• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಸಿದು ಬಿತ್ತು ಚೀನಾ ಜಿಡಿಪಿ! ‘ಡ್ರ್ಯಾಗನ್’ ಆರ್ಥಿಕತೆ ಸೋಲಿಗೆ ಕಾರಣವೇನು?

|
Google Oneindia Kannada News

ಜಗತ್ತಿನ 2ನೇ ಅತಿದೊಡ್ಡ ಆರ್ಥಿಕತೆ ಎಂಬ ಹೆಗ್ಗಳಿಕೆ ಪಡೆದಿರುವ ಚೀನಾ ಆರ್ಥಿಕತೆ ದಿಢೀರ್ ಕುಸಿತ ಕಂಡಿದೆ. ಇಡೀ ಜಗತ್ತು ಕೊರೊನಾ ಕೂಪದಲ್ಲಿ ಸಿಲುಕಿ ನಲುಗುವ ಸಂದರ್ಭದಲ್ಲಿ ಚೀನಾ ಆರ್ಥಿಕವಾಗಿ ಸೋತಿರಲಿಲ್ಲ. ಅಮೆರಿಕ ಸೇರಿದಂತೆ ಪ್ರಬಲ ದೇಶಗಳ ಆರ್ಥಿಕ ಸ್ಥಿತಿ ಕೊರೊನಾ ಕಾರಣಕ್ಕೆ ಕುಸಿತ ಕಂಡಾಗಲೂ ಚೀನಾದಲ್ಲಿ ಆರ್ಥಿಕಾಭಿವೃದ್ಧಿ ಮುಂದುವರಿದಿತ್ತು.

ಆದರೆ ಇದೀಗ 3ನೇ ತ್ರೈಮಾಸಿಕದಲ್ಲಿ ಚೀನಾ ಆರ್ಥಿಕತೆಗೆ ಬಹುದೊಡ್ಡ ಪೆಟ್ಟುಬಿದ್ದಿದ್ದು, ಶೇ. 4.9ರಷ್ಟು ಬೆಳವಣಿಗೆ ದಾಖಲಿಸಿದೆ. ಇದೇ ವರ್ಷದ 2ನೇ ತ್ರೈಮಾಸಿಕದಲ್ಲಿ ಚೀನಾ ಜಿಡಿಪಿ ಶೇ. 7.9ರಷ್ಟು ಬೆಳವಣಿಗೆ ಕಂಡಿತ್ತು. ಆದರೆ ದಿಢೀರ್ 3ನೇ ತ್ರೈಮಾಸಿಕದಲ್ಲಿ ಚೀನಾ ಆರ್ಥಿಕತೆ ಕುಸಿದಿದೆ. ಈ ಬೆಳವಣಿಗೆ ಚೀನಾ ಸರ್ಕಾರಕ್ಕೆ ಆಘಾತದ ಮೇಲೆ ಆಘಾತವನ್ನ ನೀಡಿದೆ.

ಈಗಾಗಲೇ ಪವರ್ ಕಟ್, ಇಂಧನ ಕೊರತೆ ಪರಿಣಾಮ ಚೀನಾ ನಲುಗಿಹೋಗಿತ್ತು. ಹೀಗಾಗಿ ಆರ್ಥಿಕ ಹಿನ್ನಡೆಯ ಬಗ್ಗೆ ತಜ್ಞರು ಮೊದಲೇ ಎಚ್ಚರಿಕೆ ನೀಡಿದ್ದರು. ಅದರಂತೆ ಇದೀಗ ಚೀನಾ ಜಿಡಿಪಿ ಭಾರಿ ಕುಸಿತ ಕಂಡಿದ್ದು, 'ಡ್ರ್ಯಾಗನ್‌'ನ ಚಿಂತೆಗೀಡು ಮಾಡಿದೆ.

ಇದಕ್ಕೆಲ್ಲಾ ಕಾರಣವೇನು?

ಇದಕ್ಕೆಲ್ಲಾ ಕಾರಣವೇನು?

