Tuesday Special: ಚೀನಾ To ಕರ್ನಾಟಕ; ಕೊರೊನಾ ಕಂಟಕದ ಸುತ್ತ ವಿಸ್ತೃತ ವರದಿ

ನವದೆಹಲಿ, ಮಾರ್ಚ್.17: ಚೀನಾದಿಂದ ಇಟಲಿ, ಇಟಲಿಯಿಂದ ಇರಾನ್, ಇರಾನ್ ಟು ಸೌದಿ ಅರೇಬಿಯಾ, ಸೌದಿ ಅರೇಬಿಯಾ ಟು ಇಂಡಿಯಾ ಹೀಗೆ ಕೊರೊನಾ ವೈರಸ್ ಎಂಬ ಮೇಡ್ ಇನ್ ಚೀನಾದ ಡೇಂಜರಸ್ ರೋಗಕ್ಕೆ ಇಂದು ವಿಶ್ವವೇ ನಲುಗಿ ಹೋಗಿದೆ.

Recommended Video

      Kalaburagi marks one more corona case but Sriramulu urges not to worry

      ಕರ್ನಾಟಕದಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆಗೆ ಮತ್ತಿಬ್ಬರಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆಯು 10ಕ್ಕೆ ಏರಿಕೆಯಾಗಿದೆ. ಈಗಾಗಲೇ ಕಲಬುರಗಿಯಲ್ಲಿ ಮಾರಕ ಸೋಂಕಿಗೆ 76 ವರ್ಷದ ಮಹ್ಮದ್ ಹುಸೇನ್ ಸಿದ್ದಿಕಿ ಬಲಿಯಾಗಿದ್ದಾರೆ.

      ಮಂಗಳವಾರದ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ 129 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈವರೆಗೆ ದೇಶದಲ್ಲಿ ಮೂವರು ಪ್ರಾಣ ಬಿಟ್ಟಿದ್ದಾರೆ. 13 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಇನ್ನು, ವಿಶ್ವದ ಅಂಕಿ-ಅಂಶಗಳ ಪ್ರಕಾರ 7,174 ಜನರು ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟಿದ್ದರೆ, 1,82,834 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಉಳಿದಂತೆ 79,885 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ವರದಿಯಾಗಿದೆ.

      ಮಂಗಳವಾರ ಎರಡು ಸೋಂಕಿತ ಪ್ರಕರಣಗಳು ಪತ್ತೆ

      ಮಂಗಳವಾರ ಎರಡು ಸೋಂಕಿತ ಪ್ರಕರಣಗಳು ಪತ್ತೆ

      ರಾಜ್ಯದಲ್ಲಿ ಮತ್ತೆರಡು #COVID19 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆಯಾಗಿ ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆ ಯಾಗಿದೆ. ಬೆಂಗಳೂರಿನಲ್ಲಿ ಇಂಗ್ಲೆಂಡ್ ಪ್ರವಾಸದಿಂದ ಹಿಂದಿರುಗಿದ ವ್ಯಕ್ತಿಯೊಬ್ಬರಿಗೆ ಹಾಗೂ ಕಲುಬುರಗಿಯಲ್ಲಿ (ಈ ಮೊದಲೇ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಸಂಪರ್ಕದಲ್ಲಿದ್ದ) 60 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಇವರಿಬ್ಬರು ಈಗಾಗಲೇ ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ, ಶೀಘ್ರ ಗುಣಮುಖರಾಗಲಿದ್ದಾರೆ ಎಂದು ವಿಶ್ವಾಸ ಹೊಂದಿದ್ದೇನೆ, ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ. ಇದರ ಮಧ್ಯೆ ಮೃತ ವೃದ್ಧನಿಗೆ ಚಿಕಿತ್ಸೆ ನೀಡಿದ ವೈದ್ಯನಲ್ಲೂ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ.

      ದೇವಸ್ಥಾನದಲ್ಲಿ ಕೆಮ್ಮಿದರೂ 108 ಗೆ ಕಾಲ್!

      ದೇವಸ್ಥಾನದಲ್ಲಿ ಕೆಮ್ಮಿದರೂ 108 ಗೆ ಕಾಲ್!

      ಕರ್ನಾಟಕದ ಪಾಲಿನ ವುಹಾನ್ ಆಗುತ್ತಿರುವ ಕಲಬುರಗಿಯಲ್ಲಿ ಜನರು ಆತಂಕದಲ್ಲೇ ದಿನ ಕಳೆಯುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ವೈರಸ್ ನಿಂದಾಗಿ ಈಗಾಗಲೇ ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಇದರ ನಡುವೆ ಮಂಗಳವಾರ ದೇವಸ್ಥಾನದಲ್ಲಿ ವ್ಯಕ್ತಿಯೊಬ್ಬ ಅತಿಯಾಗಿ ಕೆಮ್ಮಿದ್ದಕ್ಕೆ ಆತಂಕಗೊಂಡ ಸ್ಥಳೀಯರು 108ಗೆ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಆಂಬುಲೆನ್ಸ್ ನಲ್ಲಿ ವ್ಯಕ್ತಿಯನ್ನು ಜಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.

      ರಾಜಧಾನಿ ಎಂ.ಎಸ್.ಬಿಲ್ಡಿಂಗ್ ಪ್ರವೇಶ ನಿರ್ಬಂಧ

      ರಾಜಧಾನಿ ಎಂ.ಎಸ್.ಬಿಲ್ಡಿಂಗ್ ಪ್ರವೇಶ ನಿರ್ಬಂಧ

      ಬೆಂಗಳೂರಿನಲ್ಲಿರುವ ಎಂ.ಎಸ್. ಬಿಲ್ಡಿಂಗ್ ನಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಎಂ.ಎಸ್.ಬಿಲ್ಡಿಂಗ್ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ. ಐಡಿ ಕಾರ್ಡ್ ಗಳನ್ನು ಪರಿಶೀಲಿಸಿದ ನಂತರವಷ್ಟೇ ಸಿಬ್ಬಂದಿಗೆ ಹ್ಯಾಂಡ್ ಸ್ಯಾನಿಟೈಸರ್ ನೀಡಿ ಒಳಗೆ ಬಿಡಲಾಗುತ್ತಿದೆ.

      ಕೋಲಾರದಲ್ಲೂ ಕೊರೊನಾ ವೈರಸ್ ಕೋಲಾಹಲ

      ಕೋಲಾರದಲ್ಲೂ ಕೊರೊನಾ ವೈರಸ್ ಕೋಲಾಹಲ

      ಇನ್ನು, ಕೊರೊನಾ ವೈರಸ್ ಭೀತಿ ಕೋಲಾರಕ್ಕೂ ತಟ್ಟಿದೆ. ಜಿಲ್ಲೆಯಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜಿಲ್ಲೆಯಾದ್ಯಂತ ನಿಷೇಧಾಜ್ಞೆಯನ್ನು ಜಾರಿಗೊಳಿಸಿದ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಆದೇಶ ಹೊರಡಿಸಿದ್ದಾರೆ.

