ವೇದಿಕೆ ಮೇಲೆ ರಶ್ಮಿಕಾ ಮಂದಣ್ಣ ತಲೆ ಬೋಳಿಸಿದ ವಿಡಿಯೋ ವೈರಲ್‌

ಏನು ನ್ಯಾಷನಲ್ ಕ್ರಶ್‌ ರಶ್ಮಿಕಾ ಮಂದಣ್ಣ ತಲೆ ಬೋಳಿಸಿದ್ರಾ..? ಅದರಲ್ಲೂ ವೇದಿಕೆ ಮೇಲೆಯೇ ರಶ್ಮಿಕಾ ಮಂದಣ್ಣ ತಲೆ ಬೋಳಿಸಿದ್ರಾ..? ಎನ್ನುವ ಆಶ್ಚರ್ಯಚಕಿತವಾದ ಪ್ರಶ್ನೆಗೆ ಉತ್ತರ ಇಲ್ಲಿದೆ. ಹೌದು ನೋಡ ನೋಡುತ್ತಿದ್ದಂತೆ ವೇದಿಕೆ ಮೇಲೆ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ತಲೆ ಕೂದಲು ಮಾಯವಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಹಾಗಿದ್ರೆ ರಶ್ಮಿಕಾ ಮಂದಣ್ಣ ತಲೆ ಕೂದಲು ವೇದಿಕೆ ಮೇಲೆಯೇ ಮಂಗಮಾಯವಾದ ಇಂಟ್ರಸ್ಟಿಂಗ್‌ ಸ್ಟೋರಿ ಇಲ್ಲಿದೆ.

ಜಾದು ಎನ್ನುವುದು ಒಂದು ಕಣ್ಕಟ್ಟು. ವೇದಿಕೆ ಮೇಲೆಯೇ ಎಲ್ಲರ ಎದುರೇ ನಡೆದರೂ ಕೂಡ ಎಲ್ಲಿ ಏನಾಯಿತು? ಯಾರು ಬಂದರು? ಹೇಗೆ ಬಂದರು? ಆ ವಸ್ತು ಹೇಗೆ ಬದಲಾಯಿತು? ಆ ಪ್ರಾಣಿ ಹೇಗೆ ಬಂತು..? ಈ ವಸ್ತು ಇಲ್ಲಿಂದ ಅಲ್ಲಿಗೆ ಹೇಗೆ ಹೋಯಿತು..? ಎನ್ನುವ ಪ್ರೇಕ್ಷಕನ ಪ್ರಶ್ನೆಗೆ ಉತ್ತರ ಸಿಗುವುದೇ ಇಲ್ಲ.

Actress Rashmika Mandanna s Hair Disappearing Video Goes Viral

ಆದರೆ ಇದೊಂದು ಸಖತ್‌ ಮನೋರಂಜನೆ ನೀಡುವ ಕಾರ್ಯಕ್ರಮ. ಹೀಗಾಗಿ ಜನ ಇಷ್ಟಪಟ್ಟು ಈ ಜಾದು ಶೋ ಎಲ್ಲೇ ಇದ್ದರೂ ಹೋಗಿ ನೋಡುತ್ತಾರೆ. ಈ ಜಾದು ಶೋಗೂ ನಟಿ ರಶ್ಮಿಕಾ ಮಂದಣ್ಣ ತಲೆ ಕೂದಲು ಮಾಯವಾಗಿರುವುದಕ್ಕೂ ಏನು ಸಂಬಂಧ ಅಂತಿರಾ ಈ ಮುಂದೆ ಓದಿ.

ಕಣ್ಸೆಳೆಯುವ ಜಾದು ಕಲೆಯ ಮೂಲಕವೇ ವಿಶ್ವ ಮಟ್ಟದಲ್ಲಿ ಹೆಸರು ಮಾಡಿದವರು ಜಾದೂಗಾರ ಕುದ್ರೋಳಿ ಗಣೇಶ್‌ ಅವರ ಇತ್ತೀಚಿನ ಜಾದು ಕಾರ್ಯಕ್ರಮವೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಯಾಕೆಂದರೆ ಈ ಕಾರ್ಯಕ್ರಮದಲ್ಲಿ ನೋಡನೋಡುತ್ತಿದ್ದಂತೆ ನಟಿ ರಶ್ಮಿಕಾ ಮಂದಣ್ಣ ಶ್ರೀವಲ್ಲಿ ಪಾತ್ರದ ಫೋಟೋದಲ್ಲಿನ ಕೂದಲನ್ನೇ ಮಂಗಮಾಯ ಮಾಡಿದ್ದಾರೆ.

Take a Poll

ಹೌದು ಜಾದುವೊಂದಕ್ಕೆ ಪುಷ್ಪ ಸಿನಿಮಾದ ನಟಿ ರಶ್ಮಿಕಾ ಮಂದಣ್ಣ ಶ್ರೀವಲ್ಲಿ ಪಾತ್ರದ ಫೋಟೋ ಬಳಸಿರುವ ಕುದ್ರೋಳಿ ಗಣೇಶ್‌ ಅವರು ವೇದಿಕೆಯಲ್ಲಿ ನೋಡನೋಡುತ್ತಿದ್ದಂತೆ ಶ್ರೀವಲ್ಲಿ ಫೋಟೋದ ಕೂದಲನ್ನು ಮಾಯ ಮಾಡುತ್ತಾರೆ. ಕುದ್ರೋಳಿ ಗಣೇಶ್‌ ಅವರ ಈ ಜಾದು ನೋಡಿ ಪ್ರೇಕ್ಷಕರು ಬಿದ್ದು ಬಿದ್ದು ನಕ್ಕಿದ್ದಾರೆ.

udupimerijaanofficial ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸಖತ್‌ ವೈರಲ್‌ ಆಗುತ್ತಿದೆ. ನಟಿ ರಶ್ಮಿಕಾ ಮಂದಣ್ಣ ಶ್ರೀವಲ್ಲಿ ಪಾತ್ರದ ಫೋಟೋದ ಕೂದಲು ಮಾಯವಾಗುವುದನ್ನು ನೋಡಿದವರು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ.

ಈ ವಿಡಿಯೋಗೆ ಇದು ಮ್ಯಾಜಿಕ್‌ ಶೋ ಅಲ್ಲ, ಕಾಮಿಡಿ ಶೋ ಎಂದು ಕ್ಯಾಪ್ಷನ್‌ ನೀಡಲಾಗಿದೆ. ಇನ್ನು ಈ ವಿಡಿಯೋಗೆ ವಿಡಿಯೋವನ್ನೇ ಮೀರಿಸುವಂತಹ ತಮಾಷೆಯ ಕಮೆಂಟ್‌ಗಳು ಬರುತ್ತಿದ್ದು, ಈ ಶೋಗೆ ನಟ ರಕ್ಷಿತ್‌ ಶೆಟ್ಟಿ ಸ್ಪಾನ್ಸರ್‌ ಎನ್ನುವ ಕಮೆಂಟ್‌ವೊಂದು ಸಖತ್‌ ಹೈಲೈಟ್‌ ಆಗಿದೆ. ಒಟ್ಟಾರೆಯಾಗಿ ಈ ವಿಡಿಯೋದಲ್ಲಿ ಜಾದುಗಾರನ ಮೋಡಿ ನೋಡಿ ಆಶ್ಚರ್ಯಪಟ್ಟವರಿಗಿಂತ ಬಿದ್ದು ಬಿದ್ದು ನಕ್ಕು ಸುಸ್ತಾದವರೇ ಹೆಚ್ಚು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+