ಚೀನಾ ಆರ್ಥಿಕತೆ ಕುಸಿಯಲು ಹಲವು ಕಾರಣಗಳಿವೆ. ಅದರಲ್ಲಿ ಪ್ರಮುಖವಾಗಿ ವಿದ್ಯುತ್ ಕೊರತೆ ಚೀನಿಯರ ಪಾಲಿಗೆ ದೊಡ್ಡ ಪೆಟ್ಟುಕೊಟ್ಟಿದೆ. ಚೀನಾದ 17 ಪ್ರಾಂತ್ಯಗಳಲ್ಲಿ ವಿದ್ಯುತ್ ಕೈಕೊಟ್ಟಿದೆ. ಕರೆಂಟ್ ಕೈಕೊಟ್ಟಿರುವ 17 ಪ್ರಾಂತ್ಯಗಳೇ ಚೀನಾ 'ಜಿಡಿಪಿ'ಗೆ ಆನೆ ಬಲ ತುಂಬುತ್ತಿವೆ. ಚೀನಾ ಜಿಡಿಪಿ ಪೈಕಿ ಶೇ.66ರಷ್ಟು ಉತ್ಪನ್ನಗಳು ಇದೇ ಪ್ರಾಂತ್ಯಗಳಲ್ಲಿ ತಯಾರಾಗುತ್ತವೆ. ಆದ್ರೆ ಚೀನಾ ಸರ್ಕಾರದ ಲೆಕ್ಕಾಚಾರ ತಲೆಕೆಳಗಾಗಿದ್ದು, ವಿದ್ಯುತ್ ಸಮಸ್ಯೆಗೆ ಪರಿಹಾರ ಹುಡುಕಲು ಡ್ರ್ಯಾಗನ್ ಪರದಾಡುತ್ತಿದೆ. ಇದರ ಜೊತೆಗೆ ಇಂಧನ ಕೊರತೆಯೂ ಚೀನಾ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡಿದೆ.

ಚೀನಾಗೆ ಕಲ್ಲಿದ್ದಲು ಕೈಕೊಟ್ಟಿತು

ಚೀನಾಗೆ ಕಲ್ಲಿದ್ದಲು ಕೈಕೊಟ್ಟಿತು

ಯಾವುದೇ ದೇಶದ ಆರ್ಥಿಕ ಬೆಳವಣಿಗೆ ಆ ದೇಶದ ಇಂಧನ ಶಕ್ತಿ ಮೇಲೆ ಅವಲಂಬಿತವಾಗಿರುತ್ತೆ. ಅದ್ರಲ್ಲೂ ಆಧುನಿಕ ಜಗತ್ತಿನಲ್ಲಿ ವಿದ್ಯುತ್ ಎಲ್ಲವನ್ನೂ ನಿಯಂತ್ರಿಸುತ್ತದೆ. ಈ ಕಾರಣಕ್ಕೆ ಪ್ರತಿಯೊಂದು ದೇಶವು ಕರೆಂಟ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಬಯಸುತ್ತದೆ. ಇಷ್ಟು ದಿನ ಚೀನಾ ಕೂಡ ಅದೇ ರೀತಿ ಬದುಕಿತ್ತು. ಚೀನಾದ ಒಟ್ಟು ವಿದ್ಯುತ್ ಪೈಕಿ ಶೇ. 60ರಷ್ಟು ವಿದ್ಯುತ್ ಕಲ್ಲಿದ್ದಲಿಂದ ಉತ್ಪಾದನೆ ಆಗಬೇಕಿದೆ. ಆದರೆ ಕಲ್ಲಿದ್ದಲ ಕೊರತೆ ಕೂಡ ಚೀನಾಗೆ ಹಿನ್ನಡೆ ತಂದಿದೆ ಎನ್ನುತ್ತಿದೆ ತಜ್ಞರ ತಂಡ. ಅಂದಹಾಗೆ ಇದಕ್ಕೆಲ್ಲಾ ಕಾರಣವಾಗಿದ್ದು ಆಸ್ಟ್ರೇಲಿಯಾ ಜೊತೆಗಿನ ಗುದ್ದಾಟ.

ಆಸ್ಟ್ರೇಲಿಯಾ ಜೊತೆ ಕಿರಿಕ್

ಆಸ್ಟ್ರೇಲಿಯಾ ಜೊತೆ ಕಿರಿಕ್

ಒಂದು ಕಡೆ 'ಕ್ವಾಡ್' ಹಾಗೇ ಮತ್ತೊಂದು ಕಡೆ 'ಆಕಸ್' ಒಕ್ಕೂಟಗಳನ್ನ ರಚಿಸಿಕೊಂಡು ಚೀನಾ ವಿರುದ್ಧ ಗುಟುರು ಹಾಕಲು ಆಸ್ಟ್ರೇಲಿಯಾ ಸಿದ್ಧವಾಗದೆ. ಆದರೆ ಚೀನಾ ಬಗ್ಗಿಸೋದು ಅಷ್ಟು ಸುಲಭದ ಮಾತಲ್ಲ. ಈ ಕಾರಣಕ್ಕೆ ಚೀನಾಗೆ ಪರೋಕ್ಷವಾಗಿ ಪೆಟ್ಟು ಕೊಡಲು ಆಸ್ಟ್ರೇಲಿಯಾ ಶ್ರಮಿಸುತ್ತಿದೆ..! ಆಸ್ಟ್ರೇಲಿಯಾ ಹಾಗೂ ಚೀನಾ ನಡುವಿನ ವ್ಯಾಪಾರ ಸಂಬಂಧ ಹಳಸಿ ಹೋಗಿದೆ. ಹೀಗಾಗಿ ಆಸ್ಟ್ರೇಲಿಯಾದಿಂದ ರಫ್ತು ಮಾಡುತ್ತಿದ್ದ ಕಲ್ಲಿದ್ದಲು ಕೂಡ ಚೀನಾಗೆ ಸಿಗುತ್ತಿಲ್ಲ. ಹೀಗಾಗಿ ಕಲ್ಲಿದ್ದಲ ಕೊರತೆ ಉಂಟಾಗಿ ವಿದ್ಯುತ್ ಸಮಸ್ಯೆ ಎದುರಾಗಿದೆ ಎನ್ನಲಾಗುತ್ತಿದೆ. ಹಾಗೇ ಮಾಲಿನ್ಯ ನಿಯಂತ್ರಣಕ್ಕಾಗಿ ಚೀನಾ ಕಲ್ಲಿದ್ದಲು ಬಳಕೆ ಮೇಲೆ ನಿರ್ಬಂಧ ಹೇರಿರುವ ಪರಿಣಾಮ ವಿದ್ಯುತ್ ಕೊರತೆ ಉಂಟಾಗಿದೆ ಅಂತಲೂ ಹೇಳಲಾಗ್ತಿದೆ. ಆದಷ್ಟು ಬೇಗ ಸಮಸ್ಯೆಯಿಂದ ಹೊರ ಬರುವುದಾಗಿ 'ಸ್ಟೇಟ್ ಗ್ರೀಡ್ ಕಾರ್ಪೊರೇಷನ್ ಆಫ್ ಚೀನಾ' ವಿಶ್ವಾಸ ವ್ಯಕ್ತಪಡಿಸಿದೆ.

ವಾಯುಮಾಲಿನ್ಯ ಕೂಡ ಮಾಯ..!

ವಾಯುಮಾಲಿನ್ಯ ಕೂಡ ಮಾಯ..!

10-15 ವರ್ಷದ ಹಿಂದೆ ಚೀನಾ ಎಂದರೆ ಮಾಲಿನ್ಯ, ಮಾಲಿನ್ಯ ಅಂದ್ರೆ ಚೀನಾ ಎಂದು ಜಗತ್ತು ಜರಿಯುತ್ತಿತ್ತು. ಆದರೆ ಈಗ ಇದೇ ಚೀನಾ ಪ್ರಕೃತಿ ಸೊಬಗಿನ ತವರಾಗಿದೆ. ಅದರಲ್ಲೂ ಚೀನಾ ರಾಜಧಾನಿ ಬೀಜಿಂಗ್ ಎಷ್ಟು ಸುಧಾರಿಸಿದೆ ಎಂದರೆ, ಕೆಲವೇ ವರ್ಷಗಳಲ್ಲಿ ಸಂಪೂರ್ಣ ವಾಯು ಮಾಲಿನ್ಯವನ್ನ ಸರ್ಕಾರ ಕಂಟ್ರೋಲ್‌ಗೆ ತಂದಿದೆ. ಮಾಲಿನ್ಯ ನಿಯಂತ್ರಣದ ಹಿಂದೆ ಹಲವು ಕಠಿಣ ಕ್ರಮಗಳು ಕೂಡ ಪ್ರಭಾವ ಬೀರಿವೆ. ಅದರಲ್ಲೂ ಕಾರ್ಬನ್ ಮತ್ತು ಸಿಎಫ್‌ಸಿ ಅನಿಲ ಹೊರಸೂಸುವ ಯಂತ್ರ, ಮತ್ತಿತರ ವಸ್ತುಗಳಿಗೆ ನಿಷೇಧ ಹೇರಿದ್ದು ಫಲ ನೀಡಿದೆ. ಇನ್ನು ಕೈಗಾರಿಕೆಗಳಿಗೆ ನೀಡಿದ ಖಡಕ್ ವಾರ್ನಿಂಗ್ ಕೂಡ ಚೀನಾದ ಮಾಲಿನ್ಯ ನಿಯಂತ್ರಿಸಿದೆ.

ಚೀನಾದಲ್ಲಿ ಬಡವರೇ ಇಲ್ಲ..!

ಚೀನಾದಲ್ಲಿ ಬಡವರೇ ಇಲ್ಲ..!

ಒಂದು ಕಾಲದಲ್ಲಿ ತೀವ್ರ ಬಡತನ ತುಂಬಿದ ರಾಷ್ಟ್ರವಾಗಿದ್ದ ಚೀನಾದಲ್ಲಿ ಈಗ ಬಡವರೇ ಇಲ್ಲ. ಪವರ್ ಫುಲ್ ರಾಷ್ಟ್ರಗಳೇ ಬಡತನದ ಸಂಕೋಲೆಯಲ್ಲಿ ನರಳುತ್ತಿರುವ ಸಂದರ್ಭದಲ್ಲಿ ಚೀನಾ ಮಾತ್ರ ಜಗತ್ತು ಮೆಚ್ಚುವ ಕೆಲಸ ಮಾಡಿದೆ. ಚೀನಾ ತನ್ನ ದೇಶದಲ್ಲಿದ್ದ 77 ಕೋಟಿ ಬಡವರನ್ನು ವಿಷ ವರ್ತುಲದಿಂದ ಹೊರತಂದಿದೆ. ಫೆಬ್ರವರಿ ತಿಂಗಳಲ್ಲಿ ಈ ವಿಚಾರ ಹಂಚಿಕೊಂಡಿದ್ದ ಚೀನಾ, ಸತತ 40 ವರ್ಷಗಳ ಪರಿಶ್ರಮದ ನಂತರ ಗುರಿ ತಲುಪುವಲ್ಲಿ ಯಶಸ್ವಿಯಾಗಿತ್ತು. ಇದರ ಜೊತೆಗೆ ಶ್ರೀಮಂತರ ಪಟ್ಟಿಯಲ್ಲೂ ಚೀನಾ ನಂಬರ್ 1 ಸ್ಥಾನ ಅಲಂಕರಿಸಿದೆ.

 ಅಲ್ಲಾಡಿ ಹೋಗಿದೆ ಅಮೆರಿಕ

ಅಲ್ಲಾಡಿ ಹೋಗಿದೆ ಅಮೆರಿಕ

ಕೊರೊನಾ ಕಾಟಕ್ಕೆ ಸಿಲುಕಿರುವ ಅಮೆರಿಕ ಅಲ್ಲಾಡಿ ಹೋಗಿದೆ. ಈವರೆಗೂ ಅಮೆರಿಕ ಕಂಡು, ಕೇಳರಿಯದ ಆರ್ಥಿಕ ಮುಗ್ಗಟ್ಟು ಎದುರಾಗಿದೆ. ಈ ಹೊತ್ತಲ್ಲೇ ಅಮೆರಿಕದ ಶತ್ರು ಚೀನಾ ಅಭಿವೃದ್ಧಿ ಹೊಂದುತ್ತಿರುವುದು ಸಹಜವಾಗಿ ಅಮೆರಿಕ ನಾಯಕರ ಕಣ್ಣು ಕೆಂಪಾಗಿಸಿದೆ. ಕೊರೊನಾ ವಕ್ಕರಿಸಿದ ಆರಂಭದಲ್ಲಿ ಚೀನಾ ಆರ್ಥಿಕ ಸ್ಥಿತಿ ತೀರಾ ಕುಸಿತ ಕಂಡಿತ್ತು. ಆದರೆ ಕೊರೊನಾ ಹೆಡೆಮುರಿ ಕಟ್ಟುವಲ್ಲಿ ಅಲ್ಲಿನ ಸರ್ಕಾರ ಯಶಸ್ವಿಯಾಗಿತ್ತು. ಬಳಿಕ ಚೀನಾ ಆರ್ಥಿಕ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. 2021ರ ಮೊದಲ ತ್ರೈಮಾಸಿಕದಲ್ಲೇ ಚೀನಾ ಜಿಡಿಪಿ ಶುಭಾರಂಭ ಮಾಡಿದೆ.

English summary
The worlds second largest economy weakens as GDP in Q3 declines to 4.9%.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X