ಈ ಚಿತ್ರದಲ್ಲಿ ಕಾಣುವ 10 ಪ್ರಾಣಿಗಳನ್ನು ನೀವು ಗುರುತಿಸಬಲ್ಲಿರಾ?
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಯಾವಾಗಲೂ ಮನಸೆಳೆಯುವ ಪಜಲ್‌ಗಳಾಗಿವೆ. ಇವು ನಮ್ಮ ಕಣ್ಣಿನ ಸಾಮರ್ಥ ಅಷ್ಟೇ ಅಲ್ಲದೆ, ಮೆದುಳಿನ ವಿಶ್ಲೇಣೆಯ ಶಕ್ತಿಯನ್ನು ಪರೀಕ್ಷಿಸುತ್ತದೆ. ಇತ್ತಿಚಿನ ದಿನಗಳಲ್ಲಿ ಇಂತಹ ಚಿತ್ರಗಳು ಸಾಮಾಜಿಕ ಜಾಲತಾಣಲ್ಲಿ ಸಖತ್ ವೈರಲ್ ಆಗುತ್ತಿದ್ದು ನೆಟ್ಟಿಗರು ಕುತೂಹಲದಿಂದ ಯೋಚಿಸುವಂತೆ ಮಾಡುತ್ತಿವೆ. ಸಾಮಾನ್ಯವಾಗಿ ಕಾಣುವ ಚಿತ್ರಗಳಲ್ಲಿ ಅಡಗಿರುವ ರಹಸ್ಯಗಳನ್ನು ಪತ್ತೆಹಚ್ಚುವುದರಿಂದ ನಮ್ಮ ಗಮನ ಮತ್ತು ದೃಷ್ಟಿ ಎಷ್ಟು ಸಾಮರ್ಥ್ಯವನ್ನು ತಿಳಿಯಲು ಸಹಾಯ ಮಾಡುತ್ತದೆ.
ಸಾಮಾನ್ಯವಾಗಿ ಒಂದು ಚಿತ್ರದೊಳಗೆ ಅಡಗಿರುವ ರಹಸ್ಯವನ್ನು ಕಂಡು ಹಿಡಿಯುವುದು ಅಷ್ಟು ಸುಲಭದ ಮಾತಲ್ಲ, ಈ ಸವಾಲಿನಲ್ಲಿ ಒಂದು ವಿಶೇಷ ಇದೆ. ಈ ಚಿತ್ರದಲ್ಲಿ 10 ಪ್ರಾಣಿಗಳನ್ನು ನೀವು ಗುರುತಿಸಬೇಕು ಅದು ಕೇವಲ 21 ಸೆಕೆಂಡುಗಳಲ್ಲಿ, ಮೂದಲ ನೋಟಕ್ಕೆ ಕಾಣುವ ಆಕಾರಗಳಲ್ಲೇ ನಿಮ್ಮ ಗಮನ ಸೀಮಿತವಾದರೆ, ಹಲವಾರು ಪ್ರಾಣಿಗಳನ್ನು ನೀವು ನೊಡದೇ ಇರಬಹುದು.

ಚಿತ್ರದ ವಿಶೇಷತೆ
ಮೊದಲನೇ ನೋಟಕ್ಕೆ ಈ ಚಿತ್ರವು ಹುಲಿ ಮತ್ತು ಆನೆಯ ಮುಖಗಳು ಸೇರಿ ಒಂದು ಮಾನವನ ತಲೆ ಆಕಾರದಂತೆ ಕಾಣುತ್ತದೆ. ಆದರೆ ಇವು ನಿಮ್ಮ ಗಮನವನ್ನು ಬೇರೆಡೆ ಸೇಳೆಯಲು ವಿನ್ಯಾಸಗೊಳಿಸಿದ ಮುಖ್ಯ ಆಕಾರಗಳಷ್ಟೇ. ನೀವು ಚಿತ್ರವನ್ನು ಆಳವಾಗಿ ಗಮನಿಸಿದರೆ ಸಣ್ಣ ಸಣ್ಣ ರೂಪದಲ್ಲಿ ಹಲವು ಪ್ರಾಣಿಗಳು ಅಡಗಿವೆ. ಅದನ್ನು ಜಾಣ್ಮೆಯಿಂದ ಗಮನಿಸಬೇಕಿದೆ.
ನೀವು ಹುಡಬೇಕಾದ 10 ಪ್ರಾಣಿಗಳು ಇಲ್ಲಿವೆ.
ಹಂಸ, ಹಾವು, ಎರಡು ಪಾರಿವಾಳಗಳು, ಕೊಕ್ಕರೆ, ದೊಡ್ಡ ಮೀನು, ಸಣ್ಣ ಮೀನು, ಹಸು, ತೋಳ, ಮೊಲ
ಹಾಗಾದರೆ, ತಡವೇಕೆ? ಕೂಡಲೇ ಆ ಚಿತ್ರವನ್ನು ದಿಟ್ಟಿಸಿ ನೋಡಿ ಮತ್ತು ಆ 10 ಪ್ರಾಣಿಗಳನ್ನು ಎಷ್ಟು ಬೇಗ ಪತ್ತೆ ಹಚ್ಚುತ್ತೀರಿ ಎಂದು ಪರೀಕ್ಷಿಸಿಕೊಳ್ಳಿ!
ಇವುಗಳನ್ನು ಕಂಡುಹಿಡಿಯುವುದು ಹೇಗೆ?
ಈ ಪಜಲ್‌ನಲ್ಲಿ ಹಸುವಿನ ಆಕಾರವನ್ನು ಪತ್ತೆಹಚ್ಚುವುದು ಅತ್ಯಂತ ಕಷ್ಟಕರವಾಗಿದೆ, ಏಕೆಂದರೆ ಅದನ್ನು ಮಾನವ ಮುಖದ ಕಣ್ಣಿನ ಭಾಗದಲ್ಲಿ ಅಡಗಿರುವುದರಿಂದ ಅದನ್ನು ಗುರುತಿಸುವುದು ಸ್ವಲ್ಪ ಕಷ್ಟವಾಗಬಹುದು. ಹಾಗೆಯೇ ಹಾವು ಮತ್ತು ಸಣ್ಣ ಮೀನುಗಳು ಆಕಾರಗಳು ಚಿತ್ರದಲ್ಲಿನ ನಡುವೆ ಬೆರೆತು ಹೋಗಿರುವುದರಿಂದ ಇನ್ನಷ್ಟು ಗೊಂದಲವನ್ನುಂಟುಮಾಡಿದೆ.
ಈ ರೀತಿಯ ಪಜಲ್ ಗಳನ್ನು ಪರಿಹರಿಸಲು ಒಂದೇ ಸ್ಥಳವನ್ನು ಗಮನಿಸುವುದಕ್ಕಿಂತ ಸಂಪೂರ್ಣ ಚಿತ್ರವನ್ನು ಭಾಗಗಳಾಗಿ ವಿಭಜಿಸಿ ಗಮನಿಸುವುದು ಉತ್ತಮ. ಇಲ್ಲವಾದರೆ, ಕೆಲವೊಮ್ಮೆ ಚಿತ್ರವನ್ನು ತಲೆಕೆಳಗಾಗಿ ನೋಡುವುದು ಅಥವಾ ಸ್ವಲ್ಪ ದೂರದಿಂದ ಗಮನಿಸುವುದರಿಂದ ಚಿತ್ರದಲ್ಲಿರುವ ಪ್ರಾಣಿಗಳನ್ನು ಬೇಗ ಗುರುತಿಸಲು ಸಾಧ್ಯವಾಗುತ್ತದೆ. ಸಮಯದ ಮೀತಿ ಇರುವುದರಿಂದ ಏಕಾಗ್ರತೆ ಮತ್ತು ಸಹನೆ ಎರಡೂ ಅಗತ್ಯ.
ಆಪ್ಟಿಕಲ್ ಇಲ್ಯೂಷನ್ ಕೇವಲ ಮನರಂಜನೆಗೆ ಮಾತ್ರವಲ್ಲ. ಇದು ನಮ್ಮ ಮೆದುಳಿಗೆ ಕೂಡ ಉತ್ತಮ ವ್ಯಾಯಮವನ್ನು ನೀಡುತ್ತದೆ. ಇದರಿಂದ ಪ್ಯಾಟರ್ನ್ ಗುರುತಿಸುವಿಕೆ, ದೃಶ್ಯ ಸ್ಮರಣೆ, ಗಮನದ ಕೇಂದ್ರಿಕರಿಸುವಿಕೆ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ಕಲಿಯಲು ಸಹಾಯ ಮಾಡುತ್ತದೆ, ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇದು ಬುದ್ದಿಶಕ್ತಿಯನ್ನು ಹೆಚ್ಚಿಸುವಲ್ಲಿ ಇದು ಪರಿಣಾಮಕಾರಿಯಾಗಿದೆ. ಹಾಗಾದರೆ ತಡವೇಕೆ? ಕೂಡಲೇ ಆ ಚಿತ್ರವನ್ನು ದಿಟ್ಟಿಸಿ ನೋಡಿ ಮತ್ತು ಆ 10 ಪ್ರಾಣಿಗಳನ್ನ ಎಷ್ಟು ಬೇಗ ಪತ್ತೆಹಚ್ಚುತ್ತೀರಿ ಎಂದು ಪರೀಕ್ಷಿಸಿಕೊಳ್ಳಿ.












Click it and Unblock the Notifications