BNSL: ಕೈಗೆಟುಕುವ ₹99 ಬೆಲೆಗೆ ಅದ್ಭುತ ಆಫರ್, ನಿತ್ಯ 1.5 ಜಿಬಿ ಡೇಟಾ ಫ್ರೀ, ವ್ಯಾಲಿಡಿಟಿ?
BSNL New Offer: ಟೆಲಿಕಾಂ ವಯದಲ್ಲಿದಲ್ಲಿ ತನ್ನದೇ ಆದ ರೀತಿಯಲ್ಲಿ ಛಾಪು ಮೂಡಿಸುತ್ತಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಹೊಸ ಹೊಸ ರಿಚಾಜ್ ಪ್ಲಾನ್‌ಗಳನ್ನು ಘೋಷಿಸುತ್ತಿದೆ. ಈ ಭಾರಿ ಮತ್ತೊಂದು ಕಡಿಮೆ ಬೆಲೆಗೆ ಹೊಸ ಪ್ರಿಪೇಯ್ಡ್ ಯೋಜನೆ ನೀಡುತ್ತಿದೆ. ಇದು ಜಿಯೋ, ಬಿಎಸ್‌ಎನ್‌ಎಲ್ ಮತ್ತು ವಡಾಫೋನ್‌ಗಿಂತ ಸುಮಾರು 50 ಪಟ್ಟು ಉತ್ತಮ ಎಂದು ವಿಶ್ಲೇಷಿಸಲಾಗುತ್ತಿದೆ.
ಹೌದು, ದೇಶಾದ್ಯಂತ ಸುಮಾರು 65000ಕ್ಕೂ ಹೆಚ್ಚು 4ಜಿ ಹೊಸ ಟವರ್‌ಗಳ ಮೂಲಕ ಮನೆ ಮನೆ ತಲುಪುತ್ತಿರುವ, ಅತ್ಯುತ್ತಮ ಇಂಟರ್‌ನೆಟ್ ಸೇವೆಯನ್ನು ಜಾರಿಗೊಳಿಸಿದ BSNL ಕೇವಲ 99 ರೂಪಾಯಿಗೆ ಹೊಸ ಪ್ಲಾನ್ ಘೋಷಿಸಿದೆ. ದೇಶಾದ್ಯಂತ ಎಲ್ಲ ಬಳಕೆದಾರರಿಗೆ ಇಷ್ಟು ಕಡಿಮೆ ಬೆಲೆಗೆ ಪ್ಲಾನ್ ಸಿಗುತ್ತಿರುವುದು ಇದೇ ಮೊದಲು.

BSNL ಬಳಕೆದಾರರಿಗೆ ಕೈಗೆಟುಕುವ ದರ ರೂ. 99ಕ್ಕೆ ಅನಿಯಮಿತ ಕರೆಗಳು ಮತ್ತು ಪ್ರತಿದಿನ 100 ಉಚಿತ ಎಸ್‌ಎಂಎಸ್ ನೀಡುತ್ತದೆ. ಇದಷ್ಟೇ ಅಲ್ಲದೇ ಪ್ರತಿನಿತ್ಯ ನೀವು 1.5ಜಿಬಿ 4g ಇಂಟರ್‌ನೆಟ್ ಸೌಲಭ್ಯ ಸಹ ಪಡೆಯಬಹುದಾಗಿದೆ. ಇದರಲ್ಲಿ ರಿಂಗ್ ಬ್ಯಾಕ್ ಟೋನ್ ಸೇವೆ ಸಹ ಇದೆ. ಈ ಪ್ಲಾನ್ ವ್ಯಾಲಿಡಿಟಿ 17ದಿನ ಇರಲಿದೆ.
ಸದ್ಯ ಬೇರೆ ಬೇರೆ ಖಾಸಗಿ ಕಂಪನಿಗಳ ಸಿಮ್ ಬಳಕೆದಾರರು 28 ದಿನಗಳ ಅವಧಿಯ ಪ್ಲಾನ್‌ಗೆ 299 ರೂಪಾಯಿ ಪಾವತಿಸುತ್ತಿದ್ದಾರೆ. ಇದಕ್ಕೆ ನಿತ್ಯ 1.5 ಜಿಬಿ ಡೇಟಾ, ಉಚಿತ ಸಂದೇಶ ಇರುತ್ತದೆ. ಅನಿಮಿತ ಕರೆಗಳು ಲಭ್ಯ ಇದೆ. ಅದರೆ ಪ್ಲಾನ್ ದುಬಾರಿ ಆಗುತ್ತಿದೆ.

34 ದಿನಕ್ಕೆ ಕೇವಲ 198 ರೂ. ವ್ಯಯಿಸಿ
ಅದೇ ನೀವು 17ದಿನದ BSNL ಪ್ಲಾನ್ ಎರಡು ಬಾರಿ ರಿಚಾರ್ಜ್ ಮಾಡಿದರೆ ಕೇವಲ 198 ರೂ.ಗೆ ನೀವು 34 ದಿನಗಳ ಕಾಲ ಅನಿಮಿತ ಕರೆಗಳು, ನಿತ್ಯ 1.5 ಜಿಬಿ ಡೇಟಾ, ಉಚಿತ ಎಸ್‌ಎಂಎಸ್ ಸೌಲಭ್ಯ ಪಡೆಯುತ್ತೀರಿ. ಈ ಸೌಲಭ್ಯ ನಿಮಗೆ ಜಿಯೋ, ಏರ್‌ಟೆಲ್ ಮತ್ತು ವಿಐನಂತಹ ಖಾಸಗಿ ಟೆಲಿಕಾಂ ಕಂಪನಿಗಳಲ್ಲಿ ಸಿಗುವುದಿಲ್ಲ.
ಕೈಗೆಟುಕುವ ದರದಲ್ಲಿ ಯೋಜನೆ ಘೋಷಿಸುತ್ತಿರುವ ಕಾರಣ ಬಿಎಸ್‌ಎನ್‌ಎಲ್ ಜನಪ್ರಿಯತೆ ಹೆಚ್ಚಾಗುತ್ತಿದೆ. 4g ಸೇವೆ ಆರಂಭವಾಗಿದೆ. ಕಡಿಮೆ ಬೆಲೆಯ ಪ್ಲಾನ್ ಆಫರ್‌ಗಳು ಸಿಗುವ ಕಾರಣಕ್ಕೆ ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಆಗುತ್ತಿದ್ದಾರೆ. ಗ್ರಾಹಕರನ್ನು ಮತ್ತಷ್ಟು ಸೆಳೆಯಲು BSNL ಹೊಸ ಹೊಸ ರಿಚಾರ್ಜ್ ಯೋಜನೆ, ಐಎಫ್‌ಟಿವಿ ಸೇವೆ ಆರಂಭಿಸಿದೆ.
₹147 ರಿಚಾರ್ಜ್ ಪ್ಲಾನ್
BSNL ಗ್ರಾಹಕ ಸ್ನೇಹಿಯಾಗಿ ₹147 ರಿಚಾರ್ಜ್ ಪ್ಲಾನ್ ಸಹ ಪರಿಚಯಿಸಿದೆ. 30 ದಿನಗಳ ವ್ಯಾಲಿಟಿಡಿ ಇರುವ ಪ್ಲಾನ್ ಇದಾಗಿದ್ದು, ಅನಿಯಮಿತ ಕರೆ, ನಿತ್ಯ 100 ಎಸ್‌ಎಂಎಸ್ ಹಾಗೂ ಒಟ್ಟು 10ಜಿಬಿ ಡೇಟಾ ಒಳಗೊಂಡ ಯೋಜನೆಯಾಗಿದೆ.












Click it and Unblock the Notifications