ಶೀಘ್ರವೇ ಆರಂಭಗೊಳ್ಳಲಿರುವ 'ಭಾರತ್ ಗೌರವ್' ರೈಲುಗಳ ಬಗ್ಗೆ ಮಾಹಿತಿ
ನವದೆಹಲಿ, ನವೆಂಬರ್ 24: ಪ್ರವಾಸೋದ್ಯಮವನ್ನು ಗಮನದಲ್ಲಿಟ್ಟುಕೊಂಡು ಶೀಘ್ರವೇ 190 ಭಾರತ್ ಗೌರವ್ ರೈಲುಗಳನ್ನು ಆರಂಭಿಸುವುದಾಗಿ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ತಿಳಿಸಿದ್ದಾರೆ.
ಭಾರತೀಯ ರೈಲ್ವೆ ಮಂಗಳವಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರ ಅಡಿಯಲ್ಲಿ ಯಾವುದೇ ರಾಜ್ಯ ಸರ್ಕಾರ ಅಥವಾ ಕಂಪನಿಯು ರೈಲನ್ನು ಬಾಡಿಗೆಗೆ ಪಡೆಯಬಹುದು. ಇದಕ್ಕಾಗಿ ರೈಲ್ವೆ ಸಚಿವಾಲಯವು ಮಧ್ಯಸ್ಥಗಾರರೊಂದಿಗೆ ಚರ್ಚೆ ನಡೆಸಿದೆ. ಈ ಸೇವೆಗೆ ರೈಲ್ವೆ ಕನಿಷ್ಠ ಶುಲ್ಕವನ್ನು ವಿಧಿಸುತ್ತದೆ. ಈ ಯೋಜನೆಗಾಗಿ ಒಟ್ಟು 3333 ಕೋಚ್‌ಗಳನ್ನು ಅಂದರೆ 190 ರೈಲುಗಳನ್ನು ರೈಲ್ವೆ ಇಲಾಖೆ ಗುರುತಿಸಿದೆ.
ಟಿಕೆಟ್ ದರ ಕಡಿತಗೊಳಿಸಿದ ಭಾರತೀಯ ರೈಲ್ವೆ: ಯಾವೆಲ್ಲಾ ರೈಲಿನಲ್ಲಿ ದರ ಕಡಿಮೆ?
ವೇಳಾಪಟ್ಟಿ ಆಧಾರದಲ್ಲಿ ಈ ರೈಲುಗಳು ಸಂಚರಿಸಲಿದ್ದು, 190 ರೈಲುಗಳನ್ನು ಗುರುತಿಸಲಾಗಿದೆ. ಈ ರೈಲುಗಳು ದೇಶದ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸಲಿವೆ. ಖಾಸಗಿ ವಲಯ ಹಾಗೂ ಐಆರ್‌ಸಿಟಿಸಿ ಎರಡೂ ಈ ರೈಲುಗಳ ನಿರ್ವಹಣೆ ನಡೆಸಲಿವೆ.
ಜನರಿಗೆ ದೇಶದ ಪರಂಪರೆಯನ್ನು ತಿಳಿಸುವ ಉದ್ದೇಶದಿಂದ ಈ ಥೀಮ್ ಆಧಾರಿತ ರೈಲುಗಳನ್ನು ಆರಂಭಿಸುವಂತೆ ಪ್ರಧಾನಿ ಮೋದಿ ಸಲಹೆ ನೀಡಿದ್ದರು. ಈ ರೈಲುಗಳ ಟಿಕೆಟ್ ದರಗಳನ್ನು ಪ್ರಾಯೋಗಿಕವಾಗಿ ಪ್ರವಾಸದ ಆಯೋಜಕರೇ ನಿರ್ಧರಿಸಲಿದ್ದಾರೆ.
ಈ ಎಲ್ಲಾ ಸಮಯದಲ್ಲಿ ನಾವು ಸರಕು ಮತ್ತು ಪ್ರಯಾಣಿಕರ ವಿಭಾಗಗಳನ್ನು ಹೊಂದಿದ್ದೇವೆ. ಭಾರತ್ ಗೌರವ್ ರೈಲು ಸೇವೆಗಳಲ್ಲಿ ಮತ್ತೊಂದು ಹೊಸ ವಿಭಾಗವಾಗಲಿದೆ ಎಂದು ಅವರು ಹೇಳಿದರು. "ನಮ್ಮ ದೇಶವು ಅಂತಹ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಈ ರೈಲುಗಳು ಪ್ರವಾಸಿಗರನ್ನು ಸಾಂಸ್ಕೃತಿಕ ಪರಂಪರೆಯ ಸ್ಥಳಗಳ ಬಗ್ಗೆ ತಿಳಿಯಲು ಕರೆದೊಯ್ಯುವ ಉದ್ದೇಶ ಹೊಂದಿದೆ ಎಂದು ಹೇಳಿದ್ದಾರೆ.
