TV ಖರೀದಿಸುವ ಆಲೋಚನೆ ಇದೆಯಾ? ಭಾರೀ ಡಿಸ್ಕೌಂಟ್‌ಗೆ ಲಭ್ಯ
ಸದ್ಯ ಫ್ಲಿಪ್ ಕಾರ್ಟ್ ಹಾಗೂ ಅಮೇಜಾನ್‌ನಲ್ಲಿ ಬಿಗ್ ಸೇವಿಂಗ್ ಡೇ ಸೇಲ್ ನಡೆಯುತ್ತಿದೆ. ಈ ವೇಳೆ ಹಲವು ಗೃಹಪಯೋಗಿ ವಸ್ತುಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಲಾಗುತ್ತಿದೆ. ಮೊಬೈಲ್‌ಗಳು ಸಖರ್ ಚೀಪ್ ಬೆಲೆಗೆ ಲಭ್ಯವಾಗುತ್ತಿವೆ. ನೀವು ಏನಾದ್ರೂ ಟಿವಿ ಖರೀದಿ ಮಾಡಲು ಬಯಸಿದ್ದರೇ ಒಂದು ನಿಮಿಷ ಈ ಸುದ್ದಿ ಓದಿ ಆ ಮೇಲೆ ಟಿವಿ ತೆಗೆದುಕೊಳ್ಳುವ ನಿರ್ಧಾರವನ್ನು ಮಾಡುವಿರಂತೆ.
ಮೊಬೈಲ್ ಫೋನ್ ಗೆಜೆಟ್‌ಗಳ ಮೇಲೆ ಈಗಾಗಲೇ ಭಾರೀ ರಿಯಾಯತಿ ನಡೆಯುತ್ತಿದೆ. ಇ ಕಾಮರ್ಸ್ ವೈಬ್‌ಸೈಟ್‌ಗಳು ತಮ್ಮ ಗ್ರಾಹಕರಿಗೆ ಬೇಕಾಗಿರುವ ವಸ್ತುಗಳನ್ನು ಕಡಿಮೆ ದರದಲ್ಲಿ ನೀಡಲು ಮುಂದಾಗುತ್ತಿವೆ. ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇ ಸೇವಿಂಗ್‌ನಲ್ಲಿ ಎಲೆಕ್ಟ್ರಾನಿಕ್ಸ್ ಉಪಕರಣಗಳ ಮೇಲೆ ಭಾರೀ ರಿಯಾತಿ ನೀಡಲಾಗುತ್ತಿದೆ. ಕಡಿಮೆ ಬೆಲೆಗೆ ಗರಿಷ್ಠ ಫೀಚರ್ಸ್ ಇರುವು ಟಿವಿಗಳನ್ನು ಗ್ರಾಹಕರ ಪಡೆಯ ಬಹುದಾಗಿದೆ. ಇದರಿಂದ ಕಡಿಮೆ ಹಣದಲ್ಲಿ ಹೆಚ್ಚಿನ ಲಾಭ ಪಡೆಯಬಹುದು.

ವಿಭಿನ್ನ ಬೆಲೆ ಶ್ರೇಣಿಗಳಲ್ಲಿ ಟಿವಿಗಳಲ್ಲಿ ಉತ್ತಮ ಡೀಲ್‌ಗಳು ಕಂಡುಬರುತ್ತಿವೆ. 30 ರಿಂದ 35 ಸಾವಿರಕ್ಕಿಂತ ಕಡಿಮೆ ಬೆಲೆಯ ಟಿವಿಗಳಲ್ಲಿ ಪ್ರಸ್ತುತ ದೊಡ್ಡ ರಿಯಾಯಿತಿ ಲಭ್ಯವಿದೆ. ಅದೇ ಸಮಯದಲ್ಲಿ, ನೀವು ಈಗ ಖರೀದಿಸಬಹುದಾದ 50 ರಿಂದ 55 ಇಂಚಿನ ಟಿವಿಯ ಬೆಲೆಯಲ್ಲೂ ಭಾರೀ ವ್ಯತ್ಯಾಸ ಕಾಣಿಸುತ್ತಿದೆ. ಹಾಗಿದ್ದರೆ ಯಾವೆಲ್ಲಾ ಟಿವಿಗಳನ್ನು ಪಡೆಯಬಹುದು ಎಂಬುದರ ಪರಿಚಯ ಇಲ್ಲಿದೆ.
