ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸೂರ್ಯನ ಅತೀ ಸ್ಪಷ್ಟ ಫೋಟೋ ತೆಗೆದಿದ್ದೇನೆ' ಎಂದ ಖಗೋಳ ಛಾಯಾಗ್ರಾಹಕ: ಚಿತ್ರ ನೋಡಿ

|
Google Oneindia Kannada News

ಸೂರ್ಯನ ಅತೀ ಸ್ಪಷ್ಟವಾದ ಛಾಯಾಚಿತ್ರವನ್ನು ನಾನು ತೆಗೆದಿದ್ದೇನೆ ಎಂದು ಖಗೋಳ ಛಾಯಾಗ್ರಾಹಕ ಆಂಡ್ರ್ಯೂ ಮೆಕಾರ್ಥಿ ಹೇಳಿಕೊಂಡಿದ್ದಾರೆ. ಹಾಗೆಯೇ ತಾನು ಕ್ಲಿಕ್‌ ಮಾಡಿರುವ ಅತ್ಯಂತ ಚಿತ್ರಗಳು ಎಂಬ ಹಲವಾರು ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ @cosmic-background ಎಂಬ ಹೆಸರಿನಿಂದ ಖಗೋಳ ಛಾಯಾಗ್ರಾಹಕ ಆಂಡ್ರ್ಯೂ ಮೆಕಾರ್ಥಿ ಪೋಸ್ಟ್‌ ಮಾಡಿದ್ದು, ಸೂರ್ಯನ ಮೇಲ್ಮೈನ ಅತ್ಯಂತ ಸ್ಪಷ್ಟವಾದ ಚಿತ್ರಗಳು ಇದಾಗಿದೆ ಎಂದು ಹೇಳಿದ್ದಾರೆ. ಈ ಸ್ಪಷ್ಟವಾದ ಚಿತ್ರಗಳನ್ನು ಪಡೆಯುವ ನಿಟ್ಟಿನಲ್ಲಿ ಸೂರ್ಯನ 1,50,000 ಚಿತ್ರಗಳನ್ನು ತೆಗೆದಿರುವುದಾಗಿಯೂ ಹೇಳಿಕೊಂಡಿದ್ದಾರೆ.

ಈ ಚಿತ್ರಗಳನ್ನು ವಿಶಿಷ್ಟವಾದ ಛಾಯಾಗ್ರಹಣ ವಿಧಾನಗಳಿಂದ ಸೆರೆಹಿಡಿಯಲಾಗಿದೆ. ಅಂತಿಮ ಚಿತ್ರವು 300 ಮೆಗಾಪಿಕ್ಸೆಲ್‌ಗಳ ಗಾತ್ರವನ್ನು ಹೊಂದಿದೆ. ಇದು ಸಾಮಾನ್ಯ ಐದು ಮೆಗಾಪಿಕ್ಸೆಲ್‌ಗಳ ಕ್ಯಾಮೆರಾ ಫೋನ್‌ಗಳ ಚಿತ್ರಕ್ಕಿಂತ ಈ ಸ್ಪಷ್ಟವಾದ ಚಿತ್ರವು ಸುಮಾರು 60 ಪಟ್ಟು ಅಧಿಕ ಸೈಜ್‌ ಅನ್ನು ಹೊಂದಿರುತ್ತದೆ ಎಂದು ವಿವರಣೆಯನ್ನು ಕೂಡಾ ನೀಡಿದ್ದಾರೆ.

ಆಂಡ್ರ್ಯೂ ಮೆಕಾರ್ಥಿ ಹೇಳುವುದು ಏನು?

ಆಂಡ್ರ್ಯೂ ಮೆಕಾರ್ಥಿ ಹೇಳುವುದು ಏನು?

ತನ್ನ @cosmic-background ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ ಪೋಸ್ಟ್‌ ಮಾಡಿರುವ ಖಗೋಳ ಛಾಯಾಗ್ರಾಹಕ ಆಂಡ್ರ್ಯೂ ಮೆಕಾರ್ಥಿ, "ಇದು ನಮ್ಮ ನಕ್ಷತ್ರದ ವಿವರವಾದ ನೋಟ, ಅತೀ ಸಮೀಪದಿಂದ ಸೂರ್ಯನನ್ನು ನೋಡಲು ಮುಂದಿನ ಚಿತ್ರಗಳನ್ನು ನೋಡಿ. ನಾನು ನಿನ್ನೆ (ಆರು ದಿಗಳ ಹಿಂದೆ ಮಾಡಿದ ಪೋಸ್ಟ್‌) ಸೂರ್ಯನ ಸುಮಾರು 150,000 ಚಿತ್ರಗಳನ್ನು ಸೆರೆ ಹಿಡಿದಿದ್ದೇನೆ. ಮೋಡಿಫೈಡ್‌ ಟೆಲಿಸ್ಕೋಪ್‌ಗಳನ್ನು ಬಳಸಿಕೊಂಡು ನಾನು ಭವ್ಯವಾದ ಸೂರ್ಯನ 150,000 ಚಿತ್ರಗಳನ್ನು ಸೆರೆಹಿಡಿದಿದ್ದೇನೆ. ಒಟ್ಟಾಗಿ ಇಲ್ಲಿ ನಾನು ಪೋಸ್ಟ್‌ ಮಾಡಿರುವ ಚಿತ್ರಗಳು ನಾನು ನಂಬಲು ಸಾಧ್ಯವಿಲ್ಲದ ಸೂರ್ಯನ ನೋಟವನ್ನು ನೋಡುವ ಅವಕಾಶ ಮಾಡಿಕೊಟ್ಟಿದೆ. ವಾಸ್ತವವಾಗಿ ಈ ಚಿತ್ರವು 300 ಮೆಗಾಪಿಕ್ಸೆಲ್ ಚಿತ್ರ ಆಗಿದೆ," ಎಂದು ತಿಳಿಸಿದ್ದಾರೆ. ಇನ್ನು ಕೆಲವೇ ಸಮಯದ ತಮ್ಮ ಅವರು ನೀಡಿದ ಲಿಂಕ್‌ ಮೂಲಕ ಈ ಚಿತ್ರವನ್ನು ನಾವು ಕಾಪಿ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಬಹಳ ವಿಶೇಷವಾದುದ್ದು

ಅರಿಝೋನಾದಿಂದ ಬಂದಿರುವ ಮೆಕಾರ್ಥಿ "ನಾನು ಸೂರ್ಯನ ಛಾಯಾಗ್ರಹಣ ಮಾಡಲು ನಿಜವಾಗಿಯೂ ಉತ್ಸುಕನಾಗಿದ್ದೇನೆ, ಏಕೆಂದರೆ ಸೂರ್ಯ ಎಂದಿಗೂ ವಿಭಿನ್ನ ಎಂದು ಹೇಳಿದ್ದಾರೆ. ಆಕಾಶವು ಎಷ್ಟು ಸ್ಪಷ್ಟವಾಗಿದೆ ಎಂಬುವುದಕ್ಕೆ ಚಂದ್ರನು ಹೆಚ್ಚು ಮಾನದಂಡವಾಗಿದ್ದರೂ ಸೂರ್ಯನು ಎಂದಿಗೂ ನೀರಸವಾಗಲಾರ. ಆ ದಿನ ಒಳ್ಳೆಯ ದಿನ ಆಗಿತ್ತು. ಇದು ಬಹಳ ವಿಶೇಷವಾದದ್ದು," ಎಂದು ಕೂಡಾ ಹೇಳಿದ್ದಾರೆ.

ನಾಸಾ ತೆಗೆದ ಸೂರ್ಯನ ಚಿತ್ರ?

ಸೌರ ಮೇಲ್ಮೈಯ ವಿವರವಾದ ಹೆಚ್ಚು ಸ್ಪಷ್ಟವಾದ ಚಿತ್ರವು ಈ ಹಿಂದೆಯೂ ಕಾಣಿಸಿಕೊಂಡಿದೆ. ಆದರೆ ಅದು ನಕಲಿ ಎಂದು ತಿಳಿದು ಬಂದಿದೆ. ಟ್ವಿಟ್ಟರ್‌ನಲ್ಲಿ ಹಲವಾರು ಟ್ಟಿಟ್ವಿಗರು ನಾಸಾ ತೆಗೆದ ಸೂರ್ಯನ ಸ್ಪಷ್ಟವಾದ ಚಿತ್ರ ಎಂದು ಹೇಳಿ ಚಿತ್ರವೊಂದನ್ನು ಟ್ವೀಟ್‌ ಮಾಡುತ್ತಿದ್ದರು. ಆದರೆ ಆ ಬಳಿಕ ಈ ಚಿತ್ರವು ನಕಲಿ ಎಂದು ತಿಳಿದು ಬಂದಿದೆ. ಇದು ಸಾಫ್ಟ್‌ವೇರ್ ಮೂಲಕ ಎಡಿಟ್‌ ಮಾಡಲಾದ ಚಿತ್ರ ಎಂದು ತಿಳಿದು ಬಂದಿದೆ.

ಯಾರಿತ ಆಂಡ್ರ್ಯೂ ಮೆಕಾರ್ಥಿ?

ಯಾರಿತ ಆಂಡ್ರ್ಯೂ ಮೆಕಾರ್ಥಿ?

ಖಗೋಳ ಛಾಯಾಗ್ರಾಹಕ ಆಂಡ್ರ್ಯೂ ಮೆಕಾರ್ಥಿ ತನ್ನ ಇನ್‌ಸ್ಟಾಗ್ರಾಂನಲ್ಲಿ ತಾನು ತೆಗೆದ ಹಲವಾರು ಚಿತ್ರಗಳನ್ನು ಪೋಸ್ಟ್‌ ಮಾಡಿದ್ದಾರೆ. ಮುಖ್ಯವಾಗಿ ಸೂರ್ಯ ಗ್ರಹಣ ಹಾಗೂ ಚಂದ್ರಗ್ರಹಣ ಸಂದರ್ಭದಲ್ಲಿ ಖಗೋಳ ಛಾಯಾಗ್ರಾಹಕ ಆಂಡ್ರ್ಯೂ ಮೆಕಾರ್ಥಿ ಹಲವಾರು ಚಿತ್ರಗಳನ್ನು ಸೆರೆಹಿಡಿದಿದ್ದಾರೆ. ಬೇರೆ ಬೇರೆ ಗ್ರಹಗಳ ಚಿತ್ರವನ್ನು ಕೂಡಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. ತಾನು ಬೇರೆ ಬೇರೆ ಗ್ರಹಗಳ ಸ್ಪಷ್ಟವಾದ ಚಿತ್ರವನ್ನು ತೆಗೆದಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ತನ್ನ ಟ್ವಿಟ್ಟರ್‌ ಖಾತೆಯನ್ನು ಚಂದ್ರ, ಸೂರ್ಯ, ಬೇರೆ ಗ್ರಹಗಳ ಚಿತ್ರಗಳನ್ನು ಹಾಕಿಕೊಂಡಿದ್ದಾರೆ.

English summary
Astrophotographer Claims To Capture 'Clearest Picture Of Sun': See Pics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X