರಾಟದಲ್ಲಿ ತೊಡಗಿದ್ದ ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ ಎಂದು ಹೇಳಿದೆ.

Fighting for window seat: Two women fight on Flight- Video viral!

"ಸಾವೊ ಪಾಲೊದಲ್ಲಿ ಸಾಲ್ವಡಾರ್ (ಎಸ್‌ಎಸ್‌ಎ) ಮತ್ತು ಕಾಂಗೋನ್‌ಹಾಸ್ (ಸಿಜಿಹೆಚ್) ನಡುವೆ ಈ ಗುರುವಾರ (02/02) ಜಿ 3 1659 ವಿಮಾನವು ಟೇಕ್‌ಆಫ್ ಆಗುವ ಮೊದಲು ಜಗಳ ಸಂಭವಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವಿಡಿಯೊದಲ್ಲಿನ ದೃಶ್ಯ ಆಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಹಿಂಸಾಚಾರದ ಸ್ಥಳದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ವಿಮಾನದಿಂದ ಇಳಿಸಲಾಯಿತು. ಕಂಪನಿಯು ಈ ಹಿಂಸಾಚಾರದ ಕೃತ್ಯಕ್ಕೆ ವಿಷಾದಿಸುತ್ತದೆ. ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+