Microsoft: ಬಿಲ್‌ ಗೇಟ್ಸ್‌ ಅವರ ಮೈಕ್ರೋಸಾಫ್ಟ್‌ ಕಂಪನಿಗೆ ಖ್ಯಾತ ಯುಟ್ಯೂಬರ್‌ ಡಾಲಿ ಚಾಯ್‌ವಾಲಾ ರಾಯಭಾರಿ?

ಮೈಕ್ರೋಸಾಫ್ಟ್ ಕಂಪನಿ ವಿಶ್ವದ ದೈತ್ಯ ಕಂಪನಿಗಳಲ್ಲಿ ಒಂದು. ಈ ಹೆಸರನ್ನು ಈಗಿನ ಯುಗದ ಜನ ಕೇಳಿಯೇ ಇರುತ್ತಾರೆ. ಕಂಪನಿ ತಂತ್ರಜ್ಞಾನ ಬೆಳೆದಂತೆ ತನ್ನಲ್ಲಿಯೂ ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡು ಬೆಳೆಯುತ್ತಿದೆ. ಸದ್ಯ ವಿಂಡೋಸ್‌ 11 ಆಪರೇಟಿಂಗ್ ಸಿಸ್ಟಮ್‌ನ ಅಪ್‌ಡೇಟ್‌ ವರ್ಷನ್‌, ವಿಂಡೋಸ್‌ 12 ಬಿಡುಗಡೆಗೆ ತಯಾರಿಗಳು ಭರದಿಂದ ಸಾಗಿವೆ. ಈ ಕಂಪನಿಯ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ ವಿಶ್ವದ ಐದನೇ ಶ್ರೀಮಂತ ವ್ಯಕ್ತಿ.

ಈಗ ಸಾಮಾಜಿಕ ತಾಣದಲ್ಲಿ ಸದ್ದು ಮಾಡುತ್ತಿರುವ ಸುದ್ದಿ ನೋಡಿದರೆ ಕನ್ಫ್ಯೂಸ್ ಆಗುವುದು ಗ್ಯಾರಂಟಿ. ವಿಂಡೋಸ್‌ 12 ಪ್ರಚಾರ ರಾಯಭಾರಿಯಾಗಿ ಭಾರತದ ಒಬ್ಬ ಯೂಟ್ಯೂಬರ್‌ರನ್ನು ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆ ಯೂಟ್ಯೂಬರ್ ಬೇರೆ ಯಾರು ಅಲ್ಲ ಡಾಲಿ ಚಾಯ್‌ವಾಲಾ.

Famous YouTuber Dolly Chaiwala ambassador for Microsoft company of Bill Gates

ಡಾಲಿ ಮಾಡಿರುವ ಚಹಾ ಸವಿದಿರುವ ಬಿಲ್ ಗೇಟ್ಸ್

ಕಳೆದ ತಿಂಗಳು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಆಚರಣೆಗಳಿಗಾಗಿ ಬಿಲ್‌ ಗೇಟ್ಸ್‌ ಭಾರತಕ್ಕೆ ಬಂದಿದ್ದರು. ಈ ವೇಳೆ ಅವರು ಡಾಲಿ ಚಾಯ್‌ವಾಲಾ ಅವರ ಅಂಗಡಿಗೂ ಭೇಟಿ ನೀಡಿದ್ದರು. ಡಾಲಿ ಚಾಯ್‌ವಾಲಾ ಅವರ ಅಂಗಡಿಯಲ್ಲಿ ಬಿಲ್ ಗೇಟ್ಸ್ ಚಹಾ ಸವಿದಿದ್ದ ವೀಡಿಯೊನ್ನು ಜನರು ಇಷ್ಟ ಪಟ್ಟಿದ್ದರು. ಡಾಲಿ ಚಾಯ್‌ವಾಲ್‌ ಅಂಗಡಿಯಲ್ಲಿ ಬಿಲ್‌ ಗೇಟ್ಸ್‌ ಚಹಾ ಕುಡಿದಾಗಿನಿಂದಲೂ ಇವರು ಭಾರೀ ಚರ್ಚೆಯಲ್ಲಿದ್ದರು. ಡಾಲಿ ಟೀ ಮಾರುವ ವಿಶೇಷ ಶೈಲಿಗೆ ಮೆಚ್ಚಿದ್ದ ಬಿಲ್‌ ಗೇಟ್ಸ್‌ ಬೆನ್ನು ತಟ್ಟಿದ್ದರು. ಅಲ್ಲದೆ ಡಾಲಿ ರಾತ್ರೋರಾತ್ರಿ ಸ್ಟಾರ್ ಆದರು.

ನಿಜಾನಾ?

ಡಾಲಿ ಚಾಯ್‌ವಾಲಾ ಅವರನ್ನು ವಿಂಡೀಸ್ 12 ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ ಎಂಬ ವದಂತಿಯು ಇನ್‌ಸ್ಟಾಗ್ರಾಮ್‌ನಲ್ಲಿ ಬಿಂದು ಟೈಮ್ಸ್ ಎಂಬ ಖಾತೆಯ ಪೋಸ್ಟ್‌ನೊಂದಿಗೆ ಪ್ರಾರಂಭವಾಯಿತು. ಈ ವಿಷಯವನ್ನು ಕೇವಲ ಮೋಜಿಗಾಗಿ ಹಾಕಲಾಗಿದೆ ಎಂದು ಈ ಪೋಸ್ಟ್‌ನಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ. ಆದರೆ ಇನ್‌ಸ್ಟಾಗ್ರಾಮ್‌ ಬಳಕೆದಾರರು ಈ ಪೋಸ್ಟ್‌ನ್ನು ಲೈಕ್ ಮಾಡಿದ್ದು, ವ್ಯಾಪಕವಾಗಿ ಹಂಚಿಕೊಂಡಿದ್ದಾರೆ.

ಮೈಕ್ರೋಸಾಫ್ಟ್ ಈ ಬಗ್ಗೆ ಇನ್ನು ಯಾವುದೇ ಘೋಷಣೆ ಮಾಡಿಲ್ಲ. ಈ ಪೋಸ್ಟ್‌ನಲ್ಲಿ ಯಾವುದೇ ಸತ್ಯವಿಲ್ಲ ಮತ್ತು ಇದನ್ನು ತಮಾಷೆಗಾಗಿ ಪೋಸ್ಟ್ ಮಾಡಲಾಗಿದೆ ಎಂದು ಬರೆಯಲಾಗಿದೆ. ಮೈಕ್ರೋಸಾಫ್ಟ್ ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿಯಾಗಿದೆ ಮತ್ತು ಅದರ ಸಂಸ್ಥಾಪಕ ಬಿಲ್ ಗೇಟ್ಸ್ ವಿಶ್ವದ ಅಗ್ರ ಐದು ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಅವರ ನಿವ್ವಳ ಮೌಲ್ಯ $153 ಬಿಲಿಯನ್ ಆಗಿದೆ.

ಕಳೆದ ತಿಂಗಳು ಬಿಲ್‌ಗೇಟ್ಸ್‌ ಭಾರತಕ್ಕೆ ಬಂದಾಗ ಡಾಲಿ ಚಾಯ್‌ವಾಲ್‌ ಅವರ ಅಂಗಡಿಗೆ ಭೇಟಿ ನೀಡಿದ್ದರು. ಬಿಲ್‌ ಗೇಟ್ಸ್‌ ಡಾಲಿ ಅವರ ಅಂಗಡಿಗೆ ಭೇಟಿ ನೀಡುತ್ತಿದ್ದಂತೆ, ಇವರು ವಿಶ್ವದ ಚಿತ್ತ ಕದ್ದರು. ಗೇಟ್ಸ್ ಡಾಲಿ ಚಾಯ್ವಾಲಾ ಅವರ ವೀಡಿಯೊವನ್ನು ಪೋಸ್ಟ್ ಮಾಡುತ್ತಿದ್ದಂತೆ ಡಾಲ್‌ ವೈರಲ್ ಆದರು. ಡಾಲಿ ಅವರಿಗೆ ಬಿಲ್ ಗೇಟ್ಸ್ ಯಾರು ಎಂಬುದು ಸಹ ಗೊತ್ತಿರಲಿಲ್ಲ. ಅವರು ವಿದೇಶದಿಂದ ಬರುವ ವ್ಯಕ್ತಿ ತಾರಂದು ಸಹ ಅವರಿಗೆ ತಿಳಿದಿರಲಿಲ್ಲ.

ಡಾಲಿ ಚಾಯ್‌ವಾಲಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚಹಾ ಕುಡಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.ನಾನು ಎಲ್ಲರಿಗೂ ನಗುಮುಖದಿಂದ ಚಹಾ ಕೊಡುತ್ತೇನೆ ಮತ್ತು ಪ್ರತಿಯಾಗಿ ಜನರು ಸಹ ನನ್ನನ್ನು ಪ್ರೀತಿಸುತ್ತಾರೆ ಎಂದು ಡಾಲಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+