ದೀರ್ಘಾವಧಿ, ಗಂಭೀರ ಕೊರೊನಾದಿಂದ ಗುಣಮುಖರಾದವರಲ್ಲಿ ಅತಿ ಹೆಚ್ಚು ಪ್ರತಿಕಾಯ ಸೃಷ್ಟಿ

ನವದೆಹಲಿ, ಆಗಸ್ಟ್ 23: ದೀರ್ಘಾವಧಿ ಹಾಗೂ ಗಂಭೀರವಾಗಿ ಕೊರೊನಾ ಸೋಂಕಿಗೆ ತುತ್ತಾಗಿ ಗುಣಮುಖರಾದವರಲ್ಲಿ ಸೋಂಕಿನ ವಿರುದ್ಧ ಹೋರಾಡಲು ಅತಿ ಹೆಚ್ಚಿನ ಪ್ರತಿಕಾಯಗಳನ್ನು ಹೊಂದಿರುವುದಾಗಿ ಈಚಿನ ಸಂಶೋಧನೆಯೊಂದು ತಿಳಿಸಿದೆ.

ರಟ್ಗರ್ಸ್ ವಿಶ್ವವಿದ್ಯಾಲಯದ ನೇತೃತ್ವದಲ್ಲಿ ನಡೆದ ಅಧ್ಯಯನದಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ. ಕೊರೊನಾ ಸೋಂಕು ಪತ್ತೆಯಾದ ಆರಂಭಿಕ ಹಂತದಿಂದಲೂ ಈ ವಿಶ್ಲೇಷಣೆಯನ್ನು ನಡೆಸಲಾಗಿದೆ. 548 ಆರೋಗ್ಯ ಕಾರ್ಯಕರ್ತರು ಹಾಗೂ 283 ಇತರರನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. 93 ಮಂದಿಯಲ್ಲಿ 24 ಮಂದಿಯು ಸೋಂಕಿನ ಗಂಭೀರ ಪರಿಣಾಮವನ್ನು ಎದುರಿದ್ದರು.

14 ಮಂದಿಗೆ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಮೂರನೇ ಒಂದು ಭಾಗದಷ್ಟು ಮಂದಿಗೆ ಸುಸ್ತು, ಉಸಿರಾಟದಲ್ಲಿ ತೊಂದರೆ, ರುಚಿ ಕಳೆದುಕೊಳ್ಳುವುದು... ಇಂಥ ಲಕ್ಷಣಗಳು ತಿಂಗಳವರೆಗೂ ಕಾಣಿಸಿಕೊಳ್ಳುವ ಲಕ್ಷಣಗಳಾಗಿವೆ ಎಂದು ಅಧ್ಯಯನ ತಿಳಿಸಿದೆ. ಹೋಲಿಕೆಯಲ್ಲಿ, ದೀರ್ಘಾವಧಿ, ಗಂಭೀರ ಕೊರೊನಾದಿಂದ ಗುಣಮುಖರಾದವರ ದೇಹದಲ್ಲಿ ಸೋಂಕಿನ ವಿರುದ್ಧ ಹೋರಾಡಲು ಅತಿ ಹೆಚ್ಚಿನ ಪ್ರತಿಕಾಯ ಸೃಷ್ಟಿಯಾಗಿರುವುದಾಗಿ ಅಧ್ಯಯನ ತಿಳಿಸಿದೆ. ಮುಂದೆ ಓದಿ...

ವೈವಿಧ್ಯಮಯ ಜನಸಂಖ್ಯೆಯಲ್ಲಿ ಕೊರೊನಾ ನಿರ್ಣಾಯಕ ಹಂತಗಳು

ವೈವಿಧ್ಯಮಯ ಜನಸಂಖ್ಯೆಯಲ್ಲಿ ಕೊರೊನಾ ನಿರ್ಣಾಯಕ ಹಂತಗಳು

ಅಧ್ಯಯನಕ್ಕೆ ಒಳಪಡಿಸಿದ್ದ 10% ಮಂದಿಯಲ್ಲಿ ನಾಲ್ಕು ತಿಂಗಳವರೆಗೂ ಕೊರೊನಾ ಪರಿಣಾಮ ಮುಂದುವರೆದಿರುವುದು ಕಂಡುಬಂದಿದೆ. 'ದಿ ಜರ್ನಲ್ ಆಫ್ ಇನ್ಫೆಕ್ಷಿಯಸ್ ಡಿಸೀಸಸ್'ನಲ್ಲಿಈ ಅಧ್ಯಯನವನ್ನು ಪ್ರಕಟಿಸಲಾಗಿದೆ. 'ವೈವಿಧ್ಯಮಯ ಜನಸಂಖ್ಯೆಯಲ್ಲಿ ಕೊರೊನಾ ಸೋಂಕಿನ ಬದಲಾವಣೆ ಹಾಗೂ ನಿರ್ಣಾಯಕ ಹಂತಗಳು; ನಿರೀಕ್ಷಿತ ಸಮೂಹ ಅಧ್ಯಯನದ ಆರು ತಿಂಗಳ ಮೌಲ್ಯಮಾಪನ' ಎಂಬ ವಿಷಯದಲ್ಲಿ ಅಧ್ಯಯನವನ್ನು ಪ್ರಕಟಿಸಲಾಗಿದೆ.

ತೀವ್ರ ರೋಗಲಕ್ಷಣ ಹೊಂದಿದವರಲ್ಲಿ ಅತಿ ಹೆಚ್ಚು ಪ್ರತಿಕಾಯ

ತೀವ್ರ ರೋಗಲಕ್ಷಣ ಹೊಂದಿದವರಲ್ಲಿ ಅತಿ ಹೆಚ್ಚು ಪ್ರತಿಕಾಯ

ಅಧ್ಯಯನದಲ್ಲಿ, ತೀವ್ರವಾದ ರೋಗಲಕ್ಷಣಗಳನ್ನು ಹೊಂದಿದ್ದ ಸುಮಾರು 96% ಮಂದಿಯಲ್ಲಿ ಇಮ್ಯುನೊಗ್ಲೋಬಿನ್ ಜಿ ಪ್ರತಿಕಾಯ ಹೆಚ್ಚಾಗಿರುವುದು ಕಂಡುಬಂದಿದೆ. ಸೌಮ್ಯ ಸ್ವಭಾವದ ಸೋಂಕಿನ ಲಕ್ಷಣವಿದ್ದವರಲ್ಲಿ 89% ಹಾಗೂ ಲಕ್ಷಣರಹಿತರಾದವರಲ್ಲಿ 79% ಹೆಚ್ಚಿನ ಪ್ರತಿಕಾಯ ಸೃಷ್ಟಿಯಾಗಿರುವುದು ಕಂಡುಬಂದಿದೆ. ಇದರೊಂದಿಗೆ, ಕೊರೊನಾ ಲಸಿಕೆ ಪ್ರತಿರಕ್ಷಣೆಯನ್ನು ಹೆಚ್ಚಿಸಲಿದೆ ಹಾಗೂ ದೀರ್ಘಕಾಲದ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ ಎಂದು ಸಹ ಲೇಖಕ ಡೇನಿಯಲ್ ಬಿ ಹಾರ್ಟನ್ ಉಲ್ಲೇಖಿಸಿದ್ದಾರೆ.

ಕಾಲಾನಂತರ ಹೆಚ್ಚಿನ ಪ್ರತಿಕಾಯ ಸೃಷ್ಟಿ

ಕಾಲಾನಂತರ ಹೆಚ್ಚಿನ ಪ್ರತಿಕಾಯ ಸೃಷ್ಟಿ

ಗಮನಾರ್ಹವಾಗಿ, ನಿರಂತರ ರೋಗಲಕ್ಷಣಗಳನ್ನು ಹೊಂದಿರುವವರು ಕಾಲಾನಂತರ ಹೆಚ್ಚಿನ ಪ್ರತಿಕಾಯ ಮಟ್ಟವನ್ನು ಹೊಂದಿದ್ದಾರೆ. ಕೊರೊನಾ ಲಸಿಕೆ ಈ ರೋಗನಿರೋಧಕ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಹಗೂ ಕೆಲವೊಮ್ಮೆ ದೀರ್ಘಕಾಲದ ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂಬ ಅಂಶ ಇತರೆ ಸಂಶೋಧನೆಯಿಂದಲೂ ದೊರೆತಿದೆ ಎಂದು ಲೇಖಕರು ತಿಳಿಸಿದ್ದಾರೆ. 'ಕಾಲಾನಂತರ ಪ್ರತಿಕಾಯ ಮಟ್ಟ ಕಡಿಮೆಯಾಗುವುದು ಸಹಜ. ಅದೇನೇ ಇದ್ದರೂ ಸೋಂಕಿನಿಂದ ಗುಣಮುಖರಾದ ನಂತರ ದೇಹದಲ್ಲಿ ಉತ್ಪತ್ತಿಯಾಗುವ ಪ್ರತಿಕಾಯಗಳು ಮರು ಸೋಂಕಿನ ವಿರುದ್ಧ ಹೋರಾಡಲು ದೀರ್ಘಾವಧಿ ರಕ್ಷಣೆ ನೀಡುತ್ತದೆ' ಎಂದು ಲೇಖಕಿ ಎಮಿಲಿ ಎಸ್ ಬ್ಯಾರೆಟ್ ತಿಳಿಸಿದ್ದಾರೆ.

ಮಾನವನ ಪ್ರತಿಕಾಯದಿಂದ ಸೋಂಕಿನ ವಿರುದ್ಧ ಔಷಧ

ಮಾನವನ ಪ್ರತಿಕಾಯದಿಂದ ಸೋಂಕಿನ ವಿರುದ್ಧ ಔಷಧ

ಈ ಮಧ್ಯೆ ಸೇಂಟ್ ಲೂಯಿಸ್‌ನಲ್ಲಿರುವ ವಾಷಿಂಗ್ಟನ್ ಯೂನಿವರ್ಸಿಟಿ ಆಫ್ ಮೆಡಿಸಿನ್‌ ಕೊರೊನಾ ರೂಪಾಂತರದ ವಿರುದ್ಧ ಹೆಚ್ಚು ರಕ್ಷಣಾತ್ಮಕವಾಗಿರುವ ಪ್ರತಿಕಾಯವನ್ನು ಗುರುತಿಸಿದೆ. ಕೊರೊನಾ ತಡೆಗಟ್ಟಲು ಹಾಗೂ ಚಿಕಿತ್ಸೆ ನೀಡಲು ಮಾನವನ ಪ್ರತಿಕಾಯಗಳನ್ನೇ ಬಳಸಿ ತಯಾರಿಸಿದ ಮೊದಲ ಔಷಧ ಬಳಕೆಗೆ ಬ್ರಿನಟ್‌ನ ಔಷಧಿಗಳ ನಿಯಂತ್ರಕ ಶುಕ್ರವಾರ ಅನುಮೋದನೆ ನೀಡಿದೆ. ಮೊದಲ ಮೋನೊಕ್ಲೋನಲ್ ಆಂಟಿಬಾಡಿ ಸಂಯೋಜನೆಯ ಉತ್ಪನ್ನ 'ರೋನಾಪ್ರೀವ್'ಗೆ ಔಷಧ ಹಾಗೂ ಆರೋಗ್ಯ ರಕ್ಷಣಾ ಉತ್ಪನ್ನಗಳ ನಿಯಂತ್ರಣ ಸಂಸ್ಥೆ ಅನುಮೋದನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+