ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಹಾ.. ಎಮ್ಮೆ ಹಾಲು ಕುಡಿದರೆ ಏನೆಲ್ಲ ಆರೋಗ್ಯ ಪ್ರಯೋಜನಗಳವೆ ಗೊತ್ತಾ?

|
Google Oneindia Kannada News

ಗ್ರಾಮೀಣ ಪ್ರದೇಶದ ಜನರು ಹಸುವಿನ ಹಾಲನ್ನು ಮಾರುತ್ತಾರೆ ಜೊತೆಗೆ ಎಮ್ಮೆಯ ಹಾಲಿನಿಂದ ಮನೆಗೆ ಹಾಲು, ಮಜ್ಜಿಗೆ ಮತ್ತು ಬೆಣ್ಣೆ ತೆಗೆದು ಸೇವಿಸಿತ್ತಾರೆ. ಇನ್ನು ಸಿಟಿ ಜನರಿಗೆ ಹೊಲಿಸಿದರೆ, ಗ್ರಾಮೀಣ ಪ್ರದೇಶದ ಜನರ ಗಟ್ಟಿತನ ಅವರ ಆರೋಗ್ಯ ಕ್ರಮ ಹಾಗೂ ಗ್ರಾಮೀಣ ಹಾಲನ್ನು ಸೇವಿಸುತ್ತಿರುವುದು ಅವರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಕಂಡು ಬಂದಿದೆ. ಆದರೆ ಹಸುವಿನ ಹಾಲಿನ ಹೊರತಾಗಿ, ಎಮ್ಮೆಯ ಹಾಲನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಹಸುವಿಗೆ ಹೋಲಿಸಿದರೆ ಎಮ್ಮೆಯ ಹಾಲಿನಲ್ಲಿ ಕ್ಯಾಲ್ಸಿಯಂ ಹೇರಳವಾಗಿ ಕಂಡುಬರುತ್ತದೆ. ಇದರೊಂದಿಗೆ ವಿಟಮಿನ್ ಎ, ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ನಂತಹ ಪೋಷಕಾಂಶಗಳು ಎಮ್ಮೆಯ ಹಾಲಿನಲ್ಲಿ ಕಂಡುಬರುತ್ತವೆ, ಇದು ಅನೇಕ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಇದಲ್ಲದೆ, ಎಮ್ಮೆಯ ಹಾಲಿನಲ್ಲಿ ಕ್ಯಾಲೊರಿಗಳ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ, ಇದು ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗಾದರೆ ಎಮ್ಮೆಯ ಹಾಲನ್ನು ಸೇವಿಸುವುದರಿಂದ ಆಗುವ ಆರೋಗ್ಯ ಪ್ರಯೋಜನಗಳ ನೀವು ತಿಳಿದುಕೊಳ್ಳುವುದು ಪ್ರಮುಖವಾಗಿದೆ. ಇನ್ನು 100 ಮಿಲಿನಷ್ಟು ಎಮ್ಮೆ ಹಾಲಿನ ಪೌಷ್ಟಿಕಾಂಶದ ಮೌಲ್ಯವನ್ನು ನಾವು ನೋಡಿದರೆ, ಅದರಲ್ಲಿ 237 ಕ್ಯಾಲೊರಿಗಳಿವೆ ಎಂದು ನಾವು ಕಂಡುಕೊಳ್ಳುತ್ತೇವೆ.

ಎಮ್ಮೆಯ ಹಾಲಿನಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್ ಕಂಡು ಬರುತ್ತದೆ. ಈ ಪ್ರೋಟೀನ್‌ ನಿಮ್ಮ ಸ್ನಾಯುಗಳನ್ನು ಹೆಚ್ಚಿಸಲು ಮತ್ತು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಬೆಳಗ್ಗೆ ಎಮ್ಮೆಯ ಹಾಲು ಕುಡಿದರೆ ತುಂಬಾ ಹೊತ್ತು ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಏಕೆಂದರೆ ಪ್ರೋಟೀನ್ ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ಇದು ನಿಮ್ಮ ದೇಹವನ್ನು ದೀರ್ಘಕಾಲದವರೆಗೆ ಚಯಾಪಚಯ ಪ್ರಕ್ರಿಯೆಯಲ್ಲಿ ಇರಿಸುತ್ತದೆ. ಇದರ ಜೊತೆಗೆ, ಈ ಪ್ರೋಟೀನ್‌ಗಳು ಕಳಪೆ ಸ್ನಾಯುಗಳ ಚೇತರಿಕೆಗೆ ಸಹಾಯ ಮಾಡುತ್ತದೆ ಮತ್ತು ದೀರ್ಘಕಾಲದವರೆಗೆ ಅವುಗಳನ್ನು ಆರೋಗ್ಯಕರವಾಗಿರಿಸುತ್ತದೆ.

 ತೂಕ ಹೆಚ್ಚಸಲು ಸಹಾಯಕಾರಿ

ತೂಕ ಹೆಚ್ಚಸಲು ಸಹಾಯಕಾರಿ

ಎಮ್ಮೆಯ ಹಾಲನ್ನು ಸೇವಿಸುವುದು ತೂಕ ಹೆಚ್ಚಿಸಲು ತುಂಬಾ ಪ್ರಯೋಜನಕಾರಿ. ಎಮ್ಮೆಯ ಹಾಲಿನಲ್ಲಿ ಕ್ಯಾಲೋರಿಗಳ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ, ಇದು ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ನೀವು ತೆಳ್ಳಗಿದ್ದರೆ ಮತ್ತು ನಿಮ್ಮ ತೂಕವನ್ನು ವೇಗವಾಗಿ ಹೆಚ್ಚಿಸಲು ಬಯಸಿದರೆ, ಖಂಡಿತವಾಗಿಯೂ ಎಮ್ಮೆಯ ಹಾಲನ್ನು ಸೇವಿಸಿ.

