Sim: ನಿಮ್ಮ ಹೆಸರಿನಲ್ಲಿ ಎಷ್ಟು 'ಮೊಬೈಲ್ ನಂಬರ್'ಗಳಿವೆ?: ಅದನ್ನು ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ಬೆಂಗಳೂರು, ಜೂನ್ 10: ಈಗ ತಂತ್ರಜ್ಞಾನ ಯುಗ ಎಲ್ಲರೂ ಫ್ಯಾನ್ಸಿ ಆಗಿ ಕಾಣಲು ಬಯಸುತ್ತಾರೆ. ಏನೇ ಆದರೂ ಡಿಫ್ರೆಂಟ್ ಆಗಿರಬೇಕು ಎಂಬ ಖಯಾಲಿ.. ಜನರು ತಮ್ಮನ್ನು ಬೇರೆಯವರು ಕೆಲ ವಿಚಾರಗಳಲ್ಲಿ ಗುರುತಿಸಲಿ ಎಂದು ಹೊಸ ಹೊಸ ಮೊಬೈಲ್ ಚೆಂಜ್ ಮಾಡುವುದು, ಇಷ್ಟೇ ಏಕೆ ತಾವು ಬಳೆಸುವ ಮೊಬೈಲ್ ಸಂಖ್ಯೆಯನ್ನು ಪದೇ ಪದೇ ನಂಬರ್ ಚೆಂಜ್ ಮಾಡುತ್ತಿರುತ್ತಾರೆ. ತಾವು ನೆಲದಲ್ಲಿಯೇ ತಿರುಗಾಡಿದರೂ ಸಹ ಸ್ಟಾರ್ ರೀತಿ ಪೋಸ್ ಹೊಡೆಯುವುದೇನು ಕಮ್ಮಿ ಇರುವುದಿಲ್ಲ.
ಈಗಂತೂ ನಿಮಗೆ ಬೇಕಾದ ಹಾಗೆ ಸಿಮ್ ನಂಬರ್ ಸಿಗುತ್ತದೆ. ಸಾಮಾನ್ಯವಾಗಿ ನಂಬರ್‌ಗಳು ಚೇಂಜ್ ಮಾಡಿದ್ದ ತಕ್ಷಣ ನಾವೆಲ್ಲಾ ಆ ಹಳೆಯ ಸಿಮ್ ನಂಬರ್ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಒಂದೊಮ್ಮೆ ನೀವು ಬಳಸಿದ ಸಿಮ್, ಈಗ ಬೇರೆ ವ್ಯಕ್ತಿ ಬಳಸುತ್ತಿದ್ದು, ಆತ ಏನಾದ್ರೂ ದುಷ್ಕೃತ್ಯ ಮಾಡಿದರೆ, ಪೊಲೀಸರು ನಿಮ್ಮ ಮನೆಯ ಬಾಗಿಲಿಗೆ ಬಂದಾಗಲೇ ನಿಮಗೆ ನಿಮ್ಮ ತಪ್ಪಿನ ಅರಿವು ಆಗುತ್ತದೆ.

ಆದ್ದರಿಂದ ನೀವು ಹೀಗಾದಂತೆ ಎಚ್ಚರಿಕೆ ವಹಿಸಬಹುದು. ನಿಮ್ಮ ಹೆಸರಿನಲ್ಲಿ (ಆಧಾರ್/ಓಟರ್‌ಐಡಿ) ಎಷ್ಟು ಮೊಬೈಲ್ ಸಿಮ್/ನಂಬರ್ ಗಳಿವೆ ಎಂದು ನೀವು ಪರಿಶೀಲಿಸಬಹುದು. ನಿಮಗೆ ಸಂಬಂಧ ಪಡದ, ಇಲ್ಲವೇ ನೀವು ಬಳಕೆ ಮಾಡದ ನಂಬರ್ ಆಕ್ಟಿವ್ ಇದ್ದರೆ ಅದನ್ನು ತಿಳಿಯಲು ಸಹ ಮಾಡಲು ಸರ್ಕಾರ ಅವಕಾಶ ಕಲ್ಪಿಸಿದೆ.
ಈ ಕುರಿತು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಸಾಮಾಜಿಕ ಜಾಲತಾಣ ಮೂಲಕ ಮಾಹಿತಿ ನೀಡಿದ್ದಾರೆ. ನಿಮ್ಮ ಹೆಸರಿನಲ್ಲಿ ಇತರರು ಮೊಬೈಲ್ ನಂಬರ್ ಬಳಕೆ ಮಾಡುತ್ತಿದ್ದರೆ ಅದನ್ನು ತಿಳಿಯಲು ಕೇಂದ್ರ ಸರ್ಕಾರ (WWW.SANCHARSAATHI.COM) ಹೊಸ ವ್ಯವಸ್ಥೆ ಮೂಲಕ ಅವಕಾಶ ಕಲ್ಪಿಸಿದೆ. ಹಾಗಾದರೆ ನೀವು ಏನು ಮಾಡಬೇಕು ಎಂದು ಈ ಕೆಳಗಿನ ವಿಧಾನಗಳ ಮೂಲಕ ತಿಳಿಯಿರಿ.

ಅನುಸರಿಸಬೇಕಾದ ಕ್ರಮಗಳು
* ಮೊದಲು ನೀವು Sancharsaathi.gov.in ವೆಬ್ ಪೋರ್ಟಲ್ ಗೆ ಭೇಟಿ ನೀಡಬೇಕು. ಸ್ವಲ್ಪ ಸ್ಕ್ರಾಲ್ ಡೌನ್ ಮಾಡಿದ ನಂತರ ಸಿಗುವ Know your mobile connection ಮೇಲೆ ಕ್ಲಿಕ್ ಮಾಡಬೇಕು.
* ನಂತರ ನಿಮ್ಮ ಹೆಸರಿನಲ್ಲಿ ಇರುವ ಮೊಬೈಲ್ ನಂಬರ್‌ಗಳನ್ನು ನಿಗದಿತ ಸ್ಥಳದಲ್ಲಿ ಹಾಕಬೇಕು. ನಂತರ ಕ್ಯಾಪ್ಚಾ ಹಾಕಿ ಬಳಿಕ ನಿಮ್ಮ ಸಂಖ್ಯೆಗೆ ಬರುವ OTP ಯನ್ನು ನಮೂದಿಸಿ ಲಾಗಿನ್ ಆಗಬೇಕು.
* ಅಲ್ಲಿ ಕಾಣುವ ಪರದೇ ಮೇಲೆ ನಿಮ್ಮದಲ್ಲದ ಸಂಖ್ಯೆಗಳು ಅಲ್ಲಿ ನಿಮಗೆ ಕಂಡು ಬಂದಲ್ಲಿ ಸರಿಯಾಗಿ ಖಚಿತಪಡಿಸಿಕೊಂಡು ನಿಮ್ಮದಲ್ಲದ ಮೊಬೈಲ್ ಸಂಖ್ಯೆಯ ಮುಂದೆ ಮಾರ್ಕ್ ಮಾಡಬೇಕು.
* ನಂತರ ಅಲ್ಲಿ ಕಾಣುವ Not My Number ಅಥವಾ Not Required ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ರಿಪೋರ್ಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.
* ನೀವು ರಿಪೋರ್ಟ್ ಮಾಡಿದ ನಂತರ ನಿಮಗೆ ಒಂದು ಟ್ರ್ಯಾಕಿಂಗ್ ಐಡಿ ನೀಡಲಾಗುತ್ತದೆ. ಆ ಸಂಖ್ಯೆಯ ಮೂಲಕ ನೀವು ರಿಪೋರ್ಟ್ ಮಾಡಿ ಸ್ಟೇಟಸ್ ಅನ್ನು ಪರಿಶೀಲಿಸಬಹುದಾಗಿದೆ.
* ಇನ್ನೂ ರಿಪೋರ್ಟ್ ಮಾಡಲಾದ ಮೊಬೈಲ್ ನಂಬರ್ ಗಳನ್ನು ರಿ-ವೇರಿಫಿಕೇಷನ್ ಮಾಡಬೇಕು. ನಂತರ ದೂರ ಸಂಪರ್ಕ ಇಲಾಖೆಯು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತದೆ.
ನಿಮ್ಮ ಹೆಸರಿನ್ಯಾಗ "ಎಷ್ಟ ಮೊಬೈಲ್ ನಂಬರ್ Active ಅದಾವ" ಅಂತ ನಿಮಗ ಗೊತ್ತೈತೇನ್ರೀ? 🤔
— Hubballi-Dharwad City Police. ಹು-ಧಾ ನಗರ ಪೊಲೀಸ್ (@compolhdc) May 25, 2023
ಗೊತ್ತಿಲ್ಲಂದ್ರ ಬರೇ ಒಂದ ನಿಮಿಷದಾಗ ಚೆಕ್ ಮಾಡಬಹುದ್ರೀ.! 😯
ಹೆಂಗ ಚೆಕ್ ಮಾಡುದು? ಅಕಸ್ಮಾತ್ ನಿಮ್ಮ ಹೆಸರನ್ಯಾಗ ಬ್ಯಾರೆ ನಂಬರ್ active ಇದ್ರ ಮುಂದೇನ ಮಾಡಬೇಕ? 🤔
ಹೇಳೇವಿ ನೋಡ್ರಿ ಇಲ್ಲೇ 👇#IPLPlayOffs #IPLFinals #sweetmangoes pic.twitter.com/OajEw6GqFq
ಡಿಜಿಟಲ್ ಯುಗದಲ್ಲಿ ಸುರಕ್ಷಿತವಾಗಿರಿ
ನೀವು ಹೀಗೆ ಮಾಡಿದಲ್ಲಿ ಸಂಭವನೀಯ ತೊಂದರೆ, ಕಾನೂನುಬಾಹಿರ ಕೃತ್ಯಗಳ ಜಾಲಕ್ಕೆ ನಿಮಗೆ ಗೊತ್ತಿಲ್ಲ ಸಿಲುಕಿ ಹಾಕಿಕೊಳ್ಳುವ ಸಾಧ್ಯತೆಗಳಿಂದ ತಪ್ಪಿಸಿಕೊಳ್ಳಬಹುದು. ಜೊತೆಗೆ ಬ್ಯಾಂಕ್ ಖಾತೆಗೆ ನಿಮ್ಮ ಮೊಬೈಲ್ ಸಂಖ್ಯೆ ಜೋಡಣೆ ಆಗಿರುತ್ತದೆ. ಅದರಿಂದಲೇ ಎದುರಾಗಬಹುದಾಗಿ ಕೆಲವೊಂದು ಡಿಜಿಟಲ್ ನಷ್ಟಗಳಿಂದ ನೀವು ದೂರ ಉಳಿಯಲು ಸಾಧ್ಯವಾಗುತ್ತದೆ.
ಮುಖ್ಯವಾಗಿ ಇಂದಿನ ಡಿಜಿಟಲ್ ಯುಗದಲ್ಲಿ ನೀವು ಹೆಚ್ಚು ಸುರಕ್ಷಿತವಾಗಿರುವ ಈ ಮೇಲಿನ ವಿಧಾನಗಳನ್ನು ಪರಿಶೀಲಿಸುವ ಅಗತ್ಯವಾಗಿರುತ್ತದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ರೇಣುಕು ಸುಕುಮಾರ್ ಅವರು ತಿಳಿಸಿದ್ದಾರೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications