Bajaj Car: 43 ಕಿಲೋ ಮೀಟರ್ ಮೈಲೇಜ್ ಕೊಡುವ ಬಜೆಟ್ ಸ್ನೇಹಿ "ಕುಟುಂಬ ಸವಾರಿ" ಕಾರಿದು
Bajaj Car: ಇದು ನೋಡಲಿಕ್ಕೆ ಚಿಕ್ಕ ಕಾರಾಗಿದ್ದು, ಇದರಲ್ಲಿ ಒಂದು ಪುಟ್ಟ ಫ್ಯಾಮಿಲಿ ಇದರಲ್ಲಿ ಆರಮಾಗಿ ಪ್ರಯಾಣ ಮಾಡಬಹುದಾಗಿದೆ. ಅಲ್ಲದೆ, ಇದು ಬಜೆಟ್ ಸ್ನೇಹಿಯೂ ಆಗಿದೆ. ಹಾಗಾದರೆ ಇದು ಏನೆಲ್ಲ ವಿಶೇಷತೆಗಳನ್ನು ಒಳಗೊಂಡಿದೆ ಹಾಗೂ ದರಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಪುಟ್ಟ ಕುಟುಂಬವೊಂದು ಅತೀ ಕಡಿಮೆ ಬೆಲೆಗೆ ಕಾರು ಖರೀದಿಸುವ ಯೋಚನೆಯಲ್ಲಿದ್ದರೆ, Bajaj Qute ಉತ್ತಮ ಆಯ್ಕೆಯಾಗಿದೆ. ಇದನ್ನು ಹೊಸ ವಿನ್ಯಾಸದಲ್ಲಿ ತಯಾರಿಸಲಾಗಿದ್ದು, ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದರಲ್ಲಿ 216.6 ಸಿಸಿಯ 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿರುತ್ತದೆ. ಅಲ್ಲದೆ, ಈ ಇಂಜಿನ್ 13HP ಪವರ್ ಹಾಗೂ 18NM ಟಾರ್ಕ್ ಜನರೇಟ್ ಮಾಡುವಂತಹ ಸಾಮರ್ಥ್ಯವನ್ನು ಒಳಗೊಂಡಿದೆ.

Bajaj Qute ಕಾರಿನಲ್ಲಿ ನೀವು 5 ಸ್ಪೀಡ್ ಮ್ಯಾನುವಲ್ ಗೇರ್ ಟ್ರಾನ್ಸ್ ಮಿಷನ್ ಅನ್ನು ಒಳಗೊಂಡಿದೆ. ಈ ಕಾರಿನಲ್ಲಿ ನೀವು ಸಿಎನ್‌ಜಿ ಆಕ್ಷನ್ ಅನ್ನು ಕಾಣಬಹುದಾಗಿದ್ದು, ಇದು ಸುಮಾರು 43 ಕಿಲೋ ಮೀಟರ್ ಮೈಲೇಜ್ ಕೊಡಲಿದೆ. ಇದಕ್ಕಾಗಿ ನೀವು ಸಿಎನ್‌ಜಿ ವೆರಿಯಂಟ್ ಅನ್ನು ಖರೀದಿ ಮಾಡಬೇಕಾಗಿರುತ್ತದೆ. ಪವರ್‌ಫುಲ್ ಪರ್ಫಾರ್ಮೆನ್ಸ್ ನೀಡುವಂತಹ ಭರವಸೆಯನ್ನು ಹೊಂದಿರುವಂತಹ Bajaj Qute ಕಾರಿನ ಬೆಲೆಯನ್ನು ಇಲ್ಲಿ ತಿಳಿಯಿರಿ.
ಈ ಕಾರಿನ ಎಕ್ಸ್ ಶೋರೂಮ್ ಅಂದಾಜು ಬೆಲೆ 3,00,000 ರೂಪಾಯಿಗಳಾಗಿರುತ್ತದೆ. ಈ ಕಾರು ಇದುವರೆಗೂ ಮಾರುಕಟ್ಟೆಯಲ್ಲಿ ಲಾಂಚ್ ಆಗಿಲ್ಲ ಹಾಗೂ ಅಧಿಕೃತವಾಗಿ ಇದು ಯಾವಾಗ ಬಿಡುಗಡೆಯಾಗುತ್ತದೆ ಎನ್ನುವ ಮಾಹಿತಿ ಹೊರಬಿದ್ದಿಲ್ಲ. ಆದರೆ ಮೂಲಗಳ ಪ್ರಕಾರ, ಅತೀ ಶೀಘ್ರದಲ್ಲೇ ಇದು ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications