BSNL: ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಗುಡ್ ನ್ಯೂಸ್: ಆಗಸ್ಟ್‌ನಲ್ಲಿ ಮೇಡ್ ಇನ್ ಇಂಡಿಯಾ 4G ಸೇವೆ
BSNL ಬಳಕೆದಾರರ ಇನ್ನೇನು ಕೆಲವೇ ದಿನಗಳಲ್ಲಿ ಖುಷಿ ಸುದ್ದಿ ಸಿಗಲಿದೆ. ಈ ಸುದ್ದಿ ನಿಜಕ್ಕೂ ಬಿಎಸ್‌ಎನ್‌ಎಲ್ ಸಿಮ್ ಹೊಂದಿದವರ ಮುಖದಲ್ಲಿ ಮಂದಹಾಸ ಮೂಡಿಸುವುದು ಗ್ಯಾರಂಟಿ.. ದೇಶದ ಪ್ರತಿಷ್ಠಿತ ನೆಟ್‌ವರ್ಕ್ ಕಂಪನಿ ಇನ್ನು ಹಳೆಯ 3ಜಿ ಸ್ಪೀಡ್ ನೆಟ್ ವರ್ಕ್ ಹೊಂದಿದೆ. ಹೀಗಾಗಿ ಇದರಿಂದ ಗ್ರಾಹಕರು ಬೇರೆ ಕಡೆಗೆ ಶಿಫ್ಟ್ ಸಹ ಆಗುತ್ತಿದ್ದಾರೆ. ತಮ್ಮ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಬಿಎಸ್‌ಎನ್‌ಎಲ್ ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿಯು ಈ ವರ್ಷದ ಆಗಸ್ಟ್‌ನಲ್ಲಿ 'ಮೇಡ್ ಇನ್ ಇಂಡಿಯಾ' 4G ಸೇವೆಯನ್ನು ಪ್ರಾರಂಭಿಸಲಿದೆ.
ಕಂಪನಿಯ ಮೂಲಗಳಿಂದ ಪಡೆದ ಮಾಹಿತಿಯ ಪ್ರಕಾರ, ಬಿಎಸ್‌ಎನ್‌ಎಲ್ ಇತ್ತೀಚೆಗೆ 4G ಸೇವೆಯನ್ನು ಟೆಸ್ಟಿಂಗ್ ನಡೆಸಿದೆ, ಇದರಲ್ಲಿ ಗರಿಷ್ಠ 40 ರಿಂದ 45 mbps ವೇಗದಲ್ಲಿ ಇಂಟರ್ನೆಟ್ ಡೇಟಾವನ್ನು ಗ್ರಾಹಕ ಪಡೆಯಬಹುದಾಗಿದೆ ಎಂದು ತಿಳಿದು ಬಂದಿದೆ. BSNL ನ ಈ ಪ್ರಾಯೋಗಿಕ ಯೋಜನೆಯನ್ನು ಪರೀಕ್ಷೆಯ ಸಮಯದಲ್ಲಿ 700 MHz ಮತ್ತು 2100 MHz ಸ್ಪೆಕ್ಟ್ರಮ್ ಬ್ಯಾಂಡ್‌ಗಳಲ್ಲಿ ಪರೀಕ್ಷಿಸಲಾಗಿದೆ. ಇದಲ್ಲದೇ BSNL ನ 5G ಸೇವೆಗೆ ಸಂಬಂಧಿಸಿದಂತೆ ಒಂದು ದೊಡ್ಡ ಅಪ್‌ಡೇಟ್ ಸಹ ನೀಡಿದೆ.

ಬಿಎಸ್‌ಎನ್ಎಲ್ ಎಷ್ಟು ಟವರ್ ಹಾಕಲಿದೆ?
ಟಿಸಿಎಸ್, ತೇಜಸ್ ನೆಟ್‌ವರ್ಕ್ ಮತ್ತು ಸರ್ಕಾರಿ ಐಟಿಐ 4ಜಿ ಮತ್ತು 5ಜಿ ಸೇವೆಗಳಿಗಾಗಿ ಬಿಎಸ್‌ಎನ್‌ಎಲ್‌ನಿಂದ 19,000 ಕೋಟಿ ರೂಪಾಯಿಗಳನ್ನು ಪಡೆದಿವೆ. ಇದರ ಅಡಿಯಲ್ಲಿ, BSNL ನ 4G ಮತ್ತು 5G ಸೇವೆಗಳನ್ನು ದೇಶದಲ್ಲಿ ವಿಸ್ತರಿಸಲು ಪ್ಲ್ಯಾನ್ ಮಾಡಿಕೊಂಡಿದೆ. BSNL ತನ್ನ 4G ಮತ್ತು 5G ನೆಟ್‌ವರ್ಕ್‌ಗಳಿಗಾಗಿ ದೇಶಾದ್ಯಂತ ಸುಮಾರು 1.12 ಲಕ್ಷ ಟವರ್‌ಗಳನ್ನು ಸ್ಥಾಪಿಸುತ್ತದೆ. ಕಂಪನಿಯು ಇದುವರೆಗೆ 9,000 4G ಟವರ್‌ಗಳನ್ನು ಸ್ಥಾಪಿಸಿದೆ, ಅದರಲ್ಲಿ 6,000 ಟವರ್‌ಗಳು ಪಂಜಾಬ್, ಉತ್ತರ ಪ್ರದೇಶ ಪಶ್ಚಿಮ, ಹಿಮಾಚಲ ಪ್ರದೇಶ ಮತ್ತು ಹರಿಯಾಣ ವಲಯಗಳಲ್ಲಿ ಸಕ್ರಿಯವಾಗಿವೆ.
4G ಆಗಸ್ಟ್‌ನಲ್ಲಿ ಬಿಡುಗಡೆ
C-DOT ನಿರ್ಮಿಸಿದ 4G ಕೋರ್ ಪಂಜಾಬ್‌ನ BSNL ನೆಟ್‌ವರ್ಕ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹಿರಿಯ BSNL ಅಧಿಕಾರಿಯೊಬ್ಬರು ತಿಳಿದ್ದಾರೆ. ಇದನ್ನು ಕಳೆದ ವರ್ಷ ಜುಲೈನಲ್ಲಿ ಸ್ಥಾಪಿಸಲಾಗಿತ್ತು. BSNL ಆಗಸ್ಟ್ ನಲ್ಲಿ ದೇಶಾದ್ಯಂತ ಸ್ವಾವಲಂಬಿ 4G ತಂತ್ರಜ್ಞಾನವನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.
BSNL ಭಾರತದಾದ್ಯಂತ 4G ಮತ್ತು 5G ಸೇವೆಗಳಿಗಾಗಿ 1.12 ಲಕ್ಷ ಟವರ್‌ಗಳನ್ನು ಸ್ಥಾಪಿಸುವ ಪ್ರಕ್ರಿಯೆ ನಡೆದಿದೆ. ಕಂಪನಿಯು ದೇಶಾದ್ಯಂತ 4G ಸೇವೆಗಾಗಿ 9,000 ಕ್ಕೂ ಹೆಚ್ಚು ಟವರ್‌ಗಳನ್ನು ಸ್ಥಾಪಿಸಿದೆ. ಇವುಗಳಲ್ಲಿ 6,000 ಕ್ಕೂ ಹೆಚ್ಚು ಗೋಪುರಗಳು ಪಂಜಾಬ್, ಹಿಮಾಚಲ ಪ್ರದೇಶ, ಪಶ್ಚಿಮ ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿವೆ. ಇನ್ನು ಶೀಘ್ರವಾಗಿ ಈ ಸೇವೆಗಳನ್ನು ಬೇರೆ ರಾಜ್ಯಕ್ಕೆ ವಿಸ್ತರಿಸುವ ಪ್ಲ್ಯಾನ್ ಹಾಕಿಕೊಳ್ಳಲಾಗಿದೆ.
ಬೇರೆ ಕಂಪನಿಗಳಿಗೆ ಪೈಪೋಟಿ ನಿಡಲು ಬಿಎಸ್‌ಎನ್‌ಎಲ್ ಸಹ ಈಗ 4ಜಿ ಹಾಗೂ 5ಜಿ ನೆಟ್‌ವರ್ಕ್‌ಗೆ ಕಾಲಿಡಲಿದೆ. ಈ ನೆಟ್‌ವರ್ಕ್ ಸಕ್ಸಸ್ ಫುಲ್ ಆಗಿ ಲಾಂಚ್ ಆದಲ್ಲಿ ಬೇರೆ ಟೆಲಿಕಾಮ್ ಕಂಪನಿಗಳಿಗೆ ನಡುಕು ಶುರುವಾಗುತ್ತದೆ. ಏಕೆಂದರೆ ಬಿಎಸ್‌ಎನ್‌ಎಲ್ ಭಾರತದಾದ್ಯಂತ ಉತ್ತಮ ನೆಟ್‌ವರ್ಕ್ ಸೇವೆಯನ್ನು ಹೊಂದಿದೆ.












Click it and Unblock the Notifications