ಹಿರಿಯ ರಾಜಕಾರಣಿ ಮುಲಾಯಂ ಸಿಂಗ್ ಯಾದವ್ ಆಸ್ತಿ ವಿವರ
ಎಪ್ಪತ್ತೊಂಬತ್ತು ವರ್ಷ ವಯಸ್ಸಿನ ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರು ಭಾರತದ ಚತುರ ಹಾಗೂ ಪ್ರಬಲ ರಾಜಕಾರಣಿಗಳ ಪೈಕಿ ಒಬ್ಬರೆನಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮನೆಯೊಳಗೆ ಮಕ್ಕಳು-ಸಹೋದರರ ನಡುವಿನ ರಾಜಕಾರಣದ ಆಜಂಗಢದ ಲೋಕಸಭಾ ಸದಸ್ಯರಾಗಿರುವ ಮುಲಾಯಂ ಅವರು ಇಂದಿಗೂ ಸಕ್ರಿಯರಾಗಿದ್ದಾರೆ. ಆದರೆ, ಈ ಬಾರಿ ಮೈನ್ ಪುರಿ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆ ಬಯಸಿ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಮುಲಾಯಂ ಸಿಂಗ್ ರಾಜಕೀಯ ನಡೆಗಳು ಎಷ್ಟು ವಿಚಿತ್ರ ಹಾಗೂ ವಿಲಕ್ಷಣ ಆಗಿರುತ್ತವೆ ಅಂದರೆ, ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಂದರೆ ಸ್ವತಃ ಮುಲಾಯಂ ಸಿಂಗ್ ಯಾದವ್ ರ ಪಕ್ಷ ಮಾಯಾವತಿ ಅವರ ಬಿಎಸ್ ಪಿ ಜತೆಗೂಡಿ, ಬಿಜೆಪಿ ವಿರುದ್ಧ ಬಡಿದಾಡುತ್ತಿದೆ.
ರಾಷ್ಟ್ರ ಮಟ್ಟದಲ್ಲೂ ಬಿಜೆಪಿ ವಿರೋಧಿ ನೆಲೆಯಲ್ಲಿ ನಿಂತಿದೆ. ಹಾಗೆ ನೋಡಿದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿತ್ತು. ಈ ಸಲ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಕಣಕ್ಕಿಳಿದಿರುವ ಮುಲಾಯಂ ಅವರು ಸಲ್ಲಿಸಿರುವ ಆಸ್ತಿ ವಿವರ ಇಲ್ಲಿದೆ...

ಹೆಸರು: ಮುಲಾಯಂ ಸಿಂಗ್ ಯಾದವ್
ಕ್ಷೇತ್ರ : ಮೈನ್ ಪುರಿ
ಒಟ್ಟು ಆಸ್ತಿ ಮೌಲ್ಯ: 20.54 ಕೋಟಿ ರು(2014ರಲ್ಲಿ 15.95 ಕೋಟಿ ರು)
ಸ್ಥಿರಾಸ್ತಿ : 16.21 ಕೋಟಿ ರು(2014ರಲ್ಲಿ 12.54 ಕೋಟಿ ರು)
ಚರಾಸ್ತಿ : 4.33 ಕೋಟಿ ರು (2014ರಲ್ಲಿ 3.41 ಕೋಟಿ ರು)
ಬಂಡವಾಳ ಹೂಡಿಕೆ : 50.09 ಲಕ್ಷ ರು
ಬ್ಯಾಂಕಿನಲ್ಲಿ ಠೇವಣಿ :
40.13 ಲಕ್ಷ ರು (11.25 ಲಕ್ಷ ಮುಲಾಯಂ ಹಾಗೂ 28.88 ಲಕ್ಷ ರು ಪತ್ನಿ ಹೆಸರಿನಲ್ಲಿ )
ಸಾಲ : 2.20 ಕೋಟಿ ರು
ಕ್ರಿಮಿನಲ್ ಕೇಸ್ : ಲಕ್ನೋದಲ್ಲಿ ಕ್ರಿಮಿನಲ್ ಮೊಕದ್ದಮೆ.
ಜಮೀನು :
* 10.77 ಎಕರೆ 7.89 ಕೋಟಿ ರು ಮೌಲ್ಯ
* 5,000 ಚದರ ಅಡಿ, 5974 ಚದರ ಅಡಿ ನಿವೇಶನ
* 16,010 ಚದರಡಿ ಹಾಗೂ 3230 ಚದರಡಿ ಎರಡು ಮನೆ.












Click it and Unblock the Notifications