ಸ್ಪೂರ್ತಿದಾಯಕ ವೃದ್ಧ ದಂಪತಿ: 50 ರೂ.ಗೆ ಅನ್‌ಲಿಮಿಟೆಡ್ ಊಟ
ಕೊರೊನಾ ಕಾರಣದಿಂದ ಬಹುತೇಕ ಜನ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಎಲ್ಲವೂ ದುಬಾರಿಯಾಗಿ ಹೋಗಿದೆ. ಹೋಟೆಲ್‌ಗಳಲ್ಲೂ ತಿಂಡಿ, ಊಟದ ಬೆಲೆ ಕೂಡ ಸಾಮನ್ಯ ಜನರ ಕೈಗೆಟಕುವಂತಿಲ್ಲ. ಹೀಗಿರುವಾಗ ಹಣದಾಸೆಗೆ ಬೀಳದೆ ನಿಸ್ವಾರ್ಥವಾಗಿ ಕೆಲಸ ಮಾಡುತ್ತಿರುವ ವೃದ್ಧ ದಂಪತಿ ನೆಟ್ಟಿಗರ ಮನ ಗೆದ್ದಿದ್ದಾರೆ. ಸ್ವಾವಲಂಬಿಯಾಗಿ ಜೀವನ ಮಾಡಲು ಇವರು ಇಳಿ ವಯಸ್ಸಿನಲ್ಲಿ ದುಡಿದು ಜೀವನ ಸಾಗಿಸುತ್ತಿದ್ದಾರೆ. ಇವರ ದುಡಿಮೆ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉಡುಪಿ ಜಿಲ್ಲೆ ಮಣಿಪಾಲದಲ್ಲಿರುವ ಈ ಹಿರಿಯ ದಂಪತಿ ಮನೆಯಲ್ಲಿಯೇ ತಯಾರಿಸಿದ ಊಟವನ್ನು ಕೇವಲ 50 ರೂ.ಗೆ ಮಾರಾಟ ಮಾಡುತ್ತಾರೆ. ಈ ದಂಪತಿ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೇಕ ಜನ ಉದ್ಯೋಗದ ವಿಚಾರಕ್ಕೆ ಬಂದರೆ ತಮ್ಮ ಶ್ರಮದಾಯಕ ಜೀವನದ ಬಗ್ಗೆ ದೂರು ನೀಡುವುದನ್ನು ನಿಲ್ಲಿಸುವುದೇ ಇಲ್ಲ.
ವಿಡಿಯೊವನ್ನು ಇಲ್ಲಿ ವೀಕ್ಷಿಸಿ:
ಇಂಟರ್ನೆಟ್ ಈ ದಂಪತಿಯ ಅದಮ್ಯ ಮನೋಭಾವವನ್ನು ಶ್ಲಾಘಿಸಿದೆ. "ಈ ಸುಂದರ ದಂಪತಿಗೆ ಹ್ಯಾಟ್ಸ್ ಆಫ್ (sic)" ಎಂದು ಬಳಕೆದಾರರು ಬರೆದಿದ್ದಾರೆ. ಈ ವಿಡಿಯೋದ ಕಾಮೆಂಟ್‌ಗಳ ವಿಭಾಗವು ಹೃದಯ ಮತ್ತು ಚಪ್ಪಾಳೆ ಎಮೋಜಿಗಳಿಂದ ತುಂಬಿದೆ.














Click it and Unblock the Notifications