ಶೀಘ್ರದಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್
ಮಾರುಕಟ್ಟೆಯಲ್ಲಿ ಈಗ ಬೇರೆ ಬೇರೆ ಕಂಪನಿಗಳು ಭಿನ್ನ ವಿಭಿನ್ನ ಮಾದರಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡುತ್ತಿವೆ. ಈ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯಲು ಪ್ಲ್ಯಾನ್ ಮಾಡಿಕೊಳ್ಳುತ್ತಿವೆ. ಕಡಿಮೆ ಬೆಲೆ ಹಾಗೂ ಗ್ರಾಹಕರಿಗೆ ಬೇಕಾಗಿರುವ ಎಲ್ಲ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಈ ಕಂಪನಿಗಳು ಕಾರ್ಯ ಪ್ರವೃತ್ತವಾಗಿರುತ್ತಿವೆ. ಈ ಸಾಲಿಗೆ ಬಜಾಜ್ ಕಂಪನಿ ಸಹ ಸೇರಿಕೊಳ್ಳುತ್ತದೆ.
ಬಜಾಜ್ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಹಿಡಿತವನ್ನು ಸಾಧಿಸಿದೆ. ಪೆಟ್ರೋಲ್ ಬೈಕ್ ಸೆಗ್ಮೆಂಟ್‌ನಲ್ಲಿ ಮೆರೆದು ಈಗ ಬೇರೆ ಸೆಗ್ಮೆಂಟ್‌ನತ್ತ ಮುಖ ಮಾಡಿದೆ. ಅಂದಹಾಗೆ ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಈ ಮೊದಲೇ ಬಿಡುಗಡೆ ಮಾಡಿತ್ತು. ಆದರೆ ಈಗ ಬಿಡುಗಡೆ ಮಾಡಲು ಹೋರಟಿರುವ ಸ್ಕೋರ್ ಕುಟುಂಬಸ್ಥರನ್ನು ಗಮನದಲ್ಲಿಟ್ಟುಕೊಂಡೇ ರಚಿಸಲಾಗಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಓಲಾ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳು ಭಾರೀ ಸದ್ದು ಮಾಡುತ್ತಿವೆ. ಈ ಕಪನಿಯ ಸ್ಕೂಟರ್‌ಗೆ ಪೈಪೋಟಿ ನೀಡಲು ಬಜಾಜ್ ಸಹ ಭರ್ಜರೀ ಫೀಚರ್ ಇರುವ ಸ್ಕೂಟರ್ ಲಾಂಚ್ ಮಾಡಲು ಸಿದ್ಧತೆ ನಡೆಸಿದೆ. ಬಜಾಜ್ ಆಟೋ ಇದೀಗ ತನ್ನ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮುಂದಿನ ತಿಂಗಳು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಈಗಗಾಗಲೇ ಮಾರುಕಟ್ಟೆಯಲ್ಲಿರುವ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ನ ಇನ್ನೊಂದು ವಿಧವಾಗಿದೆ. ಈ ಸ್ಕೂಟರ್ ಕಡಿಮೆ ಬೆಲೆಗೆ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.
ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಎಷ್ಟು?
ವರದಿಗಳ ಪ್ರಕಾರ, ಬಜಾಜ್ ಆಟೋದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಸುಮಾರು 1 ಲಕ್ಷ ರೂ. ಪ್ರಸ್ತುತ, ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1.23 ಲಕ್ಷದಿಂದ 1.47 ಲಕ್ಷದವರೆಗೆ ಇರುವ ಸಾಧ್ಯತೆ ಇದೆ. ಹೊಸ ಎಲೆಕ್ಟ್ರಿಕ್ ಚೇತಕ್ TVS iQube, Ola S1X ಮತ್ತು ಹೊಸ Ather Rizzta ಗಳೊಂದಿಗೆ ಪೈಪೋಟಿ ನಡೆಸಲಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್‌ನ ಅಗ್ಗದ ಸ್ಕೂಟರ್ 70 ಸಾವಿರಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿದೆ.

ಹಳೆಯ ಸ್ಕೂಟರ್‌ಗೆ ಹೋಲಿಸದರೆ ಇದು ಹಲವು ವಿಶೇಷತೆಗಳನ್ನು ಹೊಂದಿದೆ. ಅಷ್ಟೇ ಅಲ್ಲದೆ ಹೊಸ ಮಾದರಿಯಲ್ಲಿ ಸ್ವಲ್ಪ ವ್ಯತ್ಯಾಸ ಮಾಡಲಾಗಿದೆ. ಬಜಾಜ್ ಆಟೋ ಕಡಿಮೆ ಬಜೆಟ್‌ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ತನ್ನ ಹಿಡಿತವನ್ನು ಬಲಪಡಿಸಲು ಬಯಸುತ್ತದೆ.
ಬಜಾಜ್ ಆಟೋ ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಸಾಕಷ್ಟು ಸುದ್ದಿಗಳು ಬರುತ್ತಿವೆ. ಹೊಸ ಸ್ಕೂಟರ್‌ನ ಬೆಲೆ ಕಡಿಮೆಯಾಗಬಹುದು ಆದರೆ ಅದರ ಶ್ರೇಣಿಯು ಯೋಗ್ಯವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಮತ್ತೊಂದು ಬೈಕ್ ಬಿಡುಗಡೆಗೆ ಸಿದ್ಧತೆ
ಹೊಸ ಚೇತಕ್ ರೂಪಾಂತರವನ್ನು ಬಿಡುಗಡೆ ಮಾಡಿದ ನಂತರ, ಪುಣೆ ಮೂಲದ ದ್ವಿಚಕ್ರ ಕಂಪನಿ ಜೂನ್ 2024 ರಲ್ಲಿ ತನ್ನ ಮೊದಲ CNG ಬೈಕ್ ಅನ್ನು ಪರಿಚಯಿಸಲು ಸಿದ್ಧವಾಗುತ್ತಿದೆ. ಈ ಮಾದರಿಯ ಮೈಲೇಜ್ ತುಂಬಾ ಹೆಚ್ಚಿರುವ ಸಾಧ್ಯತೆಯಿದೆ. ಇದನ್ನು 110cc ಎಂಜಿನ್ ಹೊಂದಿರಲಿದ್ದು, 8.6PS ಮತ್ತು 9.81NM ಉತ್ಪಾದನೆಯನ್ನು ಉತ್ಪಾದಿಸುತ್ತದೆ. ಬಜಾಜ್ ಸಿಎನ್‌ಜಿ ಬೈಕ್ 17 ಇಂಚಿನ ವೀಲ್‌ನೊಂದಿಗೆ ಬರಲಿದೆ ಮತ್ತು ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳನ್ನು ಹೊಂದಿರುತ್ತದೆ ಎಂದು ತಿಳಿದು ಬಂದಿದೆ.












Click it and Unblock the Notifications