ಪುರುಷರೇ.. ಮಹಿಳೆಯರನ್ನು ಆಕರ್ಷಿಸುವ ಕ್ಲಾಸಿ ಗಡ್ಡ ಬೇಕೇ? ಹಾಗಾದರೆ ಈ ಆಹಾರಗಳನ್ನು ಸೇವಿಸಿ...!
ಪುರುಷರಿಗಾಗಿ ಸೌಂದರ್ಯ ಸಲಹೆಗಳು: ಸಾಮಾನ್ಯವಾಗಿ ಪುರುಷರಿಗೆ ತಮ್ಮ ತಲೆ ಕೂದಲು ಚೆನ್ನಾಗಿರಬೇಕು, ಮೀಸೆ ಅಂದುಕೊಂಡಂತೆ ಇರಬೇಕು ಇದರೊಂದಿಗೆ ಗಡ್ಡಾ ಕೂಡ ವಿವಿಧ ರೀತಿಯಲ್ಲಿ ಬೆಳೆಸಬೇಕು ಅನ್ನೋ ಆಸೆ ಇದ್ದೇ ಇರುತ್ತದೆ. ತಲೆ ಕೂದಲು ಸ್ಟೈಲಿಶ್ ಆಗಿ ಬೆಳೆಸಬೇಕು, ಮೀಸೆ ಆಕರ್ಷಕವಾಗಿ ಬಿಡಬೇಕು ಅನ್ನೋ ಆಸೆ ಏನೋ ನಿಜ, ಆದರೆ ಇದು ಗಡ್ಡಕ್ಕೂ ಅನ್ವಯಿಸುತ್ತೆ ಅನ್ನೋದು ನಿಜ. ಆದರೆ ಕೆಲ ಬಾರಿ ಇದು ಸಾಧ್ಯವಾಗದೇ ಇರಬಹುದು. ಇದರಿಂದ ನಿಮ್ಮ ಸಂಗಾತಿಯ ನೋಟ ನಿಮ್ಮ ಮೇಲೆ ಬೀಳದೇ ಇರಬಹುದು.
ಆದರೆ ಕೆಲ ಆಹಾರಗಳನ್ನು ಸೇವಿಸುವುದನ್ನು ರೂಢಿಸಿಕೊಳ್ಳುವ ಮೂಲಕ ನೀವು ನಿಮ್ಮ ತಲೆ, ಮೀಸೆ, ಗಡ್ಡದ ಕೂದಲನ್ನು ಚೆನ್ನಾಗಿ ಬೆಳೆಸಿಕೊಳ್ಳಬಹುದು. ಆಗ ನಿಮಗಿಷ್ಟವಾದ ರೀತಿ ಸ್ಟೈಲ್ ಮಾಡಬಹುದು. ಹಾರ್ಮೋನ್ ಸಮತೋಲನಕ್ಕೆ ಸಹಾಯ ಮಾಡುವ ಮತ್ತು ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವ ಸಮತೋಲಿತ ಆಹಾರವನ್ನು ನಿರ್ವಹಿಸುವುದು ಗಡ್ಡದ ಬೆಳವಣಿಗೆಯನ್ನು ಉತ್ತೇಜಿಸಲು ನೈಸರ್ಗಿಕ ಮಾರ್ಗವಾಗಿದೆ. ಹಾಗಾದರೆ ನಿಮಗೆ ಸುಂದರವಾದ ಮತ್ತು ಕ್ಲಾಸಿ ಗಡ್ಡವನ್ನು ನೀಡುವ ಅತ್ಯುತ್ತಮ ಆಹಾರಗಳು ಯಾವುವು ಎಂದು ನೋಡೋಣ.

ಕಡಲೆಕಾಯಿ
ಕಡಲೆಕಾಯಿಯಲ್ಲಿ ನಿಯಾಸಿನ್, ಫೋಲಿಕ್ ಆಮ್ಲ ಮತ್ತು ಬಯೋಟಿನ್ ಅಧಿಕವಾಗಿದ್ದು, ಕೂದಲಿನ ನಾರುಗಳ ರಚನೆಗೆ ನೇರವಾಗಿ ಪರಿಣಾಮ ಬೀರುತ್ತದೆ. ಹೀಗಾಗಿ ಇದು ಗಡ್ಡ ಬೆಳವಣಿಗೆಗೆ ಆರೋಗ್ಯಕರ ಆಹಾರವಾಗಿದೆ. ಹುರಿದ ಅಥವಾ ಬೇಯಿಸಿದ ಕಡಲೆಕಾಯಿಗಳು ಸೇವನೆಗೆ ಉತ್ತಮ ಆಯ್ಕೆಗಳಾಗಿವೆ. ಇದಕ್ಕೆ ಉಪ್ಪನ್ನು ಬೆರೆಸುವುದನ್ನು ತಪ್ಪಿಸಿ ತಿನ್ನುವುದು ಉತ್ತಮ. ಈ ಕಡಲೆಕಾಯಿಗಳು ಅಗ್ಗದ ಬೆಲೆಯಲ್ಲಿ ಲಭ್ಯವಿರುವುದರಿಂದ ಹೆಚ್ಚಾಗಿ ಸೇವಿಸಬಹುದು.
ಆಲೂಗಡ್ಡೆ
ಆಲೂಗಡ್ಡೆ ಅತ್ಯುತ್ತಮವಾದ ಅಂಟುರಹಿತ ಕಾರ್ಬೋಹೈಡ್ರೇಟ್ ಆಹಾರವಾಗಿದೆ. ಇದು ನೈಸರ್ಗಿಕ DHT ಮತ್ತು ಟೆಸ್ಟೋಸ್ಟೆರಾನ್ ಉತ್ಪಾದನೆಯನ್ನು ಉತ್ತೇಜಿಸುವ ಆಹಾರಗಳಲ್ಲಿ ಒಂದಾಗಿದೆ. ಆಲೂಗಡ್ಡೆಯ ನಿಯಮಿತ ಸೇವನೆಯು ಗಡ್ಡ ಬೆಳೆಸಲು ಪುರುಷರಿಗೆ ಸಹಾಯ ಮಾಡುತ್ತದೆ. ಆಲೂಗಡ್ಡೆ ತಯಾರಿಸಲು ಹಲವು ಮಾರ್ಗಗಳಿವೆ, ಬೇಯಿಸಿದ, ಹುರಿದ ಮತ್ತು ಇತರ ತರಕಾರಿಗಳೊಂದಿಗೆ ಮಿಶ್ರಣ ಮಾಡಿ ಸೇವಿಸಬಹುದು. ನಿಮ್ಮ ಊಟದೊಂದಿಗೆ ದಿನಕ್ಕೆ ಒಮ್ಮೆಯಾದರೂ ಅವುಗಳನ್ನು ಸೇವಿಸಿ.
ದಾಲ್ಚಿನ್ನಿ
ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿಂದ ಅಮೃದ್ಧವಾಗಿದೆ. ದಾಲ್ಚಿನ್ನಿ ದೇಹದ ಶಾಖದ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಕೂದಲಿನ ಬೇರುಗಳಿಗೆ ಆಮ್ಲಜನಕ-ಭರಿತ ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ಗಡ್ಡವನ್ನು ಬಲಪಡಿಸುತ್ತದೆ ಮತ್ತು ಪೋಷಿಸುತ್ತದೆ. ಇದನ್ನು ಜೇನುತುಪ್ಪ ಮತ್ತು ಬೆಚ್ಚಗಿನ ನೀರಿನಿಂದ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಿ.

ದೊಣ್ಣೆ ಮೆಣಸಿನ ಕಾಯಿ
ದೊಣ್ಣೆ ಮೆಣಸಿನ ಕಾಯಿ ಕೂದಲಿನ ಬೇರುಗಳಿಗೆ ರಕ್ತಪರಿಚಲನೆಯನ್ನು ಉತ್ತೇಜಿಸುವ ಮತ್ತು ಅವುಗಳನ್ನು ಉತ್ತಮ ಪುನರ್ಯೌವನಗೊಳಿಸುವ ಕೆಲಸ ಮಾಡುತ್ತದೆ. ಹೀಗಾಗಿ ಇದನ್ನು ವಾರಕ್ಕೆ ಮೂರರಿಂದ ನಾಲ್ಕು ಬಾರಿ ಸೇವುಸುವುದು ಉತ್ತಮ. ಇದು ಪುರುಷರ ಗಡ್ಡ ಬೆಳವಣಿಗೆಗೆ ಸಹಕಾರಿಯಾಗಿದೆ.
ಕುಂಬಳಕಾಯಿ ಬೀಜಗಳು
ಉಪ್ಪು ಹಾಕದ ಕುಂಬಳಕಾಯಿ ಬೀಜಗಳಲ್ಲಿ ಸತುವು ಸಮೃದ್ಧವಾಗಿದೆ. ವಿಜ್ಞಾನಿಗಳ ಪ್ರಕಾರ, ಸತುವು ಶಕ್ತಿಯುತವಾದ ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿದೆ. ಇದು ಕೂದಲಿನ ಬೆಳವಣಿಗೆಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಇದನ್ನು ದಿನದ ಯಾವುದೇ ಸಮಯದಲ್ಲಿ ತಿನ್ನಬಹುದು.
ಕಿತ್ತಳೆ
ಕಿತ್ತಳೆ ಹಣ್ಣಿನಲ್ಲಿ ನೈಸರ್ಗಿಕ ಪೋಷಕಾಂಶಗಳಾದ ವಿಟಮಿನ್ ಸಿ ಮತ್ತು ಥೈರಾಯ್ಡ್ ಕಾರ್ಯವನ್ನು ಉತ್ತೇಜಿಸುವ ರಾಸಾಯನಿಕಗಳು ಗಡ್ಡದ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಕಿತ್ತಳೆ ಹಣ್ಣನ್ನು ಕಚ್ಚಾ ಅಥವಾ ರಸವನ್ನು ಸೇವಿಸಬಹುದು.
ಒಣ ದ್ರಾಕ್ಷಿಗಳು
ದ್ರಾಕ್ಷಿ ಬೋರಾನ್ ಟೆಸ್ಟೋಸ್ಟೆರಾನ್ ಮತ್ತು DHT ಮಟ್ಟವನ್ನು ಹೆಚ್ಚಿಸುತ್ತದೆ. ಗಡ್ಡದ ಬೆಳವಣಿಗೆಯನ್ನು ಉತ್ತೇಜಿಸಲು ಒಣದ್ರಾಕ್ಷಿಗಳನ್ನು ಒಣದಾಗಿ ಸೇವಿಸಬಹುದು ಅಥವಾ ನೀರಿನಲ್ಲಿ ನೆನೆಸಬಹುದು. ಇದನ್ನು ಪಾಯಸ ಮತ್ತು ಹಲ್ವಾ ಮುಂತಾದ ಭಾರತೀಯ ಸಿಹಿತಿಂಡಿಗಳಲ್ಲಿ ಬಳಸಬಹುದು ಅಥವಾ ರಾತ್ರಿಯಿಡೀ ನೆನೆಸಿ ಬೆಳಿಗ್ಗೆ ತೆಗೆದುಕೊಳ್ಳಬಹುದು.












Click it and Unblock the Notifications