ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆ: ಗೃಹಿಣಿಯರಿಗೆ ರಾಹುಲ್, ನಿರುದ್ಯೋಗಿಗಳಿಗೆ ಮೋದಿ ಮೆಚ್ಚು

|
Google Oneindia Kannada News

Recommended Video

Lok Sabha Elections 2019 : ಯಾರು ಪ್ರಧಾನಿಯಾಗಲಿದ್ದಾರೆ ಗೊತ್ತಾ? | Oneindia Kannada

ನವದೆಹಲಿ, ಏಪ್ರಿಲ್ 03: ಲೋಕಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಡುವೆ ಮಂದಿನ ಪ್ರಧಾನಿಯಾಗಲು ಯಾರು ಸೂಕ್ತ ಎಂಬುದು ಎಲ್ಲಾ ಸಮೀಕ್ಷೆ, ಜನಾಭಿಪ್ರಾಯ ಸಂಗ್ರಹ ಸಮಯದಲ್ಲಿ ಮೊದಲ ಪ್ರಶ್ನೆಯಾಗಿರುತ್ತದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಅದರಂತೆ, ಸಿವೋಟರ್ ಹಾಗೂ ಐಎಎನ್ಎಸ್ ಸುದ್ದಿಸಂಸ್ಥೆ ನಡೆಸಿರುವ ಇತ್ತೀಚಿನ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ಅವರು ಮತ್ತೊಮ್ಮೆ ರಾಹುಲ್ ಅವರನ್ನು ಹಿಂದಿಕ್ಕಿದ್ದಾರೆ. ಆದರೆ, ಗೃಹಿಣಿಯರ ಪೈಕಿ ರಾಹುಲ್ ಗಾಂಧಿ ಜನಪ್ರಿಯತೆ ಹೆಚ್ಚಾಗಿದ್ದು, ಕಾಂಗ್ರೆಸ್ಸಿಗರಲ್ಲಿ ಹೊಸ ಹರ್ಷ ಮೂಡಿಸಿದೆ.

ಟೈಮ್ಸ್ ನೌ ಸಮೀಕ್ಷೆ: ಮೋದಿ ಅಲೆ ಭಾರತದೆಲ್ಲೆಡೆ ಎನ್ಡಿಎ ಜಯಭೇರಿ ಟೈಮ್ಸ್ ನೌ ಸಮೀಕ್ಷೆ: ಮೋದಿ ಅಲೆ ಭಾರತದೆಲ್ಲೆಡೆ ಎನ್ಡಿಎ ಜಯಭೇರಿ

ಏಪ್ರಿಲ್ 11 ರಿಂದ ಮೇ 19 ರ ತನಕ ಏಳು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಮೇ 23ರಂದು ಚುನಾವಣಾ ಫಲಿತಾಂಶ ಹೊರಬರಲಿದೆ. ಸಿವೋಟರ್ ನ ಈ ಹಿಂದಿನ ಸಮೀಕ್ಷೆಗಳಲ್ಲೂ ರಾಹುಲ್ ವಿರುದ್ಧ ಮೋದಿ ಅವರು ಮೇಲುಗೈ ಸಾಧಿಸಿದ್ದರು. ಆದರೆ, ಇಬ್ಬರು ನಾಯಕರ ಜನಪ್ರಿಯತೆ ನಡುವಿನ ಅಂತರ ಕಡಿಮೆಯಾಗುತ್ತಿದೆ.

ಸಿವೋಟರ್ ಮಾರ್ಚ್ ತಿಂಗಳ ಸಮೀಕ್ಷೆ ಫಲಿತಾಂಶ

ಸಿವೋಟರ್ ಮಾರ್ಚ್ ತಿಂಗಳ ಸಮೀಕ್ಷೆ ಫಲಿತಾಂಶ

ಬಾಲಕೋಟ್ ನಲ್ಲಿ ಉಗ್ರರ ನೆಲೆ ಧ್ವಂಸ ಗೊಳಿಸಿದ ಬಳಿಕ ಮೋದಿ ಜನಪ್ರಿಯತೆ ಇನ್ನಷ್ಟು ಏರಿಕೆಯಾಗಿದೆ. ಮಾರ್ಚ್ 7ರ ಹೊತ್ತಿಗೆ 5079 ಜನರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದ್ದು, ಶೇ.64.3ರಷ್ಟು ಜನರು ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಲೇಬೇಕು ಎಂದು ಅಭಿಪ್ರಾಯ ಹೇಳಿದ್ದಾರೆ. ಆದರೆ, ಶೇ.26.6ರಷ್ಟು ಜನರು ಮಾತ್ರ ರಾಹುಲ್ ಗಾಂಧಿ ಅವರು ಪ್ರಧಾನಿಯಾಗಬಹುದು ಎಂದಿದ್ದಾರೆ. ಶೇ.9.1ರಷ್ಟು ಜನರು ಮಾತ್ರ ಬೇರೆ ಯಾರಾದರೂ ಪ್ರಧಾನಿಯಾಗಲಿ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ ಅಥವಾ ಯಾವುದೇ ಅಭಿಪ್ರಾಯ ಹೇಳಿಲ್ಲ.

ಸಿವೋಟರ್ ಸಮೀಕ್ಷೆ : ಜರ್ರನೆ ಏರಿದ ನರೇಂದ್ರ ಮೋದಿ ಜನಪ್ರಿಯತೆ ಸೂಚ್ಯಂಕ ಸಿವೋಟರ್ ಸಮೀಕ್ಷೆ : ಜರ್ರನೆ ಏರಿದ ನರೇಂದ್ರ ಮೋದಿ ಜನಪ್ರಿಯತೆ ಸೂಚ್ಯಂಕ

ನಿರುದ್ಯೋಗಿಗಳಿಗೆ ಮೋದಿ ಪ್ರಧಾನಿಯಾಗಬೇಕು

ನಿರುದ್ಯೋಗಿಗಳಿಗೆ ಮೋದಿ ಪ್ರಧಾನಿಯಾಗಬೇಕು

ಈ ಬಾರಿಯ ಲೋಕಸಭಾ ಚುನಾವಣೆಯ ಪ್ರಮುಖ ಅಂಶಗಳಲ್ಲಿ ಒಂದೆನಿಸಿರುವ ನಿರುದ್ಯೋಗ ಸಮಸ್ಯೆಗೆ ಪರಿಹಾರ ನೀಡಲು ಪ್ರಧಾನಿ ಮೋದಿಗೆ ಮಾತ್ರ ಸಾಧ್ಯ, ಮುಂದಿನ ಪ್ರಧಾನಿಯಾಗಲು ಮೋದಿ ಸೂಕ್ತ ಎಂದು ಶೇ 63.6ರಷ್ಟು ನಿರುದ್ಯೋಗಿಗಳು ಮತ ಹಾಕಿದ್ದಾರೆ. ಇದೇ ವಿಭಾಗದಲ್ಲಿ ರಾಹುಲ್ ಗಾಂಧಿಗೆ ಶೇ 26ರಷ್ಟು ಮಾತ್ರ ಮತ ಸಿಕ್ಕಿದೆ.

ಸಿವೋಟರ್-ಐಎಎನ್‌ಎಸ್ ಸಮೀಕ್ಷೆ: ಎನ್‌ಡಿಎ ಮೈತ್ರಿಕೂಟಕ್ಕೇ ಜಯಭೇರಿ ಸಿವೋಟರ್-ಐಎಎನ್‌ಎಸ್ ಸಮೀಕ್ಷೆ: ಎನ್‌ಡಿಎ ಮೈತ್ರಿಕೂಟಕ್ಕೇ ಜಯಭೇರಿ

ಗೃಹಿಣಿಯರ ಪೈಕಿ ರಾಹುಲ್ ಮೇಲುಗೈ

ಗೃಹಿಣಿಯರ ಪೈಕಿ ರಾಹುಲ್ ಮೇಲುಗೈ

ಎಲ್ಲಾ ವಿಭಾಗಗಳಲ್ಲೂ ರಾಹುಲ್ ಗಾಂಧಿಗಿಂತ ಭಾರಿ ಅಂತರ ಕಾಯ್ದುಕೊಳ್ಳುತ್ತಿದ್ದ ಮೋದಿ ಅವರಿಗೆ ಅಚ್ಚರಿ ನೀಡುವಂಥ ಸಮೀಕ್ಷಾ ವರದಿ ಬಂದಿದೆ. ದೇಶದ ಗೃಹಿಣಿಯರ ಪಾಲಿಗೆ ರಾಹುಲ್ ಗಾಂಧಿ ಮುಂದಿನ ಪ್ರಧಾನಿಯಾದರೆ ದೈನಂದಿನ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆಯಂತೆ. ಶೇ 43.3ರಷ್ಟು ಮಂದಿ ರಾಹುಲ್ ಗಾಂಧಿ ಪರ ಮತ ಹಾಕಿದ್ದರೆ, ಶೇ 37.2 ರಷ್ಟು ಗೃಹಿಣಿಯರು ಪ್ರಧಾನಿ ಮೋದಿ ಪರ ಮತ ಹಾಕಿದ್ದಾರೆ. ಇಬ್ಬರು ನಾಯಕರ ಜನಪ್ರಿಯತೆಯ ಅಂತರ ಇಷ್ಟು ಕಡಿಮೆಯಾಗಿದ್ದು ಇದೇ ಮೊದಲ ಬಾರಿಗೆ ಎನ್ನಬಹುದು.

ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?

ಸರ್ಕಾರಿ ಸಿಬ್ಬಂದಿಗಳಿಗೆ ಮೋದಿ ಪ್ರಧಾನಿಯಾಗಬೇಕು

ಸರ್ಕಾರಿ ಸಿಬ್ಬಂದಿಗಳಿಗೆ ಮೋದಿ ಪ್ರಧಾನಿಯಾಗಬೇಕು

ವೇತನ ಆಯೋಗದ ಶಿಫಾರಸು ಜಾರಿಗೊಳಿಸಿ, ವಿವಿಧ ರಾಜ್ಯಗಳಲ್ಲಿ ತುಟ್ಟಿಭತ್ಯೆ ಸೇರಿದಂತೆ ವಿವಿಧ ಯೋಜನೆಗಳನ್ನು ಹೊರತರುವ ಮೂಲಕ ಮೋದಿ ಅವರು ಸರ್ಕಾರಿ ನೌಕರರ ವಲಯದಲ್ಲಿ ಜನಪ್ರಿಯತೆ ಉಳಿಸಿಕೊಂಡಿದ್ದಾರೆ. ಶೇ 61.1ರಷ್ಟು ಸರ್ಕಾರಿ ಸಿಬ್ಬಂದಿಗಳು ಮೋದಿ ಪರ ನಿಂತಿದ್ದರೆ, ಶೇ 26ರಷ್ಟು ಮಂದಿ ಮಾತ್ರ ರಾಹುಲ್ ಪ್ರಧಾನಿಯಾಗಲಿ ಎಂದಿದ್ದಾರೆ.

ಅಸಂಘಟಿತ ವಲಯ, ಕೃಷಿ ಕಾರ್ಮಿಕರ ಅಭಿಪ್ರಾಯ

ಅಸಂಘಟಿತ ವಲಯ, ಕೃಷಿ ಕಾರ್ಮಿಕರ ಅಭಿಪ್ರಾಯ

ಕೃಷಿ ಕಾರ್ಮಿಕರ ಅಭಿಪ್ರಾಯದಂತೆ ಶೇ 48.2ರಷ್ಟು ಮಂದಿ ಮೋದಿ ಪ್ರಧಾನಿಯಾಗಲಿ ಎಂದಿದ್ದರೆ, ಶೇ 35.4 ರಷ್ಟು ಮಂದಿ ರಾಹುಲ್ ಗಾಂಧಿ ಪ್ರಧಾನಿಯಾಗಲಿ ಎಂದಿದ್ದಾರೆ. ಅಸಂಘಟಿತ ವಲಯದ ಕಾರ್ಮಿಕರ ಪೈಕಿ ಶೇ 48.9 ಮಂದಿ ಮೋದಿ ಪರ ಇದ್ದರೆ, ಶೇ 35ರಷ್ಟು ಮಂದಿ ರಾಹುಲ್ ಪಾ ಇದ್ದಾರೆ. ಒಟ್ಟಾರೆ, ಗೃಹಿಣಿಯರು, ಸ್ವಂತ ಭೂಮಿ ಇಲ್ಲದ ಕೃಷಿ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕ ವರ್ಗಗಳ ಪೈಕಿ ಮೋದಿ ಮುಂದಿದ್ದರೂ ರಾಹುಲ್ ಅವರು ಜನಪ್ರಿಯತೆಯಲ್ಲಿ ಗಮನಾರ್ಹ ಏರಿಕೆ ಕಂಡು ಅಂತರ ಕಡಿಮೆಯಾಗಿದೆ.

English summary
An overwhelming 63.6 per cent of unemployed respondents in the latest CVOTER-IANS poll tracker survey preferred Narendra Modi as the next Prime Minister. In the same category, only 26 per cent made Rahul Gandhi as their choice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X