ಹೆಚ್ಚಿನ ಕ್ಯಾಲ್ಸಿಯಂ ಹೊಂದಿರುತ್ತದೆ (17.3%)
ಪ್ರೋಟೀನ್ (7.8%)
ವಿಟಮಿನ್ ಎ (4.3%)
ಪೊಟ್ಯಾಸಿಯಮ್ ಮತ್ತು ರಂಜಕ
ಮೆಗ್ನೀಸಿಯಮ್
ಸತು
ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ

 ಎಮ್ಮೆ ಹಾಲು ಮೂಳೆಗಳನ್ನು ಬಲಪಡಿಸುತ್ತದೆ

ಎಮ್ಮೆ ಹಾಲು ಮೂಳೆಗಳನ್ನು ಬಲಪಡಿಸುತ್ತದೆ

ಎಮ್ಮೆಯ ಹಾಲನ್ನು ಸೇವಿಸುವುದರಿಂದ ಮೂಳೆಗಳು ಗಟ್ಟಿಯಾಗಲು ತುಂಬಾ ಪ್ರಯೋಜನಕಾರಿ. ಎಮ್ಮೆಯ ಹಾಲಿನಲ್ಲಿ ಕ್ಯಾಲ್ಸಿಯಂ ಹೇರಳವಾಗಿ ಕಂಡುಬರುತ್ತದೆ, ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಆಸ್ಟಿಯೊಪೊರೋಸಿಸ್ ಮತ್ತು ಸಂಧಿವಾತವನ್ನು ತಡೆಯಲು ಸಹಾಯ ಮಾಡುತ್ತದೆ.

ಎಮ್ಮೆಯ ಹಾಲಿನಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇದೆ, ಇದು ಮೂಳೆ ಬೆಳವಣಿಗೆಗೆ ಅಗತ್ಯವಾದ ಖನಿಜವಾಗಿದೆ. ಜೊತೆಗೆ, ಇದು ಮೂಳೆಯ ಆರೋಗ್ಯವನ್ನು ಉತ್ತೇಜಿಸುವ ಮತ್ತು ಆಸ್ಟಿಯೊಪೊರೋಸಿಸ್‌ನಂತಹ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುವ ಕೆಲವು ಪೆಪ್ಟೈಡ್‌ಗಳನ್ನು ಸಹ ಒಳಗೊಂಡಿದೆ. ಇದರೊಂದಿಗೆ, ವಯಸ್ಸಾದಂತೆ, ದುರ್ಬಲಗೊಳ್ಳುತ್ತಿರುವ ಮೂಳೆಗಳು ಸಹ ಬಲಗೊಳ್ಳುತ್ತವೆ ಮತ್ತು ಮೂಳೆ ದ್ರವ್ಯರಾಶಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ತಾಮ್ರ, ಮ್ಯಾಂಗನೀಸ್, ರಂಜಕ ಮತ್ತು ಸತುವುಗಳಂತಹ ಇತರ ಖನಿಜಗಳು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ

 ಪ್ರೋಟೀನ್ ಕೊರತೆಯನ್ನು ಪೂರೈಕೆ

ಪ್ರೋಟೀನ್ ಕೊರತೆಯನ್ನು ಪೂರೈಕೆ

ದೇಹದಲ್ಲಿನ ಪ್ರೋಟೀನ್ ಕೊರತೆಯನ್ನು ನೀಗಿಸಲು ಎಮ್ಮೆಯ ಹಾಲನ್ನು ಸೇವಿಸುವುದು ತುಂಬಾ ಪ್ರಯೋಜನಕಾರಿ. ಎಮ್ಮೆಯ ಹಾಲಿನಲ್ಲಿ ಪ್ರೋಟೀನ್ ಹೇರಳವಾಗಿ ಕಂಡುಬರುತ್ತದೆ, ಇದು ದೇಹದಲ್ಲಿನ ಪ್ರೋಟೀನ್ ಕೊರತೆಯನ್ನು ಪೂರೈಸಲು ಸಹಾಯ ಮಾಡುತ್ತದೆ. ಅಲ್ಲದೆ, ಇದು ಸ್ನಾಯುಗಳನ್ನು ಹೆಚ್ಚಿಸಲು ಮತ್ತು ಬಲಪಡಿಸಲು ಸಹಾಯ ಮಾಡುತ್ತದೆ.

 ಹೃದಯವನ್ನು ಆರೋಗ್ಯ ಕಾಪಾಡುತ್ತದೆ

ಹೃದಯವನ್ನು ಆರೋಗ್ಯ ಕಾಪಾಡುತ್ತದೆ

ಹೃದಯವನ್ನು ಆರೋಗ್ಯವಾಗಿಡಲು ಎಮ್ಮೆ ಹಾಲು ಸೇವಿಸುವುದು ತುಂಬಾ ಪ್ರಯೋಜನಕಾರಿ. ಎಮ್ಮೆಯ ಹಾಲಿನಲ್ಲಿ ಕೊಲೆಸ್ಟ್ರಾಲ್ ಮಟ್ಟವು ತುಂಬಾ ಕಡಿಮೆಯಾಗಿದೆ. ಇದರಿಂದಾಗಿ ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವು ಕಡಿಮೆಯಾಗುತ್ತದೆ ಮತ್ತು ಹೃದಯವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

English summary
Apart from cow's milk, consuming buffalo milk offers several health benefits. Calcium is abundant in buffalo milk as compared to cow milk, Buffalo Milk Benefits Check Here
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X