ಭಾರತದಲ್ಲಿ ವಶಪಡಿಸಿಕೊಂಡ ನಕಲಿ ಹಣದಲ್ಲಿ 2,000 ಮುಖಬೆಲೆ ನೋಟುಗಳದ್ದೇ ಸಿಂಹಪಾಲು
ನವದೆಹಲಿ, ಆಗಸ್ಟ್ 30: 2021ರಲ್ಲಿ ದೇಶದಲ್ಲಿ ವಶಪಡಿಸಿಕೊಂಡ ಎಲ್ಲಾ ನಕಲಿ ಹಣದಲ್ಲಿ ಸುಮಾರು ಶೇಕಡ 60ರಷ್ಟು ನೋಟುಗಳು 2,000 ರುಪಾಯಿ ಮುಖಬೆಲೆಯದ್ದಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಸಂಗ್ರಹಿಸಿದ ಕ್ರೈಮ್ ಇನ್ ಇಂಡಿಯಾ 2021 ವರದಿ ಹೇಳಿದೆ.
2021ರಲ್ಲಿ ವಶಪಡಿಸಿಕೊಂಡ ಒಟ್ಟು 20.39 ಕೋಟಿ ರುಪಾಯಿ ಮೌಲ್ಯದ ನಕಲಿ ಭಾರತೀಯ ಕರೆನ್ಸಿ ನೋಟುಗಳಲ್ಲಿ 12.18 ಕೋಟಿ ರುಪಾಯಿ ಮೌಲ್ಯದ ನೋಟುಗಳು 2,000 ರುಪಾಯಿ ಮುಖಬೆಲೆಯದ್ದಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
2016ರಲ್ಲಿ ಹಳೆಯ 500 ಮತ್ತು 1,000 ರುಪಾಯಿ ಮೌಲ್ಯದ ನೋಟುಗಳನ್ನು ಸರ್ಕಾರ ರದ್ದುಗೊಳಿಸಿದ ನಂತರ 2,000 ರುಪಾಯಿ ಮತ್ತು 500 ರುಪಾಯಿ ಮುಖಬೆಲೆಯ ಹೊಸ ನೋಟುಗಳನ್ನು ಪರಿಚಯಿಸಲಾಯಿತು. ನಕಲಿ ಭಾರತೀಯ ಕರೆನ್ಸಿ ನೋಟುಗಳ (ಎಫ್‌ಐಸಿಎನ್) ಚಲಾವಣೆಯನ್ನು ತಡೆಯುವುದು 2016 ರ ನೋಟು ಅಮಾನ್ಯೀಕರಣದ ಪ್ರಾಥಮಿಕ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಸರ್ಕಾರ ಹೇಳಿತ್ತು.
ಆದರೆ 2016 ನೋಟು ಅಮಾನ್ಯೀಕರಣದ ನಂತರ ಭಾರತದಲ್ಲಿ ನಕಲಿ ಹಣ ಪತ್ತೆಯಾಗುತ್ತಿರುವ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಎನ್‌ಸಿಆರ್‌ಬಿ ಅಂಕಿಅಂಶಗಳು ಬಹಿರಂಗಪಡಿಸಿವೆ.

2016ರಿಂದ ನಕಲಿ ನೋಟು ಹಾವಳಿ ಹೆಚ್ಚಳ
2016 ರಲ್ಲಿ 15.92 ಕೋಟಿ ರುಪಾಯಿ ಮೌಲ್ಯದ ನಕಲಿ ಕರೆನ್ಸಿ ವಶಪಡಿಸಿಕೊಂಡರೆ, 2021 ರಲ್ಲಿ 2017 ರಲ್ಲಿ 28.10 ಕೋಟಿ ರುಪಾಯಿ, 2018 ರಲ್ಲಿ 17.95 ಕೋಟಿ ರುಪಾಯಿ, 2019ರಲ್ಲಿ 25.39 ಕೋಟಿ ರುಪಾಯಿ, 2020ರಲ್ಲಿ 92.139 ಕೋಟಿ ರುಪಾಯಿ ಮತ್ತು 2021ರಲ್ಲಿ 20.39 ಕೋಟಿ ರುಪಾಯಿ ಮೌಲ್ಯದ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಮಾನ್ಯೀಕರಣಕ್ಕೂ ಮೊದಲು ಅಂದರೆ 2015ರಲ್ಲಿ 15.48 ಕೋಟಿ ರುಪಾಯಿ ಮೌಲ್ಯದ ನಕಲಿ ನಗದನ್ನು ವಶಪಡಿಸಿಕೊಳ್ಳಲಾಗಿತ್ತು.
ಭಾರತದಲ್ಲಿ ಭ್ರಷ್ಟಾಚಾರ, ಬ್ಲಾಕ್ ಮನಿ ಮತ್ತು ನಕಲಿ ನೋಟುಗಳ ಹಾವಳಿಗೆ ಕಡಿವಾಣ ಹಾಕಲು ಚಲಾವಣೆಯಲ್ಲಿದ್ದ ಹಳೆಯ ನೋಟನ್ನು ಅಮಾನ್ಯೀಕರಣಗೊಳಿಸಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದರು. ಆದರೆ ಅಂಕಿ ಅಂಶಗಳು 2016ರಿಂದಲೇ ನಕಲಿ ನೋಟುಗಳ ಚಲಾವಣೆ ಹೆಚ್ಚಾಗಿದೆ ಎಂದು ಹೇಳಿದೆ.

2020ರಲ್ಲಿ ಭಾರಿ ಪ್ರಮಾಣದ ನಕಲಿ ಹಣ ಪತ್ತೆ
"ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ" ದಿಂದ ನೀಡಲಾದ ನಕಲಿ ಹಣವನ್ನು ವಶಪಡಿಸಿಕೊಂಡ ಕಾರಣ 2020 ರಲ್ಲಿ ನಕಲಿ ನೋಟಿನಲ್ಲಿ ಭಾರಿ ಹೆಚ್ಚಳವಾಗಿದೆ. ಜೂನ್ 10, 2020 ರಂದು, ಪೊಲೀಸರು 82.8 ಕೋಟಿ ರುಪಾಯಿ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದರು. ಅದರಲ್ಲಿ ಸುಮಾರು 43 ಕೋಟಿ ರುಪಾಯಿ 2,000 ರುಪಾಯಿ ಮುಖಬೆಲೆಯದ್ದಾಗಿತ್ತು.
ನಕಲಿ ನೋಟು ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೇವೆ ಸಲ್ಲಿಸುತ್ತಿದ್ದ ಸೇನಾ ಅಧಿಕಾರಿ ಸೇರಿದಂತೆ ಆರು ಜನರನ್ನು ಬಂಧಿಸಲಾಗಿತ್ತು. ಆರೋಪಿಗಳು ಡಾಲರ್ ಬಿಲ್‌ಗಳನ್ನು ರೂಪಾಯಿಗೆ ವಿನಿಮಯ ಮಾಡಿಕೊಳ್ಳುವಾಗ ನಕಲಿ ಹಣವನ್ನು ನೀಡಿ ಗ್ರಾಹಕರನ್ನು ವಂಚಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಪಾಕಿಸ್ತಾನದ ವಿರುದ್ಧ ಆರೋಪಿಸಿರುವ ಭಾರತ
ಪಾಕಿಸ್ತಾನದ ಐಎಸ್‌ಐ ಉತ್ತಮ ಗುಣಮಟ್ಟದ ನಕಲಿ ಭಾರತೀಯ ಕರೆನ್ಸಿ ನೋಟುಗಳನ್ನು ಮುದ್ರಿಸಿ ಭಾರತೀಯ ಮಾರುಕಟ್ಟೆಗೆ ರವಾನಿಸುತ್ತಿದೆ ಎಂದು ಭಾರತ ಈ ಹಿಂದೆ ಆರೋಪಿಸಿದೆ.
ಭಯೋತ್ಪಾದಕ ನಿಧಿ ಮತ್ತು ನಕಲಿ ಕರೆನ್ಸಿ ಪ್ರಕರಣಗಳ ಕೇಂದ್ರೀಕೃತ ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಯಲ್ಲಿ ಗೃಹ ವ್ಯವಹಾರಗಳ ಸಚಿವಾಲಯವು ಈ ಹಿಂದೆ ಭಯೋತ್ಪಾದಕ ನಿಧಿ ಮತ್ತು ನಕಲಿ ಕರೆನ್ಸಿ ಸೆಲ್ ಅನ್ನು ರಚಿಸಿತ್ತು. ರಾಜ್ಯಗಳು ಮತ್ತು ಕೇಂದ್ರದ ಭದ್ರತಾ ಏಜೆನ್ಸಿಗಳೊಂದಿಗೆ ಗುಪ್ತಚರ ಮತ್ತು ಮಾಹಿತಿಯನ್ನು ಹಂಚಿಕೊಳ್ಳಲು ಸರ್ಕಾರವು ಎಫ್‌ಐಸಿಎನ್ ಸಮನ್ವಯ ಗುಂಪನ್ನು ಸಹ ಸ್ಥಾಪಿಸಿದೆ.

ತಮಿಳುನಾಡಿನಲ್ಲಿ 5 ಕೋಟಿ ಮೌಲ್ಯದ ನಕಲಿ ನೋಟು ವಾಪಸ್
500 ರುಪಾಯಿ ಮುಖಬೆಲೆಯ 6.6 ಕೋಟಿ ರುಪಾಯಿ ಮತ್ತು 200 ರುಪಾಯಿ ಮುಖಬೆಲೆಯ 45 ಲಕ್ಷ ಮೌಲ್ಯದ ನಕಲಿ ಹಣವೂ ಪತ್ತೆಯಾಗಿದೆ ಎಂದು 2021 ರ ವರದಿಯಲ್ಲಿ ಹೇಳಲಾಗಿದೆ.
2,000 ರುಪಾಯಿ ನಕಲಿ ನೋಟುಗಳನ್ನು ತಮಿಳುನಾಡಿನಲ್ಲಿ ಅತಿ ಹೆಚ್ಚು ಹಿಂಪಡೆಯಲಾಗಿದೆ. 5 ಕೋಟಿ ರುಪಾಯಿ ಮೌಲ್ಯದ ನಕಲಿ ನೋಟುಗಳನ್ನು ಹಿಂಪಡೆಯಲಾಗಿದೆ. ಕೇರಳದಲ್ಲಿ 1.8 ಕೋಟಿ ರುಪಾಯಿ ಮೌಲ್ಯದ ನಕಲಿ ನೋಟುಗಳನ್ನು ಹಿಂಪಡೆಯಲಾಗಿತ್ತು. ಆಂಧ್ರಪ್ರದೇಶದಲ್ಲಿ 1 ಕೋಟಿ ರುಪಾಯಿ ಮೌಲ್ಯದ ನೋಟುಗಳನ್ನು ಹಿಂಪಡೆಯಲಾಗಿದೆ.
ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ನಕಲಿ ಕರೆನ್ಸಿಯ ಮೌಲ್ಯವು 2016-17ರಲ್ಲಿ 43.47 ಕೋಟಿ ರುಪಾಯಿಗಳಿಂದ 2021-22ರಲ್ಲಿ 8.26 ಕೋಟಿ ರುಪಾಯಿಗೆ ಇಳಿಕೆಯಾಗಿದೆ ಎಂದು ಹಣಕಾಸು ಸಚಿವಾಲಯ ಆಗಸ್ಟ್ 8 ರಂದು ಸಂಸತ್ತಿಗೆ ಮಾಹಿತಿ ನೀಡಿದೆ.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications