International Condom Day: ಫೆಬ್ರವರಿ 13ರಂದೇ ಕಾಂಡೋಮ್ಸ್ ಡೇ ಆಚರಣೆ ಮಾಡಲು ಕಾರಣ ಏನು?
Condom Day Special: ಪ್ರತಿವರ್ಷವೂ ಸಹ ಪ್ರೇಮಿಗಳ ದಿನಾಚರಣೆ ಅಂದರೆ ಫೆಬ್ರವರಿ 14ರ ಒಂದು ದಿನದ ಮುಂಚೆಯೇ ಕಾಂಡೋಮ್ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ಹಾಗಾದರೆ, ಇದನ್ನು ಆಚರಿಸಲು ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಫೆಬ್ರವರಿ 13 ವ್ಯಾಲೆಂಟೈನ್ಸ್ ಡೇಯಂತೆ ಹೆಚ್ಚು ಗಮನ ಸೆಳೆಯುವ ದಿನವಾಗಿದೆ. ಆದರೆ ಈ ದಿನ ಸುರಕ್ಷಿತ ಲೈಂಗಿಕತೆಯನ್ನು ಉತ್ತೇಜಿಸುವಲ್ಲಿ ಮತ್ತು ಲೈಂಗಿಕವಾಗಿ ಹರಡುವ ಸೋಂಕುಗಳ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಪ್ರಾಮುಖ್ಯತೆಯನ್ನು ಹೊಂದಿದೆ. ನಾವು ಅಂತಾರಾಷ್ಟ್ರೀಯ ಕಾಂಡೋಮ್ ದಿನದ ಬಗ್ಗೆ ತಿಳಿದುಕೊಳ್ಳಲೇಬೇಕು. ಈ ದಿನವನ್ನು ಪ್ರತಿವರ್ಷವೂ ಫೆಬ್ರವರಿ 13ರಂದು ಆಚರಿಸಲಾಗುತ್ತದೆ ಮತ್ತು ಕಾಂಡೋಮ್‌ಗಳನ್ನು ರಕ್ಷಣೆಯ ಸಾಧನವಾಗಿ ಬಳಸುವ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಆರೋಗ್ಯಕರ ಲೈಂಗಿಕತೆಯನ್ನು ಉತ್ತೇಜಿಸಲು ಈ ದಿನವನ್ನು ಮೀಸಲಿಡಲಾಗುತ್ತದೆ.

ಅಂತಾರಾಷ್ಟ್ರೀಯ ಕಾಂಡೋಮ್ ದಿನದ ಮಹತ್ವದ: ಕಾಂಡೋಮ್‌ಗಳು ಲೈಂಗಿಕವಾಗಿ ಹರಡುವ ರೋಗಗಳನ್ನು ತಡೆಗಟ್ಟುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಗರ್ಭಾವಸ್ಥೆಯನ್ನು ತಪ್ಪಿಸಲು ಸಹಾಯ ಮಾಡುತ್ತವೆ. ಸುರಕ್ಷಿತ ಲೈಂಗಿಕತೆ ಬಗ್ಗೆ ಜಾಗೃತಿ ಮೂಡಿಸಲು, ಅಂತಾರರಾಷ್ಟ್ರೀಯ ಕಾಂಡೋಮ್ ದಿನವನ್ನು ಪ್ರತಿ ವರ್ಷ ಫೆಬ್ರವರಿ 13ರಂದು ಅಂದರೆ ಪ್ರೇಮಿಗಳ ದಿನದ ಒಂದು ದಿನ ಮೊದಲು ಆಚರಣೆ ಮಾಡಲಾಗುತ್ತದೆ.
ಸುರಕ್ಷಿತ ಲೈಂಗಿಕ ಆರೋಗ್ಯವನ್ನು ಉತ್ತೇಜಿಸಲು AIDS ಹೆಲ್ತ್‌ಕೇರ್ ಫೌಂಡೇಶನ್ (AHF) 2009ರಿಂದ ಅಂತಾರಾಷ್ಟ್ರೀಯ ಕಾಂಡೋಮ್ ದಿನವನ್ನಾಗಿ ಆಚರಣೆ ಮಾಡಲಾಯಿತು. ಜವಾಬ್ದಾರಿಯುತ ಲೈಂಗಿಕ ನಡವಳಿಕೆಯನ್ನು ಉತ್ತೇಜಿಸಲು ವ್ಯಾಲೆಂಟೈನ್ಸ್ ದಿನದ ಒಂದು ದಿನದ ಮೊದಲು ಅಂತಾರಾಷ್ಟ್ರೀಯ ಕಾಂಡೋಮ್ ದಿನದ ಆಚರಣೆಗೆ ಸಮಯವನ್ನು ನಿಗದಿಪಡಿಸಲಾಗಿದೆ.
ಇನ್ನು ಫೆಬ್ರುವರಿ 14ರಂದು ಸೇಂಟ್ ವ್ಯಾಲೆಂಟೈನ್ ಅವರ ಹುತಾತ್ಮರ ನೆನಪಿಗಾಗಿ ಪ್ರೇಮಿಗಳ ದಿನವನ್ನು ಆಚರಣೆ ಮಾಡಲಾಗುತ್ತದೆ. ಪ್ರೀತಿಯ ವಾರವು ಫೆಬ್ರವರಿ 7ರಂದು ಗುಲಾಬಿ ದಿನದಿಂದ ಪ್ರಾರಂಭ ಆಗುತ್ತದೆ. ನಂತರ, ಪ್ರಪೋಸ್ ಡೇ (ಫೆಬ್ರವರಿ 8), ಚಾಕೊಲೇಟ್ ಡೇ (ಫೆಬ್ರವರಿ 9), ಟೆಡ್ಡಿ ಡೇ (ಫೆಬ್ರವರಿ 10), ಪ್ರಾಮಿಸ್ ಡೇ (ಫೆಬ್ರವರಿ 11), ಹಗ್ ಡೇ (ಫೆಬ್ರವರಿ 12), ಕಿಸ್ ಡೇ (ಫೆಬ್ರವರಿ 13), ಮತ್ತು ವ್ಯಾಲೆಂಟೈನ್ಸ್ ಡೇ (ಫೆಬ್ರವರಿ 14).
ಕಾಂಡೋಮ್ ಬಗ್ಗೆ ಜಾಗೃತಿ ಮೂಡಿಸುವುದು: ಅಂತಾರಾಷ್ಟ್ರೀಯ ಕಾಂಡೋಮ್ ದಿನವು ಕಾಂಡೋಮ್ ಬಳಕೆಯ ಬಗ್ಗೆ ತಪ್ಪುಗ್ರಹಿಕೆಗಳು ಮತ್ತು ಅಡೆತಡೆಗಳನ್ನು ಪರಿಹರಿಸಲು ಒಂದು ಉತ್ತಮ ಅವಕಾಶ ಇದಾಗಿದೆ. ಅಂತಾರಾಷ್ಟ್ರೀಯ ಕಾಂಡೋಮ್ ದಿನವು ವ್ಯಕ್ತಿಗಳಿಗೆ ತಮ್ಮ ಲೈಂಗಿಕ ಆರೋಗ್ಯದ ಬಗ್ಗೆ ತಿಳುವಳಿಕೆಯುಳ್ಳ ಆಯ್ಕೆಗಳನ್ನು ಮಾಡಲು ಮತ್ತು ನಿಕಟ ಸಂಬಂಧಗಳಲ್ಲಿ ಗೌರವ, ಒಪ್ಪಿಗೆ ಮತ್ತು ಜವಾಬ್ದಾರಿಯ ಸಂಸ್ಕೃತಿಯನ್ನು ಬೆಳೆಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ, ಫೆಬ್ರವರಿ, 13, 2024ರಂದು ಅಂತಾರರಾಷ್ಟ್ರೀಯ ಕಾಂಡೋಮ್ ದಿನವನ್ನು ಆಚರಿಸಲು WHO ಸಮುದಾಯಗಳು ಮತ್ತು ಪಾಲುದಾರರನ್ನು ಸೇರುತ್ತದೆ. HIV, ಲೈಂಗಿಕವಾಗಿ ಹರಡುವ ಸೋಂಕುಗಳು (STIs) ಮತ್ತು ಯೋಜಿತವಲ್ಲದ ಗರ್ಭಧಾರಣೆಗಳನ್ನು ತಡೆಗಟ್ಟಲು ಇದ ಪಾತ್ರ ತುಂಬಾ ಪ್ರಮುಖವಾಗಿದೆ.











Click it and Unblock the Notifications