ಏರ್‌ಟೇಲ್, ಜಿಯೋಗಿಂತಲೂ ಕಡಿಮೆ ಬೆಲೆಯ BSNL ರಿಚಾರ್ಜ್ ಪ್ಲ್ಯಾನ್; ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ (BSNL) ಬೇರೆ ಖಾಸಗಿ ಕಂಪನಿಗಳಿಗೆ ಭರ್ಜರಿ ಪೈಪೋಟಿ ನೀಡಲು ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಎಸ್‌ಎನ್‌ಎಲ್ ತನ್ನ 4G ಸೇವೆಯನ್ನು ದೇಶ ವ್ಯಾಪಿ ಆರಂಭಿಸಲು ಸಜ್ಜಾಗಿದೆ. ಕಂಪನಿಯು ಇತ್ತೀಚೆಗೆ 10 ಸಾವಿರಕ್ಕೂ ಹೆಚ್ಚು ಮೊಬೈಲ್ ಟವರ್‌ಗಳನ್ನು 4G ಗೆ ಅಪ್‌ಗ್ರೇಡ್ ಮಾಡಿದೆ. ಸಾಮಾಜಿಕ ತಾಣಾದ ಮೂಲಕ 4G ಸೇವೆಯ ಬಗ್ಗೆ ಸುಳಿವು ನೀಡಿದೆ.
ಕಂಪನಿಯು ತನ್ನ ಎಕ್ಸ್ ಖಾತೆಯ ಮೂಲಕ ಹೊಸ 4G ರೀಚಾರ್ಜ್ ಪ್ರಕಟಿಸಿದೆ. ಈ ಪ್ರಿಪೇಯ್ಡ್ ರಿಚಾರ್ಜ್ ಮಾಡಿಸಿಕೊಳ್ಳುವುದರಿಂದ, ಬಳಕೆದಾರರು ಅನಿಯಮಿತ ಕಾಲ್ ಮಾಡುವ ವ್ಯವಸ್ಥೆ ಪಡೆಯಬಹುದು. ಇದರೊಂದಿಗೆ ಬಳಕೆದಾರರು 4ಜಿ ಇಂಟರ್‌ನೇಟ್ ಲಾಭವನ್ನು ಸಹ ಪಡೆಯಬಹುದು. ಸಾಮಾಜಿಕ ತಾಣದಲ್ಲಿ ಅಪ್ ಲೋಡ್ ಆಗಿರುವ ವಿಡಿಯೋದಲ್ಲಿ ಕಂಪನಿಯು ಸ್ಥಳೀಯ 4G ನೆಟ್‌ವರ್ಕ್ ಅನ್ನು ಉಲ್ಲೇಖಿಸಿದೆ. ಬಿಎಸ್‌ಎನ್‌ಎಲ್ ರಿಚಾರ್ಜ್ ಪ್ಲ್ಯಾನ್‌ಗಳ ವಿವರ ಇಲ್ಲಿದೆ.

ಕಡಿಮೆ ವ್ಯಾಲಿಡಿಟಿಯ ಪ್ಲ್ಯಾನ್‌ಗಳು
STV118- ಈ ಪ್ಲ್ಯಾನ್ ರಿಚಾರ್ಜ್ ಮಾಡಿಸಿಕೊಂಡಲ್ಲಿ 20 ದಿನಗಳ ವ್ಯಾಲಿಡಿಟಿಯನ್ನು ಪಡೆಯಬಹುದು. ಈ ಯೋಜನೆಯಲ್ಲಿ ಬಳಕೆದಾರ 10 ಜಿಬಿ ಡೇಟಾ ಸಿಗಲಿದೆ. ಅಲ್ಲದೆ 100 ಉಚಿತ ಎಸ್‌ಎಂಎಸ್ ಸಹ ನೀಡಲಾಗುತ್ತದೆ.
ಕಡಿಮೆ ವ್ಯಾಲಿಡಿಟಿಯ ಪ್ಲ್ಯಾನ್‌ನಲ್ಲಿ PV153 ಎದ್ದು ಕಾಣುತ್ತಿದೆ. ಈ ಪ್ಲ್ಯಾನ್ ರಿಚಾರ್ಜ್ ಮಾಡಿಸಿಕೊಂಡಲ್ಲಿ, ಗ್ರಾಹಕ 26 ದಿನಗಳ ವ್ಯಾಟಲಿಡಿ ಪಡೆಯಬಹುದು. ಇಷ್ಟೇ ಅಲ್ಲದೆ 26 ಜಿಬಿ ಡೇಟಾವನ್ನು ಪಡೆಯಲಿದ್ದಾರೆ. ಇದರ ಜೊತೆಗೆ 100 ಸಂದೇಶಗಳನ್ನು ಸಹ ಕಳಿಸಬಹುದು.
PV199 - ಈ ಪ್ಲ್ಯಾನ್ ಹಾಕಿಸಿಕೊಂಡಲ್ಲಿ ಬಳಕೆದಾರ 30 ದಿನಗಳ ಮಾನ್ಯತೆ ಪಡೆಯಬಹುದು. ಅಲ್ಲದೆ ಪ್ರತಿ ದಿನ 2GB ಡೇಟಾ ಪಡೆಯಬಹುದು. ಅಲ್ಲದೆ ಅನಿಯಮಿತ ಕರೆಗಳನ್ನು ಮಾಡುವ ವ್ಯವಸ್ಥೆ ಪಡೆಯಬಹುದು. ಅಲ್ಲದೆ 100 ಉಚಿತ SMS ಮಾಡುವ ಲಾಭ ಪಡೆಯಬಹುದು.

ಹೆಚ್ಚಿನ ಇಂಟರ್ನೆಟ್ ಅವಶ್ಯಕತೆ ಇದ್ದರೇ ಈ ಪ್ಲ್ಯಾನ್ ರಿಚಾರ್ಜ್ ಮಾಡಿಸಿ
STV347 54 ದಿನಗಳ ರೀಚಾರ್ಜ್ ಯೋಜನೆಯನ್ನು ಬಳಸಿಕೊಂಡಲ್ಲಿ, ಬಳಕೆದಾರ ದೈನಂದಿನ 2GB ಡೇಟಾ ಪಡೆಯಬಹುದು. ಇನ್ನು STV599 ರಿಚಾರ್ಜ್ ಪ್ಲ್ಯಾನ್ ಮಾಡಿಸಿಕೊಂಡಲ್ಲಿ 3 ಜಿಬಿ ಡೇಟಾ ಸೇವೆಯನ್ನು ಗ್ರಾಹಕ ಆನಂದಿಸಬಹುದು. ಈ ರಿಚಾರ್ಜ್ ವ್ಯಾಲಿಡಿಟಿ 84 ದಿನಗಳ ವರೆಗೆ ಇರುತ್ತದೆ. PV997 - 160 ದಿನಗಳ ಮಾನ್ಯತೆಯನ್ನು ನೀಡಲಾಗುತ್ತಿದೆ. ಈ ಯೋಜನೆಯಲ್ಲಿ, ಬಳಕೆದಾರರಿಗೆ ದೈನಂದಿನ 2GB ಡೇಟಾ ಬಳಿಸಬಹುದು. ಇಷ್ಟೇ ಅಲ್ಲದೆ ಈ ಮೂರು ಪ್ಲ್ಯಾನ್‌ಗಳನ್ನು ರಿಚಾರ್ಜ್ ಮಾಡಿಸಿಕೊಂಡಲ್ಲಿ ಅನಿಯಮಿತ ಕರೆಗಳು ಹಾಗೂ 100 ಉಚಿತ ಎಸ್‌ಎಂಎಸ್ ಗಳ ಲಾಭ ಪಡೆಯಬಹುದು.
ಲಾಂಗ್ ಟೈಮ್ ರಿಚಾರ್ಜ್
PV1999 - ಸರ್ಕಾರಿ ಟೆಲಿಕಾಂ ಕಂಪನಿಯ ಈ ರೂ 1,999 ರೀಚಾರ್ಜ್ ಯೋಜನೆಯಲ್ಲಿ, ಬಳಕೆದಾರರಿಗೆ 365 ದಿನಗಳ ಮಾನ್ಯತೆಯನ್ನು ನೀಡಲಾಗುತ್ತಿದೆ. ಈ ಯೋಜನೆಯಲ್ಲಿ, ಬಳಕೆದಾರರು ಒಟ್ಟು 600GB ಡೇಟಾದ ಪ್ರಯೋಜನವನ್ನು ಪಡೆಯುತ್ತಾರೆ. PV2399 ಈ ರೂ 2,399 ರೀಚಾರ್ಜ್ ಮಾಡಿಸಿಕೊಂಡಲ್ಲಿ ಒಂದು ವರ್ಷದ ಮಾನ್ಯತೆ ಪಡೆಯಬಹುದು. ಅಲ್ಲದೆ ಈ ಮೂಲಕ ಒಟ್ಟು 790GB ಡೇಟಾ ಲಭ್ಯವಾಗಲಿದೆ. ಈ ಎರಡೂ ಪ್ಲ್ಯಾನ್‌ಗಳ ಜೊತೆಗೆ ಉಚಿತ ಕರೆಗಳು ಹಾಗೂ 100 ಮೆಸೇಜ್ ಕಳುಹಿಸುವ ವ್ಯವಸ್ಥೆ ಲಭ್ಯ.












Click it and Unblock the Notifications