ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿತ ತಾಯಿಯ ಎದೆ ಹಾಲಿನಲ್ಲಿ ಕೊರೊನಾ ವಿರುದ್ಧದ ಪ್ರತಿಕಾಯ ಪತ್ತೆ

|
Google Oneindia Kannada News

ಕೊರೊನಾ ಸೋಂಕಿತ ತಾಯಿ ಅಥವಾ ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಲಸಿಕೆ ಪಡೆದಿರುವ ತಾಯಿಯ ಎದೆ ಹಾಲಿನಲ್ಲಿ ಕೊರೊನಾ ವಿರುದ್ಧ ಹೋರಾಡುವ ಪ್ರತಿಕಾಯಗಳು ಪತ್ತೆಯಾಗಿವೆ.

ಜರ್ನಲ್ ಜಮಾ ಪೀಡಿಯಾಟ್ರಿಕ್ಸ್‌ನಲ್ಲಿ ಇತ್ತೀಚೆಗೆ ಪ್ರಕಟವಾಗಿರುವ ಅಧ್ಯಯನವು, ಎದೆ ಹಾಲಿನ ಪ್ರತಿಕಾಯಗಳು ಚಿಕ್ಕ ಮಕ್ಕಳಿಗೆ ಕೋವಿಡ್‌ ವಿರುದ್ಧ ರಕ್ಷಣೆ ನೀಡಬಹುದು ಎಂದು ಸೂಚಿಸಿಲ್ಲ ಅಂತ ಹೇಳಿದೆ.

 ಕೊರೊನಾ ಕಾಲದಲ್ಲಿ ಎದೆಹಾಲುಣಿಸುವುದರ ಕುರಿತ ಸತ್ಯ ಮಿಥ್ಯಗಳು: ಡಾ. ರವ್ನೀತ್ ಜೋಶಿ ಕೊರೊನಾ ಕಾಲದಲ್ಲಿ ಎದೆಹಾಲುಣಿಸುವುದರ ಕುರಿತ ಸತ್ಯ ಮಿಥ್ಯಗಳು: ಡಾ. ರವ್ನೀತ್ ಜೋಶಿ

ಎದೆ ಹಾಲಿನಲ್ಲಿರುವ ಪ್ರತಿಕಾಯಗಳ ಮಟ್ಟವನ್ನು ನಿರ್ಧರಿಸಲು 47 ಸೋಂಕಿತರು ಹಾಗೂ 30 ಲಸಿಕೆ ಪಡೆದಿದ್ದ ಒಟ್ಟು 77 ಮಂದಿ ತಾಯಂದಿರಿಂದ ಮಾದರಿಗಳನ್ನು ಸಂಗ್ರಹಿಸಿದ್ದ ಸಂಶೋಧಕರು ಈ ವರದಿಯನ್ನು ನೀಡಿದ್ದಾರೆ.

Covid Antibodies Found In Breast Milk Of Vaccinated, Infected Moms

ತಟಸ್ಥಗೊಳಿಸುವ ಪ್ರತಿಕಾಯವು ಜೈವಿಕವಾಗಿ ಸಾಂಕ್ರಾಮಿಕ ಕಣದಿಂದ ಜೀವಕೋಶವನ್ನು ರಕ್ಷಿಸುತ್ತದೆ. ಪ್ರತಿಕಾಯ ಸಾಂದ್ರತೆಯನ್ನು ಅಳೆಯುವುದು ಒಂದು ವಿಷಯ. ಆದರೆ ಪ್ರತಿಕಾಯಗಳು ಕ್ರಿಯಾತ್ಮಕವಾಗಿದ್ದು, SARS-CoV-2 ವೈರಸ್ ಅನ್ನು ತಟಸ್ಥಗೊಳಿಸಬಹುದು ಎಂದು ಅಮೆರಿಕದ ರೋಚೆಸ್ಟರ್ ವೈದ್ಯಕೀಯ ಕೇಂದ್ರ ವಿಶ್ವವಿದ್ಯಾಲಯದ (URMC) ಸಹಾಯಕ ಪ್ರಾಧ್ಯಾಪಕ, ಅಧ್ಯಯನದ ಸಹ-ಲೇಖಕ ಬ್ರಿಡ್ಜೆಟ್ ಯಂಗ್ ಹೇಳಿದ್ದಾರೆ.

ಈ ಕೆಲಸದಲ್ಲಿನ ಒಂದು ರೋಮಾಂಚಕಾರಿ ಸಂಶೋಧನೆಯೆಂದರೆ ಕೋವಿಡ್‌ ಸೋಂಕಿತ ಇಬ್ಬರು ತಾಯಂದಿರಿಂದ ಎದೆ ಹಾಲು ಹಾಗೂ ವ್ಯಾಕ್ಸಿನ್‌ ಪಡೆದಿದ್ದ ತಾಯಂದಿರಿಂದ ಈ ಸಕ್ರಿಯ ಪ್ರತಿಕಾಯಗಳು ವೈರಸ್ ಅನ್ನು ತಟಸ್ಥಗೊಳಿಸಲು ಸಮರ್ಥವಾಗಿವೆ ಎಂದು ಯಂಗ್ ತಿಳಿಸಿದ್ದಾರೆ.

ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಕೊರೊನಾ ಸೋಂಕಿತ ತಾಯಂದಿರ ಎದೆ ಹಾಲಿನಲ್ಲಿ ವೈರಸ್ ವಿರುದ್ಧ ಹೆಚ್ಚಿನ ಮಟ್ಟದ ಇಮ್ಯುನೊಗ್ಲಾಬ್ಯುಲಿನ್ A (IgA) ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ.

ಲಸಿಕೆ ಪಡೆದವರಲ್ಲೂ ರೋಗನಿರೋಧಕ ಶಕ್ತಿಯು ದೃಢವಾದ ಇಮ್ಯುನೊಗ್ಲಾಬ್ಯುಲಿನ್ G (IgG) ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ. ಎರಡೂ ಪ್ರತಿಕಾಯಗಳು SARS-CoV-2ಅನ್ನು ತಟಸ್ಥಗೊಳಿಸುವಿಕೆಯನ್ನು ಒದಗಿಸಿವೆ. ಮೊದಲ ಬಾರಿಗೆ IgA ಮತ್ತು IgG ಪ್ರತಿಕಾಯಗಳಿಗೆ ಇಂತಹ ಪುರಾವೆಗಳನ್ನು ಕಂಡುಹಿಡಿಯಲಾಗಿದೆ.

ಹಾಗೆಯೇ ಕೊರೊನಾ ಸೋಂಕಿತ ತಾಯಿ ಮಗುವಿಗೆ ಎದೆಹಾಲು ಉಣಿಸಬಹುದೇ ಎನ್ನುವ ಗೊಂದಲೂ ಸಾಕಷ್ಟು ಮಂದಿಯಲ್ಲಿದೆ. ಎದೆಹಾಲಿನಲ್ಲಿ ಪ್ರತಿಕಾಯಗಳು ದೊಡ್ಡ ಪ್ರಮಾಣದಲ್ಲಿ ಇರುವುದರಿಂದ ಶಿಶುಗಳು ಕೊರೊನಾ ತುತ್ತಾಗುವುದನ್ನು ತಪ್ಪಿಸಬಹುದಾಗಿದೆ ಎಂದು ಹೇಳಿದ್ದಾರೆ.

ಇದರರ್ಥ ತಾಯಂದಿರು ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದೆ ಎದೆಹಾಲು ಉಣಿಸಬೇಕು ಎಂಬುದಲ್ಲ, ಒಂದೊಮ್ಮೆ ಕೊರೊನಾದಿಂದ ತಾಯಂದಿರು ಬಳಲುತ್ತಿದ್ದರೆ ಅಥವಾ ಕೊರೊನಾ ಬಂದಿರುವ ಶಂಕೆಗಳಿದ್ದಾಗ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಎದೆಹಾಲನ್ನು ಉಣಿಸುವುದು ಒಳಿತು.

ಎದೆಹಾಲು ಉಣಿಸುವ ತಾಯಿಯು ಸರಿಯಾಗಿ ಮಾಸ್ಕ್‌ನ್ನು ಧರಿಸಿರಬೇಕು, ಜತೆಗೆ ಮಗುವನ್ನು ಎತ್ತಿಕೊಳ್ಳುವ ಮುನ್ನ ಮುನ್ನ ಕೈಯನ್ನು ಶುದ್ಧವಾಗಿ ತೊಳೆದು ಸ್ಯಾನಿಟೈಸ್ ಮಾಡಿಕೊಳ್ಳಬೇಕು. ಹಾಗೆಯೇ ಹಾಲನ್ನು ಉಣಿಸುವ ಮೊದಲು ಎದೆಯನ್ನು ಕೂಡ ಶುದ್ಧವಾಗಿರಿಸಿಕೊಳ್ಳುವುದು ಒಳಿತು. ಇದಾದ ಬಳಿಕ ಮಗುವಿಗೆ ಸುರಕ್ಷಿತವಾಗಿ ಎದೆಹಾಲು ಉಣಿಸಬೇಕು. ತಾನು ಮುಟ್ಟಿರುವ ಎಲ್ಲಾ ಜಾಗಗಳನ್ನು ಕೂಡ ತಾಯಿ ಶುದ್ಧಗೊಳಿಸಬೇಕು.

ಶಿಶು ಅನಾರೋಗ್ಯಗೊಂಡಿದ್ದರೂ ಆಗ ನೀವು ಅದಕ್ಕೆ ಎದೆಹಾಲು ನೀಡಬೇಕು. ನೀವು ಕೋವಿಡ್-19 ಸೋಂಕಿಗೆ ಒಳಗಾಗಿದ್ದರೂ ಅಥವಾ ಇಲ್ಲದೆ ಇದ್ದರೂ ಆಗ ನೀವು ಹೀಗೆ ಮಾಡಲೇಬೇಕು.ಎದೆಹಾಲಿನಲ್ಲಿ ಪ್ರತಿಕಾಯಗಳು ದೊಡ್ಡ ಪ್ರಮಾಣದಲ್ಲಿ ಇರುವುದರಿಂದ ಶಿಶುಗಳು ಕೊರೊನಾ ತುತ್ತಾಗುವುದನ್ನು ತಪ್ಪಿಸಬಹುದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

English summary
Mothers who contract COVID-19 infection and those who get vaccinated against the disease produce breast milk with active SARS-CoV-2 antibodies, according to a study.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X