ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Dainik Bhaskar Exit Poll: ಮಹಾಘಟಬಂಧನ್ ಜಯಭೇರಿ ಎಂದ ಭಾಸ್ಕರ್

|
Google Oneindia Kannada News

ಪಾಟ್ನಾ, ನವೆಂಬರ್.07: ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಚುನಾವಣೆ ಮತದಾನೋತ್ತರ ಸಮೀಕ್ಷೆಗಳಲ್ಲಿ ಬಹುತೇಕ ಸಮೀಕ್ಷೆಗಳು ಮಹಾಘಟಬಂಧನ್ ಮೈತ್ರಿಕೂಟಕ್ಕೆ ಅಧಿಕಾರ ದಕ್ಕುವುದು ಪಕ್ಕಾ ಎಂದು ಹೇಳುತ್ತಿವೆ. ದೈನಿಕ್ ಭಾಸ್ಕರ್ ಕೂಡಾ ಆರ್ ಜೆಡಿ ಮತ್ತು ಕಾಂಗ್ರೆಸ್ ದೋಸ್ತಿಗಳು ಸರ್ಕಾರ ರಚಿಸುವುದು ನಿಶ್ಚಿತ ಎಂದು ಹೇಳುತ್ತಿದೆ.

ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊೆೆಂಡಿದೆ. ರಾಜ್ಯದಲ್ಲಿ ಆರ್ ಜೆಡಿ-ಕಾಂಗ್ರೆಸ್ಸಿನ ಮಹಾಘಟಬಂಧನ್ ಮೈತ್ರಿಕೂಟ, ಜೆಡಿಯು-ಬಿಜೆಪಿ-ಎಚ್ಎಎಂನ ಎನ್ ಡಿಎ ಮೈತ್ರಿಕೂಟ ಹಾಗೂ ಲೋಕಜನಶಕ್ತಿ ಪಕ್ಷಗಳ ಭವಿಷ್ಯವನ್ನು ಚುನಾವಣಾ ಸಮೀಕ್ಷೆಗಳ ಮೂಲಕ ವಿಶ್ಲೇಷಿಸಲಾಗುತ್ತದೆ. 2020ರ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುದು ಸಾಕಷ್ಟು ಕುತೂಹಲ ಕೆರಳಿಸಿದೆ. ಅಕ್ಟೋಬರ್.28ರ ಮೊದಲ ಹಂತದಲ್ಲಿ ಶೇ.55.69ರಷ್ಟು ಮತದಾನ ನಡೆದಿದೆ. ನವೆಂಬರ್.03ರ ಎರಡನೇ ಹಂತದಲ್ಲಿ ಶೇ.53.51ರಷ್ಟು ಮತದಾನ ನಡೆದಿದೆ. ಶನಿವಾರ 3ನೇ ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ.

Todays Chanakya Exit Poll: ಮಹಾಘಟಬಂಧನ್ ಮೈತ್ರಿಕೂಟಕ್ಕೆ ಗದ್ದುಗೆTodays Chanakya Exit Poll: ಮಹಾಘಟಬಂಧನ್ ಮೈತ್ರಿಕೂಟಕ್ಕೆ ಗದ್ದುಗೆ

ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಚುನಾವಣೆ ಫಲಿತಾಂಶದ ಕುರಿತು "ದೈನಿಕ್ ಭಾಸ್ಕರ್" ನಡೆಸಿರುವ ಮತದಾನೋತ್ತರ ಸಮೀಕ್ಷೆ ಅಂಕಿ-ಅಂಶಗಳು ಹೇಗಿದೆ ಎನ್ನುವುದರ ಕುರಿತು ಅಂಕಿ-ಅಂಶಗಳ ಸಹಿತ ಮಾಹಿತಿ ಇಲ್ಲಿದೆ.

Bihar Exit Poll Results 2020: Dainik Bhaskar Prediction About Mahagathbandhan Win

ದೈನಿಕ್ ಭಾಸ್ಕರ್ ನುಡಿದ ಬಿಹಾರದ ಭವಿಷ್ಯ:

ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ದೈನಿಕ್ ಭಾಸ್ಕರ್ ಚುನಾವಣೋತ್ತರ ಸಮೀಕ್ಷೆ ನಡೆಸಿದೆ. 2020ರಲ್ಲಿ ಮಹಾಘಟಬಂಧನ್ ಮೈತ್ರಿಕೂಟಕ್ಕೆ ಅಧಿಕಾರಕ್ಕೆ ಬರಲಿದೆ ಎಂದು ದೈನಿಕ್ ಭಾಸ್ಕರ್ ಸಮೀಕ್ಷಾ ವರದಿಯು ಭವಿಷ್ಯ ನುಡಿದಿದೆ. ಮಹಾಘಟಬಂಧನ್ 120-127 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಎನ್ ಡಿಎ ಮೈತ್ರಿಕೂಟ 71-81, ಎಲ್ ಜೆಪಿ ಪಕ್ಷವು 12-23 ಸ್ಥಾನ ಹಾಗೂ ಇತರೆ ಅಭ್ಯರ್ಥಿಗಳು 19-27 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ದೈನಿಕ್ ಭಾಸ್ಕರ್ ಚುನಾವಣೋತ್ತರ ಸಮೀಕ್ಷೆಯಲ್ಲಿ ಉಲ್ಲೇಖಿಸಿದೆ.

2015ರ ಬಿಹಾರ ಚುನಾವಣೆ ಫಲಿತಾಂಶದ ವರದಿ:

Recommended Video

BJP ಸಿಬಿಐ ನಾ miss use ಮಾಡ್ತಿದಾರೆ!! | Oneindia Kannada

ಕಳೆದ 2015ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಲಾಲೂ ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ಪಕ್ಷವು 80 ಸ್ಥಾನ ಜಯಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಸಿಎಂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು 71 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ 27 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಬಿಜೆಪಿ, ಲೋಕಜನಶಕ್ತಿ ಪಕ್ಷ, ಹಿಂದೂಸ್ತಾನ್ ಅವಂ ಮೋರ್ಚಾ ಮತ್ತು ರಾಷ್ಟ್ರೀಯ ಲೋಕಸಮತಾ ಪಕ್ಷಗಳನ್ನೊಳಗೊಂಡ ಎನ್ ಡಿಎ ಮೈತ್ರಿಕೂಟವು 53 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

English summary
Bihar Election Exit Poll Results 2020 in Kannada: Dainik Bhaskar Prediction About Mahagathbandhan Win.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X