ಪೋಷಕರು ಅದನ್ನ ಮಾಡುವಾಗ ನೋಡ್ತೀರಾ: ಸಂಚಲನ ಸೃಷ್ಟಿಸಿದ ಖ್ಯಾತ ಯೂಟ್ಯೂಬರ್ ಪ್ರಶ್ನೆ
ಭಾರತದ ಖ್ಯಾತ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ (Ranveer Allahbadia) ತಮ್ಮ ಹೇಳಿಕೆಯಿಂದ ವಿವಾದಕ್ಕೆ ಗುರಿಯಾಗಿದ್ದಾರೆ. ಬೀರ್‌ಬೈಸೆಪ್ಸ್ ಎಂದೂ ಕರೆಯಲ್ಪಡುವ ರಣವೀರ್ ಅಲ್ಲಾಬಾಡಿಯಾ ಅವರು ಇತ್ತೀಚೆಗೆ ಸಮಯ್ ರೈನಾ ಅವರ ಇಂಡಿಯಾಸ್ ಗಾಟ್ ಲ್ಯಾಟೆಂಟ್‌ಗೆ ಪ್ಯಾನೆಲಿಸ್ಟ್ ಆಗಿ ಸೇರಿಕೊಂಡಿದ್ದರು. ಈ ವೇಳೆ ಅಲ್ಲಿಗೆ ಬಂದಿದ್ದ ಕಂಟೆಸ್ಟೆಂಟ್‌ಗೆ ಕೇಳಬಾರದ ಪ್ರಶ್ನೆ ಕೇಳಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ತಮಾಷೆಯಾಗಿ ಮಾತನಾಡುವ ಭರದಲ್ಲಿ ಯೂಟ್ಯೂಬರ್ ರಣವೀರ್ ಅವರು ನೀಡಿರುವ ಹೇಳಿಕೆಗೆ ನೆಟ್ಟಿಗರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಸಮಾಜಕ್ಕೆ ಮಾರಕವಾದ ಇಂತಹವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿಬಂದಿದೆ. ಇಷ್ಟಕ್ಕೂ ಈ ಕಾರ್ಯಕ್ರಮದಲ್ಲಿ ರಣವೀರ್ ಅಲ್ಲಾಬಾಡಿಯಾ ಕೇಳಿದ ಪ್ರಶ್ನೆಗಳೇನು ಎಂಬುದನ್ನು ಮುಂದೆ ತಿಳಿಯಿರಿ..

ರಣವೀರ್ ಅಲ್ಲಾಬಾಡಿಯಾ ಅವರು ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ ಯುವಕನಿಗೆ, "ನಿಮ್ಮ ಹೆತ್ತವರು ನಿಮ್ಮ ಜೀವನದುದ್ದಕ್ಕೂ ಪ್ರತಿದಿನ ಲೈಂಗಿಕ ಕ್ರಿಯೆ ನಡೆಸುವುದನ್ನು ನೋಡ್ತೀರಾ? ಅಥವಾ ನೀವು ಅದರಲ್ಲಿ ಒಮ್ಮೆ ಸೇರಿಕೊಂಡು ಅದನ್ನು ಶಾಶ್ವತವಾಗಿ ನಿಲ್ಲಿಸುತ್ತೀರಾ?" ಎಂದು ರಣವೀರ್ ಅಲ್ಲಾಬಾಡಿಯಾ ಸ್ಪರ್ಧಿಗೆ ಕೇಳಿದ್ದಾರೆ. ಅಲ್ಲದೆ ಈ ಕಾರ್ಯಕ್ರಮದಲ್ಲಿ ತಮ್ಮ ಖಾಸಗಿ ಭಾಗದ ಉದ್ದ ಎಂಬ ಅಸಂಬದ್ಧ ಪ್ರಶ್ನೆಗಳನ್ನು ಕೇಳುವ ಮೂಲಕ ಜೋಕ್ ಮಾಡಿದರು.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ರಣವೀರ್ ಅವರ ವಿಡಿಯೋ ವೈರಲ್ ಆಗಿದೆ. ಯೂತ್ ಐಕಾನ್‌ಗಳು ಎನಿಸಿಕೊಂಡ ಇವರು ಸಮಾಜಕ್ಕೆ ಎಂತಹ ಸಂದೇಶ ಕೊಡುತ್ತಿದ್ದಾರೆ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾಮಿಡಿ ಅನ್ನೋದು ನಿಂದನೆ, ಅಸಭ್ಯತೆ ಮತ್ತು ಅನಗತ್ಯ ಅಪಹಾಸ್ಯಗಳೇ ತುಂಬಿದೆ. ಇದು ಸಂಪೂರ್ಣವಾಗಿ ಕೊಳಕು, ಈ ಅಪ್ರಜ್ಞಾಪೂರ್ವಕ ಯೂತ್ ಐಕಾನ್‌ಗಳ ಮೇಲೆ ಎಫ್‌ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಪೋಷಕರ ಖಾಸಗಿ ಭಾಗಗಳು, ಲೈಂಗಿಕ ಕ್ರಿಯೆಯನ್ನು ನೋಡುವಷ್ಟು ನೀಚತನ ಪ್ರದರ್ಶಿಸಿರುವ ರಣವೀರ್ ಅವರಿಗೆ ಧಿಕ್ಕಾರ ಎಂದು ಹಲವರು ರಣವೀರ್ ಹಾಗೂ ಅವರ ತಾಯಿ ಇರುವ ಫೋಟೋಗಳನ್ನು ಹಂಚಿಕೊಂಡು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿವೆ.
ಎಫ್‌ಐಆರ್ ದಾಖಲು: ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಕಾರ್ಯಕರ್ತ ರಾಹುಲ್ ಈಶ್ವರ್ ಎಂಬುವವರು ಮುಂಬೈ ಕಮಿಷನರ್ ಮತ್ತು ಮಹಾರಾಷ್ಟ್ರ ಮಹಿಳಾ ಆಯೋಗಕ್ಕೆ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ. ರೈನಾ, ಕಾರ್ಯಕ್ರಮದ ಆಯೋಜಕರು ಮತ್ತು ಸಂಚಿಕೆಯಲ್ಲಿ ಭಾಗವಹಿಸಿದ ದಿ ರೆಬೆಲ್ ಕಿಡ್ ಎಂದು ಜನಪ್ರಿಯವಾಗಿರುವ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಅಪೂರ್ವ ಮಖಿಜಾ ಅವರ ಹೆಸರು ಕೂಡ ಎಫ್‌ಐಆರ್‌ನಲ್ಲಿದೆ.
ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯವಿದೆ. ಆದರೆ ನಾವು ಇತರರ ಸ್ವಾತಂತ್ರ್ಯವನ್ನು ಅತಿಕ್ರಮಿಸಿದಾಗ ನಮ್ಮ ಸ್ವಾತಂತ್ರ್ಯ ಕೊನೆಗೊಳ್ಳುತ್ತದೆ ಎನ್ನುವ ಮೂಲಕ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಕೂಡ ರಣವೀರ್ ಹೇಳಿಕೆ ಉಲ್ಲೇಖಿಸಿ ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ (ಬೀರ್‌ಬೈಸೆಪ್ಸ್) ಅವರಿಗೆ ವರ್ಷದ ಡಿಸ್ಟ್ರಪ್ಟರ್ ಪ್ರಶಸ್ತಿಯನ್ನು (Disruptor of the Year) ಪ್ರದಾನ ಮಾಡಿದ್ದರು. ಈ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.












Click it and Unblock the Notifications