ಖಾಸಗಿ ಕಂಪನಿಯ ರಿಚಾರ್ಜ್‌ಗಿಂತ BSN ಅಗ್ಗ: ಇಲ್ಲಿದೆ ಎಲ್ಲ ಕಂಪನಿಯ ಕಡಿಮೆ ಬೆಲೆಯ ರಿಚಾರ್ಜ್ ಲಿಸ್ಟ್
ಜುಲೈನಲ್ಲಿ ಎಲ್ಲ ಖಾಸಗಿ ಟೆಲಿಕಾಂ ಕಂಪನಿಗಳು ತಮ್ಮ ರಿಚಾರ್ಜ್ ಪ್ಲ್ಯಾನ್‌ಗಳಲ್ಲಿ ಶೇಕಡಾ 25 ರಷ್ಟು ಹೆಚ್ಚಳವನ್ನು ಮಾಡಿದವು. ಆದರೆ ಸರ್ಕಾರಿ ಸೌಮ್ಯದ ಬಿಎಸ್‌ಎನ್‌ಎಲ್ ಕಂಪನಿ ಹೊಸ ಹೊಸ ರಿಚಾರ್ಜ್ ಪ್ಲ್ಯಾನ್‌ಗಳನ್ನು ಲಾಂಚ್ ಮಾಡಿ, ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಪೈಪೋಟಿ ನೀಡುತ್ತಿದೆ. ಬಿಎಸ್‌ಎನ್‌ಎಲ್ ಇನ್ನೇನು ಕ್ಲೋಸ್ ಆಗಿ ಬಿಡುತ್ತದೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ, ಈಗ ಮತ್ತೆ ಪುಟಿದೇಳುವ ಸೂಚನೆ ನೀಡಿದೆ.
ಖಾಸಗಿ ಟೆಲಿಕಾಂ ಕಂಪನಿಗಳ ರಿಚಾರ್ಜ್ ದರಗಳು ಹೆಚ್ಚಾಗುತ್ತಿದ್ದಂತೆ, ಬಳಕೆದಾರ ಬಿಎಸ್ಎನ್‌ಎಲ್‌ಗೆ ಪೋರ್ಟ್ ಆಗಲು ಆರಂಭಿಸಿದರು. ದೇಶ 5ಜಿಯಲ್ಲಿರುವಾಗಲೂ, ಬಿಎಸ್‌ಎನ್‌ಎಲ್ 3ಜಿ ಸೇವೆಗಳನ್ನು ನೀಡುತ್ತಿದೆ. ಆದರೆ ನೀಡುವ ಸೌಲಭ್ಯವನ್ನು ಅಚ್ಚುಕಟ್ಟಾಗಿ ನೀಡುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಎಸ್‌ಎನ್‌ಎಲ್ 4ಜಿ ಸೇವೆಗಳನ್ನು ಬಳಕೆದಾರ ಆನಂದಿಸಬಹುದು. ಸದ್ಯಕ್ಕೆ ಈ ಸೇವೆಗಳು ತಮಿಳುನಾಡಿನಲ್ಲಿವೆ.

ವಿವಿಧ ರೀತಿಯ ರಿಚಾರ್ಜ್
ಬಳಕೆದಾರರ ಆಯ್ಕೆಗಳನ್ನು ಗಮನದಲ್ಲಿಟ್ಟುಕೊಂಡು ಬಿಎಸ್‌ಎನ್‌ಎಲ್ ಹಲವು ರಿಚಾರ್ಜ್ ಪ್ಲ್ಯಾನ್‌ಗಳು ಬಿಡುಗಡೆ ಮಾಡಿದೆ. ಒಂದು ವರ್ಷದ ರಿಚಾರ್ಜ್‌ನಿಂದ ಹಿಡಿದು, ತಿಂಗಳ ರಿಚಾರ್ಜ್ ಪ್ಲ್ಯಾನ್‌ಗಳು ಸೇರಿವೆ. ಇನ್ನು ಡೇಟಾ ನಿಯಮಿತ ಪ್ಯಾಕ್‌ಗಳಿಂದ ಹಿಡಿದು, ಹೈ ಸ್ಪೀಡ್ ಡೇಟಾ ನೀಡುವ ಪ್ಯಾಕ್‌ಗಳು ಸಹ ಸೇರಿವೆ. ಬಿಎಸ್‌ಎನ್‌ಎಲ್ ಅಗ್ಗದ ಬೆಲೆಯಲ್ಲಿ ರಿಚಾರ್ಜ್ ಪ್ಲ್ಯಾನ್ ಲಾಂಚ್ ಮಾಡಿದ್ದು, ಖಾಸಗಿ ಕಂಪನಿಗಳಿಗೆ ನುಂಗಲಾರದ ತುತ್ತಾಗಿದೆ.
ಈ ವರದಿಯಲ್ಲಿ ಎಲ್ಲ ಕಂಪನಿಗಳು ನೀಡುವ ಅಗ್ಗದ ರಿಚಾರ್ಜ್ ಪ್ಲ್ಯಾನ್‌ಗಳ ಮಾಹಿತಿ ಇದ್ದು, ಹಲವು ಲಾಭಗಳನ್ನು ಸಹ ತಿಳಿಸಲಾಗಿದೆ.

BSNL ರೂ 107 ಆಯ್ಕೆ
ಈ BSNL ರೂ 107 ಯೋಜನೆಯಲ್ಲಿ, ಕಂಪನಿಯು ಬಳಕೆದಾರರಿಗೆ 3 GB ಹೈ-ಸ್ಪೀಡ್ ಡೇಟಾವನ್ನು ನೀಡುತ್ತಿದೆ. ಇದಲ್ಲದೆ, ಸ್ಥಳೀಯ ಮತ್ತು STD ಕರೆಗಳಿಗೆ 200 ಉಚಿತ ನಿಮಿಷಗಳನ್ನು ಸಹ ನೀಡಲಾಗುತ್ತದೆ. ಅಷ್ಟೇ ಅಲ್ಲ, BSNL ಬಳಕೆದಾರರು 35 ದಿನಗಳವರೆಗೆ BSNL ಟ್ಯೂನ್‌ನ ಪ್ರಯೋಜನವನ್ನು ಸಹ ಪಡೆಯಬಹುದಾಗಿದೆ.
ಜಿಯೋದ 189 ರೂ ಪ್ಲಾನ್
ಜಿಯೋದ ಅಗ್ಗದ ಡೇಟಾ ಮತ್ತು ಕರೆ ಮಾಡುವ ಪ್ಲ್ಯಾನ್ 189 ರೂ. ಗಳಿಂದ ಆರಂಭವಾಗುತ್ತದೆ. ಇದು 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಜಿಯೋ ಬಳಕೆದಾರರಿಗೆ 2 GB ಹೈ ಸ್ಪೀಡ್ ಡೇಟಾದ ಪ್ರಯೋಜನವನ್ನು ನೀಡಲಾಗುತ್ತಿದೆ.

Aritel ನ 199 ರೂ ಪ್ಲಾನ್
ಡೇಟಾ ಮತ್ತು ಕರೆಯೊಂದಿಗೆ ಏರ್‌ಟೆಲ್‌ನ ಅಗ್ಗದ ಯೋಜನೆ ಅಂದರೆ ಅದು ರೂ 199. ಈ ಯೋಜನೆಯೊಂದಿಗೆ ಬಳಕೆದಾರ 2 GB ಹೈ ಸ್ಪೀಡ್ ಡೇಟಾ, ಅನಿಯಮಿತ ಕರೆ ಮತ್ತು 28 ದಿನಗಳ ವ್ಯಾಲಿಡಿಟಿಯನ್ನು ಸಹ ಪಡೆತ್ತಾನೆ.
Vi 179 ಯೋಜನೆ ಆಯ್ಕೆ
ಕರೆ ಮತ್ತು ಡೇಟಾದೊಂದಿಗೆ ವೊಡಾಫೋನ್ ಐಡಿಯಾದ ಅಗ್ಗದ ಯೋಜನೆ 179 ರೂ. ಈ ಯೋಜನೆಯೊಂದಿಗೆ Vi ಬಳಕೆದಾರರು 1 GB ಹೈ ಸ್ಪೀಡ್ ಡೇಟಾ ಮತ್ತು ಅನಿಯಮಿತ ಉಚಿತ ಕರೆಯ ಲಾಭ ಪಡೆಯಬಹುದು.
ದೊಡ್ಡ ಟೆಲಿಕಾಂ ಕಂಪನಿಗಳು ರಿಲಯನ್ಸ್ ಜಿಯೋ, ವಿಐ ಮತ್ತು ಏರ್‌ಟೆಲ್ ಅಂತಹ ಯಾವುದೇ ಅಗ್ಗದ ಯೋಜನೆಯನ್ನು ಹೊಂದಿಲ್ಲ. ಈ ವಿಚಾರದಲ್ಲಿ ಬಿಎಸ್‌ಎನ್‌ಎಲ್ ತನ್ನ ಬಳಕೆದಾರರನ್ನು ಮತ್ತಷ್ಟು ಸೆಳೆಯಲು 107 ರೂಪಾಯಿಗಳ ರಿಚಾರ್ಜ್ ಪ್ಲ್ಯಾನ್ ಲಾಂಚ್ ಮಾಡಿದೆ.












Click it and Unblock the Notifications