ಆಸಕ್ತಿ ಇರುವವರು ರೂ 1 ಲಕ್ಷದ ಒಂದು ಬಾರಿ ಶುಲ್ಕದೊಂದಿಗೆ ನೋಂದಾಯಿಸುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆಯೋಜಕರು ದೃಶ್ಯವೀಕ್ಷಣೆಯ, ಆಹಾರ, ಸ್ಥಳೀಯ ಸಾರಿಗೆ (ಟ್ಯಾಕ್ಸಿ ಇತ್ಯಾದಿ), ನಿಲುಗಡೆ ಸ್ಥಳಗಳಲ್ಲಿ ಹೋಟೆಲ್‌ಗಳು, ಆನ್‌ಬೋರ್ಡ್ ಮನರಂಜನೆ ಮತ್ತು ಅಂತಹ ವಿಷಯಗಳನ್ನು ಒದಗಿಸುವುದು ಯೋಜನೆಯಡಿಯಲ್ಲಿ ಬರುತ್ತದೆ.
ವ್ಯವಸ್ಥೆಯು ಎರಡರಿಂದ 10 ವರ್ಷಗಳವರೆಗೆ ಇರಬಹುದು. ಆಪರೇಟರ್‌ಗಳು ಪ್ರತಿ ರೇಕ್‌ಗೆ 1 ಕೋಟಿ ರೂಪಾಯಿ ಭದ್ರತಾ ಠೇವಣಿ ನೀಡಬೇಕು. ಪ್ರತಿ ರೈಲಿನ ಗಾತ್ರವು ಎರಡು ಗಾರ್ಡ್ ವ್ಯಾನ್‌ಗಳನ್ನು ಒಳಗೊಂಡಂತೆ 14-20 ಕೋಚ್‌ಗಳಾಗಿರುತ್ತದೆ. ರೈಲ್ವೇ ಕೇವಲ ಸಾಗಾಣಿಕೆ ಶುಲ್ಕ ಮತ್ತು ಬಳಕೆಯ ಹಕ್ಕು ಶುಲ್ಕವನ್ನು ತೆಗೆದುಕೊಳ್ಳುತ್ತದೆ.
ನಿರ್ವಾಹಕರಿಗೆ ಅನುಕೂಲವಾಗುವಂತೆ ರೈಲ್ವೇಯು ವಲಯಗಳಲ್ಲಿ ವಿಶೇಷ ಘಟಕಗಳನ್ನು ಸ್ಥಾಪಿಸುತ್ತದೆ. ರೈಲುಗಳ ಒಳಗೆ ಮತ್ತು ಹೊರಭಾಗದಲ್ಲಿ ಬ್ರ್ಯಾಂಡಿಂಗ್ ಮತ್ತು ಜಾಹೀರಾತನ್ನು ಅನುಮತಿಸಲಾಗಿದೆ.
'ಭಾರತ್ ಗೌರವ್' ರೈಲು ಸಂಚರಿಸಲಿದೆ: ಭಾರತ್ ಗೌರವ್ ರೈಲುಗಳು ಭಾರತದ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರದರ್ಶಿಸುವ ಥೀಮ್ ಅನ್ನು ಆಧರಿಸಿವೆ. ರೈಲ್ವೆ ಇಲಾಖೆಯ ಪ್ರಕಾರ, ಇದಕ್ಕಾಗಿ ಸುಮಾರು 190 ರೈಲುಗಳನ್ನು ನಿಗದಿಪಡಿಸಲಾಗಿದೆ. ಒಂದು ವೇಳೆ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ಈ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ರೈಲ್ವೆ ಸಚಿವರು ಹೇಳಿದ್ದಾರೆ.
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ: ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ಈ ರೈಲುಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಇದರಲ್ಲಿ ಎಲ್ಲಾ ರೀತಿಯ ರೈಲುಗಳು, ಎಸಿ, ನಾನ್ ಎಸಿ ಒಳಗೊಂಡಿರುತ್ತವೆ. ಇದಲ್ಲದೆ, ಕಂಪನಿಯು ಮಾರ್ಗವನ್ನು ನಿರ್ಧರಿಸುವ ಹಕ್ಕನ್ನು ಹೊಂದಿರಲಿದೆ.
ಈ ರೈಲುಗಳು ಪ್ರವಾಸಿ ತಾಣಗಳನ್ನು ಸುತ್ತಲಿವೆ: ಭಾರತದ ಪ್ರವಾಸಿ ತಾಣಗಳಿಗೆ ಈ ರೈಲುಗಳನ್ನು ಸಂಚರಿಸಲಿವೆ. ಭಾರತ ಗೌರವ ರೈಲು, ರಾಮಾಯಣ ರೈಲು ಭಾರತೀಯ ಸಂಸ್ಕೃತಿ, ನಮ್ಮ ವೈವಿಧ್ಯತೆ ಮತ್ತು ಪರಂಪರೆಯನ್ನು ತಿಳಿದುಕೊಳ್ಳಲು ಜನರಿಗೆ ಅವಕಾಶ ನೀಡಲಿವೆ ಎಂದು ರೈಲ್ವೆ ಸಚಿವರು ಹೇಳಿದ್ದಾರೆ. ರೈಲ್ವೇ ಮುಂದಿನ ಸಮಯದಲ್ಲಿ ಗುರುಕೃಪಾ ಮತ್ತು ಸಫಾರಿ ರೈಲನ್ನು ಓಡಿಸಲಿದೆ.