ಮೊಟೊರಾಲಾ ಟಿವಿ ಭಾರೀ ಡಿಸ್ಕೌಂಟ್
ತನ್ನ ಭೀನ್ನ ಹಾಗೂ ವಿಭಿನ್ನ ಮಾಡೆಲ್ ಫೋನ್‌ಗಳಿಂದಲೇ ಗ್ರಾಹಕರನ್ನು ಸೆಳೆಯುತ್ತಿರುವ ಮೊಟೊರಾಲಾ ಈಗ ಟಿವಿ ಸೆಗ್ಮೆಂಟ್‌ನಲ್ಲೂ ತನ್ನ ಛಾಪು ಮೂಡಿಸಲು ಮುಂದಾಗಿದೆ. Motorola EnvisionX 55 ಇಂಚಿನ ಟಿವಿ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತಿದೆ. ಟಿವಿಯು 20W ಧ್ವನಿಯೊಂದಿಗೆ 4K UHD 60Hz ಡಿಸ್‌ಪ್ಲೇಯನ್ನು ಹೊಂದಿದೆ. ಇದು Google TV ಮತ್ತು MediaTek 9602 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಟಿವಿ 27,990 ರೂ.ಗೆ ಲಭ್ಯವಿದೆ. ನೀವು ಬ್ರ್ಯಾಂಡ್‌ನ 55-ಇಂಚಿನ QLED ಕೊಡುಗೆಯನ್ನು ಸಹ ಪರಿಶೀಲಿಸಬಹುದು. ಈ ಟಿವಿಯ ಮೇಲೆ ಶೇಕಡಾ 74 ರಷ್ಟು ರಿಯಾಯಿತಿ ಲಭ್ಯವಿದ್ದು, ಇದು 30,990 ಗೆ ಗ್ರಾಹಕರ ಕೈಗೆ ಸಿಗಲಿದೆ. ಅಲ್ಲದೆ ಇದಕ್ಕೆ ಬ್ಯಾಂಕ್ ಆಫರ್‌ಗಳು ಸಹ ಲಭ್ಯ ಇವೆ.
ಕಡಿಮೆ ಬೆಲೆ ಹಿಸೆನ್ಸ್ ಟಿವಿ
ಹಿಸೆನ್ಸ್ E7K 50-ಇಂಚಿನ ಟಿವಿಯಲ್ಲೂ ಭಾರೀ ಡಿಸ್ಕೌಂಟ್ ನೀಡಲಾಗುತ್ತಿದೆ. ಈ ಟಿವಿಯು 4k 60Hz VA ಡಿಸ್‌ಪ್ಲೇ ಯೊಂದಿಗೆ 330nits ಗರಿಷ್ಠ ಹೊಳಪನ್ನು ಹೊಂದಿದೆ. ಮತ್ತು ಸ್ಮಾರ್ಟ್ VIDAA TV OS ನಲ್ಲಿ ಕಾರ್ಯನಿರ್ವಹಿಸುತ್ತದೆ. ಟಿವಿಯು ಡಾಲ್ಬಿ ಸೌಂಡ್ ಔಟ್‌ಪುಟ್ ಅನ್ನು ಹೊಂದಿದೆ. ಈ ಟಿವಿಯ ಬೆಲೆಯಲ್ಲೂ ಭಾರೀ ಕಡಿತ ಮಾಡಲಾಗಿದೆ. ಶೇಕಡಾ 50ರಷ್ಟು ರಿಯಾಯಿತಿಯನ್ನು ನೀಡಲಾಗಿದ್ದು, ಗ್ರಾಹಕರನ್ನು ಕೈ ಬಿಸಿ ಕರೆಯುತ್ತಿದೆ.

ಹಿಸೆನ್ಸ್ E7K 50 ನಿಜವಾದ ಬೆಲೆ 59,999 ರೂ ಆಗಿದ್ದು, ಬಿಗ್ ಸೇವಿಂಗ್ ಡೇನಲ್ಲಿ ಈ ಟಿವಿ 29,999 ರೂಪಾಯಿಗೆ ಲಭ್ಯವಿದೆ. ನೀವು ಗೇಮ್‌ಗಳನ್ನು ಆಡಲು ಇಷ್ಟ ಪಟ್ಟಿದ್ದರೆ, Hisense A6K (50A6K) ಅನ್ನು ಸಹ ಖರೀದಿಸಬಹುದು. ಇದರ ಬೆಲೆಯೂ ಇದರ ಆಸುಪಾಸಿನಲ್ಲೇ ಇದೆ.
ಆಕರ್ಷಕ ತೋಷಿಬಾ ಟಿವಿ
ತೋಷಿಬಾ C350MP 50-ಇಂಚಿನ ಟಿವಿ, ರಿಫ್ರೆಶ್ ರೇಟ್ ಮತ್ತು 350nits ಬ್ರೈಟ್‌ನೆಸ್ ಜೊತೆಗೆ 4k LED ಡಿಸ್‌ಪ್ಲೇ ಹೊಂದಿದೆ. ಇದು 24W ಸೌಂಡ್ ಔಟ್‌ಪುಟ್ ಅನ್ನು ಹೊಂದಿದ್ದು, Google TV OS ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಟಿವಿಯ ಮೇಲೆ ಫ್ಲಿಪ್ ಕಾರ್ಟ್ ಕಂಪನಿ ಶೇಕಡಾ 45 ರಷ್ಟು ರಿಯಾಯ್ತಿ ನೀಡುತ್ತಿದೆ. ಅಂದಹಾಗೆ ಈ ಟಿವಿ 29,999 ರೂ.ಗೆ ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ಖರೀದಿಸಲು ಲಭ್ಯ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications