OMG: ಯುಪಿ ಪೋಸ್ಟ್‌ಮಾರ್ಟಮ್ ಹೌಸ್‌ನಲ್ಲಿ ತಾನಾಗಿಯೇ ನಡೆದ ಬಿದಿರಿನ ಏಣಿ: ಭಯಾನಕ ವಿಡಿಯೋ ವೈರಲ್
ಯುಪಿ ವೈದ್ಯಕೀಯ ಕಾಲೇಜಿನ ಪೋಸ್ಟ್‌ಮಾರ್ಟಮ್ ಹೌಸ್‌ನಲ್ಲಿ ತನ್ನಷ್ಟಕ್ಕೆ ತಾನೇ ಬಿದಿರಿನ ಏಣಿಯೊಂದು ನಡೆದುಕೊಂಡು ಹೋಗುವ ಭಯಾನಕ ವಿಡಿಯೋ ವೈರಲ್ ಆಗಿದೆ.
ಹಾರುವ ವಸ್ತುಗಳಾಗಲಿ ಅಥವಾ ಭಯಾನಕ ಸುಂಟರಗಾಳಿಯಾಗಲಿ ಎಲ್ಲವನ್ನೂ ವೈಜ್ಞಾನಿಕವಾಗಿ ಸಾಬೀತುಪಡಿಸಿದ ಆಧುನಿಕ ಯುಗದಲ್ಲಿ ನಾವು ವಾಸಿಸುತ್ತಿದ್ದೇವೆ. ಎಲ್ಲದಕ್ಕು ವೈಜ್ಞಾನಿಕ ವಿವರಣೆಯನ್ನು ಹೊಂದಿದ್ದೇವೆ. ಆದರೂ ಕೆಲವೊಮ್ಮೆ ಕಾಣದ ಶಕ್ತಿ ಎನ್ನುವ ಮಾತು ಬಂದಾಗ ಇದಕ್ಕೆ ವೈಜ್ಞಾನಿಕವಾಗಿ ಉತ್ತರವಿಲ್ಲ.

ಕಾಣದ ಶಕ್ತಿ ಎನ್ನುವುದು ಸಿನಿಮಾಗಳಲ್ಲಿ ಮಾತ್ರ ಬಿಂಬಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಆದರೂ ಕೆಲವೊಮ್ಮೆ ಕೆಲ ವಿಚಿತ್ರ ಘಟನೆಗಳು ಈ ಬಗ್ಗೆ ಚರ್ಚೆಯನ್ನು ಹುಟ್ಟು ಹಾಕುತ್ತವೆ. ಹೌದು.. ಕಾಣದ ಶಕ್ತಿ ಈ ಜಗತ್ತಿಲ್ಲಿ ಇಲ್ಲ ಎನ್ನುವುದು ಕೆಲವರ ವಾದ. ಇನ್ನೂ ಕೆಲವರು ಕಾಣದ ಶಕ್ತಿ ಇದೆ ಎನ್ನುದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಕೆಲ ಘಟನೆಗಳು ನಮ್ಮ ನಡುವೆ ನಡೆದಿವೆ.
ಇದಕ್ಕೆ ಪೂರಕವಾಗಿ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ ಬಿದಿರಿನ ಏಣಿಯೊಂದು ಯಾರ ಸಹಾಯವಿಲ್ಲದೆ ನಡೆದಾಡಿದೆ. ಈ ವಿಡಿಯೋ ನೋಡುಗರ ಎದೆಯಲ್ಲಿ ನಡುಕ ಹುಟ್ಟಿಸುತ್ತದೆ. ಈ ಏಣಿ ನಡೆದಾಡುವ ದೃಶ್ಯವನ್ನು ಉತ್ತರ ಪ್ರದೇಶದ ಬರೇಲಿಯಲ್ಲಿರುವ ಎಸ್‌ಆರ್‌ಎಂಎಸ್ ವೈದ್ಯಕೀಯ ಕಾಲೇಜಿನ ಪೋಸ್ಟ್‌ಮಾರ್ಟಮ್ ಹೌಸ್‌ನಲ್ಲಿ ಸೆರೆ ಹಿಡಿಯಲಾಗಿದೆ.
ಏಣಿ ಯಾರ ಸಹಾಯವೂ ಇಲ್ಲದೆ ಮಾನವ ಹೆಜ್ಜೆ ಹಾಕುವಂತೆ ನಡೆಯುತ್ತದೆ. ಈ ವಿಡಿಯೋ ವೈರಲ್ ಆದ ಬಳಿಕ ಹಲವಾರು ಜನ ಇದು ದೆವ್ವದ ಕೈವಾಡ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
कमजोर दिल वाले दूर रहें...
— Arvind Chotia (@arvindchotia) August 29, 2023
बरेली (उत्तर प्रदेश) के SRMS मेडिकल कॉलेज के पोस्टमार्टम हाउस में अपने चारों टांगों से सीढ़ी चलने का वीडियो वायरल हो रहा है। pic.twitter.com/Up9BHq4ChB
ಏಣಿ ಮಾನವನಂತೆ ನಡೆಯುವುದು ಹೀಗೆ ನೋಡಿ
ಕ್ಲಿಪ್ ಅನ್ನು X (ಹಿಂದೆ ಟ್ವಿಟರ್) ನಲ್ಲಿ ಅರವಿಂದ್ ಚೋಟಿಯಾ ಎಂಬುವವರು ಹಂಚಿಕೊಂಡಿದ್ದಾರೆ. "ದುರ್ಬಲ ಹೃದಯದವರು ಇದನ್ನು ವೀಕ್ಷಿಸಬೇಡಿ'' ಎಂದು ಅವರು ಬರೆದಿದ್ದಾರೆ. ''ಬರೇಲಿ (ಉತ್ತರ ಪ್ರದೇಶ) ಎಸ್‌ಆರ್‌ಎಂಎಸ್ ವೈದ್ಯಕೀಯ ಕಾಲೇಜಿನ ಪೋಸ್ಟ್ ಮಾರ್ಟಮ್ ಹೌಸ್‌ನಲ್ಲಿ ಎಲ್ಲಾ ನಾಲ್ಕು ಕಾಲುಗಳೊಂದಿಗೆ ಏಣಿ ನಡೆಯುವ ವೀಡಿಯೊ" ಎಂಬ ಶೀರ್ಷಿಕೆಯೊಂದಿಗೆ ಅವರು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವಿಡಿಯೋ ಹಂಚಿಕೊಂಡ ನಂತರ 6.88 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ ಮತ್ತು 7,400 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಈ ಭಯಾನಕ ಕ್ಲಿಪ್ ಗೆ ಹಲವಾರು ಜನ ಕಾಮೆಂಟ್ ಮಾಡಿದ್ದಾರೆ. ಆದರೆ ಸೂಕ್ಷ್ಮವಾಗಿ ಅವಲೋಕಿಸಿದರೆ ಬೇರೆಯದೇ ವಾಸ್ತವಾಂಶ ತಿಳಿಯುತ್ತದೆ.
ವಿಜ್ಞಾನ ಹೇಳುವುದು ಹೀಗೆ..
ವಿಜ್ಞಾನ ಈ ಏಣಿಯ ಚಲನೆಗೆ ವಿವರಣೆಯನ್ನು ನೀಡುತ್ತದೆ. ನಿಷ್ಕ್ರಿಯ ಡೈನಾಮಿಕ್ ವಾಕ್ ಎಂದು ಕರೆಯಲ್ಪಡುವ ವಿದ್ಯಮಾನದ ಮೇಲೆ ಕಾರ್ಯನಿರ್ವಹಿಸುವ ನ್ಯೂಟನ್‌ನ ಜಡತ್ವ ನಿಯಮ ಇದಕ್ಕೆ ಕಾರಣವೆಂದು ಹೇಳಬಹುದು. ಇದರರ್ಥ ವಸ್ತುವು ಇಳಿಜಾರಾದ ಮೇಲ್ಮೈಯಲ್ಲಿ ತನ್ನ ಚಲನೆಯನ್ನು ನಿರ್ವಹಿಸುತ್ತದೆ. ಹೀಗಾಗಿ ಇದಕ್ಕೆ ಯಾವುದೇ ಬಾಹ್ಯ ಶಕ್ತಿಯು ಮಧ್ಯಪ್ರವೇಶಿಸುವುದಿಲ್ಲ ಎಂದು ವಿಜ್ಞಾನ ಹೇಳುತ್ತದೆ. 'ನಿಷ್ಕ್ರಿಯ ಡೈನಾಮಿಕ್ ವಾಕ್' ಪರಿಕಲ್ಪನೆಯು ನ್ಯೂಟನ್‌ನ ಜಡತ್ವ ನಿಯಮವನ್ನು ಆಧರಿಸಿದೆ. ಇದು ಇಳಿಜಾರಾದ ಮೇಲ್ಮೈಯಲ್ಲಿ ಚಲಿಸಬಹುದು ಎಂದು ಹೇಳುತ್ತದೆ.












Click it and Unblock the Notifications