ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ದಿನದ ವಿಶೇಷ: ಇಂಜಿನಿಯರ್ಸ್‌ ಡೇ- ಶುಭಾಶಯ, ಸಂದೇಶಗಳು

|
Google Oneindia Kannada News

ಸೆಪ್ಟೆಂಬರ್ 15, ಇಂಜಿನಿಯರ್ಸ್‌ ಡೇ. ಇಂಜಿನಿಯರ್‌ಗಳು ಯಾವುದೇ ರಾಷ್ಟ್ರ ನಿರ್ಮಾಣದ ವಾಸ್ತುಶಿಲ್ಪಿಗಳು. ಹೀಗಾಗಿ, ಇಂಜಿನಿಯರಿಂಗ್ ಎಂದರೆ ಅದಕ್ಕಿರುವ ಮಹತ್ವವೇ ಬೇರೆ. ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮದಿನವನ್ನೇ ಇಂಜಿನಿಯರ್ಸ್ ಡೇ ಆಗಿ ಆಚರಿಸಲಾಗುತ್ತಿದೆ. ಭಾರತದ ಜೊತೆಗೆ ತಾಂಜಾನಿಯಾ ಮತ್ತು ಶ್ರೀಲಂಕಾದಲ್ಲೂ ಇದೇ ದಿನದಂದು ಇಂಜಿನಿಯರ್ಸ್ ಡೇ ಆಚರಿಸಲಾಗತ್ತಿದೆ.

ವಿಶ್ವೇಶ್ವರಯ್ಯನವರ ಕೊಡುಗೆಗಳನ್ನು ಸ್ಮರಿಸುವುದರ ಜೊತೆಗೆ ಭಾರತೀಯ ನವನಿರ್ಮಾಣದಲ್ಲಿ ಕೊಡುಗೆ ನೀಡಿದ ವಿವಿಧ ಇಂಜಿನಿಯರ್‌ಗಳ ಕಾರ್ಯವನ್ನು ನೆನಪಿಸಿಕೊಳ್ಳುವ ಮತ್ತು ಪ್ರಶಂಸಿಸುವ ದಿನ ಇದು. ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವ ಇಂಜಿನಿಯರಿಂಗ್ ಶಿಕ್ಷಣ ಆಯ್ದುಕೊಳ್ಳಲು ಯುವ ಜನತೆಗೆ ಪ್ರೇರೇಪಣೆ ಕೊಡಲು ಈ ದಿನವನ್ನು ಬಳಸಬಹುದು.

ಇಂಜಿನಿಯರ್ಸ್ ಡೇ 2022: 18 ವರ್ಷದಲ್ಲೇ ತಾಯಿಯಾಗಿ ಭಾರತದ ಮೊದಲ ಮಹಿಳಾ ಇಂಜಿನಿಯರ್ ಆಗಿದ್ದು ಹೇಗೆ?ಇಂಜಿನಿಯರ್ಸ್ ಡೇ 2022: 18 ವರ್ಷದಲ್ಲೇ ತಾಯಿಯಾಗಿ ಭಾರತದ ಮೊದಲ ಮಹಿಳಾ ಇಂಜಿನಿಯರ್ ಆಗಿದ್ದು ಹೇಗೆ?

ಇಂದು ದೇಶಾದ್ಯಂತ ಶಾಲಾ ಕಾಲೇಜುಗಳ ಹಂತದಲ್ಲಿ ಹಲವಾರು ಇಂಜಿನಿಯರಿಂಗ್ ಸ್ಪರ್ಧೆಗಳು ನಡೆಯುತ್ತವೆ. ಯುವ ಇಂಜಿನಿಯರ್‌ಗಳ ಪ್ರತಿಭೆ ಒರೆಗೆ ಹಚ್ಚಲು ಒಳ್ಳೆಯ ವೇದಿಕೆ ಇದಾಗಿದೆ.

Engineers Day 2012- Greeting, Quotes, Memes in Kannada

ಇಂಜಿನಿಯರ್ಸ್ ಡೇ ಗ್ರೀಟಿಂಗ್ಸ್
ಇಂಜಿನಿಯರ್‌ಗಳ ಬಗ್ಗೆ ತರಹಾವೇರಿ ಮೀಮ್‌ಗಳು, ಗ್ರೀಟಿಂಗ್‌ಗಳು ಇಂಟರ್ನೆಟ್‌ನಲ್ಲಿ ಸಿಗುತ್ತವೆ. ನೀವು ಎಂಜಿನಿಯರ್ ಆಗಿದ್ದರೆ ಮನಸಿಗೆ ಮುದ ನೀಡಬಹುದು.

* "ನಮಗೆ ಗರ್ಲ್‌ಫ್ರೆಂಡ್ ಅಗತ್ಯ ಇಲ್ಲ. ಯಾಕೆಂದರೆ ನಮಗಿರುವ ಜವಾಬ್ದಾರಿಗಳೇ ನಮ್ಮ ತಲೆ ತಿನ್ನುತ್ತಿರುತ್ತವೆ. ಇಂಜಿನಿಯರ್ಸ್ ಡೇ ಶುಭಾಶಯಗಳು"
* ವಿಜ್ಞಾನ ಎಂದರೆ ತಿಳಿದುಕೊಳ್ಳುವುದು, ಇಂಜಿನಿಯರಿಂಗ್ ಎಂಬುದು ಮಾಡುವುದು.
* ಎಂಜಿನಿಯರಿಂಗ್ ಎಂಬುದು ಪಾರ್ಕ್‌ನಲ್ಲಿ ವಾಕಿಂಗ್ ಮಾಡಿದಷ್ಟೇ ಸಲೀಸು ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಆ ಪಾರ್ಕು ಜುರಾಸಿಕ್ ಪಾರ್ಕು ಎಂದು ಎಂಜಿನಿಯರ್‌ಗಳಿಗೆ ಮಾತ್ರ ಗೊತ್ತು.
* ಭಾರತದಲ್ಲಿ ನೀವು ಜನದಟ್ಟನೆಯ ರಸ್ತೆಯಲ್ಲಿ ನಿಂತು ಕಲ್ಲೆಸೆದರೆ ಅದು ಒಂದು ನಾಯಿಗೆ ಬಡಿಯುತ್ತದೆ ಇಲ್ಲ ಎಂಜಿನಿಯರ್‌ಗೆ ಬಡಿಯುತ್ತದೆ.

Engineers' Day 2022 : ಭಾರತದ ಜೊತೆ ತಾಂಜಾನಿಯಾ, ಶ್ರೀಲಂಕಾದಲ್ಲೂ ವಿಶ್ವೇಶ್ವರಯ್ಯರ ಜನ್ಮದಿನದಂದು ಎಂಜಿನಿಯರ್ಸ್ ಡೇEngineers' Day 2022 : ಭಾರತದ ಜೊತೆ ತಾಂಜಾನಿಯಾ, ಶ್ರೀಲಂಕಾದಲ್ಲೂ ವಿಶ್ವೇಶ್ವರಯ್ಯರ ಜನ್ಮದಿನದಂದು ಎಂಜಿನಿಯರ್ಸ್ ಡೇ

Engineers Day 2012- Greeting, Quotes, Memes in Kannada

ಖ್ಯಾತನಾಮರ ಹೇಳಿಕೆಗಳು:
* "ಇಂಜಿನಿಯರ್‌ಗಳು ಸಮಸ್ಯೆಗೆ ಪರಿಹಾರ ಒದಗಿಸಲು ಬಯಸುತ್ತಾರೆ. ಯಾವುದೇ ಸಮಸ್ಯೆ ಸಿಗದಿದ್ದರೆ ತಾವೇ ಸಮಸ್ಯೆ ಸೃಷ್ಟಿಸುತ್ತಾರೆ." - ಸ್ಕಾಟ್ ಅಡಮ್ಸ್
* "ಇಂಜಿನಿಯರ್‌ಗಳು ಕನಸು ನನಸು ಮಾಡುತ್ತಾರೆ." - ಹಯಾವೋ ಮಿಯಾಜಾಕಿ
* "ಆರನೇ ದಿನ ದೇವರಿಗೆ ತಾನೊಬ್ಬನೇ ಎಲ್ಲಾ ಮಾಡಲು ಆಗಲ್ಲ ಅಂತ ಅನಿಸಿತು. ಹೀಗಾಗಿ, ಎಂಜಿನಿಯರ್‌ಗಳನ್ನು ಸೃಷ್ಟಿಸಿದ." - ಲೂಯಿಸ್ ಮೆಕ್‌ಮಾಸ್ಟರ್ ಬುಜೋಲ್ಡ್.
* "ಒಂದು ವಸ್ತು ಹೇಗೆ ಕೆಲಸ ಮಾಡುತ್ತೆ ಎಂದು ನೀವು ತಿಳಿದುಕೊಳ್ಳಬೇಕೆಂದರೆ, ಆ ವಸ್ತು ಚೂರು ಚೂರಾಗುವಾಗ ಅಧ್ಯಯನ ಮಾಡಿ" - ವಿಲಿಯಮ್ ಗಿಬ್ಸನ್.

(ಒನ್ಇಂಡಿಯಾ ಸುದ್ದಿ)

English summary
Sir M Visvesvaraya birthday is celebrated as Engineers Day. Here is some good greetings and quotes that show importance of Engineers in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X