Bill Gates Roti: ರೊಟ್ಟಿಯನ್ನು ಹೇಗೆ ತಯಾರಿಸಬಾರದು? ಬಿಲ್ ಗೇಟ್ಸ್ ವಿಡಿಯೋ ನೋಡಿ ಎಂದ ನೆಟ್ಟಿಗರು..
ಬಿಲ್ ಗೇಟ್ಸ್ ಅವರು ರೊಟ್ಟಿಗಳನ್ನು ತಯಾರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಖ್ಯಾತ ಬಾಣಸಿಗ ಈಟಾನ್ ಬರ್ನಾಥ್ ಅವರೊಂದಿಗೆ ಬಿಲ್ ಗೇಟ್ಸ್ ರೊಟ್ಟಿಗಳನ್ನು ತಯಾರಿಸಿದ್ದಾರೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಕೋವಿಡ್ -19 ಲಸಿಕೆಗಳ ಅಭಿವೃದ್ಧಿ, ಉತ್ಪಾದನೆ ಮತ್ತು ವಿತರಣೆಗಾಗಿ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಭಾರತವನ್ನು ಹೊಗಳಿದ್ದರು. ದೇಶದ ಲಸಿಕೆ ವ್ಯಾಪ್ತಿಯನ್ನು ಅತ್ಯಂತ ಪ್ರಭಾವಶಾಲಿಯಾಗಿದೆ ಎಂದು ಕರೆದಿದ್ದರು. ಸದ್ಯ ಬಿಲ್ ಗೇಟ್ಸ್ ಭಾರತದಲ್ಲಿ ಪ್ರಸಿದ್ಧವಾದ ರೊಟ್ಟಿಯನ್ನು ತಯಾರಿಸುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.
ಬಿಲ್ ಗೇಟ್ಸ್ ಅವರು ರೊಟ್ಟಿಗಳನ್ನು ತಯಾರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಖ್ಯಾತ ಬಾಣಸಿಗ ಈಟಾನ್ ಬರ್ನಾಥ್ ಅವರೊಂದಿಗೆ ಬಿಲ್ ಗೇಟ್ಸ್ ರೊಟ್ಟಿಗಳನ್ನು ತಯಾರಿಸಿದ್ದಾರೆ.
ಈ ವಿಡಿಯೋವನ್ನು ಬಾಣಸಿಗ ಬರ್ನಾಥ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಾನು ಇತ್ತೀಚೆಗೆ ಭಾರತಕ್ಕೆ ಬಂದಿದ್ದೇನೆ ಮತ್ತು ರೊಟ್ಟಿಗಳನ್ನು ಹೇಗೆ ಮಾಡಬೇಕೆಂದು ಕಲಿತಿದ್ದೇನೆ ಎಂದು ಬರ್ನಾಥ್ ಗೇಟ್ಸ್‌ಗೆ ಹೇಳುವುದರೊಂದಿಗೆ ಕ್ಲಿಪ್ ಪ್ರಾರಂಭವಾಯಿತು. ಈಟಾನ್ ಬರ್ನಾಥ್ ತಮ್ಮ ಅಡುಗೆಮನೆಯಲ್ಲಿ ಬಿಲ್ ಗೇಟ್ಸ್ ಅವರೊಂದಿಗೆ ರೊಟ್ಟಿ ತಯಾರಿಸಲು ಪ್ರಯತ್ನಿಸುತ್ತಾರೆ.

ವಿಡಿಯೋದ ಆರಂಭದಲ್ಲಿ ಬರ್ನಾಥ್ ಬಟ್ಟಲಿನಲ್ಲಿ ಸ್ವಲ್ಪ ಹಿಟ್ಟನ್ನು ಹಾಕಿದರು. ಅದಕ್ಕೆ ಗೇಟ್ಸ್ ನೀರನ್ನು ಸೇರಿಸಿದರು ಮತ್ತು ಎಲ್ಲವನ್ನೂ ಒಟ್ಟಿಗೆ ಮಿಶ್ರಣ ಮಾಡಲು ಪ್ರಾರಂಭಿಸಿದರು. ಈ ವೇಳೆ ಇಬ್ಬರ ನಡುವೆ ಬಿಹಾರದ ಅಡುಗೆ ಬಗ್ಗೆ ಮಾತು ಕೂಡ ನಡೆಯುತ್ತದೆ.
.@BillGates and I had a blast making Indian Roti together. I just got back from Bihar, India where I met wheat farmers whose yields have been increased thanks to new early sowing technologies and women from "Didi Ki Rasoi" canteens who shared their expertise in making Roti. pic.twitter.com/CAb86CgjR3
— Eitan Bernath (@EitanBernath) February 2, 2023
ತುಪ್ಪದ ರೊಟ್ಟಿ ತಯಾರಿಸಿದ ಬಿಲ್ ಗೇಟ್ಸ್
''ಈಟಾನ್ ಅವರು ಭಾರತದ ಬಿಹಾರ ಪ್ರವಾಸದ ವೇಳೆ ಅಲ್ಲಿ ಅವರು ಗೋಧಿ ರೈತರನ್ನು ಭೇಟಿಯಾದರು. ಅಲ್ಲಿ ಗೋಧಿ ಬೆಳೆ ಹೆಚ್ಚಾಗಿದೆ. ಹೊಸ ಬಿತ್ತನೆ ತಂತ್ರಜ್ಞಾನಗಳಿವೆ. ನಾನು ಬಿಲ್ ಗೇಟ್ಸ್ ಅವರು ಒಟ್ಟಿಗೆ ಭಾರತೀಯ ರೋಟಿಯನ್ನು ತಯಾರಿಸಿದ್ದೇವೆ " ಎಂದು ಬರ್ನಾಥ್ ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಬಿಹಾರ ಪ್ರವಾಸದ ವೇಳೆ ಬರ್ನಾಥ್ ''ಅವರು 'ದಿದಿ ಕಿ ರಸೋಯಿ' ಸಮುದಾಯದ ಕ್ಯಾಂಟೀನ್‌ಗಳ ಮಹಿಳೆಯರನ್ನು ಭೇಟಿಯಾದರು. ಅಲ್ಲಿ ಪರಿಪೂರ್ಣ ರೊಟ್ಟಿ ಮಾಡುವಲ್ಲಿ ಮಹಿಳೆಯರ ಪರಿಣತಿಯನ್ನು ಹಂಚಿಕೊಂಡರು'' ಎಂದರು. ಇದನ್ನು ಬರ್ನಾಥ್ ಗೇಟ್ಸ್ ಅವರೊಂದಿಗೆ ಮಾತನಾಡುತ್ತಾ ರೊಟ್ಟಿ ಮಾಡುವುದು ಪ್ರಾರಂಭಿಸುತ್ತಾರೆ.

ಈ ವೇಳೆ ಬರ್ನಾಥ್ ಗೇಟ್ಸ್ ಅವರನ್ನು "ನೀವು ಕೊನೆಯ ಬಾರಿಗೆ ಯಾವಾಗ ಅಡುಗೆ ಮಾಡಿದ್ದೀರಿ?" ಎಂದು ಹೇಳಿದರು. ಅದಕ್ಕೆ ಗೇಟ್ಸ್ ಅವರು "ಸೂಪ್ ಅನ್ನು ಬಿಸಿಮಾಡುವುದು ನಿಯಮಿತವಾಗಿ ಮಾಡುತ್ತೇನೆ" ಎಂದು ಮೈಕ್ರೋಸಾಫ್ಟ್ನ ಸಹ-ಸಂಸ್ಥಾಪಕರು ಉತ್ತರಿಸಿದರು. ಉತ್ತರದೊಂದಿಗೆ ರೊಟ್ಟಿಗಳನ್ನು ತಯಾರಿಸುತ್ತಾರೆ.
ವಿಡಿಯೋ ವೈರಲ್
ಬಳಿಕ ಬಾಣಸಿಗ ಬರ್ನಾಥ್ ರೊಟ್ಟಿಗಳನ್ನು ತವಾದಲ್ಲಿ ಹೇಗೆ ಬೇಯಿಸಲಾಗುತ್ತದೆ ಎಂದು ಗೇಟ್ಸ್ ಗೆ ತೋರಿಸುತ್ತಾರೆ. ಅದರಂತೆ ಗೇಟ್ಸ್ ರೊಟ್ಟಿಯ ಮೇಲೆ ಸ್ವಲ್ಪ ತುಪ್ಪವನ್ನು ಸವರುತ್ತಾರೆ. ನಂತರ, ಬರ್ನಾಥ್ ಗೇಟ್ಸ್ ಇಬ್ಬರೂ ರೊಟ್ಟಿಯ ರುಚಿ ನೋಡುತ್ತಾರೆ. ಈ ಕ್ಲಿಪ್ ಸಾಕಷ್ಟು ಕಾಮೆಂಟ್‌ಗಳನ್ನು ಗಳಿಸಿದೆ. ಇವರಿಬ್ಬರ ಪ್ರಯತ್ನವನ್ನು ಹಲವರು ಶ್ಲಾಘಿಸಿದರೆ, ಇತರರು ಮಾಡಿದ ರೊಟ್ಟಿಗಳನ್ನು ಟೀಕಿಸಿದ್ದಾರೆ.
ಒಬ್ಬ ಬಳಕೆದಾರರು ಬರೆದಿದ್ದಾರೆ, "ನಮ್ಮ ರೊಟ್ಟಿಗೆ ಜಯವಾಗಲಿ. ಮುಂದಿನ ಬಾರಿ ಸ್ವಲ್ಪ ಆರೋಗ್ಯಕರ ರಾಗಿ ಹಿಟ್ಟಿನೊಂದಿಗೆ ಇದನ್ನು ಪ್ರಯತ್ನಿಸಿ'' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, "ಇದು ನಾವು ಊಹಿಸಬಹುದಾದ ಅತ್ಯಂತ ಕೆಟ್ಟ ರೊಟ್ಟಿ. ಆದರೆ ಒಳ್ಳೆಯ ಪ್ರಯತ್ನ! " ಎಂದಿದ್ದಾರೆ. ಇನ್ನೊಬ್ಬರು ಈ ವೀಡಿಯೊವು 'ರೊಟ್ಟಿಯನ್ನು ಹೇಗೆ ಮಾಡಬಾರದು' ಎಂಬಂತಿದೆ.
-
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
ಏಷ್ಯಾದ ಬೃಹತ್ ಆಹಾರ ಮೇಳ 2026: ಜಾಗತಿಕ ಮಾರುಕಟ್ಟೆಗೆ ಉದ್ಯಮ ಲಗ್ಗೆ -
AAHAR 2026: ದೆಹಲಿಯಲ್ಲಿ ಬೃಹತ್ ಆಹಾರ ಮೇಳ 2026, ಆಹಾರೋದ್ಯಮಿಗಳಿಗೆ ಸಾಕಷ್ಟು ಪ್ರಯೋಜನ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ












Click it and Unblock the Notifications