      ಕೊರೊನಾಗೆ ಭಾರತದಲ್ಲಿ ಮೂವರು ಬಲಿ

      ಕೊರೊನಾಗೆ ಭಾರತದಲ್ಲಿ ಮೂವರು ಬಲಿ

      ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದ 64 ವರ್ಷದ ವ್ಯಕ್ತಿ ಮಹಾರಾಷ್ಟ್ರದಲ್ಲಿ ಮೃತಪಟ್ಟಿದ್ದಾರೆ. ದುಬೈನಿಂದ ಭಾರತಕ್ಕೆ ವಾಪಸ್ ಆಗಿದ್ದ 64 ವರ್ಷದ ವ್ಯಕ್ತಿಗೆ ಕೋವಿಡ್-19 ಪಾಸಿಟಿವ್ ಇರುವುದು ಪತ್ತೆಯಾಗಿತ್ತು. ಮಹಾರಾಷ್ಟ್ರದ ಕಸ್ತೂರಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಇಂದು (ಮಂಗಳವಾರ) ಕೊನೆಯುಸಿರೆಳೆದಿದ್ದಾರೆ. ಡೆಡ್ಲಿ ಕೊರೊನಾ ವೈರಸ್ ಸೋಂಕಿನಿಂದಾಗಿ ಭಾರತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ 69 ವರ್ಷದ ಮಹಿಳೆ, ಕರ್ನಾಟಕದ ಕಲಬುರಗಿಯಲ್ಲಿ 76 ವರ್ಷದ ವ್ಯಕ್ತಿ ಮತ್ತು ಮಹಾರಾಷ್ಟ್ರದಲ್ಲಿ 64 ವರ್ಷದ ವ್ಯಕ್ತಿ ಮಾರಣಾಂತಿಕ ಕೊರೊನಾ ವೈರಸ್ ನಿಂದ ಮೃತಪಟ್ಟಿದ್ದಾರೆ.

      ಮಹಾರಾಷ್ಟ್ರದಲ್ಲಿ 39 ಮಂದಿಗೆ ಕೊರೊನಾ ಸೋಂಕು

      ಮಹಾರಾಷ್ಟ್ರದಲ್ಲಿ 39 ಮಂದಿಗೆ ಕೊರೊನಾ ಸೋಂಕು

      ಭಾರತದಲ್ಲಿ ಕೊರೊನಾ ಕೀಚಕನ ಕಪಿಮುಷ್ಟಿಗೆ 129ಕ್ಕೂ ಅಧಿಕ ಮಂದಿ ಸಿಲುಕಿರುವುದು ದೃಢಪಟ್ಟಿದೆ. ಸೋಂಕಿತರ ಸಂಪರ್ಕದಲ್ಲಿ ಇರುವವರ ವೈದ್ಯಕೀಯ ತಪಾಸಣೆಗೆ ತೀವ್ರ ಕಾರ್ಯಾಚರಣೆ ನಡೆಯುತ್ತಿದೆ. ಮಹಾರಾಷ್ಟ್ರ ಒಂದರಲ್ಲೇ 39ಕ್ಕೂ ಹೆಚ್ಚು ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದ್ದು ಸಾಕಷ್ಟು ಆತಂಕವನ್ನು ಸೃಷ್ಟಿಸಿದೆ. ಈ ಹಿನ್ನೆಲೆ ರಾಜ್ಯಕ್ಕೆ ರಾಜ್ಯವೇ ಸ್ತಬ್ಧಗೊಂಡಿದೆ. ಮುಂದಿನ ಮೂರು ದಿನಗಳ ಕಾಲ ಪೂಣೆಯಲ್ಲಿ ಅಂಗಡಿ-ಮುಂಗಟ್ಟುಗಳೆಲ್ಲ ಬಂದ್ ಮಾಡಲಾಗಿದೆ.

      ದೆಹಲಿಯ ಕೆಂಪುಕೋಟೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ

      ದೆಹಲಿಯ ಕೆಂಪುಕೋಟೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ

      ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರದ ಅಂಕಿ-ಅಂಶಗಳ ಪ್ರಕಾರ ಎಂಟು ಮಂದಿ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ಕೆಂಪುಕೋಟೆ ಮತ್ತು ಕುತುಬ್ ಮಿಲಾರ್ ಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

      ಕೊರೊನಾಗೆ ಬಲಿಯಾದವರ ಸಂಖ್ಯೆ 7 ಸಾವಿರಕ್ಕೂ ಅಧಿಕ

      ಕೊರೊನಾಗೆ ಬಲಿಯಾದವರ ಸಂಖ್ಯೆ 7 ಸಾವಿರಕ್ಕೂ ಅಧಿಕ

      ವಿಶ್ವದಾದ್ಯಂತ ಒಟ್ಟು 1,82,723 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಈ ಪೈಕಿ 7174 ಮಂದಿ ಮೃತಪಟ್ಟಿದ್ದಾರೆ. 79,883 ಮಂದಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+