ಬಜಾಜ್ ಸಿಎಂಜಿ ಬೈಕ್ ಬಿಡುಗಡೆಗೆ ಮುಹೂರ್ತ ಫಿಕ್ಸ್!
ದೇಶದಲ್ಲಿ ಪೆಟ್ರೋಲ್ ವಾಹನಗಳಿಗೆ ಸಿಎನ್‌ಜಿ ವಾಹನಗಳು ಪೈಪೋಟಿ ನೀಡುತ್ತಿವೆ. ಪೆಟ್ರೋಲ್‌ಗೆ ಪರ್ಯಾಯವಾಗಿ ಬಳಸಬಹುದಾದ ಇಂಧನದತ್ತ ಜನರು ಮನಸ್ಸು ಮಾಡುತ್ತಿದ್ದಾರೆ. ಈಗ ರಸ್ತೆಗಳಲ್ಲೂ ಬ್ಯಾಟರಿ ಚಾಲಿತ ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಮಾರುಕಟ್ಟೆಯಲ್ಲಿ ಟೂವಿಲರ್ ಸೆಗ್ಮೆಟ್‌ನಲ್ಲೂ ಬ್ಯಾಟರಿ ವಾಹನಗಳಿಗೆ ಬೇಡಿಕೆ ಹೆಚ್ಚು. ಬರೀ ಸ್ಕೂಟರ್‌ನಲ್ಲೇ ಕಾಣಿಸಿಕೊಳ್ಳುತ್ತಿದ್ದ ವಾಹನಗಳು ಇನ್ನು ಬೈಕ್‌ನಲ್ಲೂ ಕಾಣಿಸಿಕೊಳ್ಳಲಿವೆ.
ಬಜಾಜ್‌ನ ಸಿಎನ್‌ಜಿ ಬೈಕ್ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ. ಮೂಲಗಳ ಪ್ರಕಾರ, ಬಜಾಜ್ ತನ್ನ CNG ಬೈಕ್ ಅನ್ನು ಜುಲೈ 5 ರಂದು ಪುಣೆಯಲ್ಲಿ ಬಿಡುಗಡೆ ಮಾಡಲಿದೆ ಎಂದು ತಿಳಿದು ಬಂದಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಸಮ್ಮುಖದಲ್ಲಿ ಪುಣೆಯಲ್ಲಿ ಸಿಎನ್‌ಜಿ ಬೈಕ್ ಅನಾವರಣಗೊಳ್ಳಲಿದೆ. ಆದರೆ, ಈ ಬೈಕ್‌ನ ಹೆಸರೇನು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಕೆಲವು ವರದಿಗಳನ್ನು ನಂಬುವದಾದರೆ ಈ ಬೈಕ್‌ಗೆ ಬ್ರೂಸರ್' ಎಂದು ಹೆಸರಿಸಬಹುದು.

ಬೈಕ್‌ನಲ್ಲಿ ಏನೆಲ್ಲಾ ಸೌಲಭ್ಯ ಹೊಂದಿದೆ?
ದೇಶದಲ್ಲಿ ಪೆಟ್ರೋಲ್ ಬೆಲೆ ದಿನ ದಿನಕ್ಕೆ ಏರಿಕೆ ಆಗುತ್ತಿದೆ. ಇದು ಮಧ್ಯಮ ವರ್ಗದವರಿಗೆ ವರವಾನವಾಗುವ ಸಾಧ್ಯತೆ ಇದೆ. ಬಜಾಜ್ ಸಿಎನ್‌ಜಿ ಬೈಕ್ ಇಂಧನ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಆಹ್ವಾನ ಪತ್ರಿಕೆಯಲ್ಲಿ ಬಜಾಜ್ ಸಿಎನ್‌ಜಿ ಮೋಟಾರ್‌ಸೈಕಲ್‌ನಲ್ಲಿ ಫ್ಲಾಟ್ ಸಿಂಗಲ್ ಸೀಟ್ ಕಾಣಬಹುದಾಗಿದೆ. ಇದರಲ್ಲಿ ಬೈಕ್ ಸಿಎನ್‌ಜಿ ಮತ್ತು ಪೆಟ್ರೋಲ್ ಟ್ಯಾಂಕ್‌ನೊಂದಿಗೆ ಡ್ಯುಯಲ್ ಇಂಧನ ಟ್ಯಾಂಕ್ ಅನ್ನು ಪಡೆಯಬಹುದು. CNG ಬೈಕು ಪರೀಕ್ಷೆಯ ಸಮಯದಲ್ಲಿ ಹಲವಾರು ಸಂದರ್ಭಗಳಲ್ಲಿ ಭಾರತೀಯ ರಸ್ತೆಗಳಲ್ಲಿ ಕಾಣಿಸಿಕೊಂಡಿದೆ.
ಬಜಾಜ್, 'ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಮಧ್ಯೆ, ಕಂಪನಿಯು CNG ಮಾದರಿಯೊಂದಿಗೆ ಮಧ್ಯಮ ಗ್ರಾಹಕರನ್ನು ಗುರಿಯಾಗಿಸುತ್ತದೆ. ಇದನ್ನು ಮೊದಲು ಮಹಾರಾಷ್ಟ್ರದಲ್ಲಿ ಮತ್ತು ನಂತರ ಸಿಎನ್‌ಜಿ ಕೇಂದ್ರಗಳು ಲಭ್ಯವಿರುವ ರಾಜ್ಯಗಳಲ್ಲಿ ಪ್ರಾರಂಭಿಸುವ ಉದ್ದೇಶ ಹೊಂದಲಾಗಿದೆ. 100CC, 125CC ಮತ್ತು 150-160CC ಬೈಕ್‌ಗಳನ್ನು ಕಾಣಬಹುದಾಗಿದೆ.
ಈ ಬೈಕ್ ರಿಯರ್ ಫೆಂಡರ್, ರಿಯರ್ ಟೈರ್ ಹಗ್ಗರ್, ಸಿಂಗಲ್ ಪೀಸ್ ಪಿಲಿಯನ್ ಗ್ರಾಬ್ ರೈಲ್ ಮತ್ತು ಎಲ್‌ಇಡಿ ಇಂಡಿಕೇಟರ್‌ಗಳನ್ನು ಹೊಂದಿದೆ. ಇದಲ್ಲದೆ, ಕಾಂಪ್ಯಾಕ್ಟ್ ಎಂಜಿನ್ ಗಾರ್ಡ್, ಬೆಲ್ಲಿ ಪ್ಯಾನ್, ಅಲಾಯ್ ಚಕ್ರಗಳು, ಮುಂಭಾಗದ ಕೌಲ್ ಮತ್ತು ಹ್ಯಾಂಡಲ್‌ಬಾರ್ ಜೊತೆಗೆ ಹ್ಯಾಂಡ್‌ಗಾರ್ಡ್‌ನಂತಹ ವೈಶಿಷ್ಟ್ಯಗಳು ಸೌಲಭ್ಯಗಳನ್ನು ಹೊಂದಿರುವ ಸಾಧ್ಯತೆ ಇದೆ.
ಎಷ್ಟು ವಿಧಗಳಲ್ಲಿ ಲಭ್ಯ?
ತಜ್ಞರ ಪ್ರಕರಾ ಈ ಬೈಕ್ 80 ರಿಂದ 1 ಲಕ್ಷದವರೆಗೆ ಗ್ರಾಹಕರಿಗೆ ಸಿಗುವ ಸಾಧ್ಯತೆ ಇದೆ. ಈ ಬೈಕ್ 3 ಲೀಟರ್ ಸಿಎನ್‌ಜಿ ಟ್ಯಾಂಕ್ ಅನ್ನು ಹೊಂದಿರುತ್ತದೆ. ಈ ಬೈಕ್ ಬಳಸುವುದರಿಂದ ವೆಚ್ಚ ಕಡಿವಾಣ ಆಗಲಿದೆ ಎಂದು ನಂಬಲಾಗಿದೆ. ಈ ಎಂಜಿನ್‌ನಲ್ಲಿ 'ಸ್ಲೋಪರ್ ಎಂಜಿನ್' ಅನ್ನು ಅಳವಡಿಸಬಹುದಾಗಿದೆ. ಇದು 110-150 ಸಿಸಿ ಎಂಜಿನ್ ಹೊಂದಿರುವ ಸಾಧ್ಯತೆ ಇದೆ. ಇನ್ನು ಪೆಟ್ರೋಲ್ ಹಾಗೂ ಸಿಎನ್‌ಜಿ ಎರಡರಲ್ಲೂ ಚಲಿಬಲ್ಲ ಎಂಜಿನ್ ಅಳವಡಿಸುವ ಸಾಧ್ಯತೆ ಇದೆ.












Click it and Unblock the Notifications