ಎಬಿಪಿ-ಸಿವೋಟರ್ ಸಂಸ್ಥೆ: ಬಿಹಾರದ ಅತಿದೊಡ್ಡ ಸಮೀಕ್ಷೆ ಅಪ್ಡೇಟ್

ಬಿಹಾರ ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಚುನಾವಣಾ ಪೂರ್ವ ಸಮೀಕ್ಷೆಗಳು ಬರಲಾರಂಭಿಸಿವೆ. ಎಬಿಪಿ-ಸಿವೋಟರ್ ಸಂಸ್ಥೆ ನೀಡಿರುವ ಅಭಿಮತ ಇಲ್ಲಿದೆ.

ಲೋಕನೀತಿ-ಸಿಎಸ್ಡಿಎಸ್ ಸಂಸ್ಥೆಯ ಚುನಾವಣಾ ಪೂರ್ವ ಸಮೀಕ್ಷೆಯಂತೆ ಎನ್ಡಿಎ ಮತ್ತೆ ಅಧಿಕಾರಕ್ಕೇರುವುದು, ನಿತೀಶ್ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗುವುದು ನಿಶ್ಚಿತ ಎಂದು ಹೇಳಲಾಗಿದೆ. ಎಬಿಪಿ-ಸಿವೋಟರ್ ಸಂಸ್ಥೆ ಅಕ್ಟೋಬರ್ 01ರಿಂದ ಅಕ್ಟೋಬರ್ 28ರ ತನಕ 30 ಸಾವಿರ ಮಂದಿಯನ್ನು ಸಂದರ್ಶಿಸಿ ಅಭಿಪ್ರಾಯ ಸಂಗ್ರಹಿಸಿ ವರದಿ ನೀಡಲಾಗುತ್ತಿದೆ.

ಅಕ್ಟೋಬರ್ 28 ರ ಬುಧವಾರ ಸಂಜೆ 6.30 ರಿಂದ ನವೆಂಬರ್ 7ರ ತನಕ ಎಲೆಕ್ಟ್ರಾನಿಕ್ ಮಾಧ್ಯಮಗಳು ಎಕ್ಸಿಟ್ ಪೋಲ್ ಪ್ರಸಾರ ಮಾಡುವಂತಿಲ್ಲ ಎಂದು ನಿರ್ಬಂಧ ವಿಧಿಸಲಾಗಿದೆ. ಇದೇ ನಿಯಮ ಪ್ರಿಂಟ್ ಹಾಗೂ ವೆಬ್ ಮೀಡಿಯಾಗಳಿಗೂ ಅನ್ವಯವಾಗಲಿದ್ದು, ಯಾವ ರೀತಿ ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಸಾರ ಮಾಡುವಂತಿಲ್ಲ. ಇದು ಬಿಹಾರದ ವಿಧಾನಸಭೆ ಚುನಾವಣೆ, ಲೋಕಸಭೆ ಉಪ ಚುನಾವಣೆ ಎರಡಕ್ಕೂ ಅನ್ವಯವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

Bihar Assembly Elections 2020: ABP-CVoter Opinion Poll updates

2015ರಲ್ಲಿ ರಾಷ್ಟ್ರೀಯ ಜನತಾ ದಳ 80 ಸ್ಥಾನ, ಜನತಾ ದಳ ಯುನೈಟೆಡ್ 71, ಕಾಂಗ್ರೆಸ್ 27 ಗಳಿಸಿದ್ದವು. ಬಿಜೆಪಿ 53 ಸ್ಥಾನ, ಎಲ್ ಜೆಪಿ 2 ಹಾಗೂ ಹಿಂದೂಸ್ತಾನಿ ಅವಾಮ್ ಮೋರ್ಚಾ ಸೆಕ್ಯುಲರ್ 1, ಇತರೆ 10 ಸ್ಥಾನ. ಬಿಜೆಪಿ ಶೇ 24ರಷ್ಟು ಮತಗಳಿಕೆ, ಅರ್ ಜೆ ಡಿ ಶೇ 18 ಹಾಗೂ ಜೆಡಿಯು ಶೇ 17ರಷ್ಟು, ಕಾಂಗ್ರೆಸ್ ಶೇ 7, ಎಲ್ ಜೆಪಿ ಶೇ 4.8ರಷ್ಟು ಮತ ಗಳಿಸಿದ್ದವು.

2015ರಲ್ಲಿ ವಿಧಾನಸಭೆ ಫಲಿತಾಂಶ

2015ರಲ್ಲಿ ವಿಧಾನಸಭೆ ಫಲಿತಾಂಶ

2015ರಲ್ಲಿ ರಾಷ್ಟ್ರೀಯ ಜನತಾ ದಳ 80 ಸ್ಥಾನ, ಜನತಾ ದಳ ಯುನೈಟೆಡ್ 71, ಕಾಂಗ್ರೆಸ್ 27 ಗಳಿಸಿದ್ದವು. ಬಿಜೆಪಿ 53 ಸ್ಥಾನ, ಎಲ್ ಜೆಪಿ 2 ಹಾಗೂ ಹಿಂದೂಸ್ತಾನಿ ಅವಾಮ್ ಮೋರ್ಚಾ ಸೆಕ್ಯುಲರ್ 1, ಇತರೆ 10 ಸ್ಥಾನ. ಬಿಜೆಪಿ ಶೇ 24ರಷ್ಟು ಮತಗಳಿಕೆ, ಅರ್ ಜೆ ಡಿ ಶೇ 18 ಹಾಗೂ ಜೆಡಿಯು ಶೇ 17ರಷ್ಟು, ಕಾಂಗ್ರೆಸ್ ಶೇ 7, ಎಲ್ ಜೆಪಿ ಶೇ 4.8ರಷ್ಟು ಮತ ಗಳಿಸಿದ್ದವು.

2020ರಲ್ಲಿ ಎನ್ಡಿಎ ಶೇ 28ರಷ್ಟು , ಆರ್ ಜೆಡಿ ಶೇ 46, ಎಲ್ ಜೆಪಿ ಶೇ 4 ಹಾಗೂ ಇತರೆ ಪಕ್ಷಗಳು ಶೇ 22ರಷ್ಟು ಮತಗಳಿಸಬಹುದು ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಸೀಮಾಂಚಲ ಹಾಗೂ ಅಂಗ್ ಪ್ರದೇಶ

ಸೀಮಾಂಚಲ ಹಾಗೂ ಅಂಗ್ ಪ್ರದೇಶ

ಸೀಮಾಂಚಲ ಲೋಕಸಭೆ ಪ್ರದೇಶದಲ್ಲಿ 24ಸ್ಥಾನಗಳ ಪೈಕಿ
ಎನ್ಡಿಎ: 11-15,
ಮಹಾಘಟಬಂಧನ್: 8-11 ಸ್ಥಾನ,
ಚಿರಾಗ್ ಪಾಸ್ವಾನ್ ಅವರ ಎಲ್ ಜೆಪಿ 1-2 ಸ್ಥಾನ.
+++
ಅಂಗ್ ಪ್ರದೇಶ
ಅಂಗ್ ಪ್ರದೇಶ ವ್ಯಾಪ್ತಿಯಲ್ಲಿ 27 ಕ್ಷೇತ್ರ ಬರಲಿದೆ.
ಎನ್ಡಿಎ: 16 ರಿಂದ 20 ಸ್ಥಾನ
ಮಹಾಘಟಬಂಧನ್: 6 ರಿಂದ 10 ಸ್ಥಾನ
ಎಲ್ ಜೆಪಿ: 0 ರಿಂದ 2 ಸ್ಥಾನ
ಇತರೆ: 0 ರಿಂದ 1 ಸ್ಥಾನ.

***

ಮಿಥಿಲಾಂಚಲ್ (50)+ ಮಗಧ್ -ಭೋಜಪುರ್ (69)

ಮಿಥಿಲಾಂಚಲ್ (50)+ ಮಗಧ್ -ಭೋಜಪುರ್ (69)

ಮಿಥಿಲಾಂಚಲ್ (50)+ ಮಗಧ್ -ಭೋಜಪುರ್ (69)
ಮಿಥಿಲಾಂಚಲ್
ಎನ್ಡಿಎ: 27 ರಿಂದ 31 ಸ್ಥಾನ (41% )
ಮಹಾಘಟಬಂಧನ್: 18 ರಿಂದ 21 ಸ್ಥಾನ (38%)
ಎಲ್ ಜೆಪಿ: 1 ರಿಂದ 3 ಸ್ಥಾನ (4%)
ಇತರೆ: 0 ರಿಂದ 1 ಸ್ಥಾನ (17% )
+++
ಮಗಧ್ ಭೋಜ್ ಪುರ್
ಎನ್ಡಿಎ: 36 ರಿಂದ 44 ಸ್ಥಾನ (44% )
ಮಹಾಘಟಬಂಧನ್: 23 ರಿಂದ 30 ಸ್ಥಾನ (33%)
ಎಲ್ ಜೆಪಿ: 0 ಸ್ಥಾನ (4%)
ಇತರೆ: 2 ರಿಂದ 3 ಸ್ಥಾನ (19% )

243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆ

243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆ

243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆ ಅವಧಿಯು ನವೆಂಬರ್ 29 ರಂದು ಕೊನೆಗೊಳ್ಳಲಿದೆ. ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆಯೂ ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಅಕ್ಟೋಬರ್ 28ರಂದು 16 ಜಿಲ್ಲೆಗಳ 71 ಕ್ಷೇತ್ರಗಳಿಗೆ 31,000 ಮತಗಟ್ಟೆಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.

ನವೆಂಬರ್ 03ರಂದು ಎರಡನೆಯ ಹಂತದಲ್ಲಿ 17 ಜಿಲ್ಲೆಗಳಲ್ಲಿ 94 ಕ್ಷೇತ್ರಗಳಿಗೆ 42,000 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 07ರಂದು ಮೂರನೇ ಹಂತದಲ್ಲಿ 78 ಕ್ಷೇತ್ರಗಳಿಗೆ 15 ಜಿಲ್ಲೆಗಳಲ್ಲಿ ಅಂದಾಜು 33,500 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಅಂತಿಮವಾಗಿ ನವೆಂಬರ್10ರಂದು ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶವು ಹೊರ ಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+