Crab Business: ಏಡಿ ವ್ಯಾಪಾರಕ್ಕಿಳಿದ ಫ್ಲೈಟ್ ಅಟೆಂಡೆಂಟ್ : ಒಂದೇ ದಿನದಲ್ಲಿ 14.45 ಲಕ್ಷ ಸಂಪಾದನೆ

Crab Business: ಫ್ಲೈಟ್ ಅಟೆಂಡೆಂಟ್ ಆಗುವುದು ತುಂಬಾ ಮಂದಿಯ ಕನಸು. ಈ ಕೆಲಸದಲ್ಲಿ ಬೇರೆ ಬೇರೆ ಜಾಗಕ್ಕೆ ಹೋಗುವ ಹೊಸ ಜನರನ್ನು ಭೇಟಿಯಾಗುವ ಅವಕಾಶ ಸಿಗುತ್ತದೆ. ಆದರೆ ಫ್ಲೈಟ್ ಅಟೆಂಡೆಂಟ್ ಆಗುವ ಆಸೆ ಇದ್ದರೆ ಸಾಕಾಗಲ್ಲ. ಈ ಕೆಲಸಕ್ಕೆ ಮುಖ ಸೌಂದರ್ಯ, ದೇಹ ಸೌಂದರ್ಯ, ಬುದ್ದಿ, ತಾಳ್ಮೆ, ಓದು ಎಲ್ಲವೂ ಬೇಕು. ಹಾಗಾಗಿಯೇ ಬಹಳ ಮಂದಿಗೆ ಫ್ಲೈಟ್ ಅಟೆಂಡೆಂಟ್ ಆಗವ ಕನಸಿದ್ದರೂ ಸಾಕಾರವಾಗಲ್ಲ. ಆದರೆ ಇಲ್ಲೊಬ್ಬ ಮಹಿಳೆ 12 ವರ್ಷಗಳ ಕಾಲ ಈ ಕೆಲಸ ಮಾಡಿ ನಂತರ ತನ್ನ ಕೆಲಸ ಬಿಡುವುದಕ್ಕೆ ನಿರ್ಧಾರ ಮಾಡಿದ್ದಾರೆ.

ಫ್ಯಾಮಿಲಿ ಬ್ಯುಸಿನೆಸ್ ಗೆ ಸಾಥ್

ಫ್ಲೈಟ್ ಅಟೆಂಡೆಂಟ್ ಕೆಲಸ ಬಿಟ್ಟು ಹೊಸ ಮಾರ್ಗ ಆರಿಸಿಕೊಂಡಿದ್ದಾರೆ. ಈ ಕಲಸಕ್ಕೆ ರಾಜೀನಾಮೆ ಕೊಟ್ಟು ಫ್ಯಾಮಿಲಿ ಬ್ಯುಸಿನೆಸ್ ಗೆ ಹೆಗಲಾಗಲು ನಿರ್ಧಾರ ಮಾಡಿದ್ದಾರೆ. ಅವರ ಈ ನಿರ್ಧಾರ ಅವರಿಗೆ ದೊಡ್ಡಮಟ್ಟದ ಲಾಭವನ್ನೇ ತಂದುಕೊಟ್ಟಿದೆ. ತನ್ನ ಹೊಸ ಕೆಲಸದಿಂದ ದಿನಕ್ಕೆ 14 ಲಕ್ಷ ರೂ. ಸಂಪಾದಿಸ್ತಾ ಇದ್ದಾರೆ.

Crab Business Woman Quites Flight Attendent Job Joins Family Business Now Earns 14 45 Lakh Per Day

ಏಡಿ ಬ್ಯುಸಿನೆಸ್ ನಲ್ಲಿ ಲಾಭ

Vietnam.vn ವರದಿಯ ಪ್ರಕಾರ, ಫ್ಲೈಟ್ ಅಟೆಂಡೆಂಟ್ ಆಗಿ ಕೆಲಸ ಮಾಡ್ತಾ ಇದ್ದ ಕ್ಸಿಯಾವೊ ಚೆನ್ ಕೆಲಸ ಬಿಟ್ಟು ಊರಿಗೆ ವಾಪಾಸಾಗುವ ನಿರ್ಧಾರ ಮಾಡುತ್ತಾರೆ. ಇಲ್ಲಿಗೆ ಬಂದು ಏಡಿ ಮಾರಾಟ ಮಾಡುವ ಕೆಲಸಕ್ಕೆ ಕೈ ಹಾಕುತ್ತಾರೆ. ಏಡಿಗಳನ್ನು ಆರಿಸಿ ತರುವುದು, ಗ್ರಾಹಕರ ಆರ್ಡರ್​ ಪ್ಯಾಕ್ ಮಾಡುವುದು, ಡೆಲಿವೆರಿ ಮಾಡಿಸುವುದು ಹೀಗೆ ಈ ಕೆಲಸದಲ್ಲಿಯೇ ಫುಲ್ ಬ್ಯುಸಿಯಾಗಿ ಬಿಡುತ್ತಾರೆ. ಅಸಲಿಗೆ ಚೆನ್ ತಾಯಿ ಏಡಿ ಬ್ಯುಸಿನೆಸ್ ಮಾಡುತ್ತಾ ಇದ್ದರು. ವರ ವ್ಯವಹಾರ ತುಂಬಾ ಚೆನ್ನಾಗಿ ನಡೀತಾ ಇತ್ತು ಕೂಡಾ. ಬ್ಯುಸಿನೆಸ್ ಜಾಸ್ತಿ ಆಗ್ತಾ ಇದ್ದ ಹಾಗೆ ತಾಯಿ ಒಬ್ಬರಿಗೆ ಈ ವ್ಯವಹಾರ ಸಂಭಾಳಿಸುವುದು ಕಷ್ಟವಾಗುತ್ತದೆ. ಈ ಕಾರಣದಿಂದ ಮಗಳು ಚೆನ್ ತನ್ನ ಕೆಲಸ ಬಿಟ್ಟು ತಾಯಿಯ ಬ್ಯುಸಿನೆಸ್ ಗೆ ನೆರವಾಗಲು ಮುಂದಾಗುತ್ತಾರೆ. ಕೆಲಸ ಬಿಟ್ಟು ಚೀನಾದ ಝೆಜಿಯಾಂಗ್ ಪ್ರಾಂತ್ಯದ ಕರಾವಳಿ ನಗರವಾದ ನಿಂಗ್ಬೊಗೆ ವಾಪಾಸ್ ಬರುತ್ತಾರೆ.

ಒಂದೇ ದಿನದಲ್ಲಿ 14.45 ಸಂಪಾದನೆ

ವರದಿಗಳ ಪ್ರಕಾರ, ಚೆನ್ ಅವರ ಫ್ಯಾಮಿಲಿ ಬ್ಯುಸಿನೆಸ್ ನಲ್ಲಿ ಹಬ್ಬದ ದಿನಗಳಲ್ಲಿ ಪ್ರತಿದಿನ 1 ಲಕ್ಷ ಯುವಾನ್ ಅಂದರೆ ಸುಮಾರು 14.45 ಲಕ್ಷ ರೂಪಾಯಿಗಿಂತ ಹೆಚ್ಚು ವ್ಯಾಪಾರ ಆಗುತ್ತದೆ. ಆದರೆ ಏಡಿಗೆ ಬೇಡಿಕೆ ಹೆಚ್ಚುತ್ತಾ ಇದ್ದ ಹಾಗೆ ಉತ್ತಮ ಗುಣಮಟ್ಟದ ಹಸಿರು ಏಡಿಗಳ ಸಮರ್ಪಕ ಪೂರೈಕೆ ಕಡಿಮೆಯಾಗುತ್ತದೆ. ಇದು ಚೆನ್​ ಗೆ ಸ್ವಲ್ಪ ಚ್ಯಾಲೆಂಜಿಂಗ್ ಆಗಿ ಇರುತ್ತದೆ. ಅವರು ಒಂದು ನಿರ್ಧಾರಕ್ಕೆ ಬರುತ್ತಾರೆ. ಗ್ರಾಹಕರಿಗೆ ಕಳಪೆ ಗುಣಮಟ್ಟದ ಸರಕುಗಳನ್ನು ಕಳುಹಿಸಿದರೆ ಪ್ರಯೋಜನವಿಲ್ಲ, ಹಾಗಾಗಿ ಅಗತ್ಯಕ್ಕಿಂತ ಹೆಚ್ಚಿನ ಆರ್ಡರ್ ತೆಗೆದುಕೊಳ್ಳುವುದು ಬೇಡ ಎಂದು ತೀರ್ಮಾನಿಸುತ್ತಾರೆ. ಪೂರೈಕೆ ಕಡಿಮೆಯಾದಾಗ, ಉತ್ಪನ್ನದ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಮಾರಾಟ ಕೂಡಾ ಕಡಿಮೆ ಮಾಡುತ್ತಾರೆ.

ಆನ್ ಲೈನ್ ನಲ್ಲಿಯೂ ಆರ್ಡರ್

ಫ್ಲೈಟ್ ಅಟೆಂಡೆಂಟ್ ಕೆಲಸ ಬಿಟ್ಟ ನಂತರ, ಚೆನ್ ಏಡಿ ವ್ಯವಹಾರವನ್ನು ಇನ್ನಷ್ಟು ಬೆಳೆಸುವ ಉದ್ದೇಶದಿಂದ ಸೋಶಿಯಲ್ ಮಿಡಿಯಾ ಸಹಾಯ ತೆಗೆದುಕೊಳ್ಳುತ್ತಾರೆ. ಏಡಿ ಆರಿಸುವಾಗ, ಪ್ಯಾಕ್ ಮಾಡಿ ಡೆಲಿವೆರಿಯಾಗುವವರೆಗಿನ ಪ್ರಕ್ರಿಯೆಯ ಸಣ್ಣ ಸಣ್ಣ ವಿಡಿಯೋಗಳನ್ನು ಮಾಡುತ್ತಾರೆ. ಈ ವಿಡಿಯೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡುತ್ತಾರೆ. ಕೊಳದ ಬಳಿ ಹೆಚ್ಚು ಸಮಯ ಕಳೆಯುತ್ತಾರೆ. ಫ್ಲೈಟ್ ಅಟೆಂಡೆಂಟ್ ಆಗಿದ್ದಾ ಪ್ರಯಾಣಿಕರ ಜೊತೆ ನಡೆಸುತ್ತಿದ್ದ ಮಾತುಕತೆಯ ಅನುಭವ ಇಲ್ಲಿ ಅವರಿಗೆ ಸಹಾಯವಾಗುತ್ತದೆ. ತಮ್ಮ ವ್ಯೂವರ್ಸ್ ಜೊತೆ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಜನರಿಗೆ ಇವರ ವೀಡಿಯೊ ಇಷ್ಟವಾಗುತ್ತದೆ. ಆನ್ ಲೈನ್ ಆರ್ಡರ್ ಹೆಚ್ಚಾಗುತ್ತದೆ.

ಡಬಲ್ ಬ್ಯುಸಿನೆಸ್ ಡಬಲ್ ಲಾಭ

ಆನ್ ಲೈನ್ ವೀಡಿಯೊಗಳು ಮತ್ತು ಸೋಶಿಯಲ್ ಮಿಡಿಯಾ ಸಹಾಯದಿಂದ ಇವರ ಬ್ಯುಸಿನೆಸ್ ಬೆಳೆಯುತ್ತಾ ಹೋಗುತ್ತದೆ. ಈ ಬ್ಯುಸಿನೆಸ್ ಈಗ ಲೋಕಲ್ ಆಗ ಉಳಿಯುವುದಿಲ್ಲ. ಬೇರೆ ಬೇರೆ ಕಡೆಗಳಿಂದ ಜನ ಬಂದು ಇವರ ಪ್ರಾಡೆಕ್ಟ್​ ಬಗ್ಗೆ ತಿಳಿಯುವ ಯತ್ನ ಮಾಡುತ್ತಾರೆ. ಸಾಂಪ್ರದಾಯಿಕ ರೀತಿಯಲ್ಲಿ ಮಾರಾಟ ಮಾಡುವುದರ ಜೊತೆಗೆ, ಅವರು ಇಂಟರ್ ನೆಟ್ ನಲ್ಲಿ ಏಡಿಗಳ ಮಾಹಿತಿ ಮತ್ತು ವೀಡಿಯೊಗಳನ್ನು ಶೇರ್ ಮಾಡುವ ಮೂಲಕ ಗ್ರಾಹಕರನ್ನು ಹೆಚ್ಚಿಸಿಕೊಳ್ಳುತ್ತಾರೆ. ಇಲ್ಲಿನ ಮಿಡ್ ಆಟಂ ಫೆಸಟಿವೆಲ್ ಸಮಯದಲ್ಲಿ ಏಡಿಗೆ ಬೇಡಿಕೆ ಹೆಚ್ಚು. ಹಾಗಾಗಿ ಇವರಿಗೆ ಬರುವ ಆರ್ಡರ್ ಕೂಡಾ ಹೆಚ್ಚಾಗುತ್ತದೆ. ಈ ಸಮಯದಲ್ಲಿ, ಚೆನ್ ಮತ್ತು ಅವರ ತಂಡ ಎರಡು ಪಟ್ಟು ಕೆಲಸ ಮಾಡಬೇಕಾಗುತ್ತದೆ. ಲಾಭ ಕೂಡಾ ಡಬಲ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+