ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಡವಟ್ಟಿನಿಂದ 1.42 ಕೋಟಿ ಸಂಬಳ ಕೊಟ್ಟ ಕಂಪನಿ: ಹಣ ತಗೊಂಡು ಉದ್ಯೋಗಿ ಎಸ್ಕೇಪ್

|
Google Oneindia Kannada News

ಕೊಟ್ಟೋನು ಕೋಡಂಗಿ ಈಸ್ಕೊಂಡೋನು ವೀರಭದ್ರ ಅನ್ನೋದು ಇದಕ್ಕೆ ಅನ್ಸುತ್ತೆ. ಕೇಳಿ ಸಾಲ ಪಡೆದವರೆ ವಾಪಸ್ ಮಾಡೋದು ಕಷ್ಟ ಆಗಿರುವ ಈ ಕಾಲದಲ್ಲಿ ಬೇಡದೆ ಅಕೌಂಟಿಗೆ ಬಂದ ಕೋಟಿ ರುಪಾಯಿನಾ ವಾಪಸ್ ಕೊಡೊರು ಇರ್ತಾರ?

ಅವನೊಬ್ಬ ತಿಂಗಳಿಗೆ 43 ಸಾವಿರ ಸಂಬಳ ಪಡೆಯುವ ಉದ್ಯೋಗಿ, ತನಗೆ ಬರುವ ಸಂಬಳದಲ್ಲಿ ಹೇಗೋ ಜೀವನ ಸಾಗಿಸಿಕೊಂಡಿದ್ದವನಿಗೆ ತನಗೆ ಕೆಲಸ ಕೊಟ್ಟ ಕಂಪನಿ ಮಾಡಿದ ಎಡವಟ್ಟಿನಿಂದ ಕೋಟ್ಯಧಿಪತಿಯಾಗಿದ್ದಾನೆ.

ಸುಶೀಲ್ ಮಂತ್ರಿಯಿಂದ 1350 ಕೋಟಿ ವಂಚನೆ..!ಸುಶೀಲ್ ಮಂತ್ರಿಯಿಂದ 1350 ಕೋಟಿ ವಂಚನೆ..!

ಹೌದು, ಸಂಬಳ ಪಾವತಿಸುವ ವೇಳೆ ಕಂಪನಿ ತನ್ನ ಉದ್ಯೋಗಿಗೆ 43,000 ರುಪಾಯಿ ಬದಲಾಗಿ 1.42 ಕೋಟಿ ಪಾವತಿಸಿದೆ. ಹೆಚ್ಚುವರಿ ಸಂಬಳ ವಾಪಸ್ ಮಾಡ್ತೀನಿ ಅಂದ ಉದ್ಯೋಗಿ ಕೆಲಸ ಕೊಟ್ಟ ಕಂಪನಿಗೆ ಉಂಡೆ ನಾಮ ತಿಕ್ಕಿ ಎಸ್ಕೇಪ್ ಆಗಿದ್ದಾನೆ.

An Employee Disappear After mistakenly Recieve 286 times his salary

ಚಿಲಿ ದೇಶದಲ್ಲಿ ಈ ಘಟನೆ ನಡೆದಿದೆ. ಕೋಲ್ಡ್ ಕಟ್‌ಗಳ ಅತಿದೊಡ್ಡ ಉತ್ಪಾದಕರಲ್ಲಿ ಒಬ್ಬರಾದ ಕನ್ಸೋರ್ಸಿಯೊ ಇಂಡಸ್ಟ್ರಿಯಲ್ ಡಿ ಅಲಿಮೆಂಟೋಸ್ (ಸಿಯಾಲ್) ನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯ ಕಥೆ ಇದು.

ಆನ್‌ಲೈನ್ ಗೆಳತಿಗೆ 5.7 ಕೋಟಿ ಕೊಟ್ಟ ಬೆಂಗಳೂರಿನ ಬ್ಯಾಂಕ್ ಮ್ಯಾನೇಜರ್!ಆನ್‌ಲೈನ್ ಗೆಳತಿಗೆ 5.7 ಕೋಟಿ ಕೊಟ್ಟ ಬೆಂಗಳೂರಿನ ಬ್ಯಾಂಕ್ ಮ್ಯಾನೇಜರ್!

ಕಳೆದ ತಿಂಗಳು ಆತ ತನ್ನ ಮಾಮೂಲಿ ಸಂಬಳ 500,000 ಪೆಸೊಗಳ (43,000 ರುಪಾಯಿ) ಪಡೆಯಬೇಕಿತ್ತು. ಆದರೆ ಕಂಪನಿ ಆಕಸ್ಮಿಕವಾಗಿ ಆತನಿಗೆ ಸಂಬಳದ 286 ಪಟ್ಟು ಹೆಚ್ಚಿಗೆ ಅಂದರೆ 165,398,851 ಚಿಲಿಯ ಪೆಸೊಗಳನ್ನು (ರೂ 1.42 ಕೋಟಿ) ಪಾವತಿಸಿದೆ.

ಹಣ ಹಿಂದಿರುಗಿಸುವಂತೆ ಕೇಳಿದ ಕಂಪನಿ

ಕಂಪನಿಯ ಆಡಳಿತ ಮಂಡಳಿಯು ದಾಖಲೆಗಳನ್ನು ಪರಿಶೀಲಿಸಿದ ನಂತರ, ಉದ್ಯೋಗಿಗೆ ಅವರ ಮಾಸಿಕ ವೇತನದ ಸುಮಾರು 286 ಪಟ್ಟು ತಪ್ಪಾಗಿ ಪಾವತಿಸಲಾಗಿದೆ ಎಂದು ಅರಿವಾಗಿದೆ. ಹೆಚ್ಚುವರಿಯಾಗಿ ಪಾವತಿಸಿದ ಹಣವನ್ನು ಹಿಂದಿರುಗಿಸಲು ಉದ್ಯೋಗಿಯನ್ನು ಸಂಸ್ಥೆ ಕೇಳಿದೆ.

An Employee Disappear After mistakenly Recieve 286 times his salary

ಕೆಲಸಗಾರನು ತನಗೆ ಹೆಚ್ಚುವರಿಯಾಗಿ ಪಾವತಿಸಿದ ಮೊತ್ತವನ್ನು ಹಿಂದಿರುಗಿಸಲು ತನ್ನ ಬ್ಯಾಂಕ್‌ಗೆ ಹೋಗಲು ಒಪ್ಪಿಕೊಂಡಿದ್ದಾನೆ. ಆದರೆ, ಆತನಿಗೆ ಹಣವನ್ನು ಹಿಂದಿರುಗಿಸುವುದು ಇಷ್ಟವಿರಲಿಲ್ಲ.

ಉದ್ಯೋಗದಾತ ಕಂಪನಿಯು ಬ್ಯಾಂಕ್‌ನಿಂದ ಮರುಪಾವತಿ ಅಧಿಸೂಚನೆಯನ್ನು ಸ್ವೀಕರಿಸದಿದ್ದಾಗ, ಅವರು ಉದ್ಯೋಗಿಯನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ ಉದ್ಯೋಗಿ ಅವರಿಗೆ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ನಂತರ ಸಂಪರ್ಕಕ್ಕೆ ಬಂದ ಆಸಾಮಿ, ತಾನು ಅತಿಯಾದ ನಿದ್ದೆ ಮಾಡುತ್ತಿದ್ದೆ ಮತ್ತು ಬ್ಯಾಂಕ್‌ಗೆ ಭೇಟಿ ನೀಡಿ ಹಣ ಮರುಪಾವತಿಸುವುದಾಗಿ ಹೇಳಿಕೊಂಡಿದ್ದಾನೆ.

Recommended Video

ಅರ್ಜುನ್ ಜೊತೆ ವಾಟ್ ಜೊತೆಗಿರುವ ಫೋಟೋ ವೈರಲ್ | Oneindia Kannada

ಆದರೆ, ಜೂನ್ 2ರಂದು ರಾಜೀನಾಮೆ ನೀಡಿ ಇದೀಗ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಕಂಪನಿಯು ಆ ವ್ಯಕ್ತಿಗೆ ಆಕಸ್ಮಿಕವಾಗಿ ವರ್ಗಾವಣೆ ಮಾಡಿದ ಹಣವನ್ನು ಹಿಂಪಡೆಯಲು ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಂಡಿದೆ.

English summary
A Employee who was mistakenly paid 286 times his salary last month has resigned from the company and disappeared. The company has taken legal action against the man to recover the money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X