Smartphone: ಹೊಸ ಕಲರ್, ಹೊಸ ಲುಕ್‌ನಲ್ಲಿ ಕಂಗೊಳಿಸಲಿದೆ Nothing Phone 2a
ತನ್ನ ವಿಭಿನ್ನ ಲುಕ್ ಹಾಗೂ ಅಪ್‌ಡೇಟೆಡ್ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆಯಲ್ಲಿ ಸದ್ದು ಮಾಡಿರುವ ನಥಿಂಗ್ ಫೋನ್ 2ಎ ಮತ್ತೊಂದು ರೂಪಾಂತರದಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಈ ಫೋನ್ ಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಮೇ ತಿಂಗಳಲ್ಲಿ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಲಗ್ಗೆ ಈಡಲು ತಯಾರಿ ನಡೆಸಿದೆ. ಹಲವು ಸ್ಮಾರ್ಟ್‌ಫೋನ್ ತಯಾರಕ ಕಂಪನಿಗಳು ಏಪ್ರಿಲ್‌ನಲ್ಲಿ ಶಕ್ತಿಯುತ ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಈಗ ಒಂದಕ್ಕಿಂತ ಹೆಚ್ಚು ಸ್ಮಾರ್ಟ್‌ಫೋನ್‌ಗಳು ಮೇ ತಿಂಗಳಿನಲ್ಲಿ ಮಾರುಕಟ್ಟೆಗೆ ಬರಲಿವೆ. ನೀವು ಹೊಸ ಸ್ಮಾರ್ಟ್‌ಫೋನ್ ತೆಗೆದುಕೊಳ್ಳುವ ಆಲೋಚನೆಯನ್ನು ಹೊಂದಿದ್ದರೆ. ಕೆಲವೇ ದಿನಗಳನ್ನು ಕಾಯ್ದರೆ ನಿಮ್ಮ ಕೈಗೆ ಉತ್ತಮ ಬಜೆಟ್ ಫ್ರೆಂಡ್ಲಿ ಫೋನ್ ಸಿಗುವ ಸಾಧ್ಯತೆ ಇದೆ. ನಥಿಂಗ್ ಫೋನ್ 2a ನ ನೀಲಿ ಬಣ್ಣದಲ್ಲಿ ಮೇ 2 ರಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಿಳಿ ಹಾಗೂ ಕಪ್ಪು ಬಣ್ಣದ ಫೋನ್‌ಗಿಂತಲೂ ಈ ಫೋನ್ ಲುಕ್ ಸಖತ್ ಆಗಿದೆ. ಇದನ್ನು ಖರೀದಿಸಲು ಈಗಾಗಲೇ ಗ್ರಾಹಕರು ಕ್ಯೂ ನಿಂತಿದ್ದಾರೆ. ಹಳೆಯ ನಥಿಂಗ್ 2ಎ ನಂತೆ ಇರುವ ಈ ಫೋನ್ ಹೊಸ ಕಲರ್‌ನೊಂದಿಗೆ ಬಂದಿದೆ.
Phone (2a) Blue | Designed for India.
— Nothing India (@nothingindia) April 29, 2024
First ever live sale.
Starting INR 19,999*
Day one offer.
Shop live on Flipkart, 2 May, 12 PM.
With exciting giveaways. pic.twitter.com/hoWini2q3K
ನಥಿಂಗ್ ಫೋನ್ (2a) ಹೊಸ 'ನೀಲಿ' ಬಣ್ಣವನ್ನು ಹೊಂದಿದ್ದು, ಈ ಫೋನ್ ಕೇವಲ ಭಾರತೀಯ ಮಾರುಕಟ್ಟೆಯಲ್ಲಿ ಮಾತ್ರ ಲಭ್ಯವಿರಲಿದೆ. ಈ ಫೋನ್‌ನನ್ನು ಪ್ಲಿಪ್‌ಕಾರ್ಟ್‌ನಿಂದ ಖರೀದಿಸಬಹುದು. ಬಣ್ಣವನ್ನು ಹೊರತುಪಡಿಸಿ, ಎಲ್ಲವೂ ಹಿಂದಿನ ಫೋನ್ ನಲ್ಲಿ ಇದ್ದ ಫೀಚರ್ಸ್‌ಗಳೇ ಇವೆ. ನೀಲಿ ಬಣ್ಣದ ನಥಿಂಗ್ ಫೋನ್ 2a ಬೆಲೆ 128GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಸ್ಮಾರ್ಟ್‌ಫೋನ್ ಬೆಲೆ 25,999 ರೂ. ಆದರೆ 12GB RAM + 256GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಫೋನ್ ಬೆಲೆ 29,999 ರೂ. ಆಗಿದೆ.
ಕನೆಕ್ಟಿವಿಟಿಯಲ್ಲಿ ಏನೆಲ್ಲಾ ಸಿಗುತ್ತದೆ?
ಈ ಫೋನ್ ಡ್ಯುಯಲ್ ಸಿಮ್, 5 ಜಿ, ವೈ-ಫೈ 6, ಬ್ಲೂಟೂತ್ 5.3, ಎನ್‌ಎಫ್‌ಸಿ, ಜಿಪಿಎಸ್ ಮತ್ತು ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ಹಲವು ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದೆ.
ಡಿಸ್‌ಪ್ಲೇ ಹೇಗಿದೆ?
ನಥಿಂಗ್ ಫೋನ್ 2ಎ 6.7 ಇಂಚಿನ ಅಮೋಲ್ಡ್ ಫುಲ್‌ಎಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿದೆ. ಈ ಫೋನ್ 120Hz ರಿಫ್ರೆಶ್ ರೇಟ್‌ಗೆ ಹೊಂದಿದ್ದು, 1,300 ನಿಟ್‌ಗಳ ಗರಿಷ್ಠ ಹೊಳಪು ಹೊಂದಿರಲಿದೆ. ಇನ್ನು ಮಿಡಿಯಾ ಟೆಕ್ ಡೈಮೆನ್ಸಿಟಿ 7200 Pro SoC ಪ್ರೊಸೆಸರ್ ಹೊಂದಿರಲಿದೆ. ಮಾರುಕಟ್ಟೆಯಲ್ಲಿ ಲಭ್ಯ ಇರುವ ಈ ಬಜೆಟ್ ಫೋನ್‌ಗಳಿಗೆ ಈ ಫೋನ್ ಭರ್ಜರಿ ಪೈಫೋಟಿ ನೀಡುವುದರಲ್ಲಿ ಡೌಟೇ ಇಲ್ಲ.
ಕ್ಯಾಮೆರಾ ಫೀಚರ್ಸ್ ಹೇಗಿರಲಿವೆ?
ನಥಿಂಗ್ ಫೋನ್ 2a ಹಿಂಭಾಗದಲ್ಲಿ ಎರಡು ಕ್ಯಾಮೆರಾಗಳಿವೆ. ಪ್ರೋಮರಿ ಕ್ಯಾಮೆರಾ 50 ಮೆಗಾ ಪಿಕ್ಸಲ್ ಹೊಂದಿದ್ದು ಉತ್ತಮ ಮತ್ತು ಸ್ಪಷ್ಟವಾದ ಫೋಟೋಗಳನ್ನು ತೆಗೆಯುತ್ತದೆ. ಮತ್ತು 50 ಮೆಗಾ ಪಿಕ್ಸಲ್ ಅಲ್ಟ್ರಾ-ವೈಡ್ ಕ್ಯಾಮೆರಾ ನೀಡಲಾಗಿದೆ. ಸೆಲ್ಫಿ ಹಾಗೂ ವಿಡಿಯೋಗಳಿಗಾಗಿ 32MP ಕ್ಯಾಮೆರಾವನ್ನು ಮುಂಭಾಗದಲ್ಲಿ ನೀಡಲಾಗಿದೆ.
ನಥಿಂಗ್ ಫೋನ್ 2a ಶಕ್ತಿಯುತ 5,000 ಎಂಎಎಚ್ ಬ್ಯಾಟರಿಯನ್ನು ಹೊಂದಿದೆ, ಇದು 45 ವ್ಯಾಟ್ ವೇಗದ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಈ ಫೋನ್ ಹೊಸ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ 3 ವರ್ಷಗಳವರೆಗೆ ಆಂಡ್ರಾಯ್ಡ್ ನವೀಕರಣಗಳನ್ನು ಪಡೆಯಬಹುದು ಎಂದು ಕಂಪನಿ ಭರವಸೆ ನೀಡಿದೆ.












Click it and Unblock